Asianet Suvarna News Asianet Suvarna News

ಮನೆ ಬಾಡಿಗೆಯಲ್ಲಿ ಭಾರೀ ಏರಿಕೆ: ದೇಶದಲ್ಲೇ ಬೆಂಗಳೂರಿಗೆ ಅಗ್ರಸ್ಥಾನ!

ದೇಶದ ಪ್ರಮುಖ ನಗರಗಳಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಮನೆ ಬಾಡಿಗೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಅದರಲ್ಲೂ ಬೆಂಗಳೂರಿನಲ್ಲಿ ಅತ್ಯಧಿಕ ಹೆಚ್ಚಳ ಕಂಡುಬಂದಿದೆ ಎಂದು ಪ್ರಾಪರ್ಟಿ ಕನ್ಸಲ್ಟೆಂಟ್ ಅನರಾಕ್ ಇತ್ತೀಚಿನ ವರದಿ ತಿಳಿಸಿದೆ.


 

From NCR To Bengaluru Home Rent Sees Sharp Rise In 1 Year anu
Author
First Published Apr 23, 2023, 12:17 PM IST | Last Updated Apr 23, 2023, 12:17 PM IST

ಬೆಂಗಳೂರು (ಏ.23): ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮನೆ ಬಾಡಿಗೆ ಭಾರೀ ಏರಿಕೆ ಕಂಡಿದೆ. ಅದರಲ್ಲೂ ಎಲ್ಲ ನಗರಗಳ ಪೈಕಿ ಬೆಂಗಳೂರಿನಲ್ಲಿ ಅತ್ಯಧಿಕ ಬಾಡಿಗೆ ಹೆಚ್ಚಳ ದಾಖಲಾಗಿದೆ. ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬಾಡಿಗೆಯಲ್ಲಿ ಏರಿಕೆ ಕಂಡುಬಂದಿದೆ. ಪ್ರಾಪರ್ಟಿ ಕನ್ಸಲ್ಟೆಂಟ್ ಅನರಾಕ್ ಇತ್ತೀಚಿನ ವರದಿ ಅನ್ವಯ ಕಳೆದ ಕೆಲವು ಸಮಯದಲ್ಲಿ ದೇಶದ ಏಳು ನಗರಗಳಲ್ಲಿ ಬಾಡಿಗೆ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ.  ಬೆಂಗಳೂರು, ಪುಣೆ, ದೆಹಲಿ-ಎನ್ ಸಿಆರ್, ಮುಂಬೈ ಮಹಾನಗರ, ಚೆನ್ನೈ, ಹೈದರಾಬಾದ್ ಹಾಗೂ ಕೋಲ್ಕತ್ತದಲ್ಲಿ ಮನೆಗಳ ಮಾಸಿಕ ಬಾಡಿಗೆಯಲ್ಲಿ ಶೇ.11ರಿಂದ ಶೇ.24ರಷ್ಟು ಏರಿಕೆ ಕಂಡುಬಂದಿದೆ. ಉತ್ತರ ಹಾಗೂ ಪೂರ್ವ ಬೆಂಗಳೂರಿನಲ್ಲಿಕಳೆದ ಒಂದು ವರ್ಷದಲ್ಲಿ 1,000 ಚದರ ಅಡಿಯ ಎರಡು ಬೆಡ್ ರೂಮ್ ಅಪಾರ್ಟ್ ಮೆಂಟ್ ತಿಂಗಳ ಬಾಡಿಗೆಯಲ್ಲಿ ಗರಿಷ್ಠ ಶೇ.24ರಷ್ಟು ಹೆಚ್ಚಳ ಕಂಡುಬಂದಿದೆ.ಇನ್ನು ತಣಿಸಂದ್ರ ಮುಖ್ಯರಸ್ತೆ ಹಾಗೂ ಮಾರತ್ತಹಳ್ಳಿ ಒಆರ್ ಆರ್ ನಲ್ಲಿ ಅತ್ಯಧಿಕ ಬಾಡಿಗೆ ಹೆಚ್ಚಳ ಕಂಡುಬಂದಿದೆ. ಈ ಪ್ರದೇಶದಲ್ಲಿ 1,000 ಚದರ ಅಡಿಯ ಎರಡು ಬೆಡ್ ರೂಮ್ ಮನೆ ಬಾಡಿಗೆಯಲ್ಲಿ ಪ್ರತಿವರ್ಷ ಜನವರಿ-ಮಾರ್ಚ್ ಅವಧಿಯಲ್ಲಿ ಶೇ.24ರಷ್ಟು ಹೆಚ್ಚಳ ಕಂಡುಬಂದಿದೆ.

ಇನ್ನು ಬೆಂಗಳೂರಿನ ವೈಟ್ ಫೀಲ್ಡ್ ಹಾಗೂ ಸರ್ಜಾಪುರದಲ್ಲಿ 2022 ಜನವರಿ-ಮಾರ್ಚ್ ಹಾಗೂ 2023 ಜನವರಿ-ಮಾರ್ಚ್ ಅವಧಿಯಲ್ಲಿ ಮನೆ ಬಾಡಿಗೆಯಲ್ಲಿ ಕ್ರಮವಾಗಿ ಶೇ.21 ಹಾಗೂ ಶೇ.20ರಷ್ಟು ಹೆಚ್ಚಳ ಕಂಡುಬಂದಿದ್ದು, ಮನೆ ಬಾಡಿಗೆ ಏರಿಕೆಯಲ್ಲಿ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನಗಳಲ್ಲಿವೆ. ಬೆಂಗಳೂರಿನ ಪೂರ್ವ ಹಾಗೂ ಉತ್ತರ ಭಾಗಗಳಲ್ಲಿ ಕೂಡ ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಕನ್ಸಲ್ಟೆಂಟ್ ವರದಿ ತಿಳಿಸಿದೆ. 

Personal Finance: ಗೃಹ ಸಾಲವಿದ್ರೂ ಮನೆ ಮಾರಾಟ ಮಾಡೋದು ಹೇಗೆ?

ಪ್ರಸ್ತುತ  ಎಲ್ಲ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಮನೆ ಬಾಡಿಗೆಯಿಂದ ಪಡೆಯುವ ಆದಾಯ ಹೆಚ್ಚಿದ್ದು, ಶೇ.4.1ರಷ್ಟು ಗಳಿಕೆ ನೀಡುತ್ತಿದೆ. ಮುಂಬೈಯಲ್ಲಿ ಈ ಗಳಿಕೆ ಶೇ.3.9ರಷ್ಟಿದೆ. 'ಬಾಡಿಗೆ ಮನೆಗಳಿಗೆ ಬೇಡಿಕೆ ಹಾಗೂ ಬಾಡಿಗೆ ಹೆಚ್ಚಳದಲ್ಲಿ ಬೆಂಗಳೂರು ದೇಶದ 7 ನಗರಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಅದರಲ್ಲೂ ಐಟಿ ಕಂಪನಿಗಳು ಹೆಚ್ಚಿರುವ ಪೂರ್ವ ಹಾಗೂ ಉತ್ತರ ಬೆಂಗಳೂರಿನಲ್ಲಿ ಮನೆ ಬಾಡಿಗೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ' ಎಂದು ಅನರಾಕ್ ಗ್ರೂಪ್ ಹಿರಿಯ ನಿರ್ದೇಶಕ ಹಾಗೂ ರಿಸರ್ಚ್ ಹೆಡ್ ಪ್ರಶಾಂತ್ ಠಾಕೂರ್ ತಿಳಿಸಿದ್ದಾರೆ.

ತಣಿಸಂದ್ರ ಮುಖ್ಯರಸ್ತೆಯಲ್ಲಿ 1,000 ಚದರ ಅಡಿಯ ಎರಡು ಬೆಡ್ ರೂಮ್ ಮನೆಯ ಮಾಸಿಕ ಬಾಡಿಗೆ 2022ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 21,000ರೂ. ಇದ್ದು, 2023ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಮಾಸಿಕ ಬಾಡಿಗೆ  26,000ರೂ.ಗೆ ಹೆಚ್ಚಳವಾಗಿದೆ.ಮಾರತ್ತಹಳ್ಳಿ-ಒಆರ್ ಆರ್ ನಲ್ಲಿ ಕಳೆದ ವರ್ಷ ತಿಂಗಳಿಗೆ 22,500ರೂ. ಇದ್ದ ಮನೆ ಬಾಡಿಗೆ 2023ರ ಮೊದಲ ತ್ರೈಮಾಸಿಕದಲ್ಲಿ ತಿಂಗಳಿಗೆ 28,000ರೂ.ಗೆ ಏರಿಕೆ ಕಂಡಿದೆ.

ಸಾಲ ಮರುಪಾವತಿಸಲು ತೊಂದರೆ, ಕಿರುಕುಳ ನೀಡುತ್ತಿರುವ ರಿಕವರಿ ಏಜೆಂಟ್; ಎಲ್ಲಿ ದೂರು ನೀಡಬೇಕು?

ಇನ್ನೊಂದೆಡೆ ಇನ್ನೊಂದು ವರದಿ ಅನ್ವಯ ಮನೆ ಖರೀದಿಗೆ (Home buying) ಬಯಸುತ್ತಿರುವ ಶೇ.95ರಷ್ಟು ಗ್ರಾಹಕರು ಗೃಹ ಸಾಲಗಳ (Home loan) ಮೇಲಿನ ಬಡ್ಡಿದರದಲ್ಲಿ ಮತ್ತೆ ಹೆಚ್ಚಳವಾದರೆ ಅದು ಅವರ ಖರೀದಿ ನಿರ್ಧಾರದ ಮೇಲೆ ಪರಿಣಾಮ ಬೀರಲಿದೆ ಎಂದು ಸಿಐಐ ಅನರಾಕ್ ಸಮೀಕ್ಷೆ ತಿಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಇತ್ತೀಚಿನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ (MPC) ರೆಪೋ ದರದಲ್ಲಿ (Repo rate) ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಮನೆ ಖರೀದಿಸೋರಿಗೆ ಇದು ಸ್ವಲ್ಪ ಮಟ್ಟಿನ ನಿರಾಳತೆ ಒದಗಿಸಿದೆ. 
 

Latest Videos
Follow Us:
Download App:
  • android
  • ios