ಶೀಘ್ರದಲ್ಲೇ ಮತ್ತಷ್ಟು ಉದ್ಯೋಗಿಗಳ ವಜಾಕ್ಕೆ ಫೇಸ್ಬುಕ್ ಮೆಟಾ ಚಿಂತನೆ...!

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನ ( WhatsApp) ಮಾತೃ ಸಂಸ್ಥೆಯಾದ ಮೆಟಾ ಶೀಘ್ರದಲ್ಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.

Economic crisis Reports said Facebook Meta thinking to lay off more employees soon akb

ನ್ಯೂಯಾರ್ಕ್‌: ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನ ( WhatsApp) ಮಾತೃ ಸಂಸ್ಥೆಯಾದ ಮೆಟಾ ಶೀಘ್ರದಲ್ಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ, ಈ ಮತ್ತೊಂದು ಸುತ್ತಿನ ವಜಾಗೊಳಿಸುವಿಕೆಯು ಕಂಪನಿಯ ಇಂಜಿನಿಯರಿಂಗ್ ಅಲ್ಲದ ಇತರ ಉದ್ಯೋಗಿಗಳ ಮೇಲೆ ಅಸಮಾನವಾಗಿ ಪರಿಣಾಮ ಬೀರಲಿದೆ ಎಂದು ತಿಳಿದು ಬಂದಿದೆ. 

ಅಲ್ಲದೇ ಮೆಟಾದ ಸಿಇಒ( Meta CEO) ಮಾರ್ಕ್ ಜುಕರ್‌ಬರ್ಗ್( Mark Zuckerberg), ಕಂಪನಿಯೊಳಗಿನ ಶ್ರೇಣಿಯನ್ನು ತಗ್ಗಿಸಲು ಯೋಜನೆಗಳನ್ನು ರೂಪಿಸುವ ಸಲುವಾಗಿ ಮಾನವ ಸಂಪನ್ಮೂಲ ಅಧಿಕಾರಿಗಳು, ವಕೀಲರು, ಹಣಕಾಸು ತಜ್ಞರು ಮತ್ತು ಉನ್ನತ ಕಾರ್ಯನಿರ್ವಾಹಕರನ್ನು ನಿಯೋಜಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.  ನವೆಂಬರ್ 2022 ರಲ್ಲಿ ಮೆಟಾ ಸರಿಸುಮಾರು 11,000 ಕೆಲಸಗಾರರನ್ನು ಅಂದರೆ ಜಾಗತಿಕ ಉದ್ಯೋಗಿಗಳ ಶೇಕಡಾ 13 ರಷ್ಟು ಜನರನ್ನು ವಜಾಗೊಳಿಸಿತ್ತು.  ಆ ಸಮಯದಲ್ಲಿ, ಕಂಪನಿಯು ವಜಾಗೊಳಿಸುವಿಕೆಗೆ ಹೆಚ್ಚಿನ ನೇಮಕಾತಿ ಮತ್ತು ಕಳಪೆ ಆರ್ಥಿಕ ಪರಿಸ್ಥಿತಿಯ ಕಾರಣ ನೀಡಿತ್ತು. 

ಬೋಳುತಲೆ ಎಂದು ಕೆಲಸ ತೊರೆಯುವಂತೆ ಒತ್ತಡ: ಸಂಸ್ಥೆಯಿಂದ 71 ಲಕ್ಷ ಪರಿಹಾರ ಗೆದ್ದ ಉದ್ಯೋಗಿ

ಈಗ ಎರಡನೇ ಸುತ್ತಿನ ನೌಕರರ ತೆಗೆದುಹಾಕುವಿಕೆಗೂ ಇದೇ ರೀತಿಯ ಕಾರಣ ನೀಡುವ ಸಾಧ್ಯತೆ ಇದೆ, ಆದಾಯದ ಕುಸಿತದ ಮಧ್ಯೆ ಮೆಟಾ ವೆಚ್ಚವನ್ನು ತಗ್ಗಿಸುವ ಪ್ರಯತ್ನ ಮಾಡುತ್ತಿದೆ. ಕಂಪನಿಯು ತನ್ನ ಆದಾಯವು 2022 ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ದಲ್ಲಿ  $32.17 ಶತಕೋಟಿ ಎಂದು ಹೇಳಿದೆ. ಅಂದರೆ  ವರ್ಷದಿಂದ ವರ್ಷಕ್ಕೆ ಶೇಕಡಾ 4 ಷ್ಟು ಆದಾಯದಲ್ಲಿ ಇಳಿಕೆ ಕಂಡು ಬಂದಿದೆ. ಹೀಗಾಗಿ ಕೆಲವು ಯೋಜನೆಗಳನ್ನು ಕಡಿತಗೊಳಿಸುವುದು ಸೇರಿದಂತೆ ಹೆಚ್ಚಿನ ಸಾಂಪ್ರದಾಯಿಕ ವೆಚ್ಚಗಳನ್ನು ಮೆಟಾ (Meta) ಪರಿಗಣಿಸುತ್ತಿದೆ. ಕಂಪನಿಯಾದ್ಯಂತ ಇರುವ ವಿವಿಧ ವಿಭಾಗಗಳನ್ನು ಗುರಿಯಾಗಿಸಿಕೊಂಡಿರುವ ಒಂದೊಂದೇ ವಿಭಾಗದಲ್ಲಿ ಒಂದಾದ ಮೇಲೊಂದರಂತೆ ಉದ್ಯೋಗ ಒಡಿತಗಳು ಕ್ರಮೇಣ ಸಂಭವಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಗಮನಾರ್ಹವಾಗಿ ಮೆಟಾದಲ್ಲಿ ಮುಂಬರುವ ಉದ್ಯೋಗ ಕಡಿತದ ಬಗೆಗಿನ ವರದಿಯೂ  ಕಂಪನಿಯು ಉದ್ಯೋಗಿಗಳ ಕಾರ್ಯಕ್ಷಮತೆಯ ಪರಿಶೀಲನೆಯ ಸಮಯದಲ್ಲಿ ಬಂದಿದೆ ಎನ್ನಲಾಗಿದ್ದು, ಅನೇಕ ಉದ್ಯೋಗಿಗಳಿಗೆ  ಉದ್ದೇಶಪೂರ್ವಕವಾಗಿ 'ಸಬ್‌ಪಾರ್ ರೇಟಿಂಗ್‌ಗಳನ್ನು(ಕಳಪೆ) ನೀಡಿದೆ ಎಂದು ವರದಿಯಾದ ಕೆಲ ದಿನಗಳ ನಂತರ ಈ ಉದ್ಯೋಗ ಕಡಿತದ ವಿಚಾರ ಮುನ್ನೆಲೆಗೆ ಬಂದಿದೆ.  ಹೆಚ್ಚಿನ ಉದ್ಯೋಗಿಗಳನ್ನು ಕಡಿಮೆ ಮಾಡುವ ಸುಳಿವು ಈ ರೇಟಿಂಗ್ ಮೂಲಕ ಸಿಕ್ಕಿದೆ. 

ಇನ್ಫೋಸಿಸ್‌‌ನಲ್ಲಿ ಉದ್ಯೋಗ ಕಡಿತ, ಪರೀಕ್ಷೆ ಪಾಸ್ ಮಾಡದ 100ಕ್ಕೂ ಹೆಚ್ಚು ಹೊಸಬರ ವಜಾ!

ನವೆಂಬರ್‌ನಲ್ಲಿ 11,000 ಉದ್ಯೋಗ ಕಡಿತಗಳನ್ನು ಉಲ್ಲೇಖಿಸಿ ನಮ್ಮ, ಕೆಟ್ಟ ಕೆಲಸಗಳು ಮುಗಿದಿರಬಹುದು ಎಂದು ಉದ್ಯೋಗಿಗಳಿಗೆ ಜುಕರ್‌ಬರ್ಗ್ ಹೇಳಿದ್ದರೂ, ಅವರ ಕೊನೆಯ ಗಳಿಕೆಯ ಕರೆಯಲ್ಲಿ(earnings call) ವಜಾಗೊಳಿಸುವ ಬಗ್ಗೆ ಸುಳಿವು ನೀಡಿದ್ದರು ಎಂದು ವಾಷಿಂಗ್ಟನ್ ಪೋಸ್ಟ್(Washington Post)  ವರದಿ ಮಾಡಿದೆ. 'ನಾವು ಕೆಲವು ಕಷ್ಟಕರವಾದ ಉದ್ಯೋಗ ಕಡಿತದೊಂದಿಗೆ (layoff) ಕಳೆದ ವರ್ಷವನ್ನು ಅಂತ್ಯಗೊಳಿಸಿದ್ದೇವೆ ಮತ್ತು ಕೆಲವು ತಂಡಗಳನ್ನು ಮತ್ತೆ ರಚಿಸಿದ್ದೇವೆ. ಇದು ದಕ್ಷತೆಯ ಮೇಲೆ ನಮ್ಮ ಗಮನದ ಆರಂಭವಾಗಿದೆ ಮತ್ತು ಅಂತ್ಯವಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದು ಜುಕರ್‌ಬರ್ಗ್ ಹೇಳಿದ್ದರು. 

ಮೆಟಾ ಸಂಸ್ಥೆಯೂ  ಆದಾಯವನ್ನು ಹೆಚ್ಚಿಸಲು ಹೊಸ ಕ್ರಮಗಳನ್ನು ಪ್ರಯತ್ನಿಸುತ್ತಿದೆ. ಇತ್ತೀಚೆಇಗೆ ಮೆಟಾ ಫೇಸ್‌ಬುಕ್ (Facebook) ಹಾಗೂ ಇನ್ಸ್ಟಾಗ್ರಾಮ್ ( Instagram) ಖಾತೆ ಪರಿಶೀಲಿಸಿ ನೀಲಿ ಬ್ಯಾಡ್ಜ್‌ ನೀಡುವ ಮೆಟಾ ವೇರಿಫೈಡ್ ಚಂದಾದಾರಿಕೆಯನ್ನು ಆರಂಭಿಸಿದೆ.  ಇದರ ಬೆಲೆ ವೆಬ್‌ನಲ್ಲಿ ತಿಂಗಳಿಗೆ $11.99 (ಸುಮಾರು ರೂ 990) ಐಫೋನ್‌ನಲ್ಲಿ ತಿಂಗಳಿಗೆ $14.99 ಅಂದರೆ ಸುಮಾರು  1,240 ರೂಪಾಯಿಗಳು ಈ ಚಂದಾದಾರಿಕೆಯು ಪ್ರಸ್ತುತ  ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಮಾತ್ರ ಲಭ್ಯವಿದೆ. ಹಣದುಬ್ಬರ ಮುಂದುವರಿದಂತೆ ಕೆಲವು ಡಿಜಿಟಲ್ ಜಾಹೀರಾತುದಾರರು ಖರ್ಚು ಮಾಡುವ ನಿರ್ಧಾರವನ್ನು ಹಿಂಪಡೆದ ನಂತರ ಈ ಚಂದಾದಾರಿಕೆಯನ್ನು ಆರಂಭಿಸಲಾಗಿದೆ. 

ಪ್ರಸ್ತುತ ಆರ್ಥಿಕ ಪರಿಸ್ಥಿತಿಗಳು ಸುಧಾರಿಸದಿದ್ದರೆ ಮೆಟಾ ಮಾತ್ರವಲ್ಲ, ಇತರ ಟೆಕ್ ದೈತ್ಯರು ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಕೆಲಸಗಾರರನ್ನು ವಜಾಗೊಳಿಸುವ ಸಾಧ್ಯತೆ ಇದೆ. ಅಮೆಜಾನ್ (Amazon) ಆರಂಭದಲ್ಲಿ 10,000 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿತ್ತು, ಆದರೆ ಕಂಪನಿಯು ಈ ವರ್ಷದ ಆರಂಭದಲ್ಲಿ 8,000 ಕ್ಕೂ ಹೆಚ್ಚು ಕೆಲಸಗಾರರನ್ನು ವಜಾಗೊಳಿಸಿದೆ. 

Latest Videos
Follow Us:
Download App:
  • android
  • ios