ಇನ್ಮುಂದೆ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಫೋನ್ ನಂಬರ್ ಕೇಳಂಗಿಲ್ಲ: ಕೇಂದ್ರ ಸರ್ಕಾರ ಸೂಚನೆ
ಮೊಬೈಲ್ ನಂಬರ್ ನೀಡುವವರೆಗೂ ಬಿಲ್ ಕೊಡಲಾಗುವುದಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ. ಆದರೆ ಗ್ರಾಹಕ ರಕ್ಷಣಾ ಕಾಯ್ದೆಯ ಪ್ರಕಾರ ಇದೊಂದು ಪಕ್ಷಪಾತ ಮತ್ತು ನಿರ್ಬಂಧಿತ ಮಾರಾಟ ಪ್ರಕ್ರಿಯೆಯಾಗಿದೆ ಎಂದು ಗ್ರಾಹಕ ವ್ಯವಹಾರ ಸಚಿವಾಲಯ ಹೇಳಿದೆ.
ನವದೆಹಲಿ (ಮೇ 24, 2023): ಸೇವೆಗಳನ್ನು ಒದಗಿಸುವ ಸಮಯದಲ್ಲಿ ಗ್ರಾಹಕರ ಮೊಬೈಲ್ ನಂಬರ್ ಕೇಳದಂತೆ ಅಂಗಡಿಕಾರರಿಗೆ ಗ್ರಾಹಕ ವ್ಯವಹಾರ ಸಚಿವಾಲಯ ಮಂಗಳವಾರ ಸೂಚನೆ ನೀಡಿದೆ. ಗ್ರಾಹಕರಿಂದ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
‘ಮೊಬೈಲ್ ನಂಬರ್ ನೀಡುವವರೆಗೂ ಬಿಲ್ ಕೊಡಲಾಗುವುದಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ. ಆದರೆ ಗ್ರಾಹಕ ರಕ್ಷಣಾ ಕಾಯ್ದೆಯ ಪ್ರಕಾರ ಇದೊಂದು ಪಕ್ಷಪಾತ ಮತ್ತು ನಿರ್ಬಂಧಿತ ಮಾರಾಟ ಪ್ರಕ್ರಿಯೆಯಾಗಿದೆ. ಅಲ್ಲದೇ ಇದರಲ್ಲಿ ಖಾಸಗಿತನದ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ಹಾಗಾಗಿ ಮೊಬೈಲ್ ನಂಬರ್‌ಗಳನ್ನು ಸಂಗ್ರಹಿಸದಂತೆ ಸೂಚನೆ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಆದಾಯ ತೆರಿಗೆ ವಿವರ ಸಲ್ಲಿಕೆಗೆ ಚಾಲನೆ: ಆನ್‌ಲೈನ್ ಮೂಲಕವೇ ಹೀಗೆ ಸಲ್ಲಿಸಿ..
ಮಾರಾಟವಾದ ಬಿಲ್‌ಗಳನ್ನು ನೀಡಲು ಮೊಬೈಲ್ ನಂಬರ್ ಒದಗಿಸಬೇಕು ಎಂಬುದು ಭಾರತದಲ್ಲಿ ಕಡ್ಡಾಯ ನಿಯಮವಲ್ಲ. ಅಲ್ಲದೇ ಮೊಬೈಲ್ ನಂಬರ್ ನೀಡುವ ಬದಲು ಯಾವುದೇ ಪರ್ಯಾಯ ಆಯ್ಕೆಯೂ ಇಲ್ಲ. ಹಾಗಾಗಿ ಹಲವು ಬಾರಿ ಗ್ರಾಹಕರು ಪೇಚಿಗೆ ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ.
ಇದನ್ನೂ ಓದಿ: 2000 ರೂ. ನೋಟು ಬದಲಾವಣೆಗೆ ಬ್ಯಾಂಕ್‌ಗಳಲ್ಲಿ ಐಡಿ ಕಾರ್ಡ್, ಗುರುತು ಚೀಟಿ ಕಡ್ಡಾಯ: ಕೆಲವೆಡೆ ನೋಟು ಬದಲಾವಣೆಗೆ ಅವಕಾಶವಿಲ್ಲ