ಅಡುಗೆ ಎಣ್ಣೆ ಎರಡನೇ ಸಲ ಕುದಿಸಿದರೆ ಅದು ವಿಷವೇ!

ತೈಲ ಬಳಸದೆ ನಮಗೆ ಅಡುಗೆ ಮಾಡುವುದೇ ಕಷ್ಟ. ಇಂತಿರುವಾಗ, ಆ ಎಣ್ಣೆಯನ್ನು ಮತ್ತೊಮ್ಮೆ, ಮಗದೊಮ್ಮೆ ಕಾಯಿಸಿ, ಬಿಸಿ ಮಾಡಿ, ಕುದಿಸಿ, ಅಡುಗೆಯಲ್ಲಿ ಬಳಸುವುದು ಸುರಕ್ಷಿತವೇ?

Do not boil edible oil second time it may turn poisonous

ಭಾರತೀಯ ಅಡುಗೆ ಪದ್ಧತಿಯಲ್ಲಿ ಅಡುಗೆ ಎಣ್ಣೆಯನ್ನು ಎಲ್ಲದಕ್ಕೂ ಬಳಸಲಾಗುತ್ತದೆ. ಕಡಲೆಕಾಯಿ ಎಣ್ಣೆ, ತೆಂಗಿನೆಣ್ಣೆ, ಸೂರ್ಯಕಾಂತಿ ಎಣ್ಣೆಗಳು ಪ್ರಮುಖ. ಇಂದು ಮಿಲ್‌ನಲ್ಲಿ ನಮ್ಮದೇ ಎಣ್ಣೆಯನ್ನು ತಯಾರಿಸಿಕೊಂಡು ಬಳಸುವವರು ಕೆಲವೇ ಗ್ರಾಮೀಣರು ಮಾತ್ರ. ಉಳಿದಂತೆ ಹೆಚ್ಚಿನವರು ರಿಫೈನ್ಡ್ ಎಣ್ಣೆಯನ್ನೇ ಬಳಸುತ್ತಾರೆ. ತೈಲವನ್ನು ಆಹಾರದಲ್ಲಿ ಹೆಚ್ಚಾಗಿ ಬಳಸುವವರು ಭಾರತೀಯರು.

ರಿಫೈನ್ಡ್ ತೈಲದ ಉಳಿದ ಆರೋಗ್ಯ ಅನರ್ಥಗಳನ್ನು ಸದ್ಯಕ್ಕೆ ಬದಿಗಿಡೋಣ. ತೈಲ ಬಳಸದೆ ನಮಗೆ ಅಡುಗೆ ಮಾಡುವುದೇ ಕಷ್ಟ. ಇಂತಿರುವಾಗ, ಆ ಎಣ್ಣೆಯನ್ನು ಮತ್ತೊಮ್ಮೆ, ಮಗದೊಮ್ಮೆ ಕಾಯಿಸಿ, ಬಿಸಿ ಮಾಡಿ, ಕುದಿಸಿ, ಅಡುಗೆಯಲ್ಲಿ ಬಳಸುವುದು ಸುರಕ್ಷಿತವೇ? ತಜ್ಞರು ಇದು ಮಹಾ ಅಪಾಯಕಾರಿ ಎನ್ನುತ್ತಾರೆ. ಹೀಗೆ ಅಡುಗೆ ಎಣ್ಣೆಯನ್ನು ಎರಡನೇ ಮೂರನೇ ಸಲ ಬಳಸುವುದು ವಿಷ ಸೇವಿಸಿದಂತೆಯೇ ಸರಿ. ಎಚ್ಚೆತ್ತುಕೊಳ್ಳಿ.

ಕ್ಯಾನ್ಸರ್‌ಕಾರಿ

ಸೂರ್ಯಕಾಂತಿ ಅಥವಾ ಜೋಳದ ಎಣ್ಣೆಯಂತಹ ಕೆಲವು ಸಸ್ಯಜನ್ಯ ಎಣ್ಣೆಗಳನ್ನು ಮತ್ತೆ ಬಿಸಿ ಮಾಡುವುದರಿಂದ ಅದು ಕ್ಯಾನ್ಸರ್, ಹೃದ್ರೋಗ, ಆಲ್ಜೈಮರ್, ಬುದ್ಧಿಮಾಂದ್ಯತೆ ಮತ್ತು ಪಾರ್ಕಿನ್ಸನ್‌ನಂತಹ ಅನೇಕ ಕಾಯಿಲೆಗಳೊಂದಿಗೆ ಸಂಬಂಧ ಹೊಂದಿರುವ ಆಲ್ಡಿಹೈಡ್ಸ್, ವಿಷಕಾರಿ ರಾಸಾಯನಿಕಗಳನ್ನು ಹೆಚ್ಚಿನ ಸಾಂದ್ರತೆಯಲ್ಲಿ ಬಿಡುಗಡೆ ಮಾಡುತ್ತದೆ ಎಂದು ತೋರಿಸಲಾಗಿದೆ. ಸಸ್ಯಜನ್ಯ ಎಣ್ಣೆಯನ್ನು ಮತ್ತೆ ಬಿಸಿ ಮಾಡಿದ ನಂತರ 4-ಹೈಡ್ರಾಕ್ಸಿ-ಟ್ರಾನ್ಸ್ -2- ನಾಮಿನಲ್(ಎಚ್‌ಎನ್‌ಇ) ಎಂಬ ಮತ್ತೊಂದು ವಿಷವನ್ನು ಬಿಡುಗಡೆ ಮಾಡುತ್ತದೆ.

ಸರ್ಜಿಕಲ್ ಮಾಸ್ಕ್, N -95: ಇವುಗಳಲ್ಲಿ ಯಾವ ಮಾಸ್ಕ್ ಬಳಕೆಗೆ ಉತ್ತಮ ...

ಇದು ನಮ್ಮ ದೇಹದಲ್ಲಿರುವ ಡಿಎನ್‌ಎ, ಆರ್‌ಎನ್‌ಎ ಮತ್ತು ಪ್ರೋಟೀನ್‌ಗಳ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತದೆ.
ಅಡುಗೆ ತೈಲಗಳು ಟ್ರಾನ್ಸ್ ಫ್ಯಾಟಿ ಆಮ್ಲಗಳನ್ನು ಹೊಂದಿರುತ್ತವೆ. ಇದು ಮತ್ತೆ ಕಾಯಿಸಲ್ಪಟ್ಟ ನಂತರ ಇದು ಹೆಚ್ಚಾಗುತ್ತದೆ. ಟ್ರಾನ್ಸ್ ಕೊಬ್ಬುಗಳು ಸ್ಯಾಚುರೇಟೆಡ್ ಕೊಬ್ಬುಗಳಿಗಿಂತ ಕೆಟ್ಟದಾಗಿವೆ. ಏಕೆಂದರೆ ಅವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದಲ್ಲದೆ, ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆಗೊಳಿಸುತ್ತವೆ. ಇದು ಪಾರ್ಕಿನ್ಸನ್ ಕಾಯಿಲೆ, ಹೃದಯ ರಕ್ತನಾಳದ ಕಾಯಿಲೆ, ಪಾರ್ಶ್ವವಾಯು, ಕ್ಯಾನ್ಸರ್ ಮತ್ತು ವಿವಿಧ ಯಕೃತ್ತಿನ ಕಾಯಿಲೆಗಳ ಅಪಾಯದೊಂದಿಗೆ ಸಂಬಂಧಿಸಿದೆ.

ಪುನಃ ಬಿಸಿ ಮಾಡುವುದರಿಂದ ತೈಲದ ರಾಸಾಯನಿಕ ಸಂಯೋಜನೆಯು ಬದಲಾಗುತ್ತದೆ. ತೊಂದರೆಗಳನ್ನು ಉಂಟುಮಾಡುವ ಹಾನಿಕಾರಕ ವಸ್ತುಗಳನ್ನು ಉತ್ಪಾದಿಸುತ್ತದೆ. ಸುವಾಸನೆ ಕಳೆದುಕೊಳ್ಳುತ್ತದೆ ಮತ್ತು ತೈಲವು ಕೆಟ್ಟ ರುಚಿಯನ್ನು ನೀಡುತ್ತದೆ.

ಮುಟ್ಟಿನ ಬಗ್ಗೆ ನಿಮಗೇನು ಗೊತ್ತು? ಇಂದು ಋತುಸ್ರಾವ ಶುಚಿತ್ವ ದಿನ ...

ಇದರಲ್ಲಿರುವ ಮುಕ್ತ ರಾಡಿಕಲ್‌ಗಳು ಹಾನಿಕಾರಕ ಅಣುಗಳು. ಅವು ಆರೋಗ್ಯಕರ ಜೀವಕೋಶಗಳಿಗೆ ಅಂಟಿಕೊಂಡು ಅವುಗಳ ಕಾರ್ಯವನ್ನು ದುರ್ಬಲಗೊಳಿಸುತ್ತವೆ. ತೈಲವನ್ನು ಪುನಃ ಬಿಸಿ ಮಾಡುವುದರಿಂದ ಈ ಸ್ವತಂತ್ರ ರಾಡಿಕಲ್‌ಗ‍ಗಳು ಕೆರಳಿ, ಕ್ಯಾನ್ಸರ್‌ನಂತಹ ಗಂಭೀರ ತೊಂದರೆಗಳನ್ನು ಉಂಟುಮಾಡಬಹುದು. ಹೃದಯದ ಅಪಧಮನಿ ಜಡವಾಗುವುದು, ಅಪಧಮನಿಗಳಲ್ಲಿ ಹೆಕ್ಕಳೆ ತುಂಬಿದ ಸ್ಥಿತಿ, ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ.

ತೈಲವನ್ನು ಪುನಃ ಬಿಸಿ ಮಾಡಿದ ನಂತರ ಆಕ್ಸಿಡೀಕರಣ, ಜಲವಿಚ್ಛೇದನೆ ಮತ್ತು ಪಾಲಿಮರೀಕರಣದಂತಹ ಪ್ರತಿಕ್ರಿಯೆಗಳು ಸಂಭವಿಸುತ್ತವೆ. ಇದು ಬಾಷ್ಪಶೀಲ ಸಂಯುಕ್ತಗಳು ಮತ್ತು ವಿಷಕಾರಿ ಮೊನೊಮೆರಿಕ್ ಮತ್ತು ಪಾಲಿಮರಿಕ್ ಉತ್ಪನ್ನಗಳನ್ನು ರೂಪಿಸುತ್ತದೆ. ಈ ಸಂಯುಕ್ತಗಳು ಮತ್ತು ಉತ್ಪನ್ನಗಳು ತೈಲಕ್ಕೆ ಕೆಟ್ಟ ಪರಿಮಳವನ್ನು ನೀಡುತ್ತವೆ. ಮತ್ತು ನಮ್ಮ ಆರೋಗ್ಯದ ಮೇಲೆ ಅನೇಕ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತವೆ.

ತುಳಸಿ ಹಾಲು ಸೇವಿಸೋ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ...

ಹಾಗಿದ್ದರೆ ಎಣ್ಣೆಯನ್ನು ಎರಡನೇ ಬಾರಿಗೆ ಬಳಸಲೇಬಾರದೆ?

ಬಳಸಬಹುದು. ಆದರೆ ಈಗ ಹೇಳುವ ಎಚ್ಚರಿಕೆಗಳನ್ನು ಅನುಸರಿಸಿ.
- ಮೊದಲ ಬಾರಿಗೆ ಅದನ್ನು ಬಳಸುವಾಗ ತೈಲವನ್ನು ಹೆಚ್ಚು ಬಿಸಿ ಮಾಡಿರದಿದ್ದರೆ, ಮತ್ತು ಅದನ್ನು ಚೆನ್ನಾಗಿ ಸಂಗ್ರಹಿಸಿಟ್ಟಿದ್ದರೆ. 
- ತೈಲದಲ್ಲಿ ಆಹಾರದ ಕಣಗಳು ಸೇರಿಕೊಂಡಿಲ್ಲದೆ ಇದ್ದರೆ ಅಥವಾ ಚೆನ್ನಾಗಿ ಅದನ್ನು ಸೋಸಿದ್ದರೆ. ಏಕೆಂದರೆ ಆಹಾರ ಕಣಗಳು ತೈಲವನ್ನು ಬೇಗನೆ ಹಾಳುಮಾಡುತ್ತವೆ. 
- ಉಪ್ಪು ಸೇರಿಸಿದ ಆಹಾರವನ್ನು ಆ ಎಣ್ಣೆಯಲ್ಲಿ ಹುರಿಯದೆ ಇದ್ದರೆ. ಎಣ್ಣೆಗೆ ಉಪ್ಪನ್ನು ಸೇರಿಸುವುದನ್ನು ತಪ್ಪಿಸಿ. ಏಕೆಂದರೆ ಉಪ್ಪು ಎಣ್ಣೆಯ ಹೊಗೆಕಾರಕ ಅಂಶವನ್ನು ಹೆಚ್ಚು ಮಾಡುತ್ತದೆ. ಎಣ್ಣೆಯಿಂದ ಹೆಚ್ಚು ಹೊಗೆ ಬಂದಷ್ಟೂ ಅದು ಸೇವನೆಗೆ ಅಸುರಕ್ಷಿತ.

Latest Videos
Follow Us:
Download App:
  • android
  • ios