ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಅಧಿಕ ಪಿಂಚಣಿ ಪಡೆಯಲು ಉದ್ಯೋಗಿಗಳು ಹಾಗೂ ಉದ್ಯೋಗದಾತ ಸಂಸ್ಥೆಗಳು ಜಂಟಿಯಾಗಿ ಅರ್ಜಿ ಸಲ್ಲಿಸಲು ಇಪಿಎಫ್ಒ ಮೇ 3ರ ತನಕ ಕಾಲಾವಕಾಶ ನೀಡಿದೆ. ಹಾಗಾದ್ರೆ ಇಪಿಎಸ್ ಹೆಚ್ಚಿನ ಪಿಂಚಣಿ ಯೋಜನೆ ಅಡಿಯಲ್ಲಿ ತಿಂಗಳಿಗೆ 18,857ರೂ. ಪಿಂಚಣಿ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ.
Business Desk:ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸದಸ್ಯರು ನಿವೃತ್ತಿ ಬಳಿಕ ಪಿಂಚಣಿ ಪಡೆಯಲು ಅರ್ಹತೆ ಹೊಂದಿದ್ದಾರೆ. ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಅಧಿಕ ಪಿಂಚಣಿ ಪಡೆಯಲು ಉದ್ಯೋಗಿಗಳು ಹಾಗೂ ಉದ್ಯೋಗದಾತ ಸಂಸ್ಥೆಗಳು ಜಂಟಿಯಾಗಿ ಅರ್ಜಿ ಸಲ್ಲಿಸಲು ಇಪಿಎಫ್ಒ ಮೇ 3ರ ತನಕ ಕಾಲಾವಕಾಶ ನೀಡಿದೆ. ಪ್ರಸ್ತುತ ಪ್ರತಿ ಉದ್ಯೋಗಿಯ ಮೂಲ ವೇತನ ಹಾಗೂ ದಿನ ಭತ್ಯೆಯ (ಡಿಎ) ಶೇ.12ರನ್ನು ಉದ್ಯೋಗದಾತ ಸಂಸ್ಥೆ ಇಪಿಎಫ್ ಗೆ ಕೊಡುಗೆ ನೀಡುತ್ತದೆ. ಇದರಲ್ಲಿ ಶೇ.8.33 ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಹಾಗೂ ಶೇ.3.67 ಉದ್ಯೋಗಿಗಳ ಭವಿಷ್ಯ ನಿಧಿಗೆ (ಇಪಿಎಫ್ ) ಹೋಗುತ್ತದೆ. ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ನಿವೃತ್ತಿ ಬಳಿಕ ಅಧಿಕ ಪಿಂಚಣಿ ಪಡೆಯಲು ಯಾರು ಅರ್ಹರಾಗಿದ್ದರೋ ಅಂಥ ಉದ್ಯೋಗಿಗಳಿಗೆ ಇಪಿಎಫ್ಒ ಫೆ.20ರಂದು ಮಾರ್ಗಸೂಚಿ ಬಿಡುಗಡೆಗೊಳಿಸಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅಧಿಕ ಪಿಂಚಣಿ ಕೋರಿ ಅರ್ಜಿ ಸಲ್ಲಿಸಲು ಇಪಿಎಫ್ ಒ ಅವಕಾಶ ನೀಡಿತ್ತು.2014ರ ಆಗಸ್ಟ್ 22ರಂದು ಇಪಿಎಸ್ ಪರಿಷ್ಕರಣೆ ಮಾಡಲಾಗಿದ್ದು, ಪಿಂಚಣಿ ಪಡೆಯಲು ವೇತನ ಮಿತಿಯನ್ನು ತಿಂಗಳಿಗೆ 6,500ರೂ.ನಿಂದ 15,000 ರೂ.ಗೆ ಏರಿಕೆ ಮಾಡಲಾಗಿದೆ. ಜೊತೆಗೆ ಉದ್ಯೋಗಿಗಳು ಹಾಗೂ ಉದ್ಯೋಗದಾತ ಸಂಸ್ಥೆಗಳು ಅವರ ವೇತನದ ಶೇ.8.33ರಷ್ಟನ್ನು ಇಪಿಎಸ್ ಗೆ ಕೊಡುಗೆಯಾಗಿ ನೀಡಲು ಅನುಮತಿ ನೀಡಲಾಗಿದೆ.
ಸುಪ್ರೀಂ ಕೋರ್ಟ್ ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ 2014 ಅನ್ನು ಸಮರ್ಥಿಸಿ 2022ರ ನವೆಂಬರ್ 4ರಂದು ತೀರ್ಪು ಪ್ರಕಟಿಸಿತ್ತು. ಈ ತೀರ್ಪನ್ನು ಎಲ್ಲ ಕಚೇರಿಗಳು ಜಾರಿ ಮಾಡಬೇಕೆಂದು ಇಪಿಎಫ್ ಒ ಸೂಚನೆ ನೀಡಿತ್ತು ಕೂಡ. ಇಪಿಎಫ್ಒ ಮಾರ್ಗಸೂಚಿ ಅನ್ವಯ 5,000ರೂ. ಅಥವಾ 6,500 ರೂ. ವೇತನ ಮಿತಿ ಮೀರಿದ ಇಪಿಎಫ್ಒಗೆ ಕೊಡುಗೆ ನೀಡಿದ ಎಲ್ಲ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಅಧಿಕ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬಹುದು. ಇನ್ನು ನಿವೃತ್ತಿಗೂ ಮುನ್ನ ಅಧಿಕ ಪಿಂಚಣಿ ಆಯ್ಕೆ ಮಾಡಿಕೊಂಡವರು ಹಾಗೂ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಅಡಿಯಲ್ಲಿ ಅಧಿಕ ವೇತನದ ಕೊಡುಗೆ ನೀಡಿದ ಉದ್ಯೋಗಿಗಳು ಕೂಡ ಅಧಿಕ ಪಿಂಚಣಿ ಸೌಲಭ್ಯ ಪಡೆಯಲು ಅರ್ಹರು. 2014ರ ಸೆಪ್ಟೆಂಬರ್ 1ರಂದು ಇಪಿಎಸ್ ಸದಸ್ಯರಾಗಿರುವ ಉದ್ಯೋಗಿಗಳು 1995ರ ನಿಯಮ 11(3) ಅನ್ವಯ ಹೆಚ್ಚು ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ ಎಂದು ಇಪಿಎಫ್ಒ ತಿಳಿಸಿದೆ. ಇವರು ತಮ್ಮ ವೇತನದ ಶೇ.8.33ರಷ್ಟನ್ನು ಪಿಂಚಣಿಗೆ ಕೊಡುಗೆಯಾಗಿ ನೀಡಬಹುದು.ಇನ್ನು 2014ರ ಸೆಪ್ಟೆಂಬರ್ 1ಕ್ಕಿಂತ ಮುನ್ನ ನಿವೃತ್ತಿ ಹೊಂದಿದ ಹಾಗೂ ಅಧಿಕ ಪಿಂಚಣಿ ಆಯ್ಕೆ ಮಾಡದ ಉದ್ಯೋಗಿಗಳು ಈ ಸೌಲಭ್ಯ ಪಡೆಯಲು ಅರ್ಹರಾಗಿಲ್ಲ.
ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್ ಚೆಕ್ ಮಾಡಲು ಇಲ್ಲಿವೆ ಸರಳ ವಿಧಾನಗಳು
ಎಷ್ಟು ಪಿಂಚಣಿ ಪಡೆಯಬಹುದು?
ಇಪಿಎಫ್ ಒ ಅಧಿಕ ಪಿಂಚಣಿ ಯೋಜನೆಗೆ ಸೇರ್ಪಡೆಗೊಂಡರೆ ನೀವು ಎಷ್ಟು ಪಿಂಚಣಿ ಪಡೆಯಬಹುದು? ಇದನ್ನು ಒಂದು ನಿದರ್ಶನದ ಮೂಲಕ ನೋಡೋಣ. ಉದಾಹರಣೆಗೆ ನಿಮ್ಮ ಮೂಲವೇತನ (Basic Salary) ತಿಂಗಳಿಗೆ 40,000ರೂ. ಇದೆ ಎಂದು ಭಾವಿಸೋಣ. ಈಗ ನಿಮ್ಮ ಮೂಲವೇತನದ ಶೇ.12 ಅಥವಾ 4,800 ರೂ. ಅನ್ನು ನಿಮ್ಮ ಇಪಿಎಫ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಇನ್ನು ಉದ್ಯೋಗದಾತ ಕಂಪನಿಯ ಕೊಡುಗೆ 1250ರೂ. ಕೂಡ ನಿಮ್ಮ ಇಪಿಎಸ್ ಗೆ ಬರುತ್ತದೆ. ಇನ್ನು ಕಂಪನಿಯ ಉಳಿದ ಕೊಡುಗೆ 3550ರೂ. ನಿಮ್ಮ ಇಪಿಎಫ್ ಖಾತೆಗೆ ಬರುತ್ತದೆ. ಇಪಿಎಫ್ ಖಾತೆಗೆ ನಿಮ್ಮಷ್ಟೇ ಅಂದ್ರೆ ಶೇ.12ರಷ್ಟು ಕೊಡುಗೆಯನ್ನು ಕಂಪನಿ ಕೂಡ ನೀಡುತ್ತದೆ.
ನಿಮ್ಮ ಬ್ಯಾಂಕ್ ಖಾತೆಯಿಂದ 436ರೂ. ಕಡಿತವಾಗಿದೆಯಾ? ಏಕೆ ಗೊತ್ತ?
ಈಗ ನೀವು ಅಧಿಕ ಪಿಂಚಣಿ ಆಯ್ಕೆ ಮಾಡಿಕೊಂಡರೆ, ನಿವೃತ್ತಿ ಬಳಿಕ ನಿಮಗೆ ನೀಡುವ ಪಿಂಚಣಿಯನ್ನು ನಿಮ್ಮ ಮೂಲವೇತನ ಪ್ಲಸ್ ದಿನ ಭತ್ಯೆ (ಡಿಎ) ಆಧರಿಸಿರುತ್ತದೆ. ಉದಾಹರಣೆಗೆ ನಿವೃತ್ತಿ ಸಮಯದಲ್ಲಿ ನಿಮ್ಮ ಸರಾಸರಿ ಪಿಂಚಣಿ ವೇತನ (ಮೂಲವೇತನ +ಡಿಎ) ಕಳೆದ 60 ತಿಂಗಳಲ್ಲಿ 40,000ರೂ. ಆಗಿದ್ದರೆ ನಿಮಗೆ 18,857 ರೂ. ಪಿಂಚಣಿ ಸಿಗುತ್ತದೆ.
