ಆಧಾರ್‌ಗೆ ಪ್ಯಾನ್ ಲಿಂಕ್ ಮಾಡಲು ನಾಳೆ ಕಡೆಯ ದಿನ: ಕೆಲವೇ ಕ್ಷಣಗಳಲ್ಲಿ ಲಿಂಕ್ ಮಾಡುವುದು ಹೀಗೆ..
ಬ್ಯಾಂಕ್ ಖಾತೆ ತೆರೆಯಲು, ನಿಗದಿತ ಠೇವಣಿಗಳಲ್ಲಿ ಹೂಡಿಕೆ ಮಾಡಲು, ಡಿಮ್ಯಾಟ್ ಅಕೌಂಟ್‌ಗಳನ್ನು ತೆರೆಯಲು ಪ್ಯಾನ್ ಕಾರ್ಡ್ ಅವಶ್ಯಕವಾಗಿದ್ದು, ಒಂದು ವೇಳೆ ಜೂನ್ 30ರೊಳಗೆ ಜೋಡಣೆ ಮಾಡದಿದ್ದರೆ ಈ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ನವದೆಹಲಿ (ಜೂನ್ 29, 2023): ಆಧಾರ್ ಕಾರ್ಡ್ ನಂಬರ್‌ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ನೀಡಲಾಗಿರುವ ಅವಧಿ ಮುಕ್ತಾಯವಾಗಲು ಇನ್ನು ಕೇವಲ 3 ದಿನ ಬಾಕಿ ಉಳಿದಿದೆ. ಜೂನ್ 30ರೊಳಗೆ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ಅಮಾನ್ಯವಾಗಲಿದೆ. 1 ಸಾವಿರ ರೂ. ದಂಡದೊಂದಿಗೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು ನೀಡಲಾಗಿದ್ದ ಅವಧಿ ಜೂನ್ 30ಕ್ಕೆ ಮುಕ್ತಾಯವಾಗಲಿದೆ. ಇದಾದ ಬಳಿಕ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದ್ದು, ಬ್ಯಾಂಕಿಂಗ್ ವ್ಯವಹಾರ ಸೇರಿದಂತೆ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಸಮಸ್ಯೆಯಾಗಲಿದೆ.
ಬ್ಯಾಂಕ್ ಖಾತೆ ತೆರೆಯಲು, ನಿಗದಿತ ಠೇವಣಿಗಳಲ್ಲಿ ಹೂಡಿಕೆ ಮಾಡಲು, ಡಿಮ್ಯಾಟ್ ಅಕೌಂಟ್‌ಗಳನ್ನು ತೆರೆಯಲು ಪ್ಯಾನ್ ಕಾರ್ಡ್ ಅವಶ್ಯಕವಾಗಿದ್ದು, ಒಂದು ವೇಳೆ ಜೂನ್ 30ರೊಳಗೆ ಜೋಡಣೆ ಮಾಡದಿದ್ದರೆ ಈ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಇದನ್ನು ಓದಿ: ಆಧಾರ್, ಪಾನ್ ಜೋಡಣೆಗೆ ಕೇವಲ 6 ದಿನ ಬಾಕಿ; ತಪ್ಪಿದರೆ ಪಾನ್ ಅಮಾನ್ಯ: ಬ್ಯಾಂಕ್ ವ್ಯವಹಾರವೂ ಇಲ್ಲ..!
ಅಲ್ಲದೇ ಈ ದಿನಾಂಕದ ಬಳಿಕ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಿಸಲು ಸುಮಾರು 10 ಸಾವಿರ ರೂ. ಖರ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಆಧಾರ್ ಪ್ಯಾನ್ ಜೋಡಣೆಗೆ ನೀಡಲಾಗಿದ್ದ ಅಂತಿಮ ದಿನವನ್ನು ಮಾರ್ಚ್ 31ರಿಂದ ಜೂನ್ 30ಕ್ಕೆ ಮುಂದೂಡಲಾಗಿತ್ತು.
ಆಧಾರ್ ಪ್ಯಾನ್ ಲಿಂಕ್ ಮಾಡುವುದು ಹೇಗೆ?
ಆಧಾರ್ ಮತ್ತು ಪ್ಯಾನ್ ನಂಬರ್‌ಗಳನ್ನು ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆ 2 ವಿಧಾನಗಳನ್ನು ನೀಡಿದ್ದು, ಇದರ ಮೂಲಕ ಆಧಾರ್ ಮತ್ತು ಪ್ಯಾನ್ ಜೋಡಣೆ ಮಾಡಿಕೊಳ್ಳಬಹುದು.
ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ (https://www.incometax.gov.in/iec/foportal/) ಗೆ ಹೋಗಿ ಅದರಲ್ಲಿ ಸ್ಕ್ರೀನ್‌ನ ಎಡಭಾಗದಲ್ಲಿ ಮೇಲ್ಭಾಗದಲ್ಲಿರುವ ‘ಕ್ವಿಕ್ ಲಿಂಕ್ಸ್’ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಲಿಂಕ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳುವ ಮಾಹಿತಿಗಳನ್ನು ತುಂಬುವ ಮೂಲಕ ಲಿಂಕ್ ಮಾಡಬಹುದು. ಇಲ್ಲವೇ, UIDPAN ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು ಆಧಾರ್ ನಂಬರ್ ಬಳಿಕ ಸ್ಪೇಸ್ ಕೊಟ್ಟು ಪಾನ್ ಕಾರ್ಡ್ ನಂಬರ್ ಟೈಪ್ ಮಾಡಿ 567678 ಅಥವಾ 56161 ಗೆ ಎಸ್‌ಎಂಎಸ್ ಕಳುಹಿಸಬೇಕು.
ಇದನ್ನೂ ಓದಿ: ಜನನ ಪ್ರಮಾಣಪತ್ರ ಜತೆಗೇ ಬರಲಿದೆ Aadhar Card: ಶೀಘ್ರ ಎಲ್ಲ ರಾಜ್ಯಗಳಿಗೂ ವಿಸ್ತರಣೆ