ಭಾರತದ ಮಾರುಕಟ್ಟೆಗೆ ಕಾಲಿಟ್ಟ ಯೂರೋಪ್‌ನ ಪ್ರತಿಷ್ಠಿತ ಎನರ್ಜಿ ಡ್ರಿಂಕ್ ನೈಟ್ ವಾಕರ್

ಈ ಎನರ್ಜಿ ಡ್ರಿಂಕ್ ಯುರೋಪ್‌ನ ಹಲವು ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ವಿಶೇಷವಾಗಿ ಈ ಶಕ್ತಿವರ್ಧಕ ಪಾನೀಯ ಕೆಫೀನ್, ಟೌರಿನ್ ಹಾಗೂ ಬಿ ವಿಟಮಿನ್ ಮಿಶ್ರಣ ಹೊಂದಿದೆ.

europe s brand night walker launches energy drinkin india in 2 flavours ash

ನವದೆಹಲಿ (ಮೇ 25, 2023): ಯೂರೋಪ್‌ನ ಪ್ರತಿಷ್ಠಿತ ಎನರ್ಜಿ ಡ್ರಿಂಕ್ ನೈಟ್ ವಾಕರ್ ಇದೀಗ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಸುದೀರ್ಘ ಕಾಲದವರೆಗೆ ಕೆಲಸದಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಲು ಅಥವಾ ಕ್ರೀಡೆಯಲ್ಲಿನ ಉತ್ತೇಜನ ನೀಡುವ ಭರವಸೆಯನ್ನು ಈ ಶಕ್ತಿವರ್ಧಕ ಪಾನೀಯ ನೈಟ್ ವಾಕರ್ ಒದಗಿಸುತ್ತದೆ.

ಆಕರ್ಷಕ ಕಪ್ಪು ಬಣ್ಣದ ಕ್ಯಾನ್‌ನಲ್ಲಿ ಬರುವ ಈ ಎನರ್ಜಿ ಡ್ರಿಂಕ್ ಯುರೋಪ್‌ನ ಹಲವು ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ವಿಶೇಷವಾಗಿ ಈ ಶಕ್ತಿವರ್ಧಕ ಪಾನೀಯ ಕೆಫೀನ್, ಟೌರಿನ್ ಹಾಗೂ ಬಿ ವಿಟಮಿನ್ ಮಿಶ್ರಣ ಹೊಂದಿದೆ.

ಇದನ್ನು ಓದಿ: ಇನ್ಮುಂದೆ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಫೋನ್‌ ನಂಬರ್‌ ಕೇಳಂಗಿಲ್ಲ: ಕೇಂದ್ರ ಸರ್ಕಾರ ಸೂಚನೆ

ಗ್ರಾಹಕರನ್ನು ಸದಾ ಸಮಯ ಎಚ್ಚರದಿಂದ ಇರಲು ಹಾಗೂ ಗಮನಕೇಂದ್ರೀಕೃತವಾಗಿರಿಸುವಂತೆ ನೈಟ್‌ವಾಕರ್ ಎನರ್ಜಿ ಡ್ರಿಂಕ್ ತಯಾರು ಮಾಡಲಾಗಿದೆ ಅನ್ನೋದು ನೈಟ್ ವಾಕರ್ ಎನರ್ಜಿ ಡ್ರಿಂಕ್ ಹೇಳಿಕೆ. ಈ ಶಕ್ತಿವರ್ಧನ ಡ್ರಿಂಕ್ ಹಲವಾರು ಗಂಟೆಗಳ ಕಾಲ ದೇಹದಲ್ಲಿ ಉತ್ಸಾಹ ಶಕ್ತಿಯನ್ನು ಊರ್ಜಿತಗೊಳಿಸುತ್ತದೆ. ಪ್ರಮುಖವಾಗಿ ದೇಹದ ಆಯಾಸ ಕಡಿಮೆ ಮಾಡುವುದಲ್ಲದೆ,
ಮಾನಸಿಕ ಸ್ಪಷ್ಟತೆಯನ್ನು ನೀಡಲಿದೆ ಎಂದು ಹೇಳಲಾಗುತ್ತದೆ. ಈ ಎನರ್ಜಿ ಡ್ರಿಂಕ್ ವಿದ್ಯಾರ್ಥಿಗಳು, ವೃತ್ತಿಪರರು, ಲಾಂಗ್ ಡ್ರೈವ್ ಮಾಡುವ ವ್ಯಕ್ತಿಗಳು ಅಥವಾ ತಡರಾತ್ರಿ ಪಾರ್ಟಿಯಲ್ಲಿ ಎಚ್ಚರವಾಗಿರಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ.

ನೈಟ್‌ವಾಕರ್ ಬ್ರ್ಯಾಂಡ್ ಶಕ್ತಿವರ್ಧಕ ಡ್ರಿಂಕ್‌ ಅನ್ನು ಉತ್ತರ ಭಾರತದಿಂದ ಸಂಪೂರ್ಣ ಭಾರತದಲ್ಲಿ ಪರಿಚಯಿಸಲು ಸಂತೋಷವಾಗುತ್ತಿದೆ. ಭಾರತ ದೇಶ ಕಠಿಣ ಪರಿಶ್ರಮ ಹಾಗೂ ಕ್ರೀಡೆಯಲ್ಲಿ ಅವಿರತ ಪರಿಶ್ರಮ ಪಡುವ ದೇಶ. ಹೀಗಾಗಿ ನಮ್ಮ ಎನರ್ಜಿ ಡ್ರಿಂಕ್ ಹೆಚ್ಚುವರಿ ಶಕ್ತಿವರ್ಧಕ ಬಯಸುವ ಜನರಿಗೆ ಸೂಕ್ತವಾಗಿದೆ ಎಂದು ನೈಟ್‌ವಾಕರ್ ವಕ್ತಾರ ಹೇಳಿದ್ದಾರೆ.

ಇದನ್ನೂ ಓದಿ: ಆದಾಯ ತೆರಿಗೆ ವಿವರ ಸಲ್ಲಿಕೆಗೆ ಚಾಲನೆ: ಆನ್‌ಲೈನ್‌ ಮೂಲಕವೇ ಹೀಗೆ ಸಲ್ಲಿಸಿ..

ಭಾರತದಲ್ಲಿ ಎನರ್ಜಿ ಡ್ರಿಂಕ್ ಮಾರುಕಟ್ಟೆ ವೃದ್ಧಿಸುವ ಬೆನ್ನಲ್ಲೇ ನೈಟ್‌ವಾಕರ್ ಎನರ್ಜಿ ಡ್ರಿಂಕ್ ದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ಅಭಿವೃದ್ಧಿಗೊಳ್ಳುತ್ತಿರುವ ಆರ್ಥಿಕತೆ, ಕೆಲಸದ ಹೆಚ್ಚುವರಿ ಒತ್ತಡದಿಂದ ಹೆಚ್ಚಿನ ಮಂದಿ ಎನರ್ಜಿ ಡ್ರಿಂಕ್ ಮೊರೆಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಶಕ್ತಿವರ್ಧಕ ಪಾನೀಯ ಜನರನ್ನು ಹೆಚ್ಚು ಉತ್ಪಾದಕತೆ ಹಾಗೂ ಕೇಂದ್ರೀಕೃತವಾಗಿರಿಸಲು ನೆರವಾಗುತ್ತದೆ ಎಂದು ವಕ್ತಾರರು ಹೇಳಿದ್ದಾರೆ.

ನೈಟ್‌ವಾಕರ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಕೆಲ ಟೀಕೆಗಳನ್ನು ಎದುರಿಸಿದೆ. ನೈಟ್‌ವಾಕರ್ ಎನರ್ಜಿ ಡ್ರಿಂಕ್‌ನಲ್ಲಿ ಕೆಫೀನ್ ಹಾಗೂ ಸಕ್ಕರೆ ಪ್ರಮಾಣ ಹೆಚ್ಚಾಗಿದೆ ಅನ್ನೋ ಆರೋಪವಿದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು, ಇನ್ಸೋಮ್ನಿಯಾ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು ಅನ್ನೋ ಅಭಿಪ್ರಾಯವನ್ನು ಆರೋಗ್ಯ ತಜ್ಞರು ವ್ಯಕ್ತಪಡಿಸಿದ್ದರು.

ತಜ್ಞರ ಅಭಿಪ್ರಾಯ, ಟೀಕೆಗಳನ್ನು ಗಮನದಲ್ಲಿಟ್ಟುಕೊಂಡು ನೈಟ್‌ವಾಕರ್ ಎನರ್ಜಿ ಡ್ರಿಂಕ್ ಕೆಲ ಬದಲಾವಣೆಗಳನ್ನು ಮಾಡಿದೆ. ಈ ಎನರ್ಜಿ ಡ್ರಿಂಕ್ ಸೇವಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಎನರ್ಜಿ ಡ್ರಿಂಕ್ ತನ್ನ ಲೇಬಲ್‌ನಲ್ಲಿ ಪಾನಿಯದಲ್ಲಿ ಬಳಸಿರುವ ಪದಾರ್ಥಗಳು, ಪೋಷಕಾಂಶಗಳ ಕುರಿತ ವಿವರಗಳನ್ನು ಕಡ್ಡಾಯಾಗಿ ಉಲ್ಲೇಖಿಸಿದೆ.

ಇದನ್ನೂ ಓದಿ: 2000 ರೂ. ನೋಟು ಬದಲಾವಣೆಗೆ ಬ್ಯಾಂಕ್‌ಗಳಲ್ಲಿ ಐಡಿ ಕಾರ್ಡ್‌, ಗುರುತು ಚೀಟಿ ಕಡ್ಡಾಯ: ಕೆಲವೆಡೆ ನೋಟು ಬದಲಾವಣೆಗೆ ಅವಕಾಶವಿಲ್ಲ

ಭಾರತದಲ್ಲಿ ಶಕ್ತಿವರ್ಧಕ ಉತ್ತೇಜನ ಬಯಸುವ ಯುವ ಸಮೂಹವವನ್ನು ಸೆಳೆಯುವ ವಿಶ್ವಾಸವನ್ನು ನೈಟ್‌ವಾಕರ್ ಹೊಂದಿದೆ. ಅತ್ಯಾಕರ್ಷಕ ವಿನ್ಯಾಸ ಹಾಗೂ ಆಹ್ಲಾದಕರ ಸುವಾಸನೆಯಿಂದ ನೈಟ್‌ವಾಕರ್ ಎನರ್ಜಿ ಡ್ರಿಂಕ್ ಸದಾ ಜಾಗರೂಕತೆಯಿಂದಿರಲು ಬಯಸುವ ಹಾಗೂ ತಡರಾತ್ರಿಯೂ ಉತ್ಸಾಹದಲ್ಲಿರುವ ಭಾರತೀಯರ ಮೊದಲ ಆಯ್ಕೆಯಾಗಿ ಹೊರಹೊಮ್ಮಿದೆ. 

For Business Enquiry:

sales.in@nightwalkerglobal.com

+91 89281 50066

Latest Videos
Follow Us:
Download App:
  • android
  • ios