ಪಿಜ್ಜಾ ಪ್ರೇಮಿಗಳಿಗೆ Good News..! 49 ರೂ.ಗೆ ಸಿಗ್ತಿದೆ ಪಿಜ್ಜಾ
ಪಿಜ್ಜಾ ತಿನ್ಬೇಕು ಅಂತಾ ಆಸೆಯಾದ್ರೂ ಬೆಲೆ ನೋಡಿ ಅನೇಕರು ಯೋಜನೆ ಕೈ ಬಿಡ್ತಾರೆ. ಇನ್ಮುಂದೆ ಹಾಗೆ ಮಾಡ್ಬೇಕಾಗಿಲ್ಲ. ನಿಮ್ಮಿಷ್ಟದ ಪಿಜ್ಜಾ ಕಡಿಮೆ ಬೆಲೆಗೆ ಸಿಗ್ತಿದೆ. ಡೊಮಿನೊಸ್ ಹೊಸ ಪಿಜ್ಜಾ ಲಾಂಚ್ ಮಾಡಿದೆ.
ಬೆಲೆ ಏರಿಕೆ ಬಿಸಿ ಈಗ ಜನರ ಅಚ್ಚುಮೆಚ್ಚಿನ ಫಾಸ್ಟ್ ಫುಡ್ ಮೇಲೂ ಆಗಿದೆ. ಬಾಯಿ ಚಪ್ಪರಿಸಿ ಫಾಸ್ಟ್ ಫುಡ್ ತಿನ್ನುವ ಜನರ ಜೇಬಿಗೆ ಕತ್ತರಿ ಬೀಳ್ತಿದೆ. ಈ ಬೆಲೆ ಹೆಚ್ಚಳದ ಸಮಯದಲ್ಲೂ ಜನರು ತಮ್ಮಿಷ್ಟದ ಆಹಾರ ಸೇವನೆ ಮಾಡಲು ಸಹಾಯವಾಗಲಿ ಎನ್ನುವ ಕಾರಣಕ್ಕೆ ವಿಶ್ವದ ಅತಿ ದೊಡ್ಡ ಪಿಜ್ಜಾ ಕಂಪನಿ ಡೊಮಿನೋಸ್ ಖುಷಿ ಸುದ್ದಿಯೊಂದನ್ನು ನೀಡಿದೆ. ಪಿಜ್ಜಾ ಪ್ರೇಮಿಗಳು ಬೆಲೆ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಪಿಜ್ಜಾ ತಿನ್ನೋದನ್ನೇ ಬಿಡಬಾರದು ಎಂಬ ಉದ್ದೇಶದಿಂದಲೇ ಡೊಮಿನೋಸ್ ಅತಿ ಕಡಿಮೆ ಬೆಲೆಯ ಪಿಜ್ಜಾ ಪರಿಚಯ ಮಾಡಿದೆ.
ಕಡಿಮೆ ಬೆಲೆಗೆ ಪಿಜ್ಜಾ (Pizza) ನೀಡ್ತಿದೆ ಡೊಮಿನೊಸ್ (Dominos) : ಡೊಮಿನೊಸ್ ಕಂಪನಿ ಅತ್ಯಂತ ಅಗ್ಗದ ಪಿಜ್ಜಾ ಪರಿಚಯ ಮಾಡಿದೆ. ಅದ್ರ ಬೆಲೆ ಕೇವಲ 49 ರೂಪಾಯಿ ಅಂದ್ರೆ ನೀವು ನಂಬ್ಲೇಬೇಕು. ನಿರಂತರವಾಗಿ ಏರ್ತಿರುವ ಬೆಲೆ ನಮ್ಮ ಲಾಭದ ಮೇಲೆ ಪರಿಣಾಮ ಬೀರುತ್ತದೆ ಎಂದು ಡೊಮಿನೊಸ್ ಪಿಜ್ಜಾ ಭಾರತದ ಫ್ರಾಂಚೈಸಿ ಸಿಇಒ (CEO ) ಹೇಳಿದ್ದಾರೆ.
ಗೂಗಲ್ ಉದ್ಯೋಗಿಗಳ ಸ್ಯಾಲರಿ ರಹಸ್ಯ ಲೀಕ್, ಎಂಜಿನಿಯರ್ ಆರಂಭಿಕ ವೇತನ ವಾರ್ಷಿಕ 6 ಕೋಟಿ!
ಎಷ್ಟು ದೊಡ್ಡದಿರುತ್ತೆ 49 ರೂಪಾಯಿ ಪಿಜ್ಜಾ : ಡೊಮಿನೊಸ್ ಪರಿಚಯ ಮಾಡ್ತಿರುವ 49 ರೂಪಾಯಿ ಬೆಲೆಯ ಪಿಜ್ಜಾ 7 ಇಂಚುಗಳಿರಲಿದೆ. ಭಾರತದ ಎಲ್ಲ ಡೊಮಿನೊಸ್ ಶಾಖೆಯಲ್ಲಿ ನಿಮಗೆ 49 ರೂಪಾಯಿ ಬೆಲೆಯ ಪಿಜ್ಜಾ ಸಿಗಲಿದೆ. ಬೆಲೆ ಏರಿಕೆ ಕಾರಣಕ್ಕೆ ಗ್ರಾಹಕರು ಕಡಿಮೆ ಆಹಾರ ಸೇವನೆ ಮಾಡ್ತಿದ್ದಾರೆ. ಗ್ರಾಹಕರನ್ನು ತೃಪ್ತಿಪಡಿಸುವುದು ನಮ್ಮ ಗುರಿ. ಅತಿ ಕಡಿಮೆ ಬೆಲೆಗೆ ಅವರಿಗೆ ಪಿಜ್ಜಾ ಸಿಗುವಂತಾಗ್ಲಿ ಎನ್ನುವ ಕಾರಣಕ್ಕೆ ನಾವು ಇದನ್ನು ಲಾಂಚ್ ಮಾಡಿದ್ದೇವೆ ಎಂದು ಭಾರತದ ಸಿಇಒ ಹೇಳಿದ್ದಾರೆ. ಭಾರತದಲ್ಲಿ 49 ರೂಪಾಯಿಗೆ ಫಿಜ್ಜಾ ಸಿಕ್ಕಿದ್ರೆ, ಚೀನಾದ ಶಾಂಘೈನಲ್ಲಿ 3.80 ಡಾಲರ್ ಗೆ ಪಿಜ್ಜಾ ಸಿಗ್ತಿದೆ. ಅದೇ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಅತಿ ಕಡಿಮೆ ಬೆಲೆ ಪಿಜ್ಜಾ ಬೆಲೆ 12 ಡಾಲರ್ ಆಗಿದೆ.
ನಿಯಮ ಬದಲಾವಣೆ ಅನಿವಾರ್ಯ : ಡೊಮಿನೊಸ್, ಪಿಜ್ಜಾ ಹಟ್, ಬರ್ಗರ್ ಕಿಂಗ್ ಸೇರಿದಂತೆ ಅನೇಕ ಕಂಪನಿಗಳಿಗೆ ತಮ್ಮ ರಣನೀತಿ ಬದಲಿಸುವ ಅನಿವಾರ್ಯತೆ ಎದುರಾಗಿದೆ. ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕೆಂದ್ರೆ ಈ ಕೆಲಸ ಮಾಡುವ ಅವಶ್ಯಕತೆಯಿದೆ. ಭಾರತದ ಮಾರುಕಟ್ಟೆಯಲ್ಲಿ ಉಳಿದ ಫಾಸ್ಟ್ ಫುಡ್ ಗಳ ಬೆಲೆ ತುಂಬಾ ಕಡಿಮೆಯಿದೆ. ನಿಮಗೆ ಸಮೋಸಾ ಕೇವಲ 10 ರೂಪಾಯಿಗೆ ಸಿಗುತ್ತದೆ. ಜನರು ಪಿಜ್ಜಾ ಮೇಲೆ ಆಸೆಯಿದ್ರೂ ಬೆಲೆ ಹೆಚ್ಚಾಗಿರುವ ಕಾರಣಕ್ಕೆ ಪಿಜ್ಜಾ ಬದಲು ಬೇರೆ ಫಾಸ್ಟ್ ಫುಡ್ ಮೊರೆ ಹೋಗ್ತಾರೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಬೇಕು ಎಂದಾದ್ರೆ ಅಗ್ಗದ ಬೆಲೆಯ ಫಾಸ್ಟ್ ಫುಡ್ ಜೊತೆ ಪಿಜ್ಜಾ ಸ್ಪರ್ಧೆ ನೀಡ್ಲೇಬೇಕಿದೆ.
ಆಂಧ್ರಪ್ರದೇಶದಲ್ಲಿ ಒಂದು ಪುಲಸ ಮೀನು 20 ಸಾವಿರಕ್ಕೆ ಮಾರಾಟ, ಅಂಥದ್ದೇನಿದೆ ಈ ಮೀನಿನಲ್ಲಿ!
ಬೇರೆ ಕಂಪನಿಗಳು ತರ್ತಿವೆ ಅಗ್ಗದ ಯೋಜನೆ : ಡೊಮಿನೊಸ್ ಮಾತ್ರ ತನ್ನ ಪಿಜ್ಜಾ ಬೆಲೆಯನ್ನು ಕಡಿಮೆ ಮಾಡಿಲ್ಲ. ಪಿಜ್ಜಾ ಹಟ್ ಹಿಂದಿನ ವರ್ಷವೇ 79 ರೂಪಾಯಿ ಆರಂಭಿಕ ಬೆಲೆಯ ಪಿಜ್ಜಾ ಬಿಡುಗಡೆ ಮಾಡಿದೆ. ಮೆಕ್ಡೊನಾಲ್ಡ್ ಕೂಡ ಜೂನ್ ನಲ್ಲಿ ತನ್ನ ಲಂಚ್ ಬೆಲೆಯನ್ನು ಅರ್ಧಕ್ಕೆ ಇಳಿಸಿದೆ.
ಬದಲಾಗ್ತಿದ್ದಾರೆ ಜನರು : ಆದಾಯ ಹೆಚ್ಚಳ ಹಾಗೂ ಜೀವನ ಶೈಲಿಯಲ್ಲಿ ಸುಧಾರಣೆ ಕಂಡಿದ್ದ ಜನರು ಕೆಲ ವರ್ಷಗಳಿಂದ ಬದಲಾಗಿದ್ದರು. ಅವರ ಖರ್ಚು ಹೆಚ್ಚಾಗಿತ್ತು. ಆದ್ರೆ ಈಗ ಬೆಲೆ ಏರಿಕೆ ಬಿಸಿ ಮತ್ತೆ ಜನಸಾಮಾನ್ಯರನ್ನು ತಟ್ಟಿದೆ. ಹಾಗಾಗಿ ಜನರು ಖರ್ಚಿನ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಡೊಮಿನೊಸ್ ನಂತಹ ಕಂಪನಿಗೆ ಈ ವರ್ಷ ಲಾಭ ಕಡಿಮೆ. ಮುಂದಿನ ದಿನಗಳಲ್ಲೂ ಈ ಕಂಪನಿಗಳು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ.