ದೇಶದಲ್ಲಿ ಕಳೆದ ಆರ್ಥಿಕ ಸಾಲಿನಲ್ಲಿ ಅತೀಹೆಚ್ಚು ತೆರಿಗೆ ಪಾವತಿಸಿದ ಕಂಪನಿ ಯಾವುದು? ಇಲ್ಲಿದೆ ಟಾಪ್ 10 ಪಟ್ಟಿ

ಕಳೆದ ಆರ್ಥಿಕ ಸಾಲಿನಲ್ಲಿ ಭಾರತದಲ್ಲಿ ಅತೀಹೆಚ್ಚು ತೆರಿಗೆ ಪಾವತಿಸಿದ ಕಂಪನಿಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ಸ್ಥಾನದಲ್ಲಿದೆ.ಬ್ಲೂಮ್ ಬರ್ಗ್ ವರದಿ ಅನ್ವಯ 2023ನೇ ಆರ್ಥಿಕ ಸಾಲಿನಲ್ಲಿ ಸರ್ಕಾರಕ್ಕೆ 1.25 ಲಕ್ಷ ಕೋಟಿ ರೂ. ಮೊತ್ತದ ತೆರಿಗೆಯನ್ನು ಪಾವತಿಸಿದ ಟಾಪ್ 10 ಕಂಪನಿಗಳ ಪಟ್ಟಿಇಲ್ಲಿದೆ. . 


 

From Mukesh Ambanis Reliance to SBI Top 10 Indian companies that paid highest tax in FY 2023 anu

Business Desk: ತೆರಿಗೆ ಬಿಸಿ ಬರೀ ವೈಯಕ್ತಿಕ ತೆರಿಗೆದಾರರಿಗೆ ಮಾತ್ರವಲ್ಲ, ಉದ್ಯಮ ಸಂಸ್ಥೆಗಳಿಗೂ ಕಾಡುತ್ತಿರುತ್ತದೆ. ಕಂಪನಿಗಳ ಲಾಭ ಗಳಿಕೆ ಆಧಾರದಲ್ಲಿ ಅವುಗಳ ಮೇಲೆ ತೆರಿಗೆ ವಿಧಿಸಲಾಗುತ್ತದೆ.  ಪ್ರತಿ ಆರ್ಥಿಕ ಸಾಲಿನಲ್ಲಿ ವೈಯಕ್ತಿಕ ತೆರಿಗೆದಾರರಂತೆ ಈ ಕಂಪನಿಗಳು ಕೂಡ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕು. 2022-23ನೇ ಆರ್ಥಿಕ ಸಾಲಿನಲ್ಲಿ ಅನೇಕ ಭಾರತೀಯ ಕಂಪನಿಗಳು ಸಾಕಷ್ಟು ಲಾಭ ಗಳಿಸಿವೆ. ಹಾಗೆಯೇ ಈ ಕಂಪನಿಗಳು ಸರ್ಕಾರದ ಆದಾಯಕ್ಕೆ ಕೂಡ ತೆರಿಗೆ ಪಾವತಿ ಮೂಲಕ ದೊಡ್ಡ ಕೊಡುಗೆ ನೀಡಿವೆ. ಹಾಗಾದ್ರೆ ಈ ಬಾರಿ ದೇಶದಲ್ಲಿ ಅತೀಹೆಚ್ಚು ತೆರಿಗೆ ಪಾವತಿಸಿದ ಸಂಸ್ಥೆಗಳು ಯಾವುವು? ಬ್ಲೂಮ್ ಬರ್ಗ್ ವರದಿ ಅನ್ವಯ 2023ನೇ ಆರ್ಥಿಕ ಸಾಲಿನಲ್ಲಿ ಸರ್ಕಾರಕ್ಕೆ 1.25 ಲಕ್ಷ ಕೋಟಿ ರೂ. ಮೊತ್ತದ ತೆರಿಗೆಯನ್ನು ಪಾವತಿಸಿದ ಟಾಪ್ 10 ಕಂಪನಿಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಹಾಗಾದ್ರೆ ಯಾವ ಕಂಪನಿ ಯಾವ ಸ್ಥಾನದಲ್ಲಿದೆ?

ದೇಶದಲ್ಲಿ ಅತೀಹೆಚ್ಚು ತೆರಿಗೆ ಪಾವತಿಸಿದ ಸಂಸ್ಥೆಗಳ ಟಾಪ್ 10 ಪಟ್ಟಿಯಲ್ಲಿ10ನೇ ಸ್ಥಾನದಲ್ಲಿ ಆಕ್ಸಿಸ್ ಬ್ಯಾಂಕ್ ಇದೆ. ಇದು ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿದ್ದು, 2022-23ನೇ ಆರ್ಥಿಕ ಸಾಲಿನಲ್ಲಿ ಒಟ್ಟು 7,702.67 ಕೋಟಿ ರೂ. ತೆರಿಗೆಗಳನ್ನು ಪಾವತಿಸಿದೆ. ಇನ್ನು ಇದಕ್ಕೆ ಸಮೀಪದಲ್ಲಿ ಐಟಿ ಕಂಪನಿ ಇನ್ಫೋಸಿಸ್ ಇದ್ದು, ಒಟ್ಟು 9,214 ಕೋಟಿ ರೂ. ತೆರಿಗೆ ಪಾವತಿಸಿದ್ದು, 9ನೇ ಸ್ಥಾನದಲ್ಲಿದೆ. ಕೋಲ್ ಇಂಡಿಯಾ ಈ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು, 2022-23ನೇ ಆರ್ಥಿಕ ಸಾಲಿನಲ್ಲಿ 9,875.87 ಕೋಟಿ ರೂ. ತೆರಿಗೆ ಪಾವತಿಸಿತ್ತು. 

ITR Filing: 2022-23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಈ 10 ದಾಖಲೆಗಳು ಅಗತ್ಯ

ಟಾಟಾ ಸಮೂಹದ ಟಾಟಾ ಸ್ಟೀಲ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, 10,159.77 ಕೋಟಿ ರೂ. ತೆರಿಗೆ ಪಾವತಿಸಿತ್ತು. ತೈಲ ಹಾಗೂ ನೈಸರ್ಗಿಕ ಅನಿಲ ನಿಗಮ (ಒಎನ್ ಜಿಸಿ)  6ನೇ ಸ್ಥಾನದಲ್ಲಿದ್ದು, 10,273.15 ಕೋಟಿ ರೂ. ಮೊತ್ತವನ್ನು ತೆರಿಗೆ ರೂಪದಲ್ಲಿ ಪಾವತಿಸಿದೆ. ದೇಶದ ಖಾಸಗಿ ವಲಯದ ಇನ್ನೊಂದು ಪ್ರಮುಖ ಬ್ಯಾಂಕ್ ಐಸಿಐಸಿಐ ಬ್ಯಾಂಕ್, ಸರ್ಕಾರಕ್ಕೆ  11,793.44 ಕೋಟಿ ರೂ. ತೆರಿಗೆ ಪಾವತಿಸಿದೆ. ದೇಶದ ಪ್ರತಿಷ್ಟಿತ ಐಟಿ ಸಂಸ್ಥೆಗಳಲ್ಲಿ ಒಂದಾದ ಟಿಸಿಎಸ್ ತೆರಿಗೆ ಪಾವತಿ ಮಾಡಿದ ಸಂಸ್ಥೆಗಳ ಟಾಪ್ 10 ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಕಳೆದ ಆರ್ಥಿಕ ಸಾಲಿನಲ್ಲಿ 14,604 ಕೋಟಿ ರೂ. ತೆರಿಗೆ ಪಾವತಿಸಿದೆ. ಎಚ್ ಡಿಎಫ್ ಸಿ ಬ್ಯಾಂಕ್ ಮೂರನೇ ಸ್ಥಾನದಲ್ಲಿದ್ದು, 2022-23ನೇ ಆರ್ಥಿಕ ಸಾಲಿನಲ್ಲಿ 15,349.69 ಕೋಟಿ ರೂ. ತೆರಿಗೆ ಪಾವತಿಸಿದೆ. 

ದೇಶದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಕಳೆದ ಆರ್ಥಿಕ ಸಾಲಿನಲ್ಲಿ 17,648.67 ಕೋಟಿ ರೂ. ತೆರಿಗೆ ಪಾವತಿಸಿದೆ. ಹಾಗಾದ್ರೆ ಅತೀಹೆಚ್ಚು ತೆರಿಗೆ ಪಾವತಿಸಿ ಮೊದಲ ಸ್ಥಾನದಲ್ಲಿರುವ ಸಂಸ್ಥೆ ಯಾವುದು? ಬೇರೆ ಯಾವುದೂ ಅಲ್ಲ, ರಿಲಯನ್ಸ್ ಇಂಡಸ್ಟ್ರೀಸ್. ಹೌದು, 2022-23 ಆರ್ಥಿಕ ಸಾಲಿನಲ್ಲಿ 20,713 ಕೋಟಿ ರೂ. ತೆರಿಗೆ ಪಾವತಿಸುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 

ITR ಫೈಲ್ ಮಾಡಿದ ಬಳಿಕ ತೆರಿಗೆ ರೀಫಂಡ್ ಪಡೆಯಲು ಎಷ್ಟು ಸಮಯ ಬೇಕು? ಇಲ್ಲಿದೆ ಮಾಹಿತಿ

ಐಟಿಆರ್ ಸಲ್ಲಿಕೆಗೆ ಜು.31ರ ಗಡುವು
2022-23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಅಂತಿಮ ದಿನಾಂಕ. ಐಟಿಆರ್ ಸಲ್ಲಿಕೆಯನ್ನು ಆನ್ ಲೈನ್ ಹಾಗೂ ಆಪ್ ಲೈನ್ ಮೂಲಕ ಮಾಡಬಹುದು. ಇನ್ನು ವಿವಿಧ ತೆರಿಗೆದಾರರಿಗೆ ಏಳು ವಿಧದ ಐಟಿಆರ್ ಫಾರ್ಮ್ ಗಳು ಲಭ್ಯವಿವೆ. ಹೀಗಾಗಿ 2023-24ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆ ಮಾಡಲು ಸಮರ್ಪಕವಾದ ಅರ್ಜಿ ನಮೂನೆಯನ್ನು ಆಯ್ಕೆ ಮಾಡೋದು ಅಗತ್ಯ. ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ಐಟಿಆರ್ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಹೀಗಾಗಿ ಯಾವುದೇ ತೆರಿಗೆ ತಜ್ಞರ ಅಗತ್ಯವಿಲ್ಲದೆ ಈಗ ಐಟಿಆರ್ ಸಲ್ಲಿಕೆ ಮಾಡಬಹುದು. 
 

Latest Videos
Follow Us:
Download App:
  • android
  • ios