ಆದಾಯ ತೆರಿಗೆ ವಿವರ ಸಲ್ಲಿಕೆಗೆ ಚಾಲನೆ: ಆನ್‌ಲೈನ್ ಮೂಲಕವೇ ಹೀಗೆ ಸಲ್ಲಿಸಿ..
ಮೊದಲ ಹಂತದಲ್ಲಿ ಐಟಿಆರ್ 1 ಮತ್ತು 4ರ ಫಾರಂ ಬಿಡುಗಡೆ ಮಾಡಲಾಗಿದೆ. ಶೀಘ್ರವೇ ಇತರೆ ಐಟಿಆರ್ / ಫಾರ್ಮ್‌ಗಳಿಗೂ ಪೋರ್ಟಲ್ ಮುಕ್ತಗೊಳಿಸಲಾಗುವುದು ಎಂದು ಹೇಳಿದೆ.
ನವದೆಹಲಿ (ಮೇ 24, 2023): 2022-23ನೇ ಸಾಲಿನಲ್ಲಿ ಫಾರ್ಮ್ 1 ಮತ್ತು ಫಾರ್ಮ್ 4ರ ಮೂಲಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವವರಿಗೆ, ಆದಾಯ ತೆರಿಗೆ ಇಲಾಖೆ ತನ್ನ ವೆಬ್‌ಸೈಟ್ ಅನ್ನು ಮುಕ್ತಗೊಳಿಸಿದೆ. ಹೀಗಾಗಿ ವೈಯಕ್ತಿಕ ತೆರಿಗೆದಾರರು, ವೃತ್ತಿಪರರು ಮತ್ತು ಸಣ್ಣ ಉದ್ಯಮಿಗಳು, ಇ- ಫೈಲಿಂಗ್ ಪೋರ್ಟಲ್ ಬಳಸಿಕೊಂಡು ಆನ್‌ಲೈನ್ ಮೂಲಕ ಮಾಹಿತಿ ಸಲ್ಲಿಕೆ ಮಾಡಬಹುದಾಗಿದೆ.
ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಆದಾಯ ತೆರಿಗೆ ಇಲಾಖೆ, ಮೊದಲ ಹಂತದಲ್ಲಿ ಐಟಿಆರ್ 1 ಮತ್ತು 4ರ ಫಾರಂ ಬಿಡುಗಡೆ ಮಾಡಲಾಗಿದೆ. ಶೀಘ್ರವೇ ಇತರೆ ಐಟಿಆರ್ / ಫಾರ್ಮ್‌ಗಳಿಗೂ ಪೋರ್ಟಲ್ ಮುಕ್ತಗೊಳಿಸಲಾಗುವುದು ಎಂದು ಹೇಳಿದೆ. ಮಾಹಿತಿ ತುಂಬಿ ಸಲ್ಲಿಸಲು ಜುಲೈ 31 ಕಡೆಯ ದಿನವಾಗಿದೆ.
ಇದನ್ನು ಓದಿ: ಬಿಬಿಸಿ ತೆರಿಗೆ ವಂಚನೆ ಪತ್ತೆ; ಲೆಕ್ಕಪತ್ರಗಳಲ್ಲಿ ಭಾರಿ ಲೋಪದೋಷ : ಐಟಿ ಇಲಾಖೆ
ಐಟಿಆರ್ 1ರ ಮೂಲಕ ವೇತನ ವರ್ಗ, ಹಿರಿಯ ನಾಗರಿಕರು ಸೇರಿದಂತೆ ವೈಯಕ್ತಿಕ ತೆರಿಗೆದಾರರು ಮಾಹಿತಿ ಸಲ್ಲಿಸಬಹುದು. ಐಟಿಆರ್ 2, ಉದ್ಯಮಿಗಳು, ವೃತ್ತಿಪರರರು ಮತ್ತು ವಾರ್ಷಿಕ 50 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದ ವೈಯಕ್ತಿಕ ತೆರಿಗೆದಾರರು ಮಾಹಿತಿ ಸಲ್ಲಿಸಬಹುದು.
ಇದನ್ನೂ ಓದಿ: ಉತ್ತರ ಪ್ರದೇಶದ ತರಕಾರಿ ಮಾರುವವನ ಖಾತೆಗೆ 172 ಕೋಟಿ ರೂ. ಜಮೆ: ಐಟಿ ಇಲಾಖೆ, ಪೊಲೀಸರಿಂದ ತನಿಖೆ