Asianet Suvarna News Asianet Suvarna News

World Economy: ಯುಕೆ ಹಿಂದಿಕ್ಕಿದ ಭಾರತ; ನರಸಿಂಹ ರಾವ್, ಮನಮೋಹನ್‌ ಸಿಂಗ್‌ಗೆ ಕ್ರೆಡಿಟ್‌ ನೀಡಿದ ಆರ್ಥಿಕ ಸಲಹೆಗಾರ

ಮಾಜಿ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೌಶಿಕ್ ಬಸು ಅವರು 2020 ರ ವೇಳೆಗೆ ಭಾರತವು ಯುಕೆಯನ್ನು ಹಿಂದಿಕ್ಕುವುದು ಸಂಭವಿಸಬೇಕಿತ್ತು. 10 ವರ್ಷಗಳ ಹಿಂದೆ ಭಾರತವು ಯುಕೆಯನ್ನು ಹಿಂದಿಕ್ಕುತ್ತದೆ ಎಂದು ನಾವು ಊಹಿಸಿದ್ದೆವು. ಭಾರತದ ಜನಸಂಖ್ಯೆಯ ವೇಗದ ಬೆಳವಣಿಗೆ ಮತ್ತು ತಲಾ ಆದಾಯ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. 

former cea kaushik basu on india overtaking uk in economy credit goes  to manmohan singh narasimha rao ash
Author
First Published Sep 5, 2022, 4:11 PM IST

ಭಾರತವು ಯುಕೆಯನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂಬ ಇತ್ತೀಚಿನ ವರದಿಗಳನ್ನು ಕೇಳಿರುತ್ತೀರಾ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ (Chief Economic Advisor) ಕೌಶಿಕ್ ಬಸು, ಇದರ ಕ್ರೆಡಿಟ್‌ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು ಎಂದಿದ್ದಾರೆ. ಕೌಶಿಕ್ ಬಸು ಅವರು 2009 ಮತ್ತು 2012 ರ ನಡುವೆ ಮನಮೋಹನ್ ಸಿಂಗ್‌ ಪ್ರಧಾನಿಯಾಗಿದ್ದಾಗ, ಯುಪಿಎ ಸರ್ಕಾರದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ, 2012 ರಿಂದ 2016 ರವರೆಗೆ ಅವರು ವಿಶ್ವ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ (Chief Economist) ಸೇವೆ ಸಲ್ಲಿಸಿದ್ದರು. “ಭಾರತವು ಯುಕೆ (UK) ಜಿಡಿಪಿಯನ್ನು (Gross Domestic Product) ಹಿಂದಿಕ್ಕಿದ ಕೀರ್ತಿಯನ್ನು ಯಾರಾದರೂ ಪಡೆದರೆ, ಅದು ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರ ಸರ್ಕಾರಗಳು. 1994 ರಿಂದ ಭಾರತದ ಬೆಳವಣಿಗೆಯ ಬಿರುಸು ಮತ್ತು 2005 ರಿಂದ ಇನ್ನೂ ವೇಗದ ಬೆಳವಣಿಗೆ ಇದಕ್ಕೆ ಕಾರಣ. 2016 ರಿಂದ ತೀವ್ರ ನಿಧಾನಗತಿಯ ಬೆಳವಣಿಗೆಯ ಹೊರತಾಗಿಯೂ ಇದನ್ನು (ಆರ್ಥಿಕತೆಯ ಸ್ಥಾನ ಹೆಚ್ಚುವುದನ್ನು ಅಥವಾ ಬ್ರಿಟನ್‌ ಹಿಂದಿಕ್ಕುವುದನ್ನು) ಅನಿವಾರ್ಯಗೊಳಿಸಿತು. ಇದು ಕೊನೆಯ ಓಟಗಾರನ ನಡುವೆಯೂ ರಿಲೇ ರೇಸ್ ಗೆದ್ದಂತೆ" ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಹೇಳಿದರು.

ಈ ಸಂಬಂಧ ಸರಣಿ ಟ್ವೀಟ್‌ಗಳನ್ನು ಮಾಡಿರುವ ಕೌಶಿಕ್‌ ಬಸು, ‘’10 ವರ್ಷಗಳ ಹಿಂದೆಯೇ, ಭಾರತವು 2020 ರ ವೇಳೆಗೆ GDP ಯಲ್ಲಿ UK ಯನ್ನು ಹಿಂದಿಕ್ಕಲಿದೆ ಎಂದು ಊಹಿಸಲಾಗಿತ್ತು. ಇದಕ್ಕೆ ಕಾರಣ ಭಾರತದ ಜನಸಂಖ್ಯೆಯ ವೇಗದ ಬೆಳವಣಿಗೆ ಮತ್ತು ತಲಾ ಆದಾಯ ಎಂದೂ ಕೌಶಿಕ್‌ ಬಸು ಹೇಳಿದ್ದಾರೆ. ಆದರೂ, 2016 ರಿಂದ ಭಾರತದ ತಲಾ ಆದಾಯದ ಬೆಳವಣಿಗೆಯಲ್ಲಿ ತೀವ್ರ ಕುಸಿತದಿಂದಾಗಿ ಇದು ಒಂದೆರಡು 2 ವರ್ಷಗಳಷ್ಟು ವಿಳಂಬವಾಯಿತು. ಆದರೆ ಅದು ಈಗ ಸಂಭವಿಸಿದೆ ಎಂದು ನನಗೆ ಖುಷಿಯಾಗಿದೆ’’ ಎಂದು ಮುಖ್ಯ ಆರ್ಥಿಕ ಸಲಹೆಗಾರ ಟ್ವೀಟ್‌ ಮಾಡಿದ್ದಾರೆ. ಹಾಗೂ, ಮತ್ತೊಂದು ಟ್ವೀಟ್‌ನಲ್ಲಿ, ‘’CMIE ದತ್ತಾಂಶದ ಪ್ರಕಾರ, ಆಗಸ್ಟ್‌ನಲ್ಲಿ ಭಾರತದ ನಿರುದ್ಯೋಗ ಪ್ರಮಾಣವು 8.3% ಕ್ಕೆ ಏರಿಕೆಯಾಗಿದೆ, ಇದು 12 ತಿಂಗಳುಗಳಲ್ಲಿ ಅತ್ಯಧಿಕವಾಗಿದೆ’’ ಎಂದು ಕೌಶಿಕ್‌ ಬಸು ತಿಳಿಸಿದ್ದಾರೆ. "ಇದು ಹೆಚ್ಚಿನ ಹಣದುಬ್ಬರದ ನಡುವೆ ನಡೆಯುತ್ತಿರುವ ಕಠಿಣ ಪರಿಸ್ಥಿತಿ.  ಇದು ಹೆಚ್ಚುವರಿ ತೊಂದರೆಗಳನ್ನು ಉಂಟುಮಾಡುತ್ತಿದೆ. ಇದಕ್ಕೆ ನಾವು ಎಲ್ಲಾ ನೀತಿಯ ಗಮನವನ್ನು ಕೇಂದ್ರೀಕರಿಸಬೇಕಾಗಿದೆ’’ ಎಂದೂ ಅವರು ಹೇಳಿದರು.

SBI Report: 2029 ರ ವೇಳೆಗೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ..!

ಇದಕ್ಕೂ ಮುನ್ನ, “ಏಪ್ರಿಲ್-ಜೂನ್‌ನಲ್ಲಿ ಭಾರತದ ಹೆಚ್ಚಿನ ಬೆಳವಣಿಗೆ ಒಳ್ಳೆಯ ಸುದ್ದಿಯಾಗಿದೆ. ಆದರೆ 2016 ರಿಂದ 5 ವರ್ಷಗಳ ತೀವ್ರ ಬೆಳವಣಿಗೆಯ ಕುಸಿತವು ದೊಡ್ಡ ಹಾನಿ ಮಾಡಿದೆ. ಭಾರತವು ಈಗ ವಿಶ್ವದ ಅತಿ ಹೆಚ್ಚು ಯುವ ನಿರುದ್ಯೋಗವನ್ನು ಹೊಂದಿದೆ ಮತ್ತು ಅತ್ಯಧಿಕ ಅಸಮಾನತೆ ಹಾಗೂ ಜೀವಿತಾವಧಿ ಬಾಂಗ್ಲಾದೇಶಕ್ಕಿಂತ 3 ವರ್ಷ ಕಡಿಮೆ ಇದೆ.’’ ಎಂದೂ ಕೌಶಿಕ್‌ ಬಸು ಟ್ವೀಟ್‌ ಮಾಡಿದ್ದಾರೆ.

ಹಲವಾರು ಉದ್ಯಮಿಗಳು, ವ್ಯಾಪಾರ ಉದ್ಯಮಿಗಳು ಮತ್ತು ಬ್ಯಾಂಕರ್‌ಗಳು ಬ್ರಿಟನ್‌ನ ನಂತರ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನಕ್ಕೇರಿದ ಭಾರತದ ಅಸಾಮಾನ್ಯ ಸಾಧನೆಯನ್ನು ಶ್ಲಾಘಿಸಿದರು.  ಆದರೆ,  ಕೋಟಕ್ ಮಹೀಂದ್ರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಉದಯ್‌ ಕೋಟಕ್‌ ಇದರ ವಾಸ್ತವ ಸ್ಥಿತಿ ನೀಡಿದ್ದರು. ‘’ ಜನಸಂಖ್ಯೆಯಲ್ಲಿ ಭಾರತ: 1.4 ಬಿಲಿಯನ್ , ಆದರೆ ಯುಕೆ: .068 ಬಿಲಿಯನ್. ಆದ್ದರಿಂದ, ತಲಾ GDP ಭಾರತದ್ದು $2,500 ಮತ್ತು ಯುಕೆಯದ್ದು $47,000. ನಾವು ಇನ್ನೂ ಅವರ ಜಿಡಿಪಿಯನ್ನು ದಾಟಲು ಮೈಲುಗಳಷ್ಟು ಮುನ್ನುಗ್ಗಬೇಕಿದೆ’’ ಎಂದೂ ಹೇಳಿದ್ದಾರೆ. 

Anand Mahindra: ಭಾರತ ಆರ್ಥಿಕತೆಯಲ್ಲಿ ಬ್ರಿಟನ್‌ ಹಿಂದಿಕ್ಕಿದ್ದು ''ಕರ್ಮ ಸಿದ್ಧಾಂತದ ಫಲ'' ಎಂದ ಉದ್ಯಮಿ

Follow Us:
Download App:
  • android
  • ios