Asianet Suvarna News Asianet Suvarna News

GST Collection: ಶೇ. 18 ರಷ್ಟು ಏರಿಕೆ ಕಂಡ ಜಿಎಸ್‌ಟಿ ಸಂಗ್ರಹ

* ಕಳೆದ ತಿಂಗಳು 1.33 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

* 2021ರ ಫೆಬ್ರವರಿಗಿಂತ ಶೇ.18ರಷ್ಟುಹೆಚ್ಚು ತೆರಿಗೆ ಸಂಗ್ರಹ

*  2020ರಲ್ಲಿ ಸಂಗ್ರಹವಾದ ತೆರಿಗೆಗಿಂತ ಶೇ.26ರಷ್ಟುಅಧಿಕ
* ಆರ್ಥಿಕ ಅಭಿವೃದ್ಧಿಯಲ್ಲಿ ಹಿನ್ನಡೆ ಇಲ್ಲ

February GST Collection Rises 18 percent Year on Year Basis to Over Rs 1.33 Lakh Crore mah
Author
Bengaluru, First Published Mar 2, 2022, 5:05 AM IST

ನವದೆಹಲಿ (ಮೇ. 02) 2022ನೇ ಸಾಲಿನಲ್ಲಿ ಫೆಬ್ರವರಿಯಲ್ಲಿ 1.33 ಲಕ್ಷ ಕೋಟಿ ರು. ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವಾಗಿದೆ. ಇದು ಕಳೆದ ವರ್ಷ ಫೆಬ್ರವರಿಯಲ್ಲಿ ಸಂಗ್ರಹವಾಗಿದ್ದ ತೆರಿಗೆಗಿಂತ ಶೇ.18ರಷ್ಟುಮತ್ತು 2020ರಲ್ಲಿ ಸಂಗ್ರಹವಾದ ತೆರಿಗೆಗಿಂತ ಶೇ.26ರಷ್ಟುಅಧಿಕ ಎಂದು ಕೇಂದ್ರ ಹಣಕಾಸು ಸಚಿವಾಲಯ (Union finance ministry)ಮಂಗಳವಾರ ತಿಳಿಸಿದೆ. ಈ ಮೂಲಕ ಸತತ 9 ತಿಂಗಳಿನಿಂದ 1 ಲಕ್ಷ ಕೋಟಿ ರು. ಗೂ ಅಧಿಕ ಜಿಎಸ್‌ಟಿ ಸಂಗ್ರಹವಾದಂತಾಗಿದೆ.

2022ರ ಫೆಬ್ರವರಿಯ ಆರಂಭದಲ್ಲೂ ದೇಶಾದ್ಯಂತ ಕೋವಿಡ್‌ ರೂಪಾಂತರಿ ಒಮಿಕ್ರೋನ್‌ (Coronavirus) ವ್ಯಾಪಾರ ವಹಿವಾಟಿನ ಮೇಲೆ ಪ್ರಭಾವ ಬೀರಿತ್ತು. ಅಲ್ಲದೆ ಫೆಬ್ರವರಿಯಲ್ಲಿ 28 ದಿನಗಳು ಮಾತ್ರ ಇತ್ತು. ಹೀಗಾಗಿ ಜಿಎಸ್‌ಟಿ ಸಂಗ್ರಹ ಕಳೆದ ಜನವರಿಗಿಂತ ಕಡಿಮೆಯಾಗಿದೆ. ಜನವರಿಯಲ್ಲಿ 1.40 ಲಕ್ಷ ಕೋಟಿ ರು. ತೆರಿಗೆ ಸಂಗ್ರಹವಾಗಿತ್ತು.

ಫೆಬ್ರವರಿಯಲ್ಲಿ ಒಟ್ಟು 1,33,026 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಈ ಪೈಕಿ ಕೇಂದ್ರದ ಜಿಎಸ್‌ಟಿ 24,435 ಕೋಟಿ ರು., ರಾಜ್ಯ ಜಿಎಸ್‌ಟಿ 30,779 ಕೋಟಿ ರು. ಮತ್ತು ಸಮಗ್ರ ಜಿಎಸ್‌ಟಿ 67,471 ಕೋಟಿ ರು. ಇದೆ. ಸೆಸ್‌ನಿಂದ 10,340 ಕೋಟಿ ಸಂಗ್ರಹವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಆರ್ಥಿಕ ಸಮೀಕ್ಷೆ ಕೊಟ್ಟಿದ್ದ ವಿವರಣೆ:   2021-22ನೇ ಆರ್ಥಿಕ ಸಾಲಿನಲ್ಲಿ ಈ ತನಕದ ಅಂಕಿಅಂಶಗಳ ಪ್ರಕಾರ ಕೇಂದ್ರ  ಸರ್ಕಾರದ ಆದಾಯದಲ್ಲಿ(Income) ಸಾಕಷ್ಟು ಚೇತರಿಕೆ ಕಂಡುಬಂದಿತ್ತು.  2021 ಏಪ್ರಿಲ್ ನಿಂದ ನವೆಂಬರ್ ಅವಧಿಯಲ್ಲಿ ಕೇಂದ್ರ ಸರ್ಕಾರದ ಕಂದಾಯ ಸ್ವೀಕೃತಿಯಲ್ಲಿ ಶೇ.67.2 ಏರಿಕೆ ಕಂಡಿತ್ತು. 2021-22ನೇ ಸಾಲಿನ ಬಜೆಟ್ ನಲ್ಲಿ ಶೇ. 9.6 ಪ್ರಗತಿ ಅಂದಾಜಿಸಲಾಗಿತ್ತು. ನೇರ (Direct) ಹಾಗೂ ಪರೋಕ್ಷ (Indirect) ತೆರಿಗೆಗಳ ಸಂಗ್ರಹದಲ್ಲಿ (Tax Collection) ಕೂಡ ಹೆಚ್ಚಳ ಕಂಡುಬಂದಿದೆ. ಮಾಸಿಕ ಜಿಎಸ್ ಟಿ (GST) ಸಂಗ್ರಹವು  2021ರ ಜುಲೈನಿಂದ ಒಂದು ಲಕ್ಷ ಕೋಟಿ ರೂ. ದಾಟುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ. 

ಶೇ. 8.0-8.5 ಜಿಡಿಪಿ ಬೆಳವಣಿಗೆ ಭಾರತದ ಆರ್ಥಿಕತೆಯು 2022-23ನೇ ಸಾಲಿನಲ್ಲಿ ಶೇ. 8.0-8.5 ಜಿಡಿಪಿ ಬೆಳವಣಿಗೆ ದಾಖಲಿಸೋ ಸ್ಥಿತಿಯಲ್ಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಮುಂದಿನ ದಿನಗಳಲ್ಲಿ ಕೋವಿಡ್ -19 ಪೆಂಡಾಮಿಕ್ ಗೆ ಸಂಬಂಧಿಸಿದ ಯಾವುದೇ ಪ್ರಮುಖ  ಆರ್ಥಿಕ ಬಿಕ್ಕಟ್ಟುಗಳು ಎದುರಾಗೋದಿಲ್ಲ ಎಂಬ ನಂಬಿಕೆ ಮೇಲೆ ಈ ಅಂದಾಜು ಮಾಡಲಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಈ ಆರ್ಥಿಕ ಸಾಲಿನಲ್ಲಿ ಮಳೆಗಾಲ ಕೂಡ ಸಾಮಾನ್ಯವಾಗಿರಲಿದೆ. ಇದರ ಜೊತೆಗೆ ಜಗತ್ತಿನ ಅನೇಕ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕುಗಳು ಆರ್ಥಿಕತೆಯಲ್ಲಿನ ದ್ರವ್ಯತೆ ಅಥವಾ ಹೆಚ್ಚುವರಿ ಹಣ ಹಿಂಪಡೆಯೋ ಪ್ರಕ್ರಿಯೆ ಪ್ರಾರಂಭಿಸಿವೆ. ಹೀಗಾಗಿ ಹಣದುಬ್ಬರ ಕೂಡ ನಿಯಂತ್ರಣಕ್ಕೆ ಬರೋ ವಿಶ್ವಾಸವಿದೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ ಗೆ 70-75 ಅಮೆರಿಕನ್ ಡಾಲರ್ ಇದೆ.  ಜಾಗತಿಕ ಪೂರೈಕೆ ಸರಳಪಳಿಯಲ್ಲಿನ ಬಿಕ್ಕಟ್ಟುಗಳು ಕೂಡ ಈ ವರ್ಷ ನಿಧಾನವಾಗಿ ಬಗೆಹರಿಯೋ ವಿಶ್ವಾಸವಿದೆ.   ಈ ಎಲ್ಲ ಅಂಶಗಳನ್ನು ಗಮನಿಸಿ ಭಾರತದ ಆರ್ಥಿಕತೆ ಕೂಡ ಈ ಬಾರಿ ಉತ್ತಮ ಮಟ್ಟದಲ್ಲಿರದೆ ಎಂದು ಸಮೀಕ್ಷೆ ಹೇಳಿತ್ತು.

ಕ್ರಿಪ್ಟೋಕರೆನ್ಸಿ ಪ್ರಸ್ತುತ ಕಾನೂನುಬದ್ಧವಲ್ಲ: ಕೇಂದ್ರ ಸಚಿವ ಭಗವತ್ ಕರದ್ ಸ್ಪಷ್ಟನೆ

ವಂಚಕರು ಇರ್ತಾರೆ ಹುಷಾರ್:  ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ITC) ಪ್ರಯೋಜನವನ್ನು ಪಡೆಯಲು ಸಿಂಡಿಕೇಟ್‌ ನಡೆಸುತ್ತಿದ್ದ ಮತ್ತು 4,521 ಕೋಟಿ ರು. ನಕಲಿ ಇನ್‌ವಾಯ್ಸ್  (ಸರಕು  ಪಟ್ಟಿ)ಗಳನ್ನು ನೀಡಿದ್ದ ವ್ಯಕ್ತಿಯೊಬ್ಬನನ್ನು ಜಿಎಸ್‌ಟಿ ಅಧಿಕಾರಿಗಳು ಬಂಧಿಸಿದ್ದರು.

ಪರಿಶೀಲನೆ ವೇಳೆ ಈ ಸಿಂಡಿಕೇಟ್‌ 636 ಸಂಸ್ಥೆಗಳನ್ನು ನಿರ್ವಹಿಸುತ್ತಿತ್ತು ಎಂಬುದು ಬಯಲಾಗಿದೆ. ಅಲ್ಲದೆ ಈ ಸಂಸ್ಥೆಗಳಿಂದ ಕೇವಲ ಇನ್‌ವಾಯ್ಸ್ ಗಳನ್ನು ಮಾತ್ರ ನೀಡಿದ್ದೇವೆ. ಯಾವುದೇ ಸರಕುಗಳನ್ನು ಸರಬರಾಜು ಮಾಡಿಲ್ಲ ಎಂದು ಪ್ರಕರಣದ ಮಾಸ್ಟರ್‌ಮೈಂಡ್‌ ತಪ್ಪೊಪ್ಪಿಕೊಂಡಿದ್ದ.

ಆರೋಪಿಗಳು ಸುಮಾರು 4521 ಕೋಟಿ ರು. ತೆರಿಗೆ ವಿಧಿಸಬಹುದಾದ ಇನ್‌ವಾಯಿಸ್  ಬಿಡುಗಡೆ ಮಾಡಿದ್ದಾರೆ. ತನಿಖೆಯ ಸಂದರ್ಭದಲ್ಲಿ, ಈ ಸಂಸ್ಥೆಗಳ ಲೆಡ್ಜರ್‌ನಲ್ಲಿ ಲಭ್ಯವಿರುವ ಐಟಿಸಿಯನ್ನು ಹಿಂತಿರುಗಿಸುವ ಮೂಲಕ 4.52 ಕೋಟಿ ರು.ಗಳಷ್ಟುಜಿಎಸ್‌ಟಿಯನ್ನು ಠೇವಣಿ ಮಾಡಲಾಗಿದೆ. ಜೊತೆಗೆ ಈವರೆಗೆ, ಈ ಸಂಸ್ಥೆಗಳ ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ ಸುಮಾರು 7 ಕೋಟಿ ರು.ಗಳನ್ನು ತಡೆಹಿಡಿಯಲಾಗಿತ್ತು.

Follow Us:
Download App:
  • android
  • ios