ಬೆಂಗಳೂರು(ಮೇ.05): ಇದೇ ಮಂಗಳವಾರ(ಮೇ.07)ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ.

ಚಿನ್ನದ ದರದಲ್ಲಿ 250 ರೂ. ಇಳಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 32,620 ರೂ. ಇದೆ.

ಬೆಳ್ಳಿಯ ದರದಲ್ಲಿ ಪ್ರತಿ ಕೆ.ಜಿಗೆ 825 ರೂ. ಇಳಿಕೆಯಾಗಿದ್ದು, 1 ಕೆಜಿ ಬೆಳ್ಳಿ ಬೆಲೆ 37,700 ರೂ.ಗೆ ತಗ್ಗಿದೆ. ಅಲ್ಲದೇ 100 ಬೆಳ್ಳಿ ನಾಣ್ಯಗಳ ಖರೀದಿ ಹಾಗೂ ಮಾರಾಟ ದರ 79,000 ರೂ. ಇದೆ.