Asianet Suvarna News Asianet Suvarna News

ಈ ಚಿತ್ರದಲ್ಲಿ ಶಾರುಖ್‌ಗಿಂತ ಹೆಚ್ಚು ಸಂಭಾವನೆ ಪಡೆದಿದ್ದ ಫರಾ ಖಾನ್‌..!

ನೃತ್ಯ ಸಂಯೋಜಕಿ ಫರಾ ಖಾನ್, 90ರ ದಶಕದ ಸಿನಿಮಾ ಸಂಭಾವನೆ ಬಗ್ಗೆ ಆಸಕ್ತಿಕರ ವಿಷ್ಯವೊಂದನ್ನು ಹೇಳಿದ್ದಾರೆ. ಈಗ ಕೋಟಿ ಸಂಪಾದನೆ ಮಾಡುವ ಶಾರುಖ್ ಹಾಗೂ ಫರಾ ಖಾನ್ ಗಳಿಕೆ ಆಗ ಹೇಗಿತ್ತು ಎಂಬುದನ್ನು ತಿಳಿಸಿದ್ದಾರೆ. 
 

Farah Khan Got More Renumeration Than Shah Rukh Khan For Film Kabhi Haan Kabhi Naa roo
Author
First Published Jun 18, 2024, 11:12 AM IST

ಕನಸನ್ನು ಕಾಣೋದು ಮಾತ್ರವಲ್ಲ ಅದನ್ನು ನನಸು ಮಾಡಿಕೊಳ್ಳೋಕೆ ನಿರಂತರ ಪ್ರಯತ್ನ ಅಗತ್ಯ. ಕಂಡ ಕನಸನ್ನು ನಿಜ ಮಾಡಿಕೊಂಡವರಲ್ಲಿ ಬಾಲಿವುಡ್ ಬಾದ್ ಶಾರುಖ್ ಒಬ್ಬರು. ಸಾಮಾನ್ಯ ಕುಟುಂಬದಿಂದ ಬಂದ ಶಾರುಖ್ ಈಗ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ. ದೇಶ, ವಿದೇಶದಲ್ಲಿ ಗುರುತಿಸಿಕೊಂಡ ಸೆಲೆಬ್ರಿಟಿ. ಶಾರುಖ್ ಖಾನ್ ಬಾಲಿವುಡ್ ದಾರಿ ಸುಲಭವಾಗೇನೂ ಇರಲಿಲ್ಲ. ಏಕಾಏಕಿ ಆಕಾಶಕ್ಕೆ ಏಣಿ ಹಾಕಿದವರೂ ಅಲ್ಲ. ನಿಧಾನವಾಗಿ ಒಂದೊಂದೇ ಮೆಟ್ಟಿಲೇರಿ ಬಂದ ಶಾರುಖ್ ಖಾನ್ ರಿಗೆ ಕಷ್ಟ ಗೊತ್ತು. ಸೂಪರ್ ಹಿಟ್ ಚಿತ್ರಗಳ ಸಾಲೇ ಅವರ ಬೆನ್ನ ಹಿಂದಿದೆ. ಕೋಟಿ ಮೌಲ್ಯದ ವಾಚ್ ಕಟ್ಟುವ ಶಾರುಖ್, ಐಷಾರಾಮಿ ಬಂಗಲೆಯಲ್ಲಿ (Luxurious Bungalow) ವಾಸ ಮಾಡ್ತಾರೆ. ಅವರಿಗೇನು? ಒಂದು ಚಿತ್ರ ಮಾಡಿದ್ರೆ ಕೋಟಿ ಬರುತ್ತೆ ಎನ್ನುವ ಜನರಿಗೆ ಇಲ್ಲೊಂದು ಅಚ್ಚರಿ ವಿಷ್ಯ ಇದೆ. ಶಾರುಖ್ ಖಾನ್ ಆರಂಭದಿಂದ್ಲೂ ಚಿತ್ರಕ್ಕೆ ಕೋಟ್ಯಾಂತರ ಹಣ ಸಂಭಾವನೆ ಪಡೆದವರಲ್ಲ. ಒಂದು ಸಮಯದಲ್ಲಿ ಅವರ ಸಂಪಾದನೆ, ಬಾಲಿವುಡ್ ನ ಸೂಪರ್ ಡಾನ್ಸ್ ಕೋರಿಯೋಗ್ರಫರ್ ಫರಾ ಖಾನ್ ಗಿಂತ ಕಡಿಮೆ ಇತ್ತು ಅಂದ್ರೆ ನೀವು ನಂಬ್ಲೇಬೇಕು. 

ಫರಾ ಖಾನ್ (Farah Khan) ಎಲ್ಲರಿಗೂ ಗೊತ್ತು. ಬಾಲಿವುಡ್ ನ ಪ್ರಸಿದ್ಧ ನೃತ್ಯ ಸಂಯೋಜಕಿ (Bollywood Famous Choreographer) ಹಾಗೂ ನಿರ್ದೇಶಕಿ. ನೂರಾರು ಚಿತ್ರಕ್ಕೆ ಫರಾ ಖಾನ್, ನೃತ್ಯ (dance) ಸಂಯೋಜನೆ ಮಾಡಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಶಾರುಖ್ ವಿಷ್ಯವನ್ನು ಬಿಚ್ಚಿಟ್ಟಿದ್ದಾರೆ. ಶಾರುಖ್ ಖಾನ್ (Shahrukh Khan) ಗಿಂತ ಫರಾ ಖಾನ್  ಆ ಚಿತ್ರದಲ್ಲಿ ಹೆಚ್ಚು ಸಂಭಾವನೆ ಪಡೆದಿದ್ದರು. ಸಾಮಾನ್ಯವಾಗಿ ಹಿರೋಗೆ ಹೆಚ್ಚು ಗಳಿಕೆ ಇರುತ್ತೆ. ಆದ್ರೆ ಆ ಚಿತ್ರದಲ್ಲಿ ಉಲ್ಟಾ ಆಗಿತ್ತು. ಅದಕ್ಕೆ ಕಾರಣವೇನು ಎಂಬುದನ್ನು ಫರಾ ಖಾನ್ ಹೇಳಿದ್ದಾರೆ. 

ಒಂದೇ ವಾರಕ್ಕೆ ಕಾಲೇಜಿಂದ ಓಡಿ ಬಂದಿದ್ದೆ ಅಂದ್ರು ಐಶ್ವರ್ಯಾ; ಡಿಕೆಶಿ ಮಗಳಿಗೆ ಹೀಗ್ ಆಗಿತ್ತಾ?

90ರ ದಶಕದಲ್ಲಿ ಬಂದ ಕಭಿ ಹಾ ಕಭಿ ನಾ ಚಿತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಆ ಚಿತ್ರಕ್ಕೆ ಫರಾ ಖಾನ್ ನೃತ್ಯ ಸಂಯೋಜನೆ ಮಾಡಿದ್ದರು. ಈ ಚಿತ್ರದಲ್ಲೇ ಅವರ ಮೊದಲ ಭೇಟಿ. ಈಗ ಇಬ್ಬರು ಒಳ್ಳೆ ಸ್ನೇಹಿತರು. ಶಾರುಖ್ ಖಾನ್ ಅದಾದ್ಮೇಲೆ ಫರಾ ಖಾನ್ ನಿರ್ದೇಶನದ ಮೈ ಹೂ ನಾ, ಓಂ ಶಾಂತಿ ಓಂ ಚಿತ್ರದಲ್ಲಿ ನಟಿಸಿದ್ದರು. ಆದ್ರೆ ಕಭಿ ಹಾ ಕಭಿ ನಾ ಚಿತ್ರದ ಬಜೆಟ್ ತುಂಬಾ ಕಡಿಮೆ ಇತ್ತು. ಈ ಚಿತ್ರಕ್ಕೆ ಶಾರುಖ್ 25 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದರು. ಈ ಚಿತ್ರದ ನೃತ್ಯ ಸಂಯೋಜನೆಗೆ ಫರಾ ಖಾನ್ ಗೆ ಹೆಚ್ಚು ಹಣ ಸಿಕ್ಕಿತ್ತು. ಅದಕ್ಕೆ ಕಾರಣ ಚಿತ್ರದಲ್ಲಿದ್ದ ಹಾಡು. ಫರಾ ಖಾನ್ ಒಂದು ನೃತ್ಯ ಸಂಯೋಜನೆಗೆ 5 ಸಾವಿರ ರೂಪಾಯಿ ಪಡೆಯುತ್ತಿದ್ದರು. ಆರು ಹಾಡಿರೋದ್ರಿಂದ ಒಟ್ಟೂ ಅವರು 30 ಸಾವಿರ ಗಳಿಸಿದ್ದರು. ಕಭಿ ಹಾ ಕಭಿ ನಾ ಚಿತ್ರದಲ್ಲಿ ಶಾರುಖ್ ಖಾನ್ ಗಿಂತ ಫರಾ ಖಾನ್ 5 ಸಾವಿರ ರೂಪಾಯಿ ಹೆಚ್ಚು ಪಡೆದಿದ್ದರು. ಈ ಬಗ್ಗೆ ಮಾತನಾಡಿದ ಫರಾ ಖಾನ್, ಚಿತ್ರದ ಶೂಟಿಂಗ್ ವೇಳೆ ಶಾರುಖ್ ಖಾನ್ ಹೇಗೆಲ್ಲ ಸಹಾಯ ಮಾಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ. 

ಶಿವರಾಜ್‌ಕುಮಾರ್‌ ಕಾಲೇಜಿಗೆ ಹೋಗ್ವಾಗ ದಿನಾಲೂ ಎರಡೇ ರೂ. ಕೊಡ್ತಿದ್ರಂತೆ ಡಾ ರಾಜ್‌ಕುಮಾರ್‌!

ಶಾರುಖ್ ಖಾನ್ ಕಭಿ ಹಾ ಕಭಿ ನಾ ಚಿತ್ರದಲ್ಲಿ ಹೆಚ್ಚು ಸಂಭಾವನೆ ಪಡೆಯದೆ ಇರಬಹುದು ಆದ್ರೆ ಈ ಚಿತ್ರದಲ್ಲಿ ಅವರ ಅಭಿನಯ ಭಾರೀ ಮೆಚ್ಚುಗೆ ಗಳಿಸಿತ್ತು. ಫಿಲ್ಮ್ ಫೇರ್ ಅವಾರ್ಡ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು (Best Actor Film Fare Award) ಶಾರುಖ್ ಖಾನ್ ಬಾಚಿಕೊಂಡಿದ್ದರು.  

Latest Videos
Follow Us:
Download App:
  • android
  • ios