Asianet Suvarna News Asianet Suvarna News

ಲ್ಯಾಪ್‌ಟಾಪ್‌ಗೆ ಡಿಟರ್ಜೆಂಟ್‌: ತಪ್ಪಿಗೆ ಪರಿಹಾರ ಕೊಡುತ್ತೇನೆಂದ Flipkart

ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್ ಡೇಸ್‌ ಸೇಲ್‌ ವೇಳೆ ಗ್ರಾಹಕರೊಬ್ಬರಿಗೆ ಲ್ಯಾಪ್‌ಟಾಪ್‌ ಬದಲು ಡಿಟರ್ಜೆಂಟ್‌ ಸೋಪ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಈಗ ಗ್ರಾಹಕರಿಗೆ ಹಣ ವಾಪಸ್‌ ನೀಡುವುದಾಗಿ ಸಂಸ್ಥೆ ಹೇಳಿಕೊಂಡಿದೆ. 

flipkart reacts on order mistake in big billion days sale reacts will give back money laptop detergent soap ash
Author
First Published Sep 29, 2022, 3:30 PM IST

ಈಗ ನಾಡಿನಲ್ಲೆಲ್ಲೂ ದಸರಾ ಹಬ್ಬದ ಸಂಭ್ರಮ ನಡೀತಿದೆ. ಈ ಹಿನ್ನೆಲೆ ಆನ್‌ಲೈನ್‌ನಲ್ಲಿ ಸೇಲ್‌ಗಳು (Online Sale) ಸಹ ನಡೆಯುತ್ತಿದೆ. ಇದೇ ರೀತಿ, ಫ್ಲಿಪ್‌ಕಾರ್ಟ್‌ (Flipkart) ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ (Big Billion Days Sale) ಸಹ ನಡೆಯುತ್ತಿದೆ. ಈ ಸೇಲ್‌ನಲ್ಲಿ ಹಲವು ವಸ್ತುಗಳಿಗೆ, ಸಾಮಗ್ರಿಗಳಿಗೆ ಆಕರ್ಷಕ ಡಿಸ್ಕೌಂಟ್‌ ಅನ್ನೂ ನೀಡುತ್ತಿದೆ. ಆದರೂ, ಕೆಲವೊಮ್ಮೆ, ಜನರು ಆನ್‌ಲೈನ್ ಮಾರಾಟದೊಂದಿಗೆ ವಿಲಕ್ಷಣ ಅನುಭವಗಳನ್ನು ಹೊಂದಿರುತ್ತಾರೆ. ಇದೇ ರೀತಿ, ಐಐಎಂ ಅಹಮದಾಬಾದ್‌ (IIM Ahmedabad) ಪದವೀಧರ ಯಶಸ್ವಿ ಶರ್ಮಾ ಇತ್ತೀಚೆಗೆ ತಮ್ಮ ತಂದೆಗೆ ಲ್ಯಾಪ್‌ಟಾಪ್‌ (Laptop) ಆರ್ಡರ್ ಮಾಡಿದ್ದರು. ಆದರೆ, ಅದರ ಬದಲು ಘಡಿ ಡಿಟರ್ಜೆಂಟ್‌ ಸೋಪ್‌ (Detergent Soap) ಬಂದಿತ್ತು. ಆದರೆ, ಅವರ ತಂದೆ ಓಟಿಪಿ (OTP) ನೀಡಿ ಡೆಲಿವರಿ ಬಾಕ್ಸ್‌ ಪಡೆದಿದ್ದ ಕಾರಣ ಗ್ರಾಹಕರಿಗೆ ಹಣ ವಾಪಸ್‌ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಯಶಸ್ವಿ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಅಲ್ಲದೆ, ಓಪನ್ ಬಾಕ್ಸ್‌ ಪರಿಕಲ್ಪನೆ ಬಗ್ಗೆ ಅವರಿಗೆ ಅರಿವಿರಲಿಲ್ಲ, ಪಾರ್ಸೆಲ್‌ ಓಪನ್‌ ಮಾಡದೆ ಓಟಿಪಿ ನೀಡಿದ್ದಾರೆ ಎಂದೂ ಹೇಳಿಕೊಂಡಿದ್ದರು. ಈ ಬಗ್ಗೆ ಏಷ್ಯಾನೆಟ್‌ ಕನ್ನಡದಲ್ಲಿ ಸುದ್ದಿಯೂ ಪ್ರಸಾರವಾಗಿತ್ತು. ಈ ಸಂಬಂಧ ಫ್ಲಿಪ್‌ಕಾರ್ಟ್‌ ಸ್ಪಷ್ಟನೆ ನೀಡಿದ್ದು, ಗ್ರಾಹಕರಿಗೆ ಹಣ ವಾಪಸ್‌ ನೀಡುವುದಾಗಿ ಭರವಸೆ ನೀಡಿದೆ. 

ಫ್ಲಿಪ್‌ಕಾರ್ಟ್‌ ಒಂದು ಗ್ರಾಹಕ ಕೇಂದ್ರಿತ ಸಂಸ್ಥೆಯಾಗಿದ್ದು, ಗ್ರಾಹಕರ ನಂಬಿಕೆ ಮೇಲೆ ಪರಿಣಾಮ ಬೀರುವಂತಹ ಎಲ್ಲಾ ಪ್ರಕರಣಗಳ ಮೇಲೆ ಶೂನ್ಯ –ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದೆ. ಸಾಧ್ಯವಾದಷ್ಟೂ ನಮ್ಮ ಗ್ರಾಹಕರಿಗೆ ಉತ್ತಮವಾದ ಆನ್‌ಲೈನ್ ಶಾಪಿಂಗ್ ಅನುಭವ ಖಚಿತಪಡಿಸಿಕೊಳ್ಳಲು ಇದು ನಮಗೆ ಅತ್ಯಂತ ಮಹತ್ವಪೂರ್ಣವಾಗಿದೆ. ಓಪನ್ ಬಾಕ್ಸ್ ಡೆಲಿವರಿ ಆಯ್ಕೆಯನ್ನು ನೀಡುವ ಈ ನಿರ್ದಿಷ್ಟ ಸಂದರ್ಭದಲ್ಲಿ ಗ್ರಾಹಕರು ಪ್ಯಾಕೇಜನ್ನು ತೆರೆಯದೇ ಡೆಲಿವರಿ ಪ್ರತಿನಿಧಿಯೊಂದಿಗೆ ಓಟಿಪಿಯನ್ನು ಹಂಚಿಕೊಂಡಿದ್ದಾರೆ. 
ಈ ಘಟನೆಯ ವಿವರಗಳನ್ನು ಪರಿಶೀಲಿಸಿದ ನಂತರ ನಮ್ಮ ಗ್ರಾಹಕ ಸೇವಾ ತಂಡವು ಗ್ರಾಹಕರಿಗೆ ಮರುಪಾವತಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದೆ ಮತ್ತು 3-4 ಕರ್ತವ್ಯದ ದಿನಗಳಲ್ಲಿ ಹಣ ಅವರ ಖಾತೆಗೆ ಜಮಾ ಆಗಲಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದೆ. 

ಇದನ್ನು ಓದಿ: Flipkart Big Billion Daysನಲ್ಲಿ ಆರ್ಡರ್ ಮಾಡಿದ್ದು ಲ್ಯಾಪ್‌ಟಾಪ್‌; ಬಂದಿದ್ದು ಡಿಟರ್ಜೆಂಟ್‌ ಸೋಪ್..!

ಓಪನ್‌ ಬಾಕ್ಸ್‌ ಡೆಲಿವರಿ ಅಂದ್ರೇನು..?
ಇನ್ನು, ಓಪನ್‌ ಬಾಕ್ಸ್‌ ಡೆಲಿವರಿ ಬಗ್ಗೆ ಫ್ಲಿಪ್‌ಕಾರ್ಟ್‌ ಹೆಚ್ಚಿನ ಮಾಹಿತಿ ನೀಡಿದೆ. ‘’ಫ್ಲಿಪ್‌ಕಾರ್ಟ್‌ ಓಪನ್ ಬಾಕ್ಸ್ ಡೆಲಿವರಿಯು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಒಂದು ಪ್ರತ್ಯೇಕವಾದ ಉತ್ತಮ ಉಪಕ್ರಮವಾಗಿದೆ. ಈ ಓಪನ್ ಬಾಕ್ಸ್ ಡೆಲಿವರಿ ಪ್ರಕ್ರಿಯೆಯ ಭಾಗವಾಗಿ ಫ್ಲಿಪ್‌ಕಾರ್ಟ್‌ ವಿಶ್ ಮಾಸ್ಟರ್ಸ್ (ಡೆಲಿವರಿ ಪಾಲುದಾರರು) ಉತ್ಪನ್ನವನ್ನು ಡೆಲಿವರಿ ಮಾಡುವ ಸಂದರ್ಭದಲ್ಲಿ ಗ್ರಾಹಕರ ಮುಂದೆ ಪ್ಯಾಕೇಜ್ ಅನ್ನು ಓಪನ್ ಮಾಡಲಾಗುತ್ತದೆ. 

ಇದನ್ನೂ ಓದಿ: Flipkart Big Billion Days: ಎಲೆಕ್ಟ್ರಾನಿಕ್ಸ್‌, ಸ್ಮಾರ್ಟ್‌ಫೋನ್ಸ್ ಮೇಲೆ ಭರ್ಜರಿ ಡಿಸ್ಕೌಂಟ್‌

ಗ್ರಾಹಕರು ತಮ್ಮ ಆರ್ಡರ್‌ಗಳು ಸರಿಯಾದ ಸ್ಥಿತಿಯಲ್ಲಿದ್ದರೆ ಮಾತ್ರ ಅದನ್ನು ಸ್ವೀಕರಿಸಬೇಕು ಮತ್ತು ನಂತರವಷ್ಟೇ ಓಟಿಪಿಯನ್ನು ಹಂಚಿಕೊಳ್ಳಬೇಕು. ಇದು ಗ್ರಾಹಕರ ಕಡೆಯಿಂದ ಯಾವುದೇ ಹಣಕಾಸಿನ ಹೊರೆ ಅಥವಾ ನಷ್ಟವನ್ನು ತಡೆಯುತ್ತದೆ. ಒಟ್ಟಾರೆ ಗ್ರಾಹಕರ ಅನುಭವವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಮತ್ತು ಉತ್ತಮ ಪೂರೈಕೆ ಜಾಲವನ್ನು ನಿರ್ಮಾಣ ಮಾಡುವ ದಿಸೆಯಲ್ಲಿ ಫ್ಲಿಪ್‌ಕಾರ್ಟ್ ಹಲವು ವರ್ಷಗಳಿಂದ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದು, ವಿವಿಧ ಉಪಕ್ರಮಗಳನ್ನು ವಿಸ್ತರಣೆ ಮಾಡುತ್ತಾ ಬಂದಿದೆ ಎಂದೂ ಫ್ಲಿಪ್‌ಕಾರ್ಟ್‌ ಮಾಹಿತಿ ನೀಡಿದೆ. 

Follow Us:
Download App:
  • android
  • ios