ಷೇರು ಮಾರುಕಟ್ಟೆಯಿಂದ್ಲೇ ತಿಂಗಳಿಗೆ 650 ಕೋಟಿ ರೂ. ಲಾಭ ಮಾಡಿದ ಮಹಿಳೆ ಇವರೇ!
ಟಾಟಾ ಗ್ರೂಪ್ ಒಡೆತನದ ಟೈಟಾನ್ ಕಂಪನಿಯಲ್ಲಿ ರೇಖಾ ಜುಂಜುನ್ವಾಲಾ ಶೇ. 5.4 ರಷ್ಟು ಷೇರುಗಳನ್ನು ಹೊಂದಿದ್ದಾರೆ.
ಷೇರು ಮಾರುಕಟ್ಟೆಯ ಬಿಗ್ ಬುಲ್ ಎಂದೇ ಖ್ಯಾತಿಗೊಳಗಾಗಿದ್ದ ದಿವಂಗತ ರಾಕೇಶ್ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುನ್‌ಜುನ್‌ವಾಲಾ ಪತಿಯ ಷೇರು ಮಾರುಕಟ್ಟೆ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.
2023 ರಲ್ಲಿ ಇವರ ಕನಿಷ್ಠ 3 ಸ್ಟಾಕ್‌ಗಳು ಮಲ್ಟಿ-ಬ್ಯಾಗರ್ ರಿಟರ್ನ್ಸ್ ನೀಡಿದ್ದು, ಹೆಚ್ಚಿನ ಲಾಭಗಳು ಟೈಟಾನ್‌ನ ಕಂಪನಿಯಿಂದ ಬಂದಿದೆ ಎಂದು ತಿಳಿದುಬಂದಿದೆ. ಟಾಟಾ ಗ್ರೂಪ್ ಒಡೆತನದ ಟೈಟಾನ್ ಕಂಪನಿಯಲ್ಲಿ ರೇಖಾ ಜುಂಜುನ್ವಾಲಾ ಶೇ. 5.4 ರಷ್ಟು ಷೇರುಗಳನ್ನು ಹೊಂದಿದ್ದಾರೆ.
ಮಲ್ಟಿಬ್ಯಾಗರ್ ಸ್ಟಾಕ್‌ಗಳು ವ್ಯವಹಾರದ ಈಕ್ವಿಟಿ ಷೇರುಗಳಾಗಿದ್ದು, ಅದು ಸ್ವಾಧೀನ ವೆಚ್ಚಕ್ಕಿಂತ ಹಲವಾರು ಪಟ್ಟು ಹೆಚ್ಚಿನ ಆದಾಯವನ್ನು ನೀಡುತ್ತದೆ.
ಇದೇ ರೀತಿ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಷೇರುದಾರರ ರಚನೆಯ ಆಧಾರದ ಮೇಲೆ, ರೇಖಾ ಜುಂಜುನ್ವಾಲಾ 25 ಷೇರುಗಳನ್ನು ಹೊಂದಿದ್ದಾರೆ. ಈ ತ್ರೈಮಾಸಿಕದಲ್ಲಿ ಇವರ ಷೇರುಗಳ ಮೌಲ್ಯ 14% ರಷ್ಟು ಹೆಚ್ಚಾಗಿದ್ದು, 39,000 ಕೋಟಿ ರೂ. ಗೆ ಏರಿಕೆಯಾಗಿದೆ.
ಈ ಪೈಕಿ ಟಾಟಾ ಮೋಟಾರ್ಸ್ DVR, ಈ ವರ್ಷ 138% ರಷ್ಟು ಏರಿಕೆ ಕಂಡಿದೆ. ಅಂದರೆ, ರೇಖಾ ಜುಂಜುನ್ವಾಲಾ ಅವರ ಸ್ಟಾಕ್ ಮಾರುಕಟ್ಟೆ ಪೋರ್ಟ್‌ಫೋಲಿಯೊದಲ್ಲಿ ಇದೇ ಉತ್ತಮ-ಕಾರ್ಯನಿರ್ವಹಣೆಯ ಸ್ಟಾಕ್ ಆಗಿದೆ. ಸೆಪ್ಟೆಂಬರ್ ತ್ರೈಮಾಸಿಕದ ಕೊನೆಯಲ್ಲಿ ರೇಖಾ ಜುಂಜುನ್ವಾಲಾ ಈ ಕಂಪನಿಯ 1.92% ಪಾಲು ಹೊಂದಿದ್ದರು ಎಂದು ವರದಿಯಾಗಿದೆ.
ಇನ್ನು, DB ರಿಯಾಲ್ಟಿ ಕಂಪನಿಯಲ್ಲಿಇವರು ಸರಿಸುಮಾರು 2% ಪಾಲು ಹೊಂದಿದ್ದಾರೆ. ಹಾಗೂ, ಅವರ ಷೇರುಗಳು ಇಲ್ಲಿಯವರೆಗೆ 108% ರಷ್ಟು ಹೆಚ್ಚಾಗಿದೆ.
ಟೈಟಾನ್ ಕಂಪನಿಯಲ್ಲಿ ಸದ್ಯ ರೇಖಾ ಜುಂಜುನ್ವಾಲಾ ಷೇರುಗಳ ಮೌಲ್ಯ 17,000 ಕೋಟಿ ರೂ.ಗಿಂತಲೂ ಹೆಚ್ಚು ಎಂದು ತಿಳಿದುಬಂದಿದೆ.
ಹಾಗೆ, ರೇಖಾ ಜುಂಜುನ್ವಾಲಾ ಹೆಚ್ಚುವರಿಯಾಗಿ, ಟಾಟಾ ಮೋಟಾರ್ಸ್‌ನಲ್ಲಿ 1.6% ಪಾಲು ಹೊಂದಿದ್ದು, ಈ ವರ್ಷ ಈ ಸ್ಟಾಕ್‌ಗಳು 88% ಹೆಚ್ಚಾಗಿದೆ. 3,800 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಈ ಷೇರು ಹೂಡಿಕೆದಾರರ ಕುಟುಂಬದ ಎರಡನೇ ಅತಿ ದೊಡ್ಡ ಹೂಡಿಕೆಯಾಗಿದೆ. ಅಂದರೆ, ಟಾಟಾ ಗ್ರೂಪ್‌ನಲ್ಲೇ ದೊಡ್ಡ ಹಿತಾಸಕ್ತಿಗಳನ್ನು ಹೊಂದಿದ್ದಾರೆ ಜುಂಜುನ್ವಾಲಾ.
ಇನ್ನೊಂದಡೆ, ರೇಖಾ ಜುಂಜುನ್ವಾಲಾ ಅವರ ಷೇರು ಮಾರುಕಟ್ಟೆ ಪೋರ್ಟ್‌ಫೋಲಿಯೊದಲ್ಲಿ VA ಟೆಕ್ ವಾಬಾಗ್ (2023 ರಲ್ಲಿ 95% ಏರಿಕೆ), ವೊಕ್‌ಹಾರ್ಟ್ (88%), ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ (70%), ನಜಾರಾ ಟೆಕ್ನಾಲಜೀಸ್ (53%), ಕರೂರ್ ವೈಶ್ಯ ಬ್ಯಾಂಕ್ (51%) ಮತ್ತು ಮೆಟ್ರೋ ಬ್ರಾಂಡ್‌ಗಳು (49%) ಏರಿಕೆಯಾಗಿದೆ ಎಂದೂ ವರದಿ ಹೇಳುತ್ತಿದೆ.
ಒಟ್ಟಾರೆ, ದಿವಂಗತ ರಾಕೇಶ್ ಜುಂಜುನ್ವಾಲಾ ಪತ್ನಿ ರೇಖಾ ಜುಂಜುನ್ವಾಲಾ ಷೇರು ಮಾರುಕಟ್ಟೆಯ ಮೂಲಕವೇ ತಿಂಗಳಿಗೆ 650 ಕೋಟಿ ರೂ. ಆಸ್ತಿ ಹೆಚ್ಚಿಸಿಕೊಂಡಿದ್ದಾರೆ.