Asianet Suvarna News Asianet Suvarna News

ಆಸೆಬುರುಕ ಭಾರತ: ಸಂಜೆ ಹೊತ್ತಲ್ಲಿ ಟ್ರಂಪ್ ಹೊಸ ವರಾತ!

ಇಳಿ ಸಂಜೆ ಹೊತ್ತಲ್ಲಿ ಭಾರತದ ಮೇಲೆ ಸಿಟ್ಟಾದ ಟ್ರಂಪ್| ಹೊಗಳುವ, ತೆಗಳುವ ಚಾಳಿ ಬಿಡದ ಅಮೆರಿಕ ಅಧ್ಯಕ್ಷ| ಭಾರತ-ಚೀನಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲ ಎಂದ ಟ್ರಂಪ್| ಭಾರತ-ಚೀನಾ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಂತೆ| ಭಾರತ-ಚೀನಾದಿಂದ WTO ದುರುಪಯೋಗಕ್ಕೆ ಅವಕಾಶವಿಲ್ಲ ಎಂದ ಟ್ರಂಪ್| WTO ದುರುಪಯೋಗದ ಕುತಂತ್ರ ಸಹಿಸಲ್ಲ ಎಂದ ಅಮೆರಿಕ ಅಧ್ಯಕ್ಷ|

US President Donald Trump Says India-China Are No Longer Developing Nations
Author
benga, First Published Aug 14, 2019, 6:57 PM IST
  • Facebook
  • Twitter
  • Whatsapp

ವಾಷಿಂಗ್ಟನ್(ಆ.14): ಒಮ್ಮೆ ಹೊಗಳುವುದು, ಮತ್ತೊಮ್ಮೆ ತೆಗಳುವುದು  ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಚಾಳಿ. ಭಾರತ ತನ್ನ ಪರಮಾಪ್ತ ರಾಷ್ಟ್ರ ಎಂದೆಲ್ಲಾ ರಾಗಿ ಬೀಸುವ ಟ್ರಂಪ್, ಭಾರತದ ವಿರುದ್ಧವೇ ಕೆಲವೊಮ್ಮೆ ಕಲ್ಲು ಬೀಸುತ್ತಾರೆ.

ಭಾರತ ಹಾಗೂ ಚೀನಾ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಾಗಿವೆ ಎಂದಿರುವ ಟ್ರಂಪ್, ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡು ವಿಶ್ವ ವಾಣಿಜ್ಯ ಸಂಸ್ಥೆ( WTO)ಯನ್ನು ಯಾಮಾರಿಸುತ್ತಿವೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ಇನ್ನು ಮುಂದೆ ಭಾರತ ಮತ್ತು ಚೀನಾ WTOದಿಂದ ಲಾಭ ಪಡೆಯಲು ಬಿಡುವುದಿಲ್ಲ ಎಂದು ಗುಡುಗಿರುವ ಟ್ರಂಪ್, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಿಂದ ಭಾರತ ಹಾಗೂ ಚೀನಾವನ್ನು ಕೈಬಿಡಲಾಗುವುದು ಎಂದು ಹೇಳಿದ್ದಾರೆ.

WTO ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಭಾರತ ಹಾಗೂ ಚೀನಾದ ಕುತಂತ್ರವನ್ನು ಸಹಿಸಲು ಸಾಧ್ಯವಿಲ್ಲ ಎಂದು ಟ್ರಂಪ್ ಗುಡುಗಿದ್ದಾರೆ.

Follow Us:
Download App:
  • android
  • ios