ಆಧಾರ್‌, ಪಾನ್‌ ಜೋಡಣೆಗೆ ಕೇವಲ 6 ದಿನ ಬಾಕಿ; ತಪ್ಪಿದರೆ ಪಾನ್‌ ಅಮಾನ್ಯ: ಬ್ಯಾಂಕ್‌ ವ್ಯವಹಾರವೂ ಇಲ್ಲ..!

ಆಧಾರ್‌ ಪಾನ್‌ ಜೋಡಣೆಗೆ 6 ದಿನ ಬಾಕಿ ಇದ್ದು, ಮಾರ್ಚ್‌ 31 ಕೊನೆ ದಿನ ಆಗಿದ್ದು, ತಪ್ಪಿದರೆ ಪಾನ್‌ ಅಮಾನ್ಯ ಆಗಲಿದೆ. ಅಲ್ಲದೆ, ಏಪ್ರಿಲ್‌ 1ರಿಂದ ಬ್ಯಾಂಕ್‌ ವ್ಯವಹಾರವೂ ಸಾಧ್ಯವಿಲ್ಲ ಎನ್ನಲಾಗಿದೆ. ಹಾಗೆ, 6 ದಿನದಲ್ಲಿ ಲಿಂಕ್‌ ಮಾಡಲು 1000 ರೂ. ದಂಡ ವಿಧಿಸಲಾಗಿದೆ.

just 6 days left to link pan with aadhaar card what are its after effects ash

ಮುಂಬೈ (ಮಾರ್ಚ್‌ 26, 2023): ಆಧಾರ್‌ ನಂಬರ್‌ ಮತ್ತು ಪಾನ್‌ ಕಾರ್ಡ್‌ ಜೋಡಣೆಗೆ ಇನ್ನು 6 ದಿನಗಳು ಮಾತ್ರ ಬಾಕಿ ಇದ್ದು, ಈ ಅವಧಿಯೊಳಗೆ ಜೋಡಣೆಯಾಗದಿದ್ದರೆ ಪಾನ್‌ ಕಾರ್ಡ್‌ ಅಮಾನ್ಯವಾಗಲಿದೆ. ಜೊತೆಗೆ ಬ್ಯಾಂಕ್‌ ವ್ಯವಹಾರಗಳು ಕೂಡಾ ಸಾಧ್ಯವಾಗದು. ಅಲ್ಲದೇ ತೆರಿಗೆ ಪಾವತಿಸುವಾಗ ಹೆಚ್ಚುವರಿಯಾಗಿ ಶೇ.10 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ತೆರಿಗೆ ಮಂಡಳಿಯ ಪ್ರಕಾರ ಮಾರ್ಚ್‌ 31ರೊಳಗೆ 1 ಸಾವಿರ ರೂ. ಪಾವತಿ ಮಾಡುವ ಮೂಲಕ ಆಧಾರ್‌ ಮತ್ತು ಪಾನ್‌ ಜೋಡಣೆ ಮಾಡಿಕೊಳ್ಳಬಹುದಾಗಿದೆ. ಈ ಅವಧಿ ಮೀರಿದ ಬಳಿಕ ಪಾನ್‌ ಕಾರ್ಡ್‌ ಅಮಾನ್ಯವಾಗಲಿದ್ದು, ಮತ್ತೊಮ್ಮೆ ಇದನ್ನು ಸರಿಪಡಿಸಿಕೊಳ್ಳಲು 10 ಸಾವಿರ ರೂ ಪಾವತಿಸಬೇಕಾಗುತ್ತದೆ. ಕಳೆದ ವರ್ಷ ಮಾರ್ಚ್‌ 31ರವರೆಗೆ ಪಾನ್‌ ಆಧಾರ್‌ ಜೋಡಣೆಗೆ ಉಚಿತ ಅವಕಾಶ ನೀಡಲಾಗಿತ್ತು. ಆದರೆ ಬಹಳಷ್ಟು ಮಂದಿ ಜೋಡಣೆ ಮಾಡಿಕೊಳ್ಳದ ಕಾರಣ ಈ ಅವಧಿಯನ್ನು 1 ಸಾವಿರ ರೂ. ದಂಡ ಪಾವತಿಯೊಂದಿಗೆ 1 ವರ್ಷಗಳ ಕಾಲ ಮುಂದೂಡಲಾಗಿತ್ತು. ಮತ್ತೊಮ್ಮೆ ಈ ಅವಧಿಯನ್ನು ಮುಂದೂಡುವ ಸಾಧ್ಯತೆಗಳನ್ನು ಮೂಲಗಳು ತಳ್ಳಿಹಾಕಿವೆ.

ಇದನ್ನು ಓದಿ: ಉರಿಗೌಡ, ನಂಜೇಗೌಡ ಆಧಾರ್‌ ಕಾರ್ಡ್‌, ವೋಟರ್‌ ಐಡಿ ಬಿಡುಗಡೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕೋಲಾರ ತಂಡ ವ್ಯಂಗ್ಯ

ಒಂದು ವೇಳೆ ನಿಗದಿತ ಅವಧಿಯೊಳಗೆ ಜೋಡಣೆ ಮಾಡದೇ ಇದ್ದರೆ ಶೇ.10 ರಷ್ಟು ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ ಹಾಗೂ ಪಾನ್‌ ಕಾರ್ಡ್‌ ಅಮಾನ್ಯವಾಗುತ್ತದೆ. ಉದಾಹರಣೆಗೆ 10 ಲಕ್ಷ ಆದಾಯ ಇದ್ದವರು ಶೇ.10 ರಷ್ಟು ಟಿಡಿಎಸ್‌ ಕಟ್ಟಬೇಕು. ಒಂದು ವೇಳೆ ಪಾನ್‌ ಆಧಾರ್‌ ಜೋಡಣೆ ಆಗದಿದ್ದರೆ ಆಗ ಅವರು ಶೇ. 20 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ಆಧಾರ್‌ ಮತ್ತು ಪಾನ್‌ ಕಾರ್ಡ್‌ ಜೋಡಣೆಯಿಂದ ಜಮ್ಮು ಕಾಶ್ಮೀರ, ಅಸ್ಸಾಂ, ಮೇಘಾಲಯದ ಜನರಿಗೆ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ 1961 ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಅನಿವಾಸಿ ಭಾರತೀಯರಿಗೆ, ಭಾರತೀಯ ಪ್ರಜೆಗಳಲ್ಲದವರಿಗೆ ವಿನಾಯಿತಿ ನೀಡಲಾಗಿದೆ. ಜೊತೆಗೆ 80 ವರ್ಷ ಮೀರಿದವರಿಗೂ ಇದರಿಂದ ವಿನಾಯ್ತಿ ನೀಡಲಾಗಿದೆ.

ಇದನ್ನೂ ಓದಿ: ಜನನ ಪ್ರಮಾಣಪತ್ರ ಜತೆಗೇ ಬರಲಿದೆ Aadhar Card: ಶೀಘ್ರ ಎಲ್ಲ ರಾಜ್ಯಗಳಿಗೂ ವಿಸ್ತರಣೆ

Latest Videos
Follow Us:
Download App:
  • android
  • ios