ಕ್ರಿಪ್ಟೋಕರೆನ್ಸಿ ಪ್ರಸ್ತುತ ಕಾನೂನುಬದ್ಧವಲ್ಲ: ಕೇಂದ್ರ ಸಚಿವ ಭಗವತ್ ಕರದ್ ಸ್ಪಷ್ಟನೆ
ಭವಿಷ್ಯದಲ್ಲಿ ಕ್ರಿಪ್ಟೋಕರೆನ್ಸಿ ಕಾನೂನುಬದ್ಧಗೊಳಿಸಬಹುದೇ ಅಥವಾ ಇಲ್ಲವೇ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಭಗವತ್ ಕರದ್ ತಿಳಿಸಿದ್ದಾರೆ.
Tech Desk: ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳು ಕಾನೂನುಬದ್ಧವಾಗಿಲ್ಲ ಮತ್ತು ಭವಿಷ್ಯದಲ್ಲಿ ಈ ವಿಭಾಗದಲ್ಲಿ ಏನಾಗಬಹುದು ಎಂಬುದರ ಕುರಿತು ಸದ್ಯಕ್ಕೆ ಏನನ್ನೂ ಹೇಳಲಾಗುವುದಿಲ್ಲ ಎಂದು ಕೇಂದ್ರ ಸಚಿವ ಭಾಗವತ್ ಕರದ್ (Bhagwat Karad) ಶನಿವಾರ ಹೇಳಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಕೇಂದ್ರ ಸರ್ಕಾರವು ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ರೀತಿಯ ಮನ್ನಣೆಯನ್ನು ನೀಡಿಲ್ಲ ಮತ್ತು ಆದ್ದರಿಂದ, ಪ್ರಸ್ತುತ ದೇಶದಲ್ಲಿ ಅವು ಕಾನೂನುಬದ್ಧವಾಗಿಲ್ಲ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವರು ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ಕಾಂಗ್ರೆಸ್ ನಾಯಕಿ ಛಾಯಾ ವರ್ಮಾ ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಭವಿಷ್ಯದಲ್ಲಿ ಇದನ್ನು ಕಾನೂನುಬದ್ಧಗೊಳಿಸಬಹುದೇ ಅಥವಾ ಇಲ್ಲವೇ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ, ಕೇಂದ್ರ ಬಜೆಟ್‌ನಲ್ಲಿ ವಹಿವಾಟುಗಳಿಗೆ (ಅವುಗಳಿಗೆ ಸಂಪರ್ಕ ಹೊಂದಿದ) 30 ಪ್ರತಿಶತ ತೆರಿಗೆಯನ್ನು ಪ್ರಸ್ತಾಪಿಸಲಾಗಿದೆ, ” ಎಂದು ಕರದ್ ಹೇಳಿದ್ದಾರೆ.
ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ಭಾರತದ ಆರ್ಥಿಕ ಸ್ಥಿರತೆಗೆ ಅಪಾಯಕಾರಿ: RBI ಗವರ್ನರ್ ಶಕ್ತಿಕಾಂತ ದಾಸ್!
ಇಂಧನ ಬೆಲೆ ಏರಿಕೆಯಾಗಲಿದೆಯೇ?: ಉತ್ತರ ಪ್ರದೇಶದ ಚುನಾವಣೆಯ ನಂತರ ಇಂಧನ ಬೆಲೆ ಏರಿಕೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ. ರೂ. 5 ಮತ್ತು ರೂ. 10 ಕಡಿತಗೊಳಿಸಿದೆ ಎಂದು ಹೇಳಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳು ಇದನ್ನು ಅನುಸರಿಸಿವೆ ಮತ್ತು ತೆರಿಗೆಗಳನ್ನು ಕಡಿತಗೊಳಿಸಿವೆ, ಆದರೆ ಅನೇಕ ರಾಜ್ಯಗಳು ಮಾಡಲಿಲ್ಲ ಎಂದು ಅವರು ಹೇಳಿದರು. ಮಹಾ ವಿಕಾಸ್ ಅಘಾಡಿ ಆಡಳಿತದಲ್ಲಿರುವ ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ ಬಿಜೆಪಿ ಆಡಳಿತದ ರಾಜ್ಯವಾದ ಮಧ್ಯಪ್ರದೇಶದಲ್ಲಿ ಚಿಲ್ಲರೆ ದರಕ್ಕಿಂತ ಹೆಚ್ಚಾಗಿದೆ ಎಂದು ಕರಾದ್ ಹೇಳಿದರು.
ಕಾನೂನಿನ ಮಾನ್ಯತೆ ನೀಡಿದಂತೆ ಅಲ್ಲ: ಇನ್ನು ಕಾನೂನು ಮಾನ್ಯತೆ ಹೊಂದಿಲ್ಲದ ಕ್ರಿಪ್ಟೊಕರೆನ್ಸಿ(cryptocurrency) ಆದಾಯದ ಮೇಲೆ ತೆರಿಗೆ(Income Tax) ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವು, ಕ್ರಿಪ್ಟೋಕರೆನ್ಸಿಗೆ ಪರೋಕ್ಷವಾಗಿ ಕಾನೂನಿನ ಮಾನ್ಯತೆ ನೀಡಿದಂತೆ ಅಲ್ಲ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Digital Assets Tax: ದೇಶಕ್ಕೆ ಕ್ರಿಪ್ಟೋಕರೆನ್ಸಿ ‘ಹಿಂಬಾಗಿಲ ಪ್ರವೇಶ’: ಕೇಂದ್ರದ ಮಹತ್ವದ ಘೋಷಣೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಬಿಡಿಟಿ ಅಧ್ಯಕ್ಷ ಜೆ.ಪಿ.ಮಹಾಪಾತ್ರ ‘ಕ್ರಿಪ್ಟೋಕರೆನ್ಸಿ ಆದಾಯಕ್ಕೆ ತೆರಿಗೆ ಮತ್ತು ವಹಿವಾಟಿಗೆ ಟಿಡಿಎಸ್(TDS) ವಿಧಿಸುವ ನಿರ್ಧಾರವು, ದೇಶದಲ್ಲಿನ ಕ್ರಿಪ್ಟೋ ಉದ್ಯಮದ ಆಳಗಲವನ್ನು ಪರಿಶೀಲಿಸುವ ಉದ್ದೇಶ ಹೊಂದಿದೆಯೇ ಹೊರತೂ ಅವುಗಳಿಗೆ ಕಾನೂನು(legalise) ಮಾನ್ಯತೆ ನೀಡುವ ಉದ್ದೇಶದ್ದಲ್ಲ. ಯಾರು ಹೂಡಿಕೆ(Invest) ಮಾಡುತ್ತಿದ್ದಾರೆ? ಅವರ ಹೂಡಿಕೆಯ ಮೊತ್ತ ಎಷ್ಟು? ಅದರ ಮೂಲ ಏನು? ಹೂಡಿಕೆಯಿಂದ ಬಂದ ಆದಾಯವನ್ನು ಅವರು ತೋರಿಸುತ್ತಿದ್ದಾರೆಯೇ? ಎಂಬುದನ್ನು ಪರಿಶೀಲಿಸುವುದಷ್ಟೇ ನಮ್ಮ ಕೆಲಸ’ ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸ ಐಟಿಆರ್ ಫಾಮ್‌ರ್‍ನಲ್ಲಿ ಕ್ರಿಪ್ಟೋ ಮಾಹಿತಿ ಭರ್ತಿಗೆ ವಿಭಾಗ: ಮುಂದಿನ ವರ್ಷ ಬಿಡುಗಡೆಯಾಗಲಿರುವ ಹೊಸ ಆದಾಯ ತೆರಿಗೆ ರಿಟನ್ಸ್‌ರ್ (ಐಟಿಆರ್) ಫಾಮ್‌ರ್, ಕ್ರಿಪ್ಟೋ ಕರೆನ್ಸಿ ಆದಾಯ ಮತ್ತು ಅದಕ್ಕೆ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸುವ ಹೊಸ ಕಾಲಂ ಒಳಗೊಂಡಿರಲಿದೆ ಎಂದು ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ ತರುಣ್ ಬಜಾಜ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರ ಬಜೆಟ್‌ನಲ್ಲಿ, ಎಲ್ಲಾ ಕ್ರಿಪ್ಟೋ ಆದಾಯಕ್ಕೆ ಶೇ.30ರಷ್ಟುತೆರಿಗೆ ಮತ್ತು ವಹಿವಾಟಿನ ಮೇಲೆ ಶೇ.1ರಷ್ಟುಟಿಡಿಎಸ್ ವಿಧಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಅವರು ಈ ಮಾಹಿತಿ ನೀಡಿದ್ದಾರೆ. ಜೊತೆಗೆ, ಕ್ರಿಪ್ಟೋಕರೆನ್ಸಿಯಿಂದ ಪಡೆದ ಆದಾಯಕ್ಕೆ ಹಿಂದೆಯೂ ತೆರಿಗೆ ಇತ್ತು. ಈ ಕುರಿತು ಬಜೆಟ್‌ನಲ್ಲಿ ಸ್ಪಷ್ಟನೆ ನೀಡಲಾಗಿದೆ ಅಷ್ಟೆ. ಇದೇನು ಹೊಸ ತೆರಿಗೆಯಲ್ಲ ಎಂದು ಅವರು ಹೇಳಿದ್ದಾರೆ. ಸರ್ಕಾರದ ನಿರ್ಧಾರದ ಅನ್ವಯ ಕ್ರಿಪ್ಟೋಕರೆನ್ಸಿಯಿಂದ ಬಂದ ಆದಾಯಕ್ಕೆ ಶೇ.30ರಷ್ಟುತೆರಿಗೆ ಮತ್ತು ಮೇಲ್ತೆರಿಗೆ ಪಾವತಿಸಬೇಕು, 50 ಲಕ್ಷ ರು.ಗಿಂತ ಹೆಚ್ಚಿನ ಆದಾಯಕ್ಕೆ ಶೇ.15ರಷ್ಟುಮೇಲ್ತೆರಿಗೆ ಪಾವತಿಸಬೇಕು ಎಂದು ತರುಣ್ ಬಜಾಜ್ ಮಾಹಿತಿ ನೀಡಿದ್ದಾರೆ.