Flipkart Big Billion Days: ಎಲೆಕ್ಟ್ರಾನಿಕ್ಸ್, ಸ್ಮಾರ್ಟ್‌ಫೋನ್ಸ್ ಮೇಲೆ ಭರ್ಜರಿ ಡಿಸ್ಕೌಂಟ್
Flipkart Big Billion Days: ಫ್ಲಿಪ್‌ಕಾರ್ಟ್ 9 ನೇ ಆವೃತ್ತಿಯ ದಿ ಬಿಗ್ ಬಿಲಿಯನ್ ಡೇಸನ್ನು ಘೋಷಣೆ ಮಾಡಿದೆ.
ಬೆಂಗಳೂರು (ಸೆ. 14): ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್‌ಕಾರ್ಟ್ ಇದೀಗ ತನ್ನ ಫ್ಲಾಗ್‌ಶಿಪ್ 9 ನೇ ಆವೃತ್ತಿಯ ದಿ ಬಿಗ್ ಬಿಲಿಯನ್ ಡೇಸನ್ನು ಘೋಷಣೆ ಮಾಡಿದೆ. ದೇಶದ ಹಬ್ಬದ ಸೀಸನ್‌ನಲ್ಲಿ ಬಿಗ್ ಬಿಲಿಯನ್ ಡೇಸ್ ಸೆಪ್ಟೆಂಬರ್ 23 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. ಈ ಆವೃತ್ತಿಯಲ್ಲಿ ದೇಶಾದ್ಯಂತವಿರುವ ಮಿಲಿಯನ್ ಗಟ್ಟಲೆ ಗ್ರಾಹಕರು, ಮಾರಾಟಗಾರರು, ಎಂಎಸ್ಎಂಇಗಳು ಮತ್ತು ಕಿರಾಣ ವಿತರಣಾ ಪಾಲುದಾರರು ಭಾಗಿಯಾಗಲಿದ್ದಾರೆ.
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟವು ಸೆಪ್ಟೆಂಬರ್ 23 ರಂದು ಪ್ರಾರಂಭವಾಗಲಿದ್ದು ಸೆಪ್ಟೆಂಬರ್ 30ರವರೆಗೆ ಮುಂದುವರಿಯುವಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ, ಬಿಗ್ ಬಿಲಿಯನ್ ಡೇಸ್ ಮಾರಾಟವು ಒಂದು ದಿನ ಮುಂಚಿತವಾಗಿ ಅಂದರೆ ಸೆಪ್ಟೆಂಬರ್ 22 ರಂದು ಲೈವ್ ಆಗಲಿದೆ. ಇನ್ನು ಇತ್ತ ಸೆಪ್ಟೆಂಬರ್ 23ರಿಂದ ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಕೂಡ ಪ್ರಾರಂಭವಾಗಲಿದೆ. ಫ್ಲಿಪ್‌ಕಾರ್ಟ್ ICICI ಬ್ಯಾಂಕ್ ಮತ್ತು Axis ಬ್ಯಾಂಕ್ ಜೊತೆಗೆ ಪಾಲುದಾರಿಕೆ ಹೊಂದಿದ್ದು 10 ಪ್ರತಿಶತ ತ್ವರಿತ ರಿಯಾಯಿತಿ ನೀಡಲಿದೆ.
ಸ್ಮಾರ್ಟ್‌ಫೋನ್‌ಗಳ ಮೇಲೆ ಡಿಸ್ಕೌಂಟ್: ಬಿಗ್ ಬಿಲಿಯನ್ ಡೇಸ್ ಸೇಲ್‌ಗೆ ಮುಂಚಿತವಾಗಿ, ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಸಾಧನಗಳಲ್ಲಿ ಕೆಲವು ಡೀಲ್‌ಗಳನ್ನು ಬಹಿರಂಗಪಡಿಸಿದೆ. ಉದಾಹರಣೆಗೆ, Poco, Oppo, Motorola, ಮತ್ತು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಬಿಗ್ ಬಿಲಿಯನ್ ಡೇಸ್ ಮಾರಾಟ ಪುಟದಲ್ಲಿ ಹೈಲೈಟ್ ಮಾಡಲಾಗಿದೆ, ಜೊತೆಗೆ Apple iPhone ನಲ್ಲಿ "ಕ್ರೇಜಿಯೆಸ್ಟ್ ಎವರ್ ಪ್ರೈಸ್" ಗಾಗಿ ಟೀಸರ್ ಹೈಲೈಟ್ ಮಾಡಲಾಗಿದೆ. ಇದಲ್ಲದೆ, ಹೊಸದಾಗಿ 27,699 ರೂ.ಗೆ ಬಿಡುಗಡೆಯಾದ ಗೂಗಲ್ ಪಿಕ್ಸೆಲ್ 6ಎ ಬಗ್ಗೆ ಕೂಡ ಸಾಕಷ್ಟು ಚರ್ಚೆಗಳಾಗುತ್ತಿವೆ.
ಇ-ಕಾಮರ್ಸ್ ಕಂಪನಿಗಳನ್ನು ಸ್ಥಾಪಿಸಿ: ಸಿಎಂ ಬೊಮ್ಮಾಯಿ
ರಿಯಾಯಿತಿಗಳು ಮತ್ತು ಬ್ಯಾಂಕ್ ಆಫರ್‌ಗಳ ಹೊರತಾಗಿ, Realme, Oppo, Samsung, Google, Xiaomi ಮತ್ತು ಹೆಚ್ಚಿನ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಫ್ಲಿಪ್‌ಕಾರ್ಟ್ "Unbeatable Exchange Prices" ಆಫರ್ ನೀಡುತ್ತಿದೆ. ಇದಲ್ಲದೆ, ಖರೀದಿದಾರರು ಈ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ನೋ ಕಾಸ್ಟ್ ಇಎಮ್‌ಐ ಆಯ್ಕೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಬಿಗ್ ಬಿಲಿಯನ್ ಡೇಸ್ ಸೇಲ್ ಸಮಯದಲ್ಲಿ ಬಳಕೆದಾರರು ಪಡೆಯಲು ಸಾಧ್ಯವಾಗುವ ಕೆಲವು ಡೀಲ್‌ಗಳನ್ನು ಫ್ಲಿಪ್‌ಕಾರ್ಟ್ ಇನ್ನೂ ಬಹಿರಂಗಪಡಿಸಿಲ್ಲ. ಐಫೋನ್ 12 ಮತ್ತು ಐಫೋನ್ 13 ಮಾದರಿಗಳಲ್ಲಿ ಮುಂಬರುವ ಡೀಲ್‌ಗಳು ಹಳೆಯ ಐಫೋನ್ ಮಾದರಿಗಳಿಗೆ ಇದುವರೆಗಿನ ಅತ್ಯುತ್ತಮ ಬೆಲೆಗಳಾಗಿವೆ ಎನ್ನಲಾಗಿದೆ.