13 ಸಾವಿರ ಕೋಟಿ ಹೂಡಿಕೆ ಹಿಂತೆಗೆದುಕೊಂಡ ವಿದೇಶಿ ಹೂಡಿಕೆದಾರರು: ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆ ಹೆಜ್ಜೆ; ಕಾರಣ ಹೀಗಿದೆ..

ಭಾರತೀಯ ಷೇರುಗಳ ಹೆಚ್ಚಿನ ಮೌಲ್ಯಮಾಪನ ಮತ್ತು ಯುಎಸ್ ಬಾಂಡ್ ಇಳುವರಿಗಳ ಕಾರಣದಿಂದ ಮೊದಲ ಮೂರು ವಾರಗಳಲ್ಲಿ 13,000 ಕೋಟಿ ರೂಪಾಯಿ ಮೌಲ್ಯದ ದೇಶೀಯ ಷೇರುಗಳನ್ನು ಹಿಂತೆಗೆದುಕೊಂಡಿದ್ದಾರೆ.

foreign portfolio investors pull out 13 thousand crore from january ash

ಹೊಸದಿಲ್ಲಿ (ಜನವರಿ 22, 2024): ಭಾರತೀಯ ಷೇರು ಮಾರುಕಟ್ಟೆ ಈ ತಿಂಗಳು ಏರಿಕೆ - ಇಳಿಕೆಯನ್ನು ಅನುಭವಿಸುತ್ತಿದೆ. ಗೂಳಿ - ಕರಡಿ ನಡುವೆ ಹೋರಾಟ ನಡೆಯುತ್ತಿದೆ. ಈ ಮಧ್ಯೆ, ವಿದೇಶಿ ಹೂಡಿಕೆದಾರರು ಈ ತಿಂಗಳು ಎಚ್ಚರಿಕೆಯ ವಿಧಾನ ಅನುಸರಿಸಿದ್ದು, ಭಾರತೀಯ ಷೇರುಗಳ ಹೆಚ್ಚಿನ ಮೌಲ್ಯಮಾಪನ ಮತ್ತು ಯುಎಸ್ ಬಾಂಡ್ ಇಳುವರಿಗಳ ಕಾರಣದಿಂದ ಮೊದಲ ಮೂರು ವಾರಗಳಲ್ಲಿ 13,000 ಕೋಟಿ ರೂಪಾಯಿ ಮೌಲ್ಯದ ದೇಶೀಯ ಷೇರುಗಳನ್ನು ಹಿಂತೆಗೆದುಕೊಂಡಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ, ವಿದೇಶಿ ಹೂಡಿಕೆದಾರರು ಡೆಬ್ಟ್‌ ಮಾರುಕಟ್ಟೆಯಲ್ಲಿ 15,647 ಕೋಟಿ ರೂ.  ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಡೇಟಾ ಪ್ರಕಾರ, ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಈ ತಿಂಗಳು (ಜನವರಿ 19 ರವರೆಗೆ) ಭಾರತೀಯ ಷೇರುಗಳಲ್ಲಿ 13,047 ಕೋಟಿ ರೂ. ಹೂಡಿಕೆಯಾಗಿದೆ. 

ಇದನ್ನು ಓದಿ: ಒಂದೇ ದಿನ 1.1 ಲಕ್ಷ ಕೋಟಿ ರೂಪಾಯಿ ಮೌಲ್ಯ ಕಳೆದುಕೊಂಡ ಎಚ್‌ಡಿಎಫ್‌ಸಿ ಬ್ಯಾಂಕ್‌!

ಇನ್ನೊಂದೆಡೆ, ಜನವರಿ 17 - 19 ರ ಅವಧಿಯಲ್ಲಿ ಈಕ್ವಿಟಿಗಳಿಂದ 24,000 ಕೋಟಿ ರೂ. ಅನ್ನು ವಿದೇಶಿ ಹೂಡಿಕೆದಾರರು ಹಿಂಪಡೆದಿದ್ದಾರೆ. ಇದಕ್ಕೂ ಮೊದಲು, ಎಫ್‌ಪಿಐಗಳು ಡಿಸೆಂಬರ್‌ನಲ್ಲಿ 66,134 ಕೋಟಿ ರೂ. ಹೂಡಿಕೆ ಮಾಡಿದ್ದರು ಎಂದೂ ತಿಳಿದುಬಂದಿದೆ.

ಯುಎಸ್ ಬಾಂಡ್ ಇಳುವರಿಯು ಇತ್ತೀಚಿನ ಮಟ್ಟದ 3.9% ರಿಂದ 4.2% ಕ್ಕೆ ಏರಿಕೆಯಾಗುವುದರೊಂದಿಗೆ ಬಂಡವಾಳದ ಹೊರಹರಿವುಗಳನ್ನು ಪ್ರಚೋದಿಸುತ್ತದೆ.

ಇದನ್ನೂ ಓದಿ: 52 ವಾರ ಕನಿಷ್ಠ ಮಟ್ಟದಿಂದ 72 ಸಾವಿರಕ್ಕೆ: 2023 ರಲ್ಲಿ ವಿಶ್ವದ ಟಾಪ್ 10 ಷೇರು ಮಾರುಕಟ್ಟೆಗಳ ಪಟ್ಟಿಗೆ ಭಾರತೀಯ ಷೇರುಪೇಟೆ

ಅಮೆರಿಕ ಬಾಂಡ್ ಇಳುವರಿ 10-ವರ್ಷದ ಇಳುವರಿಯು ಇತ್ತೀಚಿನ ಮಟ್ಟದಿಂದ 3.9% ರಿಂದ 4.2% ಕ್ಕೆ ಏರಿಕೆಯಾಗುವುದರೊಂದಿಗೆ ಬಂಡವಾಳದ ಹೊರಹರಿವುಗಳನ್ನು ಪ್ರಚೋದಿಸುತ್ತದೆ. 
ಎಂದು ಹೂಡಿಕೆ ತಂತ್ರಜ್ಞ ಹೇಳಿದ್ದಾರೆ. 

ಇಂದು ಅಯೋದ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಗೆ ರಜೆ ಘೋಷಿಸಲಾಗಿದೆ. ಇನ್ನೊಂದೆಡೆ, ಶನಿವಾರ ಷೇರು ಮಾರುಕಟ್ಟೆ ಕಾರ್ಯಾಚರಿಸಿತ್ತು.

ಷೇರು ಮಾರುಕಟ್ಟೆಯಿಂದ್ಲೇ ತಿಂಗಳಿಗೆ 650 ಕೋಟಿ ರೂ. ಲಾಭ ಮಾಡಿದ ಮಹಿಳೆ ಇವರೇ!

2023 ಅದಾನಿಗೆ ಮರೆಯಲಾರದ ವರ್ಷ: ಮಾರುಕಟ್ಟೆ ಬಂಡವಾಳದಲ್ಲಿ 6 ಲಕ್ಷ ಕೋಟಿ ರೂ. ನಷ್ಟ!

Latest Videos
Follow Us:
Download App:
  • android
  • ios