Asianet Suvarna News Asianet Suvarna News

EPFO Nomination Filing:ಉದ್ಯೋಗಿಗಳೇ ಗಮನಿಸಿ, ಇಪಿಎಫ್ಒ ಇ-ನಾಮಿನೇಷನ್ ಫೈಲ್ ಮಾಡಲು ಡಿ.31 ಕೊನೆಯ ದಿನಾಂಕವಲ್ಲ

*ಇಪಿಎಫ್ಒ ಇ-ನಾಮಿನೇಷನ್ ಸಲ್ಲಿಕೆಗೆ ಈ ಹಿಂದೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿತ್ತು
*EPFO ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಗಡುವು ವಿಸ್ತರಣೆ
*ಇ-ನಾಮಿನೇಷನ್ ಸಲ್ಲಿಕೆಗೆ ಕೊನೆಯ ದಿನಾಂಕವನ್ನುಇನ್ನೂ ಬಹಿರಂಗಪಡಿಸಿಲ್ಲ
 

EPFO extended the deadline for filing of e-nomination from December 31 anu
Author
Bangalore, First Published Dec 30, 2021, 7:50 PM IST

ನವದೆಹಲಿ (ಡಿ.30):  ಅನೇಕ ಪಿಎಫ್ ಚಂದಾದಾರರು (PF Subscribers) ಇಪಿಎಫ್ ಪೋರ್ಟಲ್ ನಲ್ಲಿ( EPF Portal) ತಾಂತ್ರಿಕ ತೊಂದರೆಗಳನ್ನು ಅನುಭವಿಸಿದ ಹಿನ್ನೆಲೆಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(Employee Provident Fund Organisation) ಇ-ನಾಮಿನೇಷನ್ ಸಲ್ಲಿಕೆ ಮಾಡೋ ಅವಧಿಯನ್ನು ವಿಸ್ತರಿಸಿದೆ. ಈ ಹಿಂದೆ ಇ-ನಾಮಿನೇಷನ್ (e-nomination)ಸಲ್ಲಿಕೆಗೆ ಡಿಸೆಂಬರ್ 31ಕೊನೆಯ ದಿನಾಂಕವಾಗಿತ್ತು. ಆದ್ರೆ EPFO ಪೋರ್ಟಲ್ ನಲ್ಲಿನ ತಾಂತ್ರಿಕ ದೋಷಗಳ ಬಗ್ಗೆ ಅನೇಕರು ದೂರಿದ್ದರು.ಈ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ಬಳಿಕವೂ ಇ-ನಾಮಿನೇಷನ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗೋದು ಎಂದು  EPFO ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಆದ್ರೆ ನಾಮಿನಿ ಸೇರ್ಪಡೆಗೆ ನಿರ್ದಿಷ್ಟ ಕೊನೆಯ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ.ಇಪಿಎಫ್ ಗೆ ಇ-ನಾಮಿನೇಷನ್ ಸೇರ್ಪಡೆ ಅವಧಿ ವಿಸ್ತರಿಸಿದ್ದರೂ ಪಿಎಫ್ ಖಾತೆದಾರರು ಆದಷ್ಟು ಬೇಗ ಈ ಕೆಲಸವನ್ನು ಮಾಡಿ ಮುಗಿಸುವಂತೆ  EPFO ಟ್ವೀಟ್ ಮೂಲಕ ಮನವಿ ಮಾಡಿದೆ. 

ಭಾರತದಲ್ಲಿ ವೇತನ ಪಡೆಯುತ್ತಿರೋ ಎಲ್ಲ ಉದ್ಯೋಗಿಗಳು(employees) ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ( EPFO) ಒಂದು ಖಾತೆ(account) ಹೊಂದಿರುತ್ತಾರೆ. ಪ್ರತಿ ತಿಂಗಳು ಅವರ ವೇತನದ(Salary) ಒಂದು ನಿರ್ದಿಷ್ಟ ಭಾಗ ಈ ಖಾತೆಗೆ ಜಮೆ ಆಗುತ್ತದೆ. ಜೊತೆಗೆ ಅವರು ಕಾರ್ಯನಿರ್ವಹಿಸುತ್ತಿರೋ ಸಂಸ್ಥೆ ಕೂಡ ಅಷ್ಟೇ ಮೊತ್ತದ ಹಣವನ್ನು ಜಮೆ ಮಾಡುತ್ತದೆ.  ಪಿಎಫ್ ಉದ್ಯೋಗಿಯ ಉಳಿತಾಯ (Savings)ಹಾಗೂ ನಿವೃತ್ತಿ ಯೋಜನೆಯ ಭಾಗವೇ ಆಗಿದೆ.

KYC Update Deadline Extended:ಬ್ಯಾಂಕ್ ಖಾತೆದಾರರಿಗೆ ಗುಡ್ ನ್ಯೂಸ್; ಕೆವೈಸಿ ದಾಖಲೆ ಸಲ್ಲಿಕೆ ಗಡುವು ಮಾ.31ಕ್ಕೆ ವಿಸ್ತರಣೆ

ಇತ್ತೀಚಿಗಿನ ವರದಿ ಪ್ರಕಾರ EPFOಗೆ ಅಕ್ಟೋಬರ್ ನಲ್ಲಿ ಒಟ್ಟು 12.73ಲಕ್ಷ ಹೊಸ ಸದಸ್ಯರ ನೋಂದಣಿಯಾಗಿದೆ.  2017 ಸಪ್ಟೆಂಬರ್ ನಿಂದ 2021ರ ಅಕ್ಟೋಬರ್ ತನಕ ಸುಮಾರು 4.79 ಕೋಟಿ ಹೊಸ ಚಂದಾದಾರರು ಇಪಿಎಫ್ ಗೆ ಸೇರ್ಪಡೆಗೊಂಡಿದ್ದಾರೆ. ಕೊರೋನಾ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಇಪಿಎಫ್ ಗೆ ಹೆಚ್ಚಿನ ಸದಸ್ಯರು ಸೇರ್ಪಡೆಗೊಂಡಿದ್ದಾರೆ. ಈ ವರ್ಷದ ಮಾರ್ಚ್ ನಲ್ಲಿ ಕೊರೋನಾ ಎರಡನೇ ಅಲೆ ದೇಶಕ್ಕೆ ಅಪ್ಪಳಿಸಿತ್ತು. ಈ ಹಿನ್ನೆಲೆಯಲ್ಲಿ ಕೆಲವು ತಿಂಗಳ ಕಾಲ ಲಾಕ್ ಡೌನ್ ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಯಲ್ಲಿದ್ದವು. ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆ ಉದ್ಯೋಗಕ್ಕೆ ಸೇರ್ಪಡೆಗೊಂಡವರ ಸಂಖ್ಯೆ ಹೆಚ್ಚಿದ್ದು, ಹೊಸ ಖಾತೆದಾರರ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. 

GST Returns: 2020-21ನೇ ಆರ್ಥಿಕ ಸಾಲಿನ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆ ಗಡುವು ಫೆಬ್ರವರಿ 28ರ ತನಕ ವಿಸ್ತರಣೆ

ನಾಮಿನಿ ಏಕೆ ಅಗತ್ಯ?
ಕೆಲವರು ಉದ್ಯೋಗ ಸಿಕ್ಕ ಸಂದರ್ಭದಲ್ಲಿ ಇಪಿಎಫ್ ಗೆ ಸೇರ್ಪಡೆಗೊಳ್ಳುವಾಗ ನಾಮಿನಿ ಹೆಸರನ್ನು ಸೇರಿಸೋದಿಲ್ಲ. ಇದ್ರಿಂದ ಪಿಎಫ್ ಖಾತೆದಾರ ಅಕಾಲಿಕಾ ಮರಣ ಹೊಂದಿದ ಸಂದರ್ಭದಲ್ಲಿಆತನ ಪಿಎಫ್ ಖಾತೆಯಲ್ಲಿರೋ ಹಣ ಹಿಂಪಡೆಯಲು ಕುಟುಂ ಸದಸ್ಯರು ಪರದಾಡಬೇಕಾಗುತ್ತದೆ. ಅಲ್ಲದೆ, ವಿಮೆ ಸೇರಿದಂತೆ ಕೆಲವು ಸೌಲಭ್ಯಗಳು ಕೂಡ ಸಿಗೋದಿಲ್ಲ. ಅದೇ ಪಿಎಫ್  ಗೆ ನಾಮಿನಿ ಸೇರ್ಪಡೆ ಮಾಡಿದ್ರೆ ಒಂದು ವೇಳೆ ಪಿಎಫ್ ಖಾತೆದಾರ ಅಕಾಲಿಕಾ ಮರಣ ಹೊಂದಿದ್ರೆ ಆತನ ನಾಮಿನಿಗೆ ವಿಮೆ ಹಾಗೂ ಪಿಎಫ್ ನ ಇತರ ಸೌಲಭ್ಯಗಳು ಸಿಗುತ್ತವೆ. ಆದಕಾರಣ ಪಿಎಫ್ ಗೆ ನಾಮಿನಿ ಸೇರಿಸೋದು ಅಷ್ಟೊಂದು ಮುಖ್ಯವಾದ ಕೆಲಸವಲ್ಲ ಎಂದು ಭಾವಿಸಿ ನಿರ್ಲಕ್ಷ್ಯ ಮಾಡಬೇಡಿ. ಇದ್ರಿಂದ ಮುಂದೆ ನಿಮ್ಮನ್ನೇ ನಂಬಿಕೊಂಡಿರೋ ಕುಟುಂಬ ಸದಸ್ಯರು ತೊಂದರೆ ಅನುಭವಿಸೋ ಸಾಧ್ಯತೆ ಇರುತ್ತದೆ. ಇಪಿಎಫ್ ಗೆ ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರ್ಪಡೆ ಮಾಡಲು ಕೂಡ ಅವಕಾಶವಿದೆ. ' ಪಿಎಫ್ ಚಂದಾದಾರರು ಆನ್ಲೈನ್ ಪಿಎಫ್, ಪಿಂಚಣಿ (pension)ಹಾಗೂ ಇನ್ಯುರೆನ್ಸ್(insurance) ಸೇವೆಗಳ ಮೂಲಕ ತಮ್ಮ ಸಂಗಾತಿ(Spouse), ಮಕ್ಕಳು(Children) ಹಾಗೂ ಪೋಷಕರನ್ನು(Parents) ಸಂರಕ್ಷಿಸಲು ನಾಮಿನೇಷನ್(Nomination) ನೋಂದಣಿ ಮಾಡೋದು ಅತೀಮುಖ್ಯ' ಎಂದು EPFO ತಿಳಿಸಿದೆ.  EPFO ಅಧಿಕೃತ ವೆಬ್ ಸೈಟ್ epfindia.gov.in ನಲ್ಲಿಇ-ನಾಮಿನೇಷನ್ ಸಲ್ಲಿಕೆ ಮಾಡಬಹುದು. 
 

Follow Us:
Download App:
  • android
  • ios