Asianet Suvarna News Asianet Suvarna News

ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡೋ ಉದ್ಯಮಿಗೆ ಸಿಗಲಿದೆ 50 ಲಕ್ಷ ರೂ. ಸಾಲ!

ಕೊರೋನಾ, ಲಾಕ್‌ಡೌನ್ ಪರಿಣಾಮ ಸಣ್ಣ ಉದ್ಯಮಗಳು ಸಾಕಷ್ಟು ಸಂಕಷ್ಟ ಎದುರಿಸುತ್ತಿವೆ.ಇಂಥ ಉದ್ಯಮಗಳ ನೆರವಿಗೆ ಧಾವಿಸಿರೋ ಸೋಷಿಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್‌, ಇನ್ನು ಮುಂದೆ ಉದ್ಯಮಗಳಿಗೆ ಸಾಲ ನೀಡಲಿದೆ. 

FB provides cash grants and ad credits to help small businesses across over 30 countries
Author
Bangalore, First Published Aug 25, 2021, 4:51 PM IST
  • Facebook
  • Twitter
  • Whatsapp

ಫೇಸ್‌ಬುಕ್‌ ಎಂಬ ಸೋಷಿಯಲ್‌ ಮೀಡಿಯಾ ಇನ್ನು ಮುಂದೆ ಪೋಸ್ಟ್‌, ಕಾಮೆಂಟ್ಸ್‌ ಮಾಡಲಷ್ಟೇ ಸೀಮಿತವಾಗಿರಲ್ಲ, ಬದಲಿಗೆ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ ಸಾಲ ಸೌಲಭ್ಯವನ್ನು ಕೂಡ ನೀಡಲಿದೆ. ಹೌದು, ಫೇಸ್ಬುಕ್‌ ಇಂಡಿಯಾ ಇತ್ತೀಚೆಗೆ ‘ಸಣ್ಣ ಉದ್ಯಮ ಸಾಲ ಉಪಕ್ರಮʼ ಎಂಬ ಹೊಸ ಯೋಜನೆ ಘೋಷಿಸಿದೆ. ಆನ್‌ಲೈನ್ ಹಣಕಾಸು ಸಂಸ್ಥೆ ಇಂಡಿಫೈ ಸಹಭಾಗಿತ್ವದಲ್ಲಿ ಫೇಸ್‌ಬುಕ್‌ ಈ ಯೋಜನೆಯನ್ನು ಜಾರಿಗೆ ತರಲಿದೆ.  ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡೋ ಯುವ ಹಾಗೂ ಸಣ್ಣ ಉದ್ಯಮಿಗಳಿಗೆ ತ್ವರಿತವಾಗಿ ಸಾಲ ನೀಡೋದು ಈ ಯೋಜನೆ ಉದ್ದೇಶ. ಇಂಥ ಕಾರ್ಯಕ್ರಮವನ್ನು ಫೇಸ್‌ಬುಕ್ ಮೊಟ್ಟ ಮೊದಲಿಗೆ ಭಾರತದಲ್ಲೇ ಅನುಷ್ಠಾನಗೊಳಿಸುತ್ತಿರೋದು ವಿಶೇಷ. ಹೀಗಾಗಿ ಭಾರತೀಯ ಯುವ ಉದ್ಯಮಿಗಳಿಗೆ ಇದ್ರಿಂದ ಹೆಚ್ಚಿನ ಪ್ರಯೋಜನ ಸಿಗೋ ಸಾಧ್ಯತೆಯಿದೆ. ಭಾರತದ 200 ನಗರಗಳಲ್ಲಿ ಈ ಯೋಜನೆಯನ್ನು ಫೇಸ್‌ಬುಕ್‌ ಜಾರಿಗೊಳಿಸುತ್ತಿದೆ. ಭಾರತದ ಸಣ್ಣ ಉದ್ಯಮಗಳ ಬಂಡವಾಳದ ಅಗತ್ಯವನ್ನು ಈ ಯೋಜನೆ ಪೂರೈಸುತ್ತದೆ ಎಂಬುದು ಪೇಸ್‌ಬುಕ್‌ ಇಂಡಿಯಾದ ಉಪಾಧ್ಯಕ್ಷ ಅಜಿತ್‌ ಮೋಹನ್‌ ಅಭಿಪ್ರಾಯ. 

ಆನ್‌ಲೈನ್ ಶಾಪಿಂಗ್ ಮಾಡ್ತೀರಾ? ಇನ್ಮುಂದೆ ಈ ಸೌಲಭ್ಯಕ್ಕೆ ಬ್ರೇಕ್!

5 ದಿನಗಳೊಳಗೆ ಸಾಲ
ಇಂಡಿಫೈ ಸಂಸ್ಥೆಯಿಂದ ಸಾಲ ಪಡೆಯಲು ಯಾವುದೇ ಆಸ್ತಿ ಅಥವಾ ವಸ್ತುಗಳನ್ನು ಗಿರವಿಯಿಡಬೇಕಾದ ಅಗತ್ಯವಿಲ್ಲ. ಸಾಲ ಬಯಸೋ ಉದ್ಯಮಿ ಆನ್‌ಲೈನ್‌ನಲ್ಲಿಅಗತ್ಯ ದಾಖಲೆಗಳನ್ನು ಸಲ್ಲಿಸಿದ್ರೆ ಕೇವಲ 3 ರಿಂದ 5 ಕಾರ್ಯನಿರತ ದಿನಗಳಲ್ಲೇ ಸಾಲ ಮಂಜೂರು ಮಾಡಲಾಗುತ್ತದೆ. ಈ ಸಾಲವನ್ನು ಇಂಡಿಫೈ ಸಂಸ್ಥೆಯೇ ನೀಡುತ್ತದೆ. ಅಲ್ಲದೆ,  ಸಾಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಇಂಡಿಫೈ ಯಾವುದೇ ಶುಲ್ಕ ವಿಧಿಸೋದಿಲ್ಲ. 

ತ್ವರಿತ ಮಾಹಿತಿ
ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಬಳಿಕ ದೃಢೀಕರಣಕ್ಕಾಗಿ ದಿನಗಟ್ಟಲೆ ಕಾಯಬೇಕಾದ ಅಗತ್ಯವಿಲ್ಲ. ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ನಿಮಗೆ ಸಾಲ ಸಿಗೋ ಬಗ್ಗೆ ದೃಢೀಕರಣ ಸಿಗುತ್ತದೆ. ನಿಮ್ಮ ಅರ್ಜಿ ಪ್ರಕ್ರಿಯೆ ಯಾವ ಹಂತದಲ್ಲಿ ಎಂಬುದನ್ನು ತಿಳಿಯಲು ಕಸ್ಟಮರ್‌ ಸಪೋರ್ಟ್‌ ಲೈನ್‌ಗೆ ಕರೆ ಮಾಡಿದ್ರೆ ಸಾಕು, ಅಗತ್ಯ ಮಾಹಿತಿಗಳು ಲಭಿಸುತ್ತವೆ. 

ಎಷ್ಟು ಸಾಲ ಸಿಗುತ್ತೆ?
ಈ ಯೋಜನೆಯಲ್ಲಿ 5 ಲಕ್ಷದಿಂದ ಹಿಡಿದು 50 ಲಕ್ಷ ರೂ. ತನಕ ಸಾಲ ಪಡೆಯಬಹುದು. ಈ ಸಾಲಕ್ಕೆ ವಾರ್ಷಿಕ ಶೇ.17-ಶೇ.20 ರಷ್ಟು ಬಡ್ಡಿ ವಿಧಿಸಲಾಗುತ್ತದೆ. 

ಅಂಚೆ ಇಲಾಖೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗಲಿದೆ ದುಪ್ಪಟ್ಟು ಹಣ!

ಮಹಿಳಾ ಉದ್ಯಮಿಗಳಿಗೆ ವಿನಾಯ್ತಿ
ಮಹಿಳಾ ಉದ್ಯಮಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದ್ರಲ್ಲೂ ಆರ್ಥಿಕ ಸಂಕಷ್ಟ ಅವರನ್ನು ಅತಿಯಾಗಿ ಕಾಡುತ್ತಿದೆ. ಇದನ್ನು ಮನಗಂಡಿರೋ ಫೇಸ್‌ಬುಕ್, ಈ ಯೋಜನೆ ಮುಖಾಂತರ ಭಾರತದ ಮಹಿಳಾ ಉದ್ಯಮಿಗಳಿಗೆ ಬೆಂಬಲ ನೀಡಲು ಬಯಸಿದೆ. ಮಹಿಳೆಯರೇ ನಡೆಸೋ ಅಥವಾ ಸಹಭಾಗಿತ್ವ ಹೊಂದಿರೋ ಉದ್ಯಮಗಳಿಗೆ ಸಾಲ ನೀಡೋವಾಗ ವಾರ್ಷಿಕ ಬಡ್ಡಿ ದರದಲ್ಲಿ ಶೇ.0.2 ರಿಯಾಯ್ತಿ ನೀಡಲಾಗುತ್ತದೆ. 
 

FB provides cash grants and ad credits to help small businesses across over 30 countries

ಸಣ್ಣ ಉದ್ಯಮಗಳಿಗೆ ಭರವಸೆ
ಕೊರೋನಾ, ಲಾಕ್‌ಡೌನ್‌ ಪರಿಣಾಮ ಭಾರತದಲ್ಲಿ ಸಣ್ಣ ಉದ್ಯಮಗಳು ಸಾಕಷ್ಟು ಸಂಕಷ್ಟ ಎದುರಿಸುತ್ತಿವೆ. ಅಗತ್ಯ ಪ್ರಮಾಣದಲ್ಲಿ ಸಾಲ ಸೌಲಭ್ಯವೂ ಸಿಗದೆ ಉದ್ಯಮವನ್ನು ಮುಚ್ಚುವಂತಹ ಸ್ಥಿತಿಯಲ್ಲಿ ಕೆಲವು ಉದ್ಯಮಿಗಳಿದ್ದಾರೆ. ಇಂಥ ಸಮಯದಲ್ಲಿ ಫೇಸ್‌ಬುಕ್‌ ಹಾಗೂ ಇಂಡಿಫೈ ಸಹಭಾಗಿತ್ವದಲ್ಲಿ ಬರುತ್ತಿರೋ ಈ ವಿನೂತನ ಸಾಲ ಕಾರ್ಯಕ್ರಮ ಅನೇಕ ಉದ್ಯಮಗಳಿಗೆ ನೆರವಾಗೋ ಸಾಧ್ಯತೆಯಿದೆ. 

ಕಂಡಿದ್ದೆಲ್ಲ ಕೊಳ್ಳೋ ಅಭ್ಯಾಸನಾ? ಒಮ್ಮೆ ಇಲ್ಲಿ ಕಣ್ಣು ಹಾಯಿಸಿ

ಸಣ್ಣ ಉದ್ಯಮಗಳಿಗೆ ಫೇಸ್‌ಬುಕ್‌ ಆಸರೆ
ಕಳೆದ ಒಂದು ವರ್ಷದಿಂದ ಸಣ್ಣ ಉದ್ಯಮಗಳಿಗೆ ಆರ್ಥಿಕ ಚೇತರಿಕೆ ನೀಡಲು ಫೇಸ್‌ಬುಕ್ ಸಹಾಯಧನ ವಿತರಣೆ, ಕೌಶಲಾಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಫೇಸ್‌ಬುಕ್‌ ತನ್ನ 100 ಮಿಲಿಯನ್ ಅಮೆರಿಕನ್‌ ಡಾಲರ್‌ಗಳನ್ನು ಜಾಗತಿಕವಾಗಿ ಸಣ್ಣ ಉದ್ಯಮಗಳ ಅಭಿವೃದ್ಧಿಗೆ ವಿನಿಯೋಗಿಸೋ ಕಾರ್ಯಕ್ರಮದ ಭಾಗವಾಗಿ ಫೇಸ್‌ಬುಕ್‌ ಭಾರತದ 5 ನಗರಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಸಣ್ಣ ಉದ್ಯಮಗಳಿಗೆ ಈಗಾಗಲೇ 4 ಮಿಲಿಯನ್ ಅಮೆರಿಕನ್‌ ಡಾಲರ್ಗಳಿಗಿಂತಲೂ ಹೆಚ್ಚಿನ ಹಣವನ್ನು ವಿನಿಯೋಗಿಸಿದೆ. 
 

Follow Us:
Download App:
  • android
  • ios