Asianet Suvarna News Asianet Suvarna News

ಮೂರನೇ ಮಗು ನಿರೀಕ್ಷೆಯಲ್ಲಿ ಫೇಸ್ಬುಕ್ ಸಂಸ್ಥಾಪಕ ಜುಕರ್ ಬರ್ಗ್‌

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಹಾಗೂ ಪತ್ನಿ ಪ್ರೆಸ್ಸಿಲ್ಲಾ ಚಾನ್ (Priscilla Chan) ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಂಪತಿ ತಮ್ಮ ಪಾಲಿನ ಈ ಖುಷಿಯ ವಿಚಾರವನ್ನು ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ(Instagram) ಹಂಚಿಕೊಂಡಿದ್ದಾರೆ.

Facebook co founder Mark Zuckerberg family will extend, zuck And Priscilla Chan waiting third baby  akb
Author
First Published Sep 22, 2022, 10:42 AM IST

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಹಾಗೂ ಪತ್ನಿ ಪ್ರೆಸ್ಸಿಲ್ಲಾ ಚಾನ್ (Priscilla Chan) ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಂಪತಿ ತಮ್ಮ ಪಾಲಿನ ಈ ಖುಷಿಯ ವಿಚಾರವನ್ನು ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ(Instagram) ಹಂಚಿಕೊಂಡಿದ್ದಾರೆ. ಲಾಟ್ಸ್ ಆಫ್ ಲವ್, ಮ್ಯಾಕ್ಸ್(Max) ಹಾಗೂ ಆಗಸ್ಟ್‌ (August) ಮುಂದಿನ ವರ್ಷ ತಮ್ಮ ಹೊಸ ಸಹೋದರಿಯನ್ನು ಹೊಂದಲಿದ್ದಾರೆ ಎಂದು ದಂಪತಿ ಸಾಮಾಜಿಕ ಜಾಲತಾಣಗಳ ಇನ್ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಈ ಖುಷಿಯ ವಿಚಾರ ಹಂಚಿಕೊಂಡಿದ್ದಾರೆ. ಮಾರ್ಕ್ ಜುಕರ್‌ಬರ್ಗ್ ಹಾಗೂ ಪ್ರೆಸ್ಸಿಲ್ಲಾ ಚಾನ್ ದಂಪತಿಗೆ ಈಗಾಗಲೇ ಮ್ಯಾಕ್ಸ್ ಹಾಗೂ ಆಗಸ್ಟ್ ಎಂಬ ಇಬ್ಬರು ಮಕ್ಕಳಿದ್ದಾರೆ. 

2012ರಲ್ಲಿ ಮಾರ್ಕ್ ಜುಕರ್‌ಬರ್ಗ್ ಹಾಗೂ ಪ್ರೆಸಿಲ್ಲಾ ಮದುವೆಯಾಗಿದ್ದರು. ಅವರಿಗೆ ಈಗಾಗಲೇ ಆಗಸ್ಟ್ ಹಾಗೂ ಮ್ಯಾಕ್ಸಿಮಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಾರ್ಕ್ ಜುಕರ್‌ಬರ್ಗ್ ಹಾಗೂ ಪ್ರೆಸಿಲ್ಲಾ ಕಾಲೇಜು ದಿನಗಳಿಂದಲೇ ಪರಸ್ಪರ ಪರಿಚಿತರಾಗಿ ನಂತರ ಪ್ರೇಮಿಗಳಾಗಿದ್ದರು. 2003ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ (Harvard University) ವಿದ್ಯಾರ್ಥಿ ಸಂಘದ  ಪಾರ್ಟಿಯಲ್ಲಿ ಅವರು ಮೊದಲ ಬಾರಿ ಭೇಟಿ ಮಾಡಿದ್ದರು. ನಂತರ 2012 ರಲ್ಲಿ ವಿವಾಹವಾದ ಈ ಜೋಡಿ ಇತ್ತೀಚೆಗಷ್ಟೇ  ತಮ್ಮ 10 ನೇ ವಿವಾಹ ವಾರ್ಷಿಕೋತ್ಸವವನ್ನು (wedding anniversary) ಆಚರಿಸಿದರು.

ಭಾರತದಲ್ಲಿ Facebook, Instagramನ 2.7 ಕೋಟಿ ಪೋಸ್ಟ್‌ಗಳ ವಿರುದ್ಧ ಕ್ರಮ: Meta

ಈ ಹಿಂದೆ ಮಾರ್ಕ್ ಜುಕರ್‌ಬರ್ಗ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ್ದರು. ಆದರೆ ಇತ್ತೀಚೆಗೆ ಅವರ ನಿವ್ವಳ ಮೌಲ್ಯ ಕುಸಿತ ಕಂಡಿದೆ. ಮೆಟಾ ಪ್ಲಾಟ್‌ಫಾರ್ಮ್ಸ್‌ನ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿರುವ ಮಾರ್ಕ್ ಜುಕರ್‌ಬರ್ಗ್‌ 68.3 ಬಿಲಿಯನ್ ಕುಸಿತ ಕಂಡಿದ್ದು, ತಮ್ಮ ಸಂಪತ್ತಿನ ಶೇಕಡಾ 54 ರಷ್ಟನ್ನು ಅವರು ಕಳೆದುಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Mark Zuckerberg (@zuck)

 

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ (Bloomberg Billionaires Index) ಅಂಕಿ ಅಂಶಗಳ ಪ್ರಕಾರ ಈ ಫೇಸ್‌ಬುಕ್ ಸಂಸ್ಥಾಪಕ, ಈ ವರ್ಷ ಅವರು 71 ಶತಕೋಟಿ ಡಾಲರ್ ಕಳೆದುಕೊಳ್ಳುವ ಮೂಲಕ ತಮ್ಮ ಅರ್ಧದಷ್ಟು ಸಂಪತ್ತನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಅವರ ನಿವ್ವಳ ಮೌಲ್ಯ ಜಾಗತಿಕ ಬಿಲಿಯನೇರ್‌ಗಳ ಪಟ್ಟಿಯಲ್ಲಿ 20ನೇ ಸ್ಥಾನದಲ್ಲಿದೆ.  2014 ರ ಬಳಿಕ ಇದೇ ಮೊದಲ ಬಾರಿಗೆ ಜುಕರ್ ಬರ್ಗ್ ಪಟ್ಟಿಯಲ್ಲಿ ತುಂಬಾನೇ ಕೆಳಗಿನ ಸ್ಥಾನದಲ್ಲಿದ್ದಾರೆ. ಕೇವಲ ಎರಡು ವರ್ಷದ ಹಿಂದಷ್ಟೇ 38 ವರ್ಷದ ಜುಕರ್ ಬರ್ಗ್ 106 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕೇವಲ ಜೆಫ್ ಬೆಜೋಸ್ ಹಾಗೂ ಬಿಲ್ ಗೇಟ್ಸ್ ಅವರಿಗಿಂತ ಹಿಂದಿದ್ದರು. 

ಕಂಪನಿ ಹೆಸರು ಬದಲಾಯಿಸಿದ್ದೇ ಜುಕರ್ ಬರ್ಗ್ ಗೆ ಮುಳುವಾಯ್ತಾ? ಸಂಪತ್ತಿನಲ್ಲಿ 71 ಬಿಲಿಯನ್ ಡಾಲರ್ ಇಳಿಕೆ

ಸೆಪ್ಟೆಂಬರ್ 2021 ರಲ್ಲಿ ಅವರ ಕಂಪನಿಯ ಷೇರುಗಳು 382 ಡಾಲರ್ ಮೊತ್ತಕ್ಕೆ ತಲುಪಿದಾಗ ಅವರ ಸಂಪತ್ತು 142 ಬಿಲಿಯನ್‌ಗೆ ಏರಿಕೆ ಆಗಿತ್ತು. ಇದಾದ ನಂತರ ಜುಕರ್‌ಬರ್ಗ್ ಮೆಟಾ ಸಂಸ್ಥೆಯನ್ನು ಪರಿಚಯಿಸಿದ್ದು, ಸಂಸ್ಥೆಯ ಹೆಸರು ಫೇಸ್‌ಬುಕ್ INc ಯನ್ನು ಬದಲಿಸಿದರು. ಇದಾದ ಬಳಿಕ ಅದರ ಬೆಳವಣಿಗೆ ಇಳಿಮುಖವಾಗಿದ್ದು, ಟೆಕ್ ಪ್ರಪಂಚದಲ್ಲಿ ತನ್ನ ನೆಲೆ ಪತ್ತೆಗೆ ಹೆಣಗಾಡುತ್ತಿದೆ.  ಮಾರ್ಕ್ ಜುಕರ್ ಬರ್ಗ್‌ಗೆ ಇನ್ಸ್ಟಾಗ್ರಾಮ್‌ನಲ್ಲಿ 10.2 ಮಿಲಿಯನ್ ಫಾಲೋವರ್‌ಗಳಿದ್ದಾರೆ. ಹಾಗೆಯೇ ಫೇಸ್‌ಬುಕ್‌ನಲ್ಲಿ 119,394,940 ಫಾಲೋವರ್‌ಗಳಿದ್ದಾರೆ. 
 

Follow Us:
Download App:
  • android
  • ios