ಗೌತಮ್‌ ಅದಾನಿ ಅಯ್ತು, ಈಗ ಅಣ್ಣ ವಿನೋದ್‌ ಅದಾನಿ ಮೇಲೆಯೂ ಆರೋಪ!

ಹಿಂಡೆನ್‌ಬರ್ಗ್‌ ರಿಸರ್ಚ್‌ ಪ್ರಕಟಿಸಿದ ವರದಿಯಿಂದ ಅದಾನಿ ಗ್ರೂಪ್‌ನ ಷೇರುಗಳ ಮೌಲ್ಯ ಸಂಪೂರ್ಣವಾಗಿ ಇಳಿಕೆಯಾಗಿದೆ. ಇದರಿಂದ ಚೇತರಿಕೆ ಕಾಣುವ ಪ್ರಯತ್ನದಲ್ಲಿರುವಾಗಲೇ ಗೌತಮ್‌ ಅದಾನಿ ಅಣ್ಣ ವಿನೋದ್‌ ಅದಾನಿ ವಿರುದ್ಧ ಫೋರ್ಬ್ಸ್‌ ಗಂಭೀರ ಆರೋಪಗಳನ್ನು ಮಾಡಿದೆ. ಈ ವರದಿಯನ್ನು ಹಿಂಡೆನ್‌ಬರ್ಗ್‌ ರಿಸರ್ಚ್‌ ಟ್ವೀಟ್‌ ಮಾಡಿದೆ.

forbes report alleges gautam adani brother Vinod adani loan from russian bank san

ನವದೆಹಲಿ(ಫೆ.18): ಹಿಂಡೆನ್‌ಬರ್ಗ್‌ ವರದಿಯಿಂದಾಗಿ ಅದಾನಿ ಗ್ರೂಪ್‌ ಅಂದಾಜು 130 ಶತಕೋಟಿ ಡಾಲರ್‌ ನಷ್ಟ ಉಂಟಾಗಿದೆ. ಅಲ್ಲದೆ, ಅದಾನಿ ಗ್ರೂಪ್‌ ಚೇರ್ಮನ್‌ ಗೌತಮ್‌ ಅದಾನಿ ಅವರ ನಿವ್ವಳ ಮೌಲ್ಯದಲ್ಲೂ ದೊಡ್ಡ ಮಟ್ಟದ ಇಳಿಕೆಯಾಗಿದ್ದು, ಪ್ರಸ್ತುತ ಅವರ ಮೌಲ್ಯ 71 ಮಿಲಿಯನ್‌ ಶತಕೋಟಿ ಡಾಲರ್‌ ಆಗಿದೆ. ಇಷ್ಟೆಲ್ಲಾ ಆದರೂ, ಅದಾನಿ ಗ್ರೂಪ್‌ನ ಸಂಕಷ್ಟಗಳು ಇಲ್ಲಿಗೆ ನಿಲ್ಲುವಂತೆ ಕಾಣುತ್ತಿದೆ. ಹಿಂಡೆನ್‌ಬರ್ಗ್‌ ವರದಿಯ ಬಳಿಕ ಈಗ ಫೋರ್ಬ್ಸ್‌ ಕೂಡ ಅದಾನು ಗ್ರೂಪ್‌ನ ಮೇಲೆ ದೊಡ್ಡ ಆರೋಪ ಮಾಡಿದೆ. ಗೌತಮ್‌ ಅದಾನಿ ಅವರ ಹಿರಿಯಣ್ಣ ವಿನೋದ್‌ ಅದಾನಿ ವಿರುದ್ಧ ಫೋರ್ಬ್ಸ್‌ ಆರೋಪಗಳನ್ನು ಮಾಡಿದೆ. ಗುಂಪಿನಲ್ಲಿನ ಪ್ರವರ್ತಕರ ಷೇರುಗಳನ್ನು ಸಾಲಕ್ಕಾಗಿ ಬ್ಯಾಂಕ್‌ಗೆ ಅಡವಿರಿಸಲಾಗಿದೆ ಎಂದು ಫೋರ್ಬ್ಸ್ ವರದಿ ಹೇಳಿದೆ.  $240 ಮಿಲಿಯನ್ ಮೌಲ್ಯದ ಪ್ರವರ್ತಕರ ಪಾಲನ್ನು ರಷ್ಯಾದ ಬ್ಯಾಂಕ್‌ನಲ್ಲಿ ಅಡವಿರಿಸಲಾಗಿದೆ. ಅಚ್ಚರಿಯ ವಿಚಾರವೆಂದರೆ, ಫೋರ್ಬ್ಸ್‌ನ ಈ ವರದಿಯಲ್ಲಿ ಹಿಂಡೆನ್‌ಬರ್ಗ್ ರಿಸರ್ಚ್‌ ಟ್ವೀಟ್‌ ಮಾಡಿದೆ. ಗೌತಮ್‌ ಅದಾನಿ ಅವರ ಅಣ್ಣ ವಿನೋದ್ ಅದಾನಿ ದುಬೈನಲ್ಲಿ ವಾಸವಿದ್ದಾರೆ. ಹಿಂಡೆನ್‌ಬರ್ಗ್‌ ತನ್ನ ವರದಿಯಲ್ಲಿ ಗೌತಮ್‌ ಅದಾನಿ ಹೆಸರನ್ನು 54 ಬಾರಿ ಬಳಸಿದ್ದರೆ, ಫೋರ್ಬ್ಸ್‌ ವರದಿಯಲ್ಲಿ ವಿನೋದ್‌ ಅದಾನಿ ಹೆಸರು 151 ಬಾರಿ ಬಳಕೆಯಾಗಿದೆ. ಆದರೆ, ಅದಾನಿ ಗ್ರೂಪ್‌ ಮಾತ್ರ ತಮ್ಮ ಯಾವುದೇ ಲಿಸ್ಟೆಡ್‌ ಕಂಪನಿಯಲ್ಲಿ ವಿನೋದ್‌ ಅದಾನಿ ಪಾಲುದಾರರಲ್ಲಿ ಎಂದು ಹೇಳಿದೆ.

ಸಿಂಗಾಪುರದ ಪಿನಾಕಲ್ ಟ್ರೇಡ್ ಮತ್ತು ಇನ್ವೆಸ್ಟ್‌ಮೆಂಟ್ ಪಿಟಿಇ ಕಂಪನಿಗೆ ವಿನೋದ್‌ ಅದಾನಿ ಮಾಲೀಕರಾಗಿದ್ದಾರೆ. ಆದರೆ, ಈ ಕಂಪನಿಯ ಮೇಲೆ ಅವರ ಪರೋಕ್ಷ ನಿಯಂತ್ರಣವಿದೆ ಎಂದು ಫೋರ್ಬ್ಸ್‌ ವರದಿ ಹೇಳಿದೆ. 2020 ರಲ್ಲಿ, ಈ ಕಂಪನಿಯು ರಷ್ಯಾದ ವಿಟಿಬಿ ಬ್ಯಾಂಕ್‌ನೊಂದಿಗೆ ಸಾಲ ಒಪ್ಪಂದವನ್ನು ಮಾಡಿಕೊಂಡಿದೆ. ಏಪ್ರಿಲ್ 2021 ರ ಹೊತ್ತಿಗೆ, ಕಂಪನಿಯು 263 ಮಿಲಿಯನ್ ಶತಕೋಟಿ ಡಾಲರ್‌ ಸಾಲವನ್ನು ಪಡೆದಿದೆ. ಕಂಪನಿಯು ಹೆಸರಿಸದ ಸಂಬಂಧಿತ ಪಕ್ಷಕ್ಕೆ $258 ಮಿಲಿಯನ್ ಸಾಲವನ್ನು ನೀಡಿತ್ತು. ಇದಕ್ಕಾಗಿ ಪಿನಾಕಲ್‌ ಎರಡು ಹೂಡಿಕೆ ನಿಧಿಗಳಾದ  ಆಫ್ರೋ ಏಷ್ಯಾ ಟ್ರೇಡ್ ಮತ್ತು ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್ ಮತ್ತು ವರ್ಲ್ಡ್‌ವೈಡ್ ಎಮರ್ಜಿಂಗ್ ಮಾರ್ಕೆಟ್ ಹೋಲ್ಡಿಂಗ್ಸ್ ಲಿಮಿಟೆಡ್ಅನ್ನು ಸಾಲಕ್ಕೆ ಗ್ಯಾರಂಟಿಯಾಗಿ ನೀಡಿತ್ತು.

Gautam Adani: ಗೌತಮ್‌ ಅದಾನಿ ಪತ್ನಿ ಯಾರು? ಮದುವೆಗೂ ಮುನ್ನ ಅವ್ರೇನ್‌ ಮಾಡ್ತಿದ್ರು?

ಅಚ್ಚರಿ ಎಂದರೆ ಈ ಎರಡೂ ಹೂಡಿಕೆ ನಿಧಿ ಕಂಪನಿಗಳೂ ಕೂಡ ಅದಾನಿ ಗ್ರೂಪ್‌ನಲ್ಲಿ ದೊಡ್ಡ ಪ್ರಮಾಣದ ಪಾಲನ್ನು ಹೊಂದಿದೆ. ಅದಾನಿ ಗ್ರೂಪ್‌ನ ನಾಲ್ಕು ಕಂಪನಿಗಳಲ್ಲಿ ಅವರು ಸುಮಾರು ನಾಲ್ಕು ಬಿಲಿಯನ್ ಡಾಲರ್‌ಗಳ ಪಾಲನ್ನು ಹೊಂದಿದ್ದಾರೆ. ಇವುಗಳಲ್ಲಿ ಗುಂಪಿನ ಪ್ರಮುಖ ಕಂಪನಿ ಅದಾನಿ ಎಂಟರ್‌ಪ್ರೈಸಸ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಪೋರ್ಟ್ಸ್ (APSEZ) ಮತ್ತು ಅದಾನಿ ಪವರ್ ಸೇರಿವೆ. ಅದಾನಿ ಎಂಟರ್‌ಪ್ರೈಸಸ್‌ನಲ್ಲಿನ ಅವರ ಪಾಲು ಫೆಬ್ರವರಿ 16 ರ ಹೊತ್ತಿಗೆ $1.3 ಬಿಲಿಯನ್, ಅದಾನಿ ಪವರ್‌ನಲ್ಲಿ $1.2 ಬಿಲಿಯನ್, ಅದಾನಿ ಪೋರ್ಟ್ಸ್‌ನಲ್ಲಿ $800 ಮಿಲಿಯನ್ ಮತ್ತು ಅದಾನಿ ಟ್ರಾನ್ಸ್‌ಮಿಷನ್‌ನಲ್ಲಿ $700 ಮಿಲಿಯನ್ ಆಗಿದೆ. ಆದರೆ, ಈ ಯಾವ ಹೂಡಿಕೆಗಳು ಕೂಡ ಎಷ್ಟು ಷೇರುಗಳನ್ನು ಪ್ಲೆಡ್ಜ್‌ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ನೀಡಿಲ್ಲ.  ಟ್ವಿಟರ್‌ನಲ್ಲಿ ಫೋರ್ಬ್ಸ್ ವರದಿಯನ್ನು ಹಂಚಿಕೊಂಡ ಹಿಂಡೆನ್‌ಬರ್ಗ್, ಈ ನಿಧಿಗಳು ಭಾರತೀಯ ವಿನಿಮಯ ಕೇಂದ್ರಗಳಿಗೆ ಬ್ಯಾಂಕ್‌ಗಳಿಗೆ ಅಡವಿರಿಸಿದ ಷೇರುಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಬರೆದಿದ್ದಾರೆ.

'ಪ್ರತಿಪಕ್ಷದ ಬಳಿ ಸಾಕ್ಷ್ಯಗಳಿದ್ದರೆ, ಕೋರ್ಟ್‌ಗೆ ಹೋಗಲಿ..' ಅದಾನಿ ಗ್ರೂಪ್‌ ವಿಚಾರದಲ್ಲಿ ಅಮಿತ್‌ ಶಾ ತಿರುಗೇಟು!

ವಿನೋದಾಭಾಯಿ ಎಂದೇ ಪ್ರಖ್ಯಾತರು: ಶ್ರೀಮಂತ ಎನ್‌ಆರ್‌ಐಗಳಲ್ಲಿ ಒಬ್ಬರು ವಿನೋದ್‌ ಶಾಂತಿಲಾಲ್‌ ಅದಾನಿ. ಐಐಎಫ್‌ಎಲ್‌ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ, ಅವರು ಭಾರತದ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. 2021 ರಲ್ಲಿ, ಅವರು ಪ್ರತಿದಿನ 102 ಕೋಟಿ ರೂಪಾಯಿ ಆದಾಯ ಗಳಿಸಿದರು. ದುಬೈನಲ್ಲಿ ನೆಲೆಸಿರುವ ವಿನೋದ್ ಅದಾನಿ ಸಿಂಗಾಪುರ ಮತ್ತು ಜಕಾರ್ತದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.2021 ರಲ್ಲಿ, ಅವರ ನಿವ್ವಳ ಮೌಲ್ಯವು 28 ಪ್ರತಿಶತದಷ್ಟು ಏರಿಕೆಯಾಗಿ 37,400 ಕೋಟಿ ರೂಪಾಯಿಗೆ ತಲುಪಿತ್ತು. ಆ ಬಳಿಕ ಶ್ರೀಮಂತರ ಪಟ್ಟಿಯಲ್ಲಿ ಎರಡು ಸ್ಥಾನ ಏರಿಕೆ ಕಂಡು 6ನೇ ಸ್ಥಾನಕ್ಕೇರಿದ್ದರು.ಅವರ ನಿವ್ವಳ ಮೌಲ್ಯವು 850 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ಅದು 151,200 ಕೋಟಿಗಳಿಂದ 169,000 ಕೋಟಿಗೆ ಹೆಚ್ಚಾಗಿದೆ.

ವಿನೋದ್ ಭಾಯ್ ಎಂದೇ ಪ್ರಸಿದ್ಧರಾದ ವಿನೋದ್ ಅದಾನಿ ಅವರು ಮಹಾರಾಷ್ಟ್ರದ ಭಿವಂಡಿಯಲ್ಲಿ 1976 ರಲ್ಲಿ ವಿಆರ್ ಟೆಕ್ಸ್ಟೈಲ್ಸ್ ಹೆಸರಿನಲ್ಲಿ ಪವರ್ ಲೂಮ್ಸ್ ಅನ್ನು ಸ್ಥಾಪಿಸಿದರು. ನಂತರ ಅವರು ಸಿಂಗಾಪುರದಲ್ಲಿ ಕಚೇರಿ ತೆರೆಯುವ ಮೂಲಕ ತಮ್ಮ ವ್ಯಾಪಾರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದರು. ವಿನೋದ್ ಅದಾನಿ ಅವರು ಮೊದಲು ಸಿಂಗಾಪುರದಲ್ಲಿ ವ್ಯವಹಾರ ಆರಂಭಿಸಿದ್ದರೆ, 1994 ರಿಂದ ದುಬೈನಲ್ಲಿ ನೆಲೆಸಿದ್ದಾರೆ. ದುಬೈನಲ್ಲಿ ಅವರು ಸಕ್ಕರೆ, ಎಣ್ಣೆ, ಅಲ್ಯೂಮಿನಿಯಂ ವ್ಯಾಪಾರವನ್ನು ಹೊಂದಿದ್ದಾರೆ.

Latest Videos
Follow Us:
Download App:
  • android
  • ios