ಅದಾನಿ ಹಿಂದಿಕ್ಕಿದ ಅಂಬಾನಿ ಈಗ ನಂ.1 ಶ್ರೀಮಂತ, ಮಹಿಳೆಯರ ಪೈಕಿ ರೋಶನಿ ನಾಡರ್‌ಗೆ ಪಟ್ಟ
ಅದಾನಿ ಹಿಂದಿಕ್ಕಿದ ಅಂಬಾನಿ ಈಗ ನಂ.1 ಶ್ರೀಮಂತ, ಮಹಿಳೆಯರ ಪೈಕಿ ರೋಶನಿ ನಾಡರ್‌ಗೆ ಪಟ್ಟ, ಹುರನ್ ಇಂಡಿಯಾ ಬಿಡುಗಡೆ ಮಾಡಿದ ನೂತನ ಪಟ್ಟಿಯಲ್ಲಿ ಹಲವು ಬದಲಾವಣೆಯಾಗಿದೆ. ಭಾರತದ ಶ್ರೀಮಂತರ ಸ್ಥಾನ ಪಲ್ಲಟವಾಗಿದೆ.

ಹುರನ್ ಇಂಡಿಯಾ ರಿಚ್ ಲಿಸ್ಟ್
ಹುರನ್ ಇಂಡಿಯಾ ರಿಚ್ ಲಿಸ್ಟ್
ಹುರನ್ ಇಂಡಿಯಾ ರಿಚ್ ಲಿಸ್ಟ್ 2025 ಪ್ರಕಟಿಸಿದೆ. ಮತ್ತೆ ಮುಕೇಶ್ ಅಂಬಾನಿ, ಉದ್ಯಮಿ ಗೌತಮ್ ಅದಾನಿ ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಮುಕೇಶ್ ಅಂಬಾನಿಯ ಸಂಪತ್ತು ಈ ವರ್ಷ ಭಾರಿ ವೃದ್ಧಿಯಾಗಿದೆ. ಭಾರತದ ಶ್ರೀಮಂತರ ಪಟ್ಟಿಯನ್ನ ಹುರನ್ ಇಂಡಿಯಾ ಬಿಡುಗಡೆ ಮಾಡಿದೆ. ಈ ವರ್ಷ ಅದಾನಿ ಕಂಪನಿಗಳ ಚೇತರಿಸಿಕೊಳ್ಳುತ್ತಿದೆ. ಆದರೆ ಸಂಪತ್ತಿನ ವಿಚಾರದಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ.
ಅಂಬಾನಿ ಆಸ್ತಿ ಎಷ್ಟು?
ಅಂಬಾನಿ ಆಸ್ತಿ ಎಷ್ಟು?
ಹುರನ್ ಇಂಡಿಯಾ 2025ರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಕುಟುಂಬದ ಒಟ್ಟು ಆಸ್ತಿ 9.55 ಲಕ್ಷ ಕೋಟಿ ರೂಪಾಯಿ. ಎರಡನೇ ಸ್ಥಾನಕ್ಕೆ ಕುಸಿದಿರುವ ಉದ್ಯಮಿ ಗೌತಮ್ ಅದಾನಿ ಸಂಪತ್ತು 8.15 ಲಕ್ಷ ಕೋಟಿ ರೂಪಾಯಿ. 2024ರಲ್ಲಿ ಗೌತಮ್ ಅದಾನಿ ಸಂಪತ್ತು 11.6 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಹೀಗಾಗಿ ಮೊದಲ ಸ್ಥಾನ ಪಡೆದಿದ್ದರು.
ಮಾರುಕಟ್ಟೆ ಏರಿಳಿತದಲ್ಲೂ ಅಂಬಾನಿ ನಂ.1
ಮಾರುಕಟ್ಟೆ ಏರಿಳಿತದಲ್ಲೂ ಅಂಬಾನಿ ನಂ.1
ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಸತತ ನಂಬರ್ 1 ಆಗಿ ಕುರುತಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿನ ಕೆಲ ಬದಲಾವಣೆ ಪರಿಣಾಮ ಬೀರಿದರೂ ಅಂಬಾನಿ ಆಸ್ತಿಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. 2022ರಿಂದ ಸತತವಾಗಿ ಅಂಬಾನಿ ಹಾಗೂ ಅದಾನಿ ನಡುವೆ ಪೈಪೋಟಿ ನಡೆಯುತ್ತಲೇ ಇದೆ.
ರೋಶನಿ ನಾಡರ್ ಭಾರತದ ಶ್ರೀಮಂತರ ಮಹಿಳಾ ಉದ್ಯಮಿ
ರೋಶನಿ ನಾಡರ್ ಭಾರತದ ಶ್ರೀಮಂತರ ಮಹಿಳಾ ಉದ್ಯಮಿ
ಭಾರತದ ಶ್ರೀಮಂತರ ಪಟ್ಟಿಯಲ್ಲಿ ಹೆಚ್‌ಸಿಎಲ್ ಚೇರ್‌ಪರ್ಸನ್ ರೋಶನಿ ನಾಡರ್ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ವಿಶೇಷ ಅಂದರೆ ಭಾರತದ ಅತೀ ಶ್ರೀಮಂತ ಮಹಿಳಾ ಪಟ್ಟಿಯಲ್ಲಿ ರೋಶನಿ ನಾಡರ್ ಮೊದಲ ಸ್ಥಾನದಲ್ಲಿದ್ದಾರೆ. ರೋಶನಿ ನಾಡರ್ ಸಂಪತ್ತು 2.84 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಭಾರತದಲ್ಲಿ ಬಿಲೇನೀಯರ್ ಸಂಖ್ಯೆ 350ಕ್ಕೆ ಏರಿಕೆ
ಭಾರತದಲ್ಲಿ ಬಿಲೇನೀಯರ್ ಸಂಖ್ಯೆ 350ಕ್ಕೆ ಏರಿಕೆ
ಭಾರತದಲ್ಲ ಒಟ್ಟು ಬಿಲೇನೀಯರ್ ಸಂಖ್ಯೆ 350ಕ್ಕೆ ಏರಿಕೆಯಾಗಿದೆ. ಇವರ ಒಟ್ಟು ಸಂಪತ್ತು 167 ಲಕ್ಷ ಕೋಟಿ ರೂಪಾಯಿ. ಇದು ಭಾರತದ ಅರ್ಧ ಜಿಡಿಪಿಗೆ ಸಮವಾಗಿದೆ. ಕಳೆದ 13 ವರ್ಷಗಳಿಗೆ ಹೋಲಿಸಿದರೆ ಬಿಲೇನಿಯರ್ ಸಂಖ್ಯೆ 6 ಪಟ್ಟು ಹೆಚ್ಚಾಗಿದೆ.
ಭಾರತದ ಯುವ ಶ್ರೀಮಂತ ಉದ್ಯಮಿ
ಭಾರತದ ಯುವ ಶ್ರೀಮಂತ ಉದ್ಯಮಿ
ಹುರನ್ ಇಂಡಿಯಾ ಪಟ್ಟಿಯಲ್ಲಿ ಭಾರತದ ಶ್ರೀಮಂತ ಯುವ ಉದ್ಯಮಿಗಳ ಪಟ್ಟಿ ಬಿಡುಗಡೆ ಮಾಡಿದೆ. 31 ವರ್ಷದ ಅರವಿಂದ್ ಶ್ರೀನಿವಾಸ್ ಭಾರತದ ಯುವ ಉದ್ಯಮಿ ಅನ್ನೋ ಕಿರೀಟ ಗಿಟ್ಟಿಸಿಕೊಂಡಿದ್ದಾರೆ. 31 ವರ್ಷದ ಅರವಿಂದ್ ಶ್ರೀನಿವಾಸ್ ಪರ್ಪ್ಲೆಕ್ಸಿಟಿ ಸಂಸ್ಥೆ ಹುಟ್ಟುಹಾಕಿದ್ದಾರೆ. ಅರವಿಂದ್ ಶ್ರೀನಿವಾಸ್ ಒಟ್ಟ ಸಂಪತ್ತು 21,900 ಕೋಟಿ ರೂಪಾಯಿ.