ಒಂದೇ ವಾರಕ್ಕೆ ಕಾಲೇಜಿಂದ ಓಡಿ ಬಂದಿದ್ದೆ ಅಂದ್ರು ಐಶ್ವರ್ಯಾ; ಡಿಕೆಶಿ ಮಗಳಿಗೆ ಹೀಗ್ ಆಗಿತ್ತಾ?
ನಾನು ಚೆನ್ನಾಗಿ ಓದುತ್ತಿದ್ದರೂ, ಎಷ್ಟೇ ಮಾರ್ಕ್ಸ್ ತೆಗೆದುಕೊಂಡರೂ 'ಅವ್ಳು ಚೇರ್‌ಮನ್ ಮಗ್ಳು ಅಲ್ವಾ?' ಮಾರ್ಕ್ಸ್ ಕೊಡ್ತಾರೆ ಅವ್ಳಿಗೆ ಅಂತಾನೇ ಹೇಳೋರು. ನಿಜವಾಗಿ ಹೇಳಬೇಕೆಂದರೆ ನಾನು ಕಾಲೇಜಿಗೆ ಫಸ್ಟ್ ಡೇ ಹೋದಾಗ್ಲೇ..
ಸದ್ಯ ರಾಜ್ಯದ ಉಪ-ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಿಕೆ ಶಿವಕುಮಾರ್ (DK Shivakumar) ಮಗಳು ಐಶ್ವರ್ಯಾ (Aisshwarya Dks Hegde) ಅವರು ತಮ್ಮ ಕಾಲೇಜಿನ ದಿನಗಳಲ್ಲಿ ನಡೆದ ಕಥೆಯನ್ನು ಹೇಳಿಕೊಂಡಿದ್ದಾರೆ. ಐಶ್ವರ್ಯಾ ಕಾಲೇಜು ಓದುವಾಗ ಅವರ ತಂದೆ ಕಾಲೇಜಿನ ಚೇರ್‌ಮನ್ ಆಗಿದ್ದರಂತೆ. ಆದರೆ, ಶುರುವಿನಲ್ಲಿ ಆ ಸಂಗತಿ ಯಾರಿಗೂ ಗೊತ್ತಿರಲಿಲ್ಲ. ಆಗ ಸಹಜವಾಗಿಯೇ ಸಾಕಷ್ಟು ಜನರು ಫ್ರೆಂಡ್ಸ್ ಆಗಿದ್ದಾರೆ. ಆದರೆ, ಯಾವಾಗ ಐಶ್ವರ್ಯಾ ಅವರು ಚೇರ್‌ಮನ್ ಮಗಳು ಅಂತ ಗೊತ್ತಾಯ್ತೋ, ಆಗ ಹಲವರು ಅವರಿಂದ ಅಂತರ ಕಾಯ್ದುಕೊಳ್ಳಲು ಶುರುಮಾಡಿದ್ದರಂತೆ.
ಜತೆಗೆ, ನಾನು ಚೆನ್ನಾಗಿ ಓದುತ್ತಿದ್ದರೂ, ಎಷ್ಟೇ ಮಾರ್ಕ್ಸ್ ತೆಗೆದುಕೊಂಡರೂ 'ಅವ್ಳು ಚೇರ್‌ಮನ್ ಮಗ್ಳು ಅಲ್ವಾ?' ಮಾರ್ಕ್ಸ್ ಕೊಡ್ತಾರೆ ಅವ್ಳಿಗೆ ಅಂತಾನೇ ಹೇಳೋರು. ಅದು ತಪ್ಪು ಅಂತ ನಾನು ಹೇಳಲ್ಲ. ನಿಜವಾಗಿ ಹೇಳಬೇಕೆಂದರೆ ನಾನು ಕಾಲೇಜಿಗೆ ಫಸ್ಟ್ ಡೇ ಹೋದಾಗ್ಲೇ ಗಾಡಿನ ಎಲ್ಲೋ ನಿಲ್ಸಿ ಎಲ್ಲರ ತರ ಕಾಲೇಜಿಗೆ ನಡ್ಕೊಂಡೇ ಹೋಗಿದ್ದೆ. ಆದ್ರೆ ಹೋಗ್ತಾ ಹೋಗ್ತಾ ಗೊತ್ತಾಗೋಯ್ತು ನಾನು ಚೇರ್‌ಮನ್ ಮಗಳು ಅಂತ. ಆಮೇಲೆ ಕಾಲೇಜಲ್ಲಿ ನನ್ನ ನೋಡೋ ರೀತಿನೇ ಬದಲಾಗಿ ಹೋಯ್ತು' ಎಂದಿದ್ದಾರೆ ಡಿಕೆ ಶಿವಕುಮಾರ್ ಅವರ ಮಗಳು (Aishwarya Shivakumar) ಐಶ್ವರ್ಯಾ ಡಿಕೆಎಸ್ ಹೆಗಡೆ.
ಶಿವರಾಜ್‌ಕುಮಾರ್ ಕಾಲೇಜಿಗೆ ಹೋಗ್ವಾಗ ದಿನಾಲೂ ಎರಡೇ ರೂ. ಕೊಡ್ತಿದ್ರಂತೆ ಡಾ ರಾಜ್‌ಕುಮಾರ್!
ಖಾಸಗಿ ಯೂಟ್ಯೂಬ್ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತ ಐಶ್ವರ್ಯಾ ಅವರು ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಕಾಫೀ ಡೇ ಮಾಲೀಕರಾಗಿದ್ದ ಸಿದ್ಧಾರ್ಥ್ ಹಗಡೆ ಅವರ ಪುತ್ರ ಅಮಾರ್ತ್ಯ ಹೆಗಡೆ ಅವರನ್ನು ಮದುವೆಯಾಗಿರುವ ಐಶ್ವರ್ಯಾ ಅವರು, ಸಾಕಷ್ಟು ಸಭೆ-ಸಮಾರಂಭಗಳಲ್ಲಿ ಭಾಗಿಯಾಗುತ್ತಾರೆ. ಸೆಲೆಬ್ರೆಟಿಗಳ ಜತೆ ಮಾತನಾಡುತ್ತಾರೆ, ಅವರೂ ಕೂಡ ಸಲೆಬ್ರೆಟಿಯೇ ಆಗಿಬಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಐಶ್ವರ್ಯಾ ಅವರು ತುಂಬಾ ಆಕ್ವಿಟ್ ಆಗಿರುತ್ತಾರೆ.
ತಾಳ್ಮೆ ಕೆಲವೊಮ್ಮೆ ಶಕ್ತಿ, ಇನ್ನೊಂದು ಪೋಸ್ಟ್; ಶೀತಲಯುದ್ಧ ಸಾರಿದ್ರಾ ಉಮಾಪತಿ ಗೌಡ..?
ಒಟ್ಟಿನಲ್ಲಿ, ದೊಡ್ಡವರ ಮಕ್ಕಳಿಗೆ ಎಲ್ಲಾ ಕಡೆ ಕೆಲವೊಂದು ಸಮಸ್ಯೆಗಳು ಇರುತ್ತವೆ. ಅದನ್ನು ಸಮಸ್ಯೆ ಎಂದು ಅವರೂ ಹೇಳಿಲ್ಲ. ಆದರೆ, ಸಾಮಾನ್ಯ ಜನರು ನೋಡುವ ರೀತಿ ಬೇರೆ ಯರಹ ಇರುತ್ತದೆ ಎನ್ನಬಹುದು. ಐಶ್ವರ್ಯಾ ಕಾಲೇಜಿಗೆ ಹೋಗುವ ವೇಳೆ ಅವರಪ್ಪ ಡಿಕೆ ಶಿವಕುಮಾರ್ ಅವರು ಚೇರ್‌ಮನ್ ಆಗಿದ್ದರು. ಆದರೆ, ಈಗ ಡಿಸಿಎಂ. ಹೀಗಾಗಿ ಈಗ ರಾಜ್ಯದ ಉಪಮುಖ್ಯಮಂತ್ರಿ ಮಗಳಾಗಿರುವ ಕಾರಣಕ್ಕೆ ಹೆಚ್ಚು ಜನರ ಹೆಚ್ಚು ಕಣ್ಣುಗಳು ಅವರ ಮೇಲೆ, ಅವರಂಥರ ಮೇಲೆ ಇರುತ್ತವೆ ಎಂಬ ಸಂಗತಿ ಹೇಳದಿದ್ದರೂ ಅರ್ಥವಾಗುತ್ತದೆ.
ಮೆಟ್ಟು ಮೇಲ್ಗಡೆ ಇಟ್ಟು ಇಳೀರಿ, ಗಂಗಮ್ಮ ತಾಯಿಗ್ ಹಿಂಗೆಲ್ಲಾ ಮಾಡ್ಬಾರ್ದು; ಶಾಕ್ ಆಗಿದ್ರಂತೆ ಡಾ ರಾಜ್!