ವಾಷಿಂಗ್ಟನ್(ಅ.18): ಭಾರತ ಹಾಗೂ ಚೀನಾ ರಾಷ್ಟ್ರಗಳನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.  

ಭಾರತ ಹಾಗೂ ಚೀನಾ ರಾಷ್ಟ್ರಗಳು ಅಮೆರಿಕದಿಂದ ಈಗಾಗಲೇ ಸಾಕಷ್ಟು ವ್ಯಾಪಾರಿ ಲಾಭ ಪಡೆಯುತ್ತಿದ್ದು, ಈ ಎರಡೂ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎಂಬ ಮುಖವಾಡ ತೆಗೆದಿಟ್ಟು ವ್ಯಾಪಾರಕ್ಕೆ ಬರಲಿ ಎಂದು ಟ್ರಂಪ್ ಆಗ್ರಹಿಸಿದ್ದಾರೆ.

ಆಸೆಬುರುಕ ಭಾರತ: ಸಂಜೆ ಹೊತ್ತಲ್ಲಿ ಟ್ರಂಪ್ ಹೊಸ ವರಾತ!

ವಿಶ್ವ ವಾಣಿಜ್ಯ ಸಂಸ್ಥೆ ಚೀನಾ ಮತ್ತು ಭಾರತವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೆಂದು ಪರಿಗಣಿಸುತ್ತದೆ. ಆದರೆ ಅಮೆರಿಕ ಮಾತ್ರ ಈ ಎರಡೂ ರಾಷ್ಟ್ರಗಳನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎಂದು ಪರಿಗಣಿಸುವುದಿಲ್ಲ. ಈ ಸಂಬಂಧ ಈಗಾಗಲೇ WTOಗೆ ಪತ್ರ ಬರೆದಿರುವುದಾಗಿ ಟ್ರಂಪ್ ಸ್ಪಷ್ಟಪಡಿಸಿದರು.

ಅಮೆರಿಕ ಹಾಗೂ ಚೀನಾ ನಡುವಿನ ವಾಣಿಜ್ಯ ಸಮರದಿಂದಾಗಿ ಈಗಾಗಲೇ ಜಾಗತಿಕ ಆರ್ಥಿಕ ಹಿಂಜರಿತದ ಕಹಿ ಅನುಭವವಾಗುತ್ತಿದ್ದು, ಟ್ರಂಪ್ ಹೊಸ ಘೋಷಣೆಯಿಂದ ಅಮೆರಿಕದೊಂದಿಗಿನ ಭಾರತ ಮತ್ತು ಚೀನಾದ ಪ್ರತ್ಯೇಕ ಸಂಬಂಧದಲ್ಲಿ ಮತ್ತಷ್ಟು ಬಿರುಕು ಮೂಡವ ಆತಂಕ ಎದುರಾಗಿದೆ.

ಇತ್ತಿಚಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅಮೆರಿಕಕ್ಕೆ ತೆರಳಿದ್ದರು. ಈ ವೇಳೆ ಟ್ರಂಪ್ ಅವರೊಂದಿಗೆ ವಾಣಿಜ್ಯ ಸಂಬಂಧಿತ ಮಾತುಕತೆ ನಡೆಸಿದ್ದರು.

ಮೋದಿ ವಿರುದ್ದ ಏಕಾಏಕಿ ತಿರುಗಿ ಬಿದ್ದ ಟ್ರಂಪ್: ಭಾರತಕ್ಕೆ ಸಬ್ಸಿಡಿ ಕಟ್!

ಈ ಸಂದರ್ಭದಲ್ಲಿ ಭಾರತದೊಂದಿಗೆ ಉತ್ತಮ ವ್ಯಾಪಾರ ಸಂಬಂಧ ಹೊಂದುವುದಾಗಿ ಹೇಳಿದ್ದ ಟ್ರಂಪ್, ಇದೀಗ ಭಾರತವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮತ್ತೆ ಈ ಸಂಬಂಧದಲ್ಲಿ ಹುಳಿ ಹಿಂಡಿದ್ದಾರೆ.