ಇನ್ಫೋಸಿಸ್‌ನಲ್ಲಿ ಉದ್ಯೋಗ ಕಡಿತ, ಪರೀಕ್ಷೆ ಪಾಸ್ ಮಾಡದ 100ಕ್ಕೂ ಹೆಚ್ಚು ಹೊಸಬರ ವಜಾ!
ಹಲವು ಕಂಪನಿಗಳು ಭಾರತದಲ್ಲಿ ಉದ್ಯೋಗ ಕಡಿತ ಆರಂಭಿಸಿದೆ. ಇತ್ತೀಚೆಗೆ ವಿಪ್ರೋ ಉದ್ಯೋಗಿಗಳ ವಜಾ ಮಾಡಿತ್ತು. ಇದೀಗ ಇನ್ಫೋಸಿಸ್ ಸರದಿ. ಪರೀಕ್ಷೆ ಪಾಸ್ ಮಾಡದ 100ಕ್ಕೂ ಹೆಚ್ಚು ಫ್ರೆಶರ್ಸ್‌ನ್ನು ಕಂಪನಿ ವಜಾ ಮಾಡಿದೆ. ಈ ಕುರಿತು ಇನ್ಫೋಸಿಸ್ ಸ್ಪಷ್ಟನೆ ನೀಡಿದೆ.
ಬೆಂಗಳೂರು(ಫೆ.10): ಆರ್ಥಿಕ ಹಿಂಜರಿತಕ್ಕೆ ಅಮೆರಿಕ ಸೇರಿದಂತೆ ಹಲವು ದೇಶಗಳು ಹೈರಾಣಾಗಿದೆ. ಭಾರತದಲ್ಲೂ ಇದರ ಪರಿಣಾಮ ಗೋಚರಿಸುತ್ತಿದೆ. ಈಗಾಗಲೇ ಹಲವು ಭಾರತೀಯ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿವೆ. ಇದೀಗ ವಿಪ್ರೋ ಕಂಪನಿ ರೀತಿಯಲ್ಲೇ ಇನ್ಫೋಸಿಸ್ ಕೂಡ 100ಕ್ಕೂ ಹೆಚ್ಚು ಹೊಸಬರ ವಜಾ ಮಾಡಿದೆ. ಇನ್ಫೋಸಿಸ್ ಆಂತರಿಕ ಮೌಲ್ಯ ಮಾಪನ ಪರೀಕ್ಷೆಯಲ್ಲಿ ಪಾಸ್ ಆಗದ ಹೊಸಬರನ್ನು ತೆಗೆದುಹಾಕಿದೆ. ಇನ್ಫೋಸಿಸ್ ಉದ್ಯೋಗ ಕಡಿತ ಮಾಡಿದೆ ಅನ್ನೋ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಈ ಕುರಿತು ಸ್ಪಷ್ಟನೆ ನೀಡಿದೆ. ಇದು ಕಂಪನಿಯ ಸಾಮಾನ್ಯ ಪ್ರಕ್ರಿಯೆಯಾಗಿದೆ. ಹೊಸಬರಿಗೆ ಕಂಪನಿ ತರಬೇತಿ ನೀಡಲಾಗುತ್ತದೆ. ಬಳಕಿ ಆಂತರಿಕ ಮೌಲ್ಯಮಾಪನ ಮಾಡುತ್ತೇವೆ. ಹೊಸಬರಿಗೆ ಎರಡು ಅವಕಾಶಗಳನ್ನು ನೀಡಲಾಗುತ್ತದೆ. ಎರಡು ಅವಕಾಶದಲ್ಲಿ ಪಾಸ್ ಮಾಡಲು ಸಾಧ್ಯವಾಗದಿದ್ದರೆ,ಅಂತವರನ್ನು ಕಂಪನಿ ಮುಂದುವರಿಸುವುದಿಲ್ಲ ಎಂದು ಇನ್ಫೋಸಿಸ್ ಹೇಳಿದೆ.
ಮೂಲಗಳ ಪ್ರಕಾರ, ಇಸ್ಫೋಸಿಸ್ ತನ್ನ 600 ಜನ ಹೊಸ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ ಅನ್ನೋ ವರದಿಗಳು ಬಹಿರಂಗವಾಗಿದೆ. 8 ತಿಂಗಳ ಹಿಂದೆ ನೇಮಕವಾಗಿದ್ದ ಹೊಸ ಉದ್ಯೋಗಿಗಳಿಗೆ ನಡೆಸುವ ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ 600 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಎರಡು ವಾರದ ಹಿಂದೆ 208 ಉದ್ಯೋಗಿಗಳನ್ನು ಇದೇ ಕಾರಣಕ್ಕೆ ವಜಾ ಮಾಡಲಾಗಿತ್ತು. ಈಗ ಮತ್ತೆ 400 ಜನ ಉದ್ಯೋಗಿಗಳನ್ನು ವಜಾ ಮಾಡಿದ್ದು, ಒಟ್ಟು 600 ಜನರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಕಾರಣಕ್ಕಾಗಿ 10 ನಿಮಿಷಗಳಲ್ಲಿ ಕಂಪನಿಯ ಪ್ರಮುಖ ಉದ್ಯೋಗಿ ವಜಾ: Wipro ಬಾಸ್
ಸಂದರ್ಶನದ ಮೂಲಕ ಆಯ್ಕೆಯಾಗುವ ಹೊಸಬರಿಗೆ 90 ದಿನಗಳ ತರಬೇತಿ ನೀಡಲಾಗುತ್ತಿದೆ. ಬಳಿಕ ಆಂತರಿಕ ಮೌಲ್ಯಮಾಪನ ನಡೆಸಲಾಗುತ್ತಿದೆ. ಈ ಮೌಲ್ಯಮಾಪನದಲ್ಲಿ ಅನುತ್ತೀರ್ಣರಾದವರನ್ನು ಕಂಪನಿಗೆ ಮುಂದುವರಿಸುವ ಅವಕಾಶವಿಲ್ಲ. ಈ ವಿಚಾರವನ್ನು ಹೊಸಬರಿಗೆ ನೀಡುವ ಆಫರ್ ಲೆಟರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದು ಕೇವಲ ಇನ್ಫೋಸಿಸ್‌ನ ವಿಧಾನವಲ್ಲ. ಬಹುತೇಕ ಐಟಿ ಕಂಪನಿಗಳು ಇದೇ ಮಾದರಿ ಅನುಸರಿಸುತ್ತದೆ. ಅನುತ್ತೀರ್ಣರಾದ 100ಕ್ಕೂ ಹೆಚ್ಚು ಹೊಸಬರನ್ನು ಕಂಪನಿ ಮುಂದುವರಿಸುತ್ತಿಲ್ಲ. ಕಂಪನಿಯ ಈ ನಿರ್ಧಾರಕ್ಕೂ ಆರ್ಥಿಕ ಹಿಂಜರಿತಕ್ಕೂ ಸಂಬಂಧವಿಲ್ಲ ಎಂದು ಇನ್ಫೋಸಿಸ್ ಸ್ಪಷ್ಟನೆ ನೀಡಿದೆ.
ಇನ್ಫೋಸಿಸ್ ತರಬೇತಿ ಬಳಿಕ ಉದ್ಯೋಗ ಸಿಗದೆ ಹೊರಬಂದಿರುವ ಕೆಲವರು ಮಾಧ್ಯಮ ಜೊತೆ ಪ್ರತಿಕ್ರಿಯೆ ನೀಡಿದ್ದಾರೆ. ತರಬೇತಿ ಬಳಿಕ ಹಲವರನ್ನು ಕಂಪನಿ ಕೆಲಸದಲ್ಲಿ ಮುಂದುವರಿಸಿದೆ. ಕಾರಣ ಕೆಲ ಬ್ಯೂಸಿನೆಸ್ ಪ್ರಾಜೆಕ್ಟ್ ಇದ್ದಕಾರಣ ಕಂಪನಿಗೆ ಉದ್ಯೋಗಿಗಳ ಅವಶ್ಯಕತೆ ಇತ್ತು. ಆದರೆ ಯಾರಿಗೆಲ್ಲಾ ಪ್ರಾಜೆಕ್ಟ್ ಸಿಕ್ಕಿಲ್ಲ ಅಂತವರನ್ನು ಪರೀಕ್ಷೆ ಬರೆಯುವಂತೆ ಹೇಳಿದ್ದಾರೆ. 6 ತಿಂಗಳ ಒಳಗೆ ಪರೀಕ್ಷೆ ಪಾಸ್ ಮಾಡಲೂ ಸೂಚಿಸಿದ್ದಾರೆ ಎಂದು ಅಳಲತ್ತುಕೊಂಡಿದ್ದಾರೆ.
ಜಗತ್ತಿನಲ್ಲೇ ಭಾರತ ಡಿಜಿಟಲೈಸ್ಡ್ ದೇಶವಾಗುವ ಕಾಲ ಸನ್ನಿಹಿತ: ನಾರಾಯಣಮೂರ್ತಿ
ಇತ್ತೀಚೆಗೆ ವಿಪ್ರೋ ಅಂತರಿಕ ಮೌಲ್ಯಮಾಪನದಲ್ಲಿ ಕಡಿಮೆ ಅಂಕಗಳಿಸಿದ 452 ಹೊಸಬರನ್ನು ಕಂಪನಿ ವಜಾಗೊಳಿಸಿತ್ತು. ಈ ಕುರಿತು ವಿಪ್ರೋ ಸ್ಪಷ್ಟೆ ನೀಡಿತ್ತು. ಆಂತರಿಕ ಮೌಲ್ಯಮಾಪನದಲ್ಲಿ ಕಡಿಮೆ ಅಂಕಗಳಿಸಿದ್ದಾರೆ. ಆದರೆ ಒಬ್ಬೊಬ್ಬರ ತರಬೇತಿಗೆ ವಿಪ್ರೋ 75,000 ರೂಪಾಯಿ ಖರ್ಚು ಮಾಡಿದೆ. ಆದರೆ ಉದ್ಯೋಗಿಗಳು ಆತಂರಿಕ ಮೌಲ್ಯಮಾಪನ ಪಾಸ್ ಮಾಡಿಲ್ಲ. ಅರ್ಹರನ್ನು ಮಾತ್ರ ಕಂಪನಿ ಮುಂದುವರಿಸಲು ಸಾಧ್ಯ ಎಂದಿತ್ತು. ಇದೀಗ ಇನ್ಫೋಸಿಸ್ ಕೂಡ ಇದೇ ಹಾದಿಯಲ್ಲಿ ಮುಂದವರಿದೆ.