ಕೊರೋನಾ ವೈರಸ್ ಹೊಡೆತ ಸೇರಿದಂತೆ ಹಲವು ಅಡೆತಡೆಗಳನ್ನು ಎದುರಿಸಿದ ಪ್ರಸಕ್ತ ಆರ್ಥಿಕ ವರ್ಷ ನಿರೀಕ್ಷೆಯಂತೆ ಪಾತಾಳಕ್ಕೆ ಕುಸಿದಿದೆ. ಆದರೆ ಮುಂದಿನ ವರ್ಷದ ಆರ್ಥಿಕತೆ ಕುರಿತ ಸಮೀಕ್ಷಾ ವರದಿ ಭಾರತೀಯರ ನಿರೀಕ್ಷೆ ಹೆಚ್ಚಿಸಿದೆ.

ನವದೆಹಲಿ(ಜ.29): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಆರ್ಥಿಕ ಸಮೀಕ್ಷೆ ಭಾರಿ ಚರ್ಚೆಗೆ ಒಳಗಾಗಿದೆ. ಪ್ರಸಕ್ತ ವರ್ಷದ ಆರ್ಥಿಕತೆ ಹಾಗೂ ಮುಂದಿನ ವರ್ಷದ ಸ್ಥಿತಿಗತಿಗಳ ಕುರಿತ ಬೆಳಕು ಚೆಲ್ಲಿರುವ ಈ ಸಮೀಕ್ಷೆ ಕೆಲ ಆಶಾಭಾವನೆಯನ್ನೂ ಮೂಡಿಸಿದೆ.

ಆಟಿಕೆ ವಲಯಕ್ಕೆ ಬಜೆಟ್‌ನಲ್ಲಿ ವಿಶೇಷ ನೀತಿ: ಚೀನಾ ಆಟಿಕೆಗೆ ಸಡ್ಡು!.

ಕೊರೋನಾ ವೈರಸ್ ಕಾರಣ ಪ್ರಸಕ್ತ ವರ್ಷದ ಆರ್ಥಿಕತೆ ಶೇಕಡಾ 7.7ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 2021ರ ಮಾರ್ಚ್ ತಿಂಗಳಿಗೆ ಪ್ರಸಕ್ತ ಆರ್ಥಿಕ ವರ್ಷ ಅಂತ್ಯಗೊಳ್ಳಲಿದೆ. ಆದರೆ ಎಪ್ರಿಲ್‌ನಿಂದ ಆರಂಭಗೊಳ್ಳಲಿರುವ 2021-22ರ ಆರ್ಥಿಕತೆ ವಿ ಶೇಪ್‌ನಲ್ಲಿ ಪ್ರಗತಿಯಾಗಲಿದೆ ಎಂದಿದೆ.

Scroll to load tweet…

ಜನರ ಜೇಬಿಗೆ ಹೆಚ್ಚಿನ ಹಣ, ತೆರಿಗೆ ಕಡಿತ; ಕೇಂದ್ರ ಬಜೆಟ್ 2021 ಕುರಿತು ತಜ್ಞರು ಹೇಳುವುದೇನು?

2021-22ರ ಆರ್ಥಿಕತೆ ಶೇಕಡಾ 11ರಷ್ಟು ಬೆಳವಣಿಗೆ ಕಾಣುವ ಸಾಧ್ಯತೆಯನ್ನು ಸಮೀಕ್ಷಾ ವರದಿ ಹೇಳಿದೆ. ಕೇಂದ್ರದ ಬಜೆಟ್ ಮಂಡನೆಗೂ ಮೊದಲು ಮಂಡಿಸಿರುವ ಈ ಬಜೆಟ್ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಪ್ರಮುಖವಾಗಿ ಪ್ರಸಕ್ತ ಆರ್ಥಿಕ ವರ್ಷದ ಜಿಡಿಪಿ 7.5ಕ್ಕೆ ತಲುಪುವ ಸಾಧ್ಯತೆಯನ್ನು ವರದಿ ಹೇಳಿದೆ. 

Scroll to load tweet…

ಆದರೆ 2020ರ ಜೂನ್ ವೇಳೆ ಭಾರತದ ಜಿಡಿಪಿ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಬರೋಬ್ಬರಿ 23.9% ರಷ್ಟು ಕುಸಿತ ಕಂಡಿತ್ತು. ಆದರೆ 2021-22ನೇ ಆರ್ಥಿಕ ವರ್ಷ ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯಲಿದೆ ಅನ್ನೋದು ವರದಿ ಹೇಳುತ್ತಿದೆ.