Social Media Influencers :ಭಾರತದ ಕಂಪನಿಗಳಿಗೆ ಮೂನ್ ಲೈಟ್ ಬಳಿಕ ಹೊಸ ಸವಾಲು?

ಕೋವಿಡ್ ಬಳಿಕ ಕೆಲವು ಕಂಪನಿಗಳು ಮೂನ್ ಲೈಟ್ ಹೆಸರಿನಲ್ಲಿ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ಆದರೆ, ಮುಂದಿನ ದಿನಗಳಲ್ಲಿ ಭಾರತೀಯ ಕಂಪನಿಗಳಿಗೆ ಇಂಥದ್ದೇ ಇನ್ನೊಂದು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಆಗಿ ಬದಲಾಗುತ್ತಿರುವ ಉದ್ಯೋಗಿಗಳು ಕಂಪನಿಗಳಿಗೆ ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 

Employees turning social media influencers is the next India Inc challenge after moonlighting anu

Business Desk:ಪ್ರಭಾವಶಾಲಿ (ಇನ್ ಫ್ಲುಯೆನ್ಸರ್ ) ಮಾರ್ಕೆಟಿಂಗ್ ಉದ್ಯಮ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ. ಈ ಉದ್ಯಮ ಮುಂದಿನ ಐದು ವರ್ಷಗಳಲ್ಲಿ ಉತ್ತಮ ಬೆಳವಣಿಗೆ ಕಾಣುವ ನಿರೀಕ್ಷೆಯಿದ್ದು, ವಾರ್ಷಿಕ ಶೇ.25 ಬೆಳವಣಿಗೆ ದರದಲ್ಲಿ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ. 2021ರಲ್ಲಿ ಈ ಉದ್ಯಮದ ಮೌಲ್ಯ 900 ಕೋಟಿ ರೂ. ಇದ್ದು, 2025ರ ವೇಳೆಗೆ 2,200 ಕೋಟಿ ರೂ. ತಲುಪುವ ನಿರೀಕ್ಷೆಯಿದೆ ಎಂದು ಪ್ರಭಾವಶಾಲಿ (ಇನ್ ಫ್ಲುಯೆನ್ಸರ್ ) ಮಾರ್ಕೆಟಿಂಗ್ ಉದ್ಯಮ ವರದಿ 2022 ತಿಳಿಸಿದೆ. ಕೋವಿಡ್-19 ಪೆಂಡಾಮಿಕ್ ಬಳಿಕ ಮೂನ್ ಲೈಟಿಂಗ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವು ಕಂಪನಿಗಳು ಮೂನ್ ಲೈಟ್ ಹೆಸರಿನಲ್ಲಿ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಿವೆ ಕೂಡ. ಆದರೆ, ಇನ್ ಸ್ಟಾಗ್ರಾಮ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಕೂಡ ಕೆಲವು ಉದ್ಯೋಗಿಗಳು ಆದಾಯದ ಜೊತೆಗೆ ಹೆಸರು ಕೂಡ ಗಳಿಸುತ್ತಿದ್ದಾರೆ. ಇಂದು ಯೂಟ್ಯೂಬ್ ಚಾನೆಲ್ ಹೊಂದಿರೋರ ಸಂಖ್ಯೆ ಹೆಚ್ಚಿದೆ. ಬಹುತೇಕರು ಇದನ್ನು ಪೂರ್ಣಾವಧಿಯ ವೃತ್ತಿಯಾಗಿ ಮಾಡುತ್ತಿಲ್ಲ. ಬದಲಿಗೆ ಹೆಚ್ಚುವರಿ ಆದಾಯದ ಮೂಲವಾಗಿ  ವೃತ್ತಿಯ ಜೊತೆಗೆ ಇದನ್ನು ಮುಂದುವರಿಸುತ್ತಿದ್ದಾರೆ. ಆದರೆ, ಭಾರತದ ಕಂಪನಿಗಳಿಗೆ ಮುಂದಿನ ದಿನಗಳಲ್ಲಿ ಇದು ಮೂನ್ ಲೈಟ್ ನಂತೆ ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದು ಹೇಗೆ?

ಸಾಮಾಜಿಕ ಮಾಧ್ಯಮ ಇನ್ ಫ್ಲುಯೆನ್ಸರ್ ಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಅದರಲ್ಲೂ ಮೆಟಾ ಒಡೆತನದ ಇನ್ ಸ್ಟಾಗ್ರಾಮ್ ಉದ್ಯೋಗಿಗಳಿಗೆ ತಮ್ಮ ಮಾರ್ಕೆಟಿಂಗ್ ಮೂಲಕ ಒಂದಿಷ್ಟು ಆದಾಯ ಗಳಿಸಲು ಕೂಡ ನೆರವು ನೀಡುತ್ತಿದೆ. ರೀಲ್ಸ್ ಜೊತೆಗೆ ಆರೋಗ್ಯ, ಸೌಂದರ್ಯ, ಶಾಪಿಂಗ್, ಮಕ್ಕಳ ಪಾಲನೆ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿ ವಿಡಿಯೋಗಳನ್ನು ಸೃಷ್ಟಿಸಿ ಅದನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಅನೇಕರು ಆದಾಯ ಗಳಿಸುತ್ತಿದ್ದಾರೆ. ಇನ್ ಸ್ಟಾಗ್ರಾಮ್ ಇನ್ ಫ್ಲುಯೆನ್ಸರ್ ಗಳಿಗೆ ದೇಶ, ಸ್ಪಾನ್ಸರ್ ಹಾಗೂ ಫಾಲೋವರ್ಸ್ ಗಳನ್ನು ಆಧರಿಸಿ ಪಾವತಿ ಮಾಡಲಾಗುತ್ತದೆ. 10,000ಕ್ಕಿಂತ ಕಡಿಮೆ ಫಾಲೋವರ್ಸ್ ಹೊಂದಿರುವ ಬಳಕೆದಾರರಿಗೆ ಪ್ರತಿ ಪೋಸ್ಟ್ ಗೆ ಸುಮಾರು $88 ಪಾವತಿಸಲಾಗುತ್ತದೆ. ಇನ್ನು ಒಂದು ಲಕ್ಷಕ್ಕಿಂತ ಕಡಿಮೆ ಫಾಲೋವರ್ಸ್ ಹೊಂದಿರೋರಿಗೆ ಪ್ರತಿ ಪೋಸ್ಟ್ ಮೇಲೆ $200 ಪಾವತಿಸಲಾಗುತ್ತದೆ ಎಂದು ಮಾಧ್ಯಮ ಸಂಸ್ಥೆ ಇನ್ ಫ್ಲುಯೆನ್ಸರ್ ಮಾರ್ಕೆಟಿಂಗ್ ಹಬ್ ತಿಳಿಸಿದೆ.

7th Pay Commission:ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಗುಡ್ ನ್ಯೂಸ್; ಡಿಎ, ಫಿಟ್ಮೆಂಟ್ ಫ್ಯಾಕ್ಟರ್ ಏರಿಕೆ ಸಾಧ್ಯತೆ

ಇನ್ನು ಒಂದು ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ತನ್ನ ಪ್ರತಿಸ್ಪರ್ಧಿ ಸಂಸ್ಥೆಯ ಉತ್ಪನ್ನವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡಿಸಬಹುದು. ಅಂದ್ರೆ ಆತನ ಸೋಷಿಯಲ್ ಮೀಡಿಯಾ ಪ್ರಭಾವ ಗಮನಿಸಿದ ಪ್ರತಿಸ್ಪರ್ಧಿ ಸಂಸ್ಥೆ ತನ್ನ ಉತ್ಪನ್ನಗಳ ಪ್ರಚಾರಕ್ಕೆ ಆತನನ್ನು ಬಳಸಿಕೊಳ್ಳಬಹುದು. ಇಂಥ ಸಮಯದಲ್ಲಿ ಆ ಉದ್ಯೋಗಿ ತನ್ನ ಕಂಪನಿಯ ವಿರುದ್ಧ ಕಾರ್ಯನಿರ್ವಹಿಸಿದಂತಾಗುತ್ತದೆ. ಹೀಗಾಗಿ ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಆಗಬಯಸುವ ಉದ್ಯೋಗಿ ತನ್ನ ಉದ್ಯೋಗ ಒಪ್ಪಂದಗಳನ್ನು ಇನ್ನೊಮ್ಮೆ ಪರಿಷ್ಕರಣೆ ಮಾಡಿ, ಯಾವ ಕಾರ್ಯ ಕೈಗೊಳ್ಳಲು ಅನುಮತಿಯಿದೆ ಎಂಬುದನ್ನು ಅದರಲ್ಲಿ ಸೇರ್ಪಡೆ ಮಾಡೋದು ಉತ್ತಮ ಎನ್ನುತ್ತಾರೆ ಮಾನವ ಸಂಪನ್ಮೂಲ ಹಾಗೂ ಸಿಬ್ಬಂದಿ ತಜ್ಞರು.

ಏಳನೇ ವೇತನ ಆಯೋಗ: ಸರ್ಕಾರಿ ಉದ್ಯೋಗಿಗಳ ಕನಿಷ್ಠ ವೇತನದಲ್ಲಿ ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ

ನಿಯಮ ಏನು ಹೇಳುತ್ತೆ?
ಪ್ರಸ್ತುತ ಸೋಷಿಯಲ್ ಮೀಡಿಯಾ ವೃತ್ತಿಯ ಜೊತೆಗೆ ಪೂರ್ಣ ಅವಧಿಯ ಉದ್ಯೋಗ ಕೈಗೊಳ್ಳುವುದ್ರಿಂದ ಇನ್ ಫ್ಲುಯೆನ್ಸರ್ ಗಳನ್ನು ತಡೆಯಲು ಯಾವುದೇ ಮಾರ್ಗಸೂಚಿಗಳಿಲ್ಲ.ಭಾರತದಲ್ಲಿ ಕನಿಷ್ಠ 229.6 ಮಿಲಿಯನ್ ಸಕ್ರಿಯ ಇನ್ ಸ್ಟಾಗ್ರಾಮ್ ಬಳಕೆದಾರರಿದ್ದಾರೆ. ಜಗತ್ತಿನ ಬೇರೆ ಯಾವುದೇ ರಾಷ್ಟ್ರಗಳಲ್ಲಿ ಕೂಡ ಇಷ್ಟು ದೊಡ್ಡ ಪ್ರಮಾಣದಲ್ಲಿ ಇನ್ ಸ್ಟಾಗ್ರಾಮ್ ಬಳಕೆದಾರರಿಲ್ಲ. ಹೀಗಿರುವಾಗ ಸಾಮಾಜಿಕ ಮಾಧ್ಯಮದ ಮೂಲಕ ಜನರನ್ನು ಪ್ರಭಾವಿಸುವ ಉದ್ಯೋಗಿಗಳು ತಮ್ಮ ವೃತ್ತಿ ಮೇಲೆ ಕೂಡ ಅದರಿಂದ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸೋದು ಅಗತ್ಯ. ಪೂರ್ಣಕಾಲಿಕ ಉದ್ಯೋಗ ನಿರ್ವಹಿಸುತ್ತಿರುವ ಸಂಸ್ಥೆಯ ನಿಯಮಗಳನ್ನು ಅರಿತುಕೊಂಡು ಅದಕ್ಕೆ ಹಾನಿಯಾಗದಂತೆ ಸೋಷಿಯಲ್ ಮೀಡಿಯಾ ಬಳಸೋದು ಅಗತ್ಯ. 
 

Latest Videos
Follow Us:
Download App:
  • android
  • ios