ಜಿಮೇಲ್‌ಗೆ ಟಕ್ಕರ್ ಕೊಡಲು ಬರುತ್ತಿದೆ ಎಲೋನ್ ಮಸ್ಕ್ ಒಡೆತನದ ಎಕ್ಸ್ ಮೇಲ್
ಎಲೋನ್ ಮಸ್ಕ್ ಹೊಸ ಎಕ್ಸ್-ಮೇಲ್ ಸೇವೆಯನ್ನು ಪರಿಚಯಿಸುವ ಮೂಲಕ ಜಿಮೇಲ್‌ಗೆ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಈ ಹೊಸ ಸೇವೆಯು ಬಳಕೆದಾರರಿಗೆ ಸಂದೇಶ ಕಳುಹಿಸಲು ಪರ್ಯಾಯ ಆಯ್ಕೆಯನ್ನು ಒದಗಿಸಲಿದೆ.
ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಹೊಸ ಎಕ್ಸ್ ಮೇಲ್ ತರಲು ಮುಂದಾಗಿದ್ದು, ಈ ಮೂಲಕ ಜನಪ್ರಿಯ ಜಿ-ಮೇಲ್‌ಗೆ ಟಕ್ಕರ್ ಕೊಡಲು ಸಿದ್ಧರಾಗುತ್ತಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹೊಸ ಮೇಲ್ ಆರಂಭಿಸುವ ಮಾಹಿತಿಯನ್ನು ನೀಡಿದ್ದಾರೆ. ಬಳಕೆದಾರರಿಗೆ ಸಂದೇಶ ಕಳುಹಿಸಲು ಪರ್ಯಾಯ ಆಯ್ಕೆಯನ್ನು ಎಲೋನ್ ಮಸ್ಕ್ ತಂತ್ರಜ್ಞಾನ ಲೋಕಕ್ಕೆ ಪರಿಚಯಿಸುತ್ತಿದ್ದಾರೆ. ಇದಕ್ಕೆ ಎಕ್ಸ್-ಮೇಲ್ ಎಂದು ಹೆಸರಿಟ್ಟಿರುವ ಎಲೋನ್ ಮಸ್ಕ್ ಇದು ಕೂಲ್ ಆಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನಪ್ರಿಯ ಸರ್ಚ್ ಎಂಜಿನ್ ಆಗಿರುವ ಗೂಗಲ್ ಜಿಮೇಲ್ ನೆಟ್ಟಿಗರ ಮೊದಲ ಆಯ್ಕೆಯಾಗಿದೆ. ಕಾರ್ಪೋರೇಟ್ ಜಗತ್ತಿನಲ್ಲಿಯೂ ಜಿ ಮೇಲ್ ಅತ್ಯಧಿಕವಾಗಿ ಬಳಕೆಯಾಗುತ್ತಿದೆ. ಎಲೋನ್ ಮಸ್ಕ್ ಅವರ ಎಕ್ಸ್-ಮೇಲ್ ಮುಂದಿನ ದಿನಗಳಲ್ಲಿ ಜಿ-ಮೇಲ್, ಇ-ಮೇಲ್ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ. ಎಲೋನ್ ಮಸ್ಕ್ ಮುಂದಿನ ದಿನಗಳಲ್ಲಿ ಮಾಡಬೇಕಾದ ಕೆಲಸ ಇದಾಗಿದೆ ಎಂದು ಬರೆದುಕೊಂಡು ಎಕ್ಸ್ ಮೇಲ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 16ಕ್ಕೆ ಎಂಟ್ರಿ ಕೊಡ್ತಿದೆ ದೇಶಿ ಕಂಪನಿಯ ಡಬಲ್ Display 5G ಸ್ಮಾರ್ಟ್‌ಫೋನ್
ಸದ್ಯ ಪ್ರಪಂಚದಲ್ಲಿ ಆಪಲ್ ಮೇಲ್ ಹೆಚ್ಚು ಬಳಕೆಯಲ್ಲಿದ್ದು, ಮೊದಲ ಸ್ಥಾನದಲ್ಲಿದೆ. ಸೆಪ್ಟೆಂಬರ್-2024ರ ಪ್ರಕಾರ, ಆಪಲ್ ಮೇಲ್ ಶೇ.53.67, ಎರಡನೇ ಸ್ಥಾನದಲ್ಲಿರುವ ಜಿಮೇಲ್ ಶೇ.30.70 ಬಳಕೆದಾರನ್ನು ಹೊಂದಿದೆ. ಇನ್ನುಳಿದಂತೆ ಔಟ್‌ಲುಕ್, ಯಾಹೂ ಮೇಲ್, ಆಂಡ್ರಾಯ್ಡ್ ಮೇಲ್‌ಗಳು ಚಾಲ್ತಿಯಲ್ಲಿವೆ. ಭವಿಷ್ಯದಲ್ಲಿ ಎಕ್ಸ್ ಮೇಲ್ ಸದ್ಯದ ಮೇಲ್‌ಗಳಿಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆಗಳಿವೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: 2025ರ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಪ್ಲಾನ್‌ಗಳು: ಡೇಟಾ, ವ್ಯಾಲಿಡಿಟಿ, ಬೆಲೆ ಮಾಹಿತಿ