Asianet Suvarna News Asianet Suvarna News

ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್‌ಗೆ ಚಾಲನೆ; 6 ಲಕ್ಷ ಕೋಟಿ ರೂ ಯೋಜನೆ ಘೋಷಿಸಿದ ನಿರ್ಮಲಾ!

  • ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ ಗೆ ಚಾಲನೆ ನೀಡಿದ ಹಣಕಾಸು ಸಚಿವೆ
  • ಮೂಲ ಸೌಕರ್ಯ ಅಭಿವೃದ್ಧಿಗೆ 6 ಲಕ್ಷ ಕೋಟಿ ಯೋಜನೆ ಘೋಷಣೆ
  • ರಸ್ತೆ, ರೈಲ್ವೇ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆ
FM minister Nirmala Sitharaman launches National Monetisation Pipeline worth Rs 6 lakh crore ckm
Author
Bengkulu, First Published Aug 23, 2021, 9:07 PM IST

ನವದೆಹಲಿ(ಆ.23): ದೇಶದ ಅಭಿವೃದ್ಧಿ ಹಾಗೂ ಹಣಕಾಸು ಮೂಲವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಮೂಲಕ ಭಾರತದ ಅಭಿವೃದ್ಧಿಗೆ ಹೊಸ ವೇಗ ನೀಡುತ್ತಿದೆ. ಇದೀಗ  ಭಾರತದ ಮೂಲಕ ಸೌಕರ್ಯ ಅಭಿವೃದ್ಧಿಗೆ 6 ಲಕ್ಷ ಕೋಟಿ ರೂಪಾಯಿ ರಾಷ್ಟ್ರೀಯ ನಗದೀಕರಣ ಯೋಜನೆ ಘೋಷಣೆ ಮಾಡಿದೆ.

ಸೆ.15ರೊಳಗೆ IT ಪೋರ್ಟಲ್ ತಾಂತ್ರಿಕ ದೋಷ ನಿವಾರಿಸಿ, ಇನ್ಫೋಸಿಸ್‌ಗೆ ಅಂತಿಮ ಗಡುವು ನೀಡಿದ ನಿರ್ಮಲಾ ಸೀತಾರಾಮನ್!

ರಾಷ್ಟ್ರೀಯ ನಗದೀಕರಣ ಯೋಜನೆಗೆ ಚಾಲನೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ಯೋಜನೆ ಘೋಷಿಸಿದ್ದಾರೆ. 6 ಲಕ್ಷ ಕೋಟಿ ಮೌಲ್ಯದ ಈ ಯೋಜನೆಯಲ್ಲಿ ವಿದ್ಯುತ್ ಗ್ರಿಡ್, ರೈಲ್ವೇ, ರಸ್ತೆ ಸೇರಿದಂತೆ ಹಲವು ಮೂಲಭೂತ ಸೌಕರ್ಯ ಯೋಜನೆಗಳು ಸೇರಿವೆ. ಆದರೆ ಭೂಮಿ ಮಾರಾಟ ಪಟ್ಟಿಯನ್ನು ಈಯೋಜನೆಯಿಂದ ಹೊರಗಿಡಲಾಗಿದೆ.

 

ಇದು ನಾಲ್ಕು ವರ್ಷಗಳ ಯೋಜನೆಯಾಗಿದೆ. ರಾಷ್ಟ್ರೀಯ ನಗದೀಕರಣ ಯೋಜನೆಯಡಿ ಹಣಕಾಸು ವರ್ಷ 2022ರಿಂದ 2025ರ ವರೆಗೆ ಮೂಲ ಸೌಕರ್ಯ ಆಸ್ತಿಗಳನ್ನು ಮಾರಾಟ ಮಾಡಲಿದೆ. ಮೂಲ ಸೌಕರ್ಯಕ್ಕಾಗಿ ಆದಾಯ ಸೃಷ್ಟಿಸಲು ಸರ್ಕಾರ ಪರ್ಯಾಣ ಹಣಕಾಸು ಸಂಗ್ರಹ ಯೋಜನೆಯಾಗಿ ಬಳಸಿಕೊಳ್ಳಲಾಗಿದೆ. 

ಗುಡ್ ನ್ಯೂಸ್; ಇನ್ಮುಂದೆ ಪಿಎಫ್ ಎರಡೂ ಮೊತ್ತವನ್ನು ಕೇಂದ್ರವೇ ಭರಿಸಲಿದೆ!

ಕೇಂದ್ರ ಸರ್ಕಾರ ತನ್ನ ಯಾವ ಮೂಲ ಸೌಕರ್ಯ ಆಸ್ತಿಗಳನ್ನು ಮಾರಾಟ ಮಾಡಲಿದೆ ಅನ್ನೋದನ್ನು ರಾಷ್ಟ್ರೀಯ ನಗದೀಕರಣ ಯೋಜನೆ ಬಹಿರಂಗಪಡಿಸಲಿದೆ. ರಾಷ್ಟ್ರೀಯ ನಗದೀಕರಣ ಯೋಜನೆಯಲ್ಲಿ ಸರ್ಕಾರ ಬಳಕೆ ಮಾಡದ ಮೂಲಸೌಕರ್ಯ ಆಸ್ತಿಗಳ ವಿವರ ಇರಲಿದೆ. 

ಕೊರೋನಾ ಎರಡನೇ ಅಲೆ ಹೊಡೆತದ ನಡುವೆಯೂ ಸಾರ್ವಜನಿಕ ವಲಯದ ಉದ್ದಿಮೆಗಳು ಚೇತರಿಕೆ ಕಾಣುತ್ತಿದೆ. ಎನ್‌ಎಂಪಿ ಹೂಡಿಕೆ ಮಾಡುತ್ತಿರುವ ಬ್ರೌನ್‌ಫೀಲ್ಡ್ ಸ್ವತ್ತುಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ. ಇದರಿಂದ ಸೂಕ್ತ ಆದಾಯ ಸೃಷ್ಟಿಸಲು ಸಾಧ್ಯವಾಗಿಲ್ಲ ಎಂದರು.

ಖಾಸಗಿ ವಲಯದನ್ನು ಸೇರಿಸುವ ಕುರಿತು ಕೇಂದ್ರ ಮಹತ್ವದ ಹೆಜ್ಜೆ ಇಟ್ಟಿದೆ. ಇದರಿಂದ ಸಂಗ್ರಹವಾಗುವ ಆದಾಯ ಹಾಗೂ ಸಂಪನ್ಮೂಲಗಳನ್ನು ಕೇಂದ್ರ ಸಮರ್ಥವಾಗಿ ಬಳಸಿಕೊಳ್ಳಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾರತ 25ಕ್ಕೂ ಹೆಚ್ಚು ವಿಮಾನ ನಿಲ್ದಾಣ ಪ್ರಾಧಿಕಾರ, 40ಕ್ಕೂ ಹೆಚ್ಚು ರೈಲ್ವೇ ನಿಲ್ದಾಣ, 15ಕ್ಕೂ ಹೆಚ್ಚು ರೈಲ್ವೇ ಕ್ರೀಡಾಂಗಣಗಳನ್ನು ಕೇಂದ್ರ ಗುರುತಿಸಿದ್ದು, ಖಾಸಗಿ ಹೂಡಿಕೆಯನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.

Follow Us:
Download App:
  • android
  • ios