100 ಬಿಲಿಯನ್ ಡಾಲರ್ ಸೆಕೆಂಡ್‌ನಲ್ಲಿ ಅಳಿಸಿಹಾಕಿದ್ರು, ಮೊದಲ ಬಾರಿಗೆ ನೋವು ತೋಡಿಕೊಂಡ ಅದಾನಿ, ತಪ್ಪು ಮಾಹಿತಿ ನೀಡಿ ಅಪಾರ ನಷ್ಟ ಮಾಡಿದರು ಎಂದು ಗೌತಮ್ ಅದಾನಿ ಹೇಳಿದ್ದಾರೆ. ಅಷ್ಟಕ್ಕೂ ಅದಾನಿ ಹೇಳಿದ ಈ ನಷ್ಟ ಯಾವುದು?

ಮುಂಬೈ (ಅ.11) ಭಾರತದ 2ನೇ ಅತೀ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಇದೇ ಮೊದಲ ಬಾರಿಗೆ ನಷ್ಟದ ಕುರಿತು ಮಾತನಾಡಿದ್ದಾರೆ. ಸೆಕೆಂಡ್‌ಗಳಲ್ಲಿ ಬರೋಬ್ಬರಿ 100 ಬಿಲಿಯನ್ ಡಾಲರ್ ಹಣವನ್ನು ನಮ್ಮಿಂದ ಅಳಿಸಿ ಹಾಕಿದರು. ನೋಡ ನೋಡುತ್ತಿದ್ದಂತೆ ನಷ್ಟದ ಸಂಖ್ಯೆ ಏರುತ್ತಾ ಹೋಯಿತು ಎಂದು ಗೌತಮ್ ಅದಾನಿ ಹೇಳಿದ್ದಾರೆ. 2023ರಲ್ಲಿ ಹಿಂಡನ್‌ಬರ್ಗ್ ವರದಿ ಮೂಲಕ ತಪ್ಪು ಮಾಹಿತಿ ಪ್ರಕಟಿಸಿದರು. ಈ ತಪ್ಪು ಮಾಹಿತಿಯಿಂದ 100 ಬಿಲಿಯನ್ ಡಾಲರ್ ನಷ್ಟು ನಷ್ಟವಾಯಿತು ಎಂದು ಅದಾನಿ ಹೇಳಿದ್ದಾರೆ.

ನಿಮ್ಮ ಕತೆ ನೀವು ಹೇಳಬೇಕು

ಮುಂಬೈನ ಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ಅತಿಥಿಯಾಗಿ ಮಾತನಾಡಿದ ಅದಾನಿ, ನಿಮ್ಮ ಕತೆಯನ್ನು ನೀವು ಹೇಳಬೇಕು. ಇಲ್ಲದಿದ್ದರೆ, ಬೇರೆಯವರು ಹೊಸ ಕತೆ ಸೃಷ್ಟಿಸುತ್ತಾರೆ ಎಂದು ಗೌತಮ್ ಅದಾನಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಮೌನವಾಗಿರುವುದು ಮಾನವೀಯತೆ ಅಲ್ಲ, ಅದು ಶರಣಾದಂತೆ ಎಂದು ಅದಾನಿ ಹೇಳಿದ್ದಾರೆ. ಭಾರತವನ್ನು ಇತರರ ವಾಖ್ಯಾನಿಸುವುದನ್ನು ನಿಲ್ಲಿಸಬೇಕು, ಭಾರತ ಏನು ಅನ್ನೋದು ನಾವು ವಾಖ್ಯಾನಿಸಬೇಕು ಎಂದು ಅದಾನಿ ಹೇಳಿದ್ದಾರೆ.

2023ರ ಹಿಂಡನ್‌ಬರ್ಗ್ ವರದಿ

2023ರಲ್ಲಿ ಪ್ರಕಟಗೊಂಡ ಹಿಂಡನ್‌ಬರ್ಗ್ ವರದಿ ಕುರಿತು ಅದಾನಿ ಮಾತಾಡಿದ್ದಾರೆ. ಅದಾನಿ ಗ್ರೂಪ್ ಬಗ್ಗೆ ಇಲ್ಲದ ಸಲ್ಲದ ಆರೋಪ, ಸುಳ್ಳು ಮಾಹಿತಿ ನೀಡಲಾಗಿತ್ತು. ಸುಳ್ಳನ್ನೇ ಸತ್ಯೆ ಎಂದು ನಂಬಿಸು ಪ್ರಯತ್ನಗಳು ನಡೆಯಿತು. ನಿಯತ್ತಿನಿಂದ, ಕಠಿಣ ಪರಿಶ್ರಮದ ಮೂಲಕ ಕಟ್ಟಿದ ಉದ್ಯಮವನ್ನು ಕೆಡುವ ಪ್ರಯತ್ನಗಳು ನಡೆಯಿತು. ಈ ತಪ್ಪು ಮಾಹಿತಿಯಿಂದ ದಶಕಗಳಿಂದ ಮಾಡಿದ ಪ್ರಯತ್ನ ಸೆಕೆಂಡ್‌ಗಳಲ್ಲಿ ನಾಶವಾಯಿತು. 100 ಬಿಲಿಯನ್ ಡಾಲರ್ ಮೊತ್ತ ನಷ್ಟವಾಯಿತು ಎಂದು ಅದಾನಿ ಹೇಳಿದ್ದಾರೆ.

ತಪ್ಪು ಮಾಡಿಲ್ಲ, ಆದರೂ ಕಳೆದುಕೊಂಡೆವು

ಅದಾನಿ ಉದ್ಯಮ ನಿಯಮ ಮೀರಿ ಹೋಗಿಲ್ಲ, ಯಾವುದೇ ತಪ್ಪು ಮಾಡಿಲ್ಲ, ನಿಯತ್ತಿನಿಂದ ಉದ್ಯಮ ಕಟ್ಟಿದ್ದೇವೆ. ನಮ್ಮ ಕಂಪನಿ ನೀತಿಯಲ್ಲಿ ಬದಲಾವಣೆ ಮಾಡಿಲ್ಲ, ನಮ್ಮ ಕೆಲಸದಲ್ಲಿ ರಾಜಿಯಾಗಿಲ್ಲ, ಯಾವ ಬದಲಾವಣೆಯನ್ನು ಮಾಡಿಲ್ಲ, ಕೇವಲ ತಪ್ಪು ಮಾಹಿತಿಯಿಂದ ಕಳೆದುಕೊಂಡೆವು ಎಂದು ಅದಾನಿ ಹೇಳಿದ್ದಾರೆ.

ಈ ತಪ್ಪು ಮಾಹಿತಿ, ಪಿತೂರಿಗಳನ್ನು ಅದಾನಿ ಗ್ರೂಪ್ ಮೆಟ್ಟಿನಿಂತಿದೆ. ಮತ್ತಷ್ಟು ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಿದ್ದೇವೆ. ಈ ಘಟನೆಯಿಂದ ಒಂದು ಅರ್ಥ ಮಾಡಿಕೊಂಡಿದ್ದೇನೆ. ನೀವು ಗಟ್ಟಿಯಾಗಿ ಸತ್ಯವನ್ನು ಹೇಳಬೇಕು. ನಿಮ್ಮ ಬಳಿ ಸತ್ಯ ಇದೆ ಎಂದು ಸುಮ್ಮನೆ ಕುಳಿತರೆ ನಿಮ್ಮ ಮೌನದಲ್ಲಿ ಮತ್ತೊಬ್ಬರು ತಪ್ಪು ಇತಿಹಾಸ ಬರೆಯುತ್ತಾರೆ ಎಂದು ಅದಾನಿ ಹೇಳಿದ್ದಾರೆ.