ಫೋರ್ಬ್ಸ್‌ 2024ರ ಪಟ್ಟಿಯಲ್ಲಿರುಂತೆ ಜಗತ್ತಿನ ವಿವಿಧೆಡೆ ಇರುವ 10 ಅತೀ ದುಬಾರಿ ಹಾಗೂ ಐಷಾರಾಮಿ ಮನೆಗಳ  ಡಿಟೇಲ್ ಇಲ್ಲಿದೆ

ಜಗತ್ತಿನ ವಿವಿಧೆಡೆ ಜನರನ್ನು ಬಹಳವಾಗಿ ಆಕರ್ಷಿಸುವ ಆಗರ್ಭ ಶ್ರೀಮಂತರ ದುಬಾರಿ ಹಾಗೂ ಐಷಾರಾಮಿ ಮನೆಗಳು ಇದ್ದು, ಆ ಬಗ್ಗೆ ಒಂದು ಡಿಟೇಲ್ ಸ್ಟೋರಿ ಇಲ್ಲಿದೆ. ಐಷಾರಾಮಿ ಮನೆಗಳು ಹಾಗೂ ಐಷಾರಾಮಿ ಜೀವನ ಯಾವಾಗಲೂ ಜನರನ್ನು ಆಕರ್ಷಿಸುತ್ತಿರುತ್ತದೆ. ಅದೇ ರೀತಿ ಇಲ್ಲಿ ಫೋರ್ಬ್ಸ್‌ 2024ರ ಪಟ್ಟಿಯಲ್ಲಿರುಂತೆ ಜಗತ್ತಿನ ವಿವಿಧೆಡೆ ಇರುವ 10 ಅತೀ ದುಬಾರಿ ಹಾಗೂ ಐಷಾರಾಮಿ ಮನೆಗಳ ಡಿಟೇಲ್ ಇಲ್ಲಿದೆ. ಫೋರ್ಬ್ಸ್‌ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯವರ ಅಂಟಿಲಿಯಾ 2ನೇ ಸ್ಥಾನವನ್ನು ಹೊಂದಿದ್ದರೆ, ಲಂಡನ್‌ನ ಬಂಕಿಂಗ್‌ಹ್ಯಾಮ್ ಪ್ಯಾಲೇಸ್ ಮೊದಲ ಸ್ಥಾನದಲ್ಲಿದೆ. 

ಸ್ವಂತದ್ದಾದ ಸೂರು ಹೊಂದುವುದು ಅನೇಕ ಜನಸಾಮಾನ್ಯರ ಕನಸು . ಆದರೆ ವಿಶ್ವದ ದುಬಾರಿ ಮನೆಗಳನ್ನು ಹೊಂದುವುದು ಶ್ರೀಮಂತ ಉದ್ಯಮಿಗಳ ಕನಸಾಗಿದೆ. ಅವರು ಎಲ್ಲರಂತೆ ತಲೆಮೇಲೊಂದು ಸಣ್ಣ ಸೂರನ್ನು ಇಷ್ಟಪಡುವುದಿಲ್ಲ, ಅವರು ಮನೆಯಲ್ಲಿ ವಿಶಾಲವಾದ ಜಾಗ, ಈಜುಕೊಳ, ಆಟದ ಮೈದಾನ, ಸಿನಿಮಾ ಥಿಯೇಟರ್, ಬಾರ್ ಮುಂತಾದ ಐಷಾರಾಮಿ ಸೌಲಭ್ಯಗಳಿರುವ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿರುವ ಮನೆಗಳನ್ನು ಇಷ್ಟಪಡುತ್ತಾರೆ. 

ಆ ಟ್ಯಾಕ್ಸು, ಈ ಟ್ಯಾಕ್ಸು ಅಂತ ಭಾರತದಲ್ಲಿ ಕಟ್ಟಿ ಸುಸ್ತಾಗಿದ್ದರೆ ಈ ದೇಶಕ್ಕೆ ಹೋಗ್ಬಹುದು!

ಐಷಾರಾಮಿ ಮನೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಲಂಡನ್‌ನಲ್ಲಿರುವ ಬ್ರಿಟನ್‌ ರಾಜಮನೆತನದವರು ವಾಸ ಮಾಡುವ ಬಂಕಿಂಗ್‌ಹ್ಯಾಮ್ ಪ್ಯಾಲೇಸ್‌ 2.9 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ. ಭಾರತೀಯ ರೂಪಾಯಿಯಲ್ಲಿ ಇದರ ಮೌಲ್ಯ 4,07,680 ಕೋಟಿ ರೂಪಾಯಿಗಳು. ಐಷಾರಾಮಿ ಸೌಲಭ್ಯಗಳಲ್ಲಿ ಮುಕೇಶ್ ಅವರ ಅಂಟಿಲಿಯಾವನ್ನು ಇದು ಮೀರಿಸಿದೆ. ಇಸವಿ 1705ರಲ್ಲಿ ಈ ಅರಮನೆಯನ್ನು ನಿರ್ಮಿಸಲಾಗಿದೆ. 

ಹಾಗೆಯೇ ನಮ್ಮ ಭಾರತದ ಶ್ರೀಮಂತ ಉದ್ಯಮಿ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ವಾಸ ಮಾಡುವ ಮುಂಬೈನ ಅಂಟಿಲಿಯಾ ನಿವಾಸವೂ ಹಲವು ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ದೇಶದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಇದರ ಅಂದಾಜು ಮೌಲ್ಯ 2 ಬಿಲಿಯನ್ ಡಾಲರ್‌. ಅಂದರೆ 16,640 ಕೋಟಿ ಭಾರತೀಯ ರೂಪಾಯಿಗಳು. 2006ರಿಂದ 2010ರ ಅವಧಿಯಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. 

ಲಂಡನ್‌ನಲ್ಲಿ ಮಗ ಸೊಸೆಗಾಗಿ 231 ಕೋಟಿ ಮೊತ್ತದ ದುಬಾರಿ ಮನೆ ಖರೀದಿಸಿದ ಸೋನಂ ಕಪೂರ್ ಮಾವ

ಹಾಗೆಯೇ ಮೂರನೇ ಸ್ಥಾನದಲ್ಲಿರುವುದು ಫ್ರಾನ್ಸ್‌ನ ಫ್ರೆಂಚ್‌ ರಿವೆರಾದಲ್ಲಿರುವ ವಿಲ್ಲಾ ಲಿಯೋಪೊಲ್ಡಾ, 1929ರಿಂದ 1931ರ ಅವಧಿಯಲ್ಲಿ ಈ ಬಂಗಲೆಯನ್ನು ನಿರ್ಮಿಸಲಾಗಿದ್ದು, ಇದರ ಮೌಲ್ಯ 750 ಮಿಲಿಯನ್ ಡಾಲರ್ ಅಂದರೆ 6,240 ಕೋಟಿ ಭಾರತೀಯ ರೂಪಾಯಿಗಳು. ಪ್ರಸ್ತುತ ಲಿಲ್ಲಿ ಸಫ್ರಾ ಎಂಬುವವರು ಈ ಮನೆಯ ಮಾಲೀಕರಾಗಿದ್ದಾರೆ. 

ವಿಲ್ಲಾ ಲೆಸ್ ಸೆಡ್ರೆಸ್, ಇದು ಕೂಡ ಫ್ರಾನ್ಸ್‌ನಲ್ಲಿರುವ ಮತ್ತೊಂದು ಐಷಾರಾಮಿ ಮನೆಯಾಗಿದ್ದು, ಫ್ರಾನ್ಸ್‌ನ ಸೇಂಟ್-ಜೀನ್-ಕ್ಯಾಪ್-ಫೆರಾಟ್‌ದಲ್ಲಿ ಈ ಮನೆ ಇದೆ. ಇದರ ಅಂದಾಜು ಮೌಲ್ಯ 450 ಮಿಲಿಯನ್ ಡಾಲರ್‌ ಅಂದರೆ 3,744 ಕೋಟಿ ಭಾರತೀಯ ರೂಪಾಯಿಗಳು, 1830ನೇ ಇಸವಿಯಲ್ಲಿ ಈ ಬಂಗಲೆಯನ್ನು ನಿರ್ಮಿಸಲಾಗಿದ್ದು, ರಿನಾತ್ ಅಖ್ಮೆಟೋವ್ ಈ ಮನೆಯ ಸದ್ಯದ ಮಾಲೀಕರಾಗಿದ್ದಾರೆ.

ಲೆಸ್ ಪಲೈಸ್ ಬುಲ್ಸ್, ಇದು ಕೂಡ ಪ್ರೇಮ ನಗರಿ ಫ್ರಾನ್ಸ್‌ನ ಕ್ಯಾನೆಸ್‌ನಲ್ಲಿರುವ ಐಷಾರಾಮಿ ಮನೆಯಾಗಿದೆ. 1975ರಿಂದ 1989ರ ಅವಧಿಯಲ್ಲಿ ನಿರ್ಮಿಸಲಾಗಿರುವ ಈ ಐಷಾರಾಮಿ ಬಂಗಲೆಯ ಅಂದಾಜು ಮೌಲ್ಯ 420 ಮಿಲಿಯನ್ ಡಾಲರ್ ಎಂದರೆ 3494.4 ಕೋಟಿ ಭಾರತೀಯ ರೂಪಾಯಿಯಾಗಿದೆ. ಪಿಯರೆ ಕಾರ್ಡಿನ್ ಎಂಬುವವರು ಈ ಮನೆಯ ಮಾಲೀಕರಾಗಿದ್ದಾರೆ. 

ಓಡಿಯನ್ ಟವರ್ ಪೆಂಟ್ ಹೌಸ್, ವೆಸ್ಟನ್‌ ಯುರೋಪ್‌ನ ಪುಟ್ಟ ದೇಶವಾದ ಮೊನಕೋದಲ್ಲಿರುವ ಓಡಿಯನ್ ಟವರ್ ಪೆಂಟ್ ಹೌಸನ್ನು 2009ರಿಂದ 2015ರ ಅವಧಿಯಲ್ಲಿ ನಿರ್ಮಿಸಲಾಗಿದೆ. ಇದರ ಅಂದಾಜು ಮೌಲ್ಯ 330 ಮಿಲಿಯನ್ ಡಾಲರ್ ಅಂದರೆ, 2745.6 ಕೋಟಿ ಭಾರತೀಯ ರೂಪಾಯಿಯಾಗಿದೆ. 

ಫೋರ್‌ ಫೇರ್‌ಫೀಲ್ಡ್ ಪಾಂಡ್ ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿರುವ ಈ ಐಷಾರಾಮಿ ಮನೆಯನ್ನು 2003ರಲ್ಲಿ ನಿರ್ಮಿಸಲಾಗಿದೆ. ಇದರ ಅಂದಾಜು ಮೌಲ್ಯ 250 ಮಿಲಿಯನ್‌ ಡಾಲರ್ ಆಗಿದ್ದು, ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ 2080 ಕೋಟಿ ರೂಪಾಯಿಗಳು. 

18-19 ಕೆನ್ಸಿಂಗ್ಟನ್ ಗಾರ್ಡನ್‌ ಇಂಗ್ಲೆಂಡ್‌ನ ಲಂಡನ್‌ನಲ್ಲಿರುವ ಈ ಐಷಾರಾಮಿ ಮನೆಯನ್ನು 1847ರಲ್ಲೇ ನಿರ್ಮಿಸಲಾಗಿದ್ದು, ಇದರ ಮೌಲ್ಯ 222 ಮಿಲಿಯನ್ ಡಾಲರ್ ಆಗಿದ್ದು, 1847.04 ಭಾರತೀಯ ರೂಪಾಯಿಗಳಾಗಿವೆ. 

ಬಿಯೋನ್ಸಿ & ಜೇಯ್-ಝೆಡ್ ಮಲಿಬು ಮೆನ್ಸನ್, ಇದು ಕೂಡ ಅಮೆರಿಕಾದ ಮಲಿಬುವಿನಲ್ಲಿರುವ ಮತ್ತೊಂದು ಐಷಾರಾಮಿ ಮನೆಯಾಗಿದ್ದು, ಇದರ ಮೊತ್ತ 200 ಮಿಲಿಯನ್‌ ಡಾಲರ್ ಅಂದರೆ 1664 ಕೋಟಿ ಭಾರತೀಯ ರೂಪಾಯಿಗಳು, 1999 ಹಾಗೂ 2004ರ ಮಧ್ಯೆ ಈ ಮನೆಯನ್ನು ನಿರ್ಮಿಸಲಾಗಿದೆ. 

ಕೊನೆಯದಾಗಿ ಇಲಿಸನ್‌ ಎಸ್ಟೇಟ್‌, ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಈ ಐಷಾರಾಮಿ ಮನೆಯ ನಿವ್ವಳ ಮೌಲ್ಯ 200 ಮಿಲಿಯನ್ ಡಾಲರ್, ಅಂದರೆ 1664 ಕೋಟಿ ರೂಪಾಯಿಗಳು, 2004ರಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ.