ನವದೆಹಲಿ (ಫೆ.12): ಕೋವಿಡ್‌ ಮತ್ತು ಸೀಮಿತ ಸಂಖ್ಯೆಯ ವಿಮಾನಗಳ ಸೇವೆ ಹಿನ್ನೆಲೆಯಲ್ಲಿ ಟಿಕೆಟ್‌ ದರದ ಮೇಲೆ ಹೇರಿದ್ದ ನಿಯಂತ್ರಣವನ್ನು ಕೇಂದ್ರ ಸರ್ಕಾರ ಮತ್ತಷ್ಟು ಸಡಿಲಗೊಳಿಸಿದೆ. 

ಹೊಸ ನಿರ್ಧಾರದ ಅನ್ವಯ, ಸಂಚಾರದ ದೂರದ ಅನ್ವಯ ಕನಿಷ್ಠ ಶೇ.10ರಷ್ಟುಮತ್ತು ಗರಿಷ್ಠ ಶೇ.30ರಷ್ಟುದರ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ. 

ಸರ್ಕಾರಿ ವಿಮಾನ ಹಾರಾಟಕ್ಕೆ ಅನುಮತಿ ಕೊಡದ ಸರ್ಕಾರ, 20 ನಿಮಿಷ ಕಾದ ಗವರ್ನರ್! ...

ಹೀಗಾಗಿ ದರಗಳು ಕನಿಷ್ಠ 200 ರು.ನಿಂದ ಗರಿಷ್ಠ 5600 ರು.ವರೆಗೂ ಏರಿಕೆಯಾಗಲಿದೆ.

ಈ ನಡುವೆ ವಿಮಾನಗಳಲ್ಲಿ ಸೀಟಿನ ಒಟ್ಟು ಸಾಮರ್ಥ್ಯದ ಶೇ.80ರಷ್ಟುಮಾತ್ರವೇ ಭರ್ತಿ ಮಾಡಬೇಕೆಂಬ ನಿಯಮ ಮಾ.31 ಅಥವಾ ಮುಂದಿನ ಆದೇಶದವರೆಗೂ ಜಾರಿಯಲ್ಲಿರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.