ಈ ಶಾಪ್‌ಲ್ಲಿ 10 ನಿಮಿಷಕ್ಕೆ 45 ಸಾವಿರ ವಸ್ತು ಮಾರಾಟ, ವಾರ್ಷಿಕ 49 ಸಾವಿರ ಕೋಟಿ ರೂ ಆದಾಯ!

ಭಾರತದ ಈ ಜನಪ್ರಿಯ ಮಳಿಗೆಯಲ್ಲಿ 10 ನಿಮಿಷಕ್ಕೆ ಬರೋಬ್ಬರಿ 45,000 ಗ್ರೋಸರಿ ಉತ್ಪನ್ನ ಮಾರಾಟವಾಗುತ್ತೆ. ವರ್ಷದ ಆದಾಯ ಬರೋಬ್ಬರಿ 49,722 ಕೋಟಿ ರೂಪಾಯಿ. 

Dmart retail store sell 45000 product in 10 minutes rs 49722 crore revenue in year ckm

ನವದೆಹಲಿ(ನ.06) ಭಾರತದಲ್ಲಿ ಹಲವು ಮಾಲ್‌ಗಳಿವೆ, ಸೂಪರ್ ಮಾರ್ಕೆಟ್‌ಗಳಿವೆ. ಆನ್‌ಲೈನ್ ಶಾಪಿಂಗ್ ಸೇರಿದಂತೆ ಆಹಾರ ಸಾಮಾಗ್ರಿ ಖರೀದಿಸಲು ಹಲವು ವೇದಿಕೆಗಳಿದೆ. ಆದರೆ ಈ ಶಾಪ್‌ಗೆ ಜನ ಮುಗಿ ಬೀಳುತ್ತಾರೆ. ಕೇವಲ 10 ನಿಮಿಷದಲ್ಲಿ 45,000 ಆಹಾರ ಸಾಮಾಗ್ರಿ ಸೇರಿದಂತೆ ಹಲವು ಉತ್ಪನ್ನಗಳು ಮಾರಾಟವಾಗುತ್ತದೆ. ಪ್ರತಿ ದಿನದ ಆದಾಯ ಕೋಟಿ ಕೋಟಿ ರೂಪಾಯಿ. ಇನ್ನು ಕಳೆದ ವರ್ಷದ ಆದಾಯ 49,722 ಕೋಟಿ ರೂಪಾಯಿ. ಇದು ಬೇರೆ ಯಾವುದು ಅಲ್ಲ ಜನರ ನೆಚ್ಚಿನ ಡಿಮಾರ್ಟ್ ಮಳಿಗೆ.

ರಾಧಾಕೃಷ್ಣ ದಮಾನಿ 22 ವರ್ಷಗಳ ಹಿಂದೆ ಆರಂಭಿಸಿದ ಡಿಮಾರ್ಟ್ ಮಳಿಗೆ ಇದೀಗ ಭಾರತದಲ್ಲಿ ಅತೀ ಹೆಚ್ಚು ಉತ್ಪನ್ನ ಮಾರಾಟ ಮಾಡುವ ಹಾಗೂ ಪ್ರತಿ ದಿನ ಗರಿಷ್ಠ ಆದಾಯಗಳಿಸುತ್ತಿರುವ ಮಳಿಗೆಯಾಗಿ ಗುರುತಿಸಿಕೊಂಡಿದೆ. ಬೆಂಗಳೂರು, ಮೈಸೂರು, ಮುಂಬೈ, ದೆಹಲಿ ಸೇರಿದಂತೆ ದೇಶಾದ್ಯಂತ ಡಿಮಾರ್ಟ್ ಮಳಿಗೆ ಲಭ್ಯವಿದೆ. ಸದ್ಯ ದೇಶದಲ್ಲಿ 381 ಮಳಿಗೆ ಹೊಂದಿದೆ. ಡಿಮಾರ್ಟ್ ದಿನದ 14 ಗಂಟೆ ತೆರೆದಿರುತ್ತದೆ. 10 ನಿಮಿಷಕ್ಕೆ 45,000 ಉತ್ಪನ್ನ ಮಾರಾಟವಾಗುತ್ತದೆ. ಪ್ರತಿ ಗಂಟೆಗೆ 2.7 ಲಕ್ಷ ರೂಪಾಯಿ ಆದಾಯ ಮಾಡುತ್ತಿದೆ. 2024ರ ಸಾಲಿನಲ್ಲಿ ಡಿಮಾರ್ಟ್ ಮಳಿಗೆ ಗಳಿಸಿದ ಆದಾಯ ಬರೋಬ್ಬರಿ 49,722 ಕೋಟಿ ರೂಪಾಯಿ.

1,001 ಕೋಟಿ ರೂ.ಗೆ ಮಲಬಾರ್ ಹಿಲ್ ಬಂಗ್ಲೆ ಖರೀದಿಸಿ D ಮಾರ್ಟ್ ಸ್ಥಾಪಕ!

2002ರಲ್ಲಿ ರಾಧಕೃಷ್ಣ ದಮಾನಿ ರಿಟೇಲ್ ಮಳಿಗೆ ಆರಂಭಿಸಿದ್ದಾರೆ. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಉತ್ಪನ್ನ ಸಿಗಬೇಕು, ಆಹಾರ ಸಾಮಾಗ್ರಿ, ದಿನ ಬಳಕೆ ವಸ್ತುಗಳಿಗೆ ಜನಸಾಮಾನ್ಯರು ದುಬಾರಿ ಬೆಲೆ ತೆರಬಾರದು. ಕಡಿಮೆ ಖರ್ಚಿನಲ್ಲಿ ದಿನ ಸಾಗಬೇಕು. ಇನ್ನು ಈ ಎಲ್ಲಾ ವಸ್ತುಗಳು ಒಂದೆಡೆ ಸಿಗಬೇಕು. ಇದಕ್ಕಾಗಿ ಜನಸಾಮಾನ್ಯ ಅಲೆಯುವಂತಿರಬಾರದು ಅನ್ನೋ ಉದ್ದೇಶದಿಂದ ದಮಾನಿ ಡಿಮಾರ್ಟ್ ಮಳಿಗೆ ಆರಂಭಿಸಿ ಇದೀಗ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. 

ರಾಧಕೃಷ್ಣ ದಮಾನಿ ಒಟ್ಟು ಆಸ್ತಿ ಸರಿಸುಮಾರು 23.7 ಬಿಲಿಯನ್ ಅಮೆರಿಕನ್ ಡಾಲರ್. ದಮಾನಿ ಭಾರತದ ರಿಟೇಲ್ ಕಿಂಗ್ ಎಂದೇ ಗುರುತಿಸಿಕೊಂಡಿದ್ದಾರೆ. ಮುಂಬೈನಲ್ಲಿ ಹುಟ್ಟಿ ಬೆಳೆದ ದಮಾನಿ ಇದೀಗ ಜಗತ್ತೆ ತಿರುಗಿ ನೋಡುವಂತೆ ಉದ್ಯಮ ಸಾಮ್ರಾಜ್ಯ ಕಟ್ಟಿದ ಛಲಗಾರ. ಡಿಮಾರ್ಟ್ ಬಳಿಕ ಭಾರತೀಯ ಹಾಗೂ ವಿದೇಶಿ ಕಂಪನಿಗಳು ಭಾರತದಲ್ಲಿ ರಿಟೇಲ್ ಮಳಿಗೆ ಆರಂಭಿಸಿದೆ. ಆದರೆ ಈ ಮಟ್ಟಕ್ಕೆ ಯಶಸ್ಸು ಕಂಡಿಲ್ಲ. ದಮಾನಿ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ವಿಎಸ್‌ಟಿ ಇಂಡಸ್ಚ್ರಿ, ಇಂಡಿಯಾ ಸಿಮೆಂಟ್ ಸೇರಿದಂತೆ 14 ಕಂಪನಿಗಳಲ್ಲಿ ಪ್ರಮುಖ ಪಾಲು ಹೊಂದಿದ್ದಾರೆ. 2023ರಲ್ಲಿ ದಮಾನಿ 1,238 ಕೋಟಿ ರೂಪಾಯಿಗೆ ಲಕ್ಷುರಿ ಮನೆ ಖರೀದಿಸಿದ್ದಾರೆ. 2002ರಲ್ಲಿ ಮುಂಬೈನ ಪೊವೈಬಳಿ ಮೊದಲ ಡಿಮಾರ್ಟ್ ಮಳಿಗೆ ಆರಂಭಗೊಂಡಿತ್ತು. ಬಳಿಕ ಮಹಾರಾಷ್ಟ್ರದಲ್ಲಿ 29 ಮಳಿಗೆಯಾಗಿ ವಿಸ್ತರಣೆಗೊಂಡಿತ್ತು. ಮಹಾರಾಷ್ಟ್ರದಿಂದ 2010ರಲ್ಲಿ ಗುಜರಾತ್‌ಗೆ ವ್ಯಾಪಾರ ವಿಸ್ತರಣೆಗೊಂಡಿದೆ. 2013ರ ವೇಳೆಗೆ ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವು ನಗರಗಳಿಗೆ ವಿಸ್ತರಣೆಗೊಂಡಿದೆ. 

ಸ್ಟಾಕ್ ಮಾರ್ಕೆಟ್‌ನಲ್ಲೂ ದಮಾನಿ ಭಾರಿ ಲಾಬ ಗಳಿಸಿದ್ದಾರೆ. ಹಲವು ಪ್ರಮುಖ ಶೇರುಗಳನ್ನು ಖರೀದಿಸಿ ಸಂಚಲನ ಸೃಷ್ಟಿಸಿದ್ದಾರೆ. ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಗರಿಷ್ಠ ಷೇರು ಹೊಂದಿದ ವ್ಯಕ್ತಿ ಅನ್ನೋ ಹೆಗ್ಗಳಿಕೆಗೂ ದಮಾನಿ ಪಾತ್ರರಾಗಿದ್ದಾರೆ. ಸದ್ಯ ದಮಾನಿಯ ಹಲವು ಉದ್ಯಮಗಳ ಆಡಳಿತವನ್ನು ದಮಾನಿ ಮಕ್ಕಳಾದ ಮಂಜ್ರಿ, ಜ್ಯೋತಿ ಹಾಗೂ ಮಧು ನೋಡಿಕೊಳ್ಳುತ್ತಿದ್ದಾರೆ.  ಸಣ್ಣ ಉದ್ಯಮದಿದಂ ಆರಂಭಿಸಿದ ಭಾರತದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ರಾಧಕೃಷ್ಣ ದಮಾನಿ ಗುರುತಿಸಿಕೊಂಡಿದ್ದಾರೆ. ಹಲವು ಏಳು ಬೀಳಗಳ ನಡುವೆ ಅತೀ ದೊಡ್ಡ ಉದ್ಯಮ ಕಟ್ಟಿ ಬೆಳೆಸಿದ್ದಾರೆ. 

ಸಿಂಗಲ್ ಬಿಎಚ್ ಕೆಯಿಂದ ಸಾವಿರ ಕೋಟಿ ಐಷಾರಾಮಿ ಬಂಗಲೆ;ಡಿಮಾರ್ಟ್ ಸ್ಥಾಪಕನ ಬದುಕು ಬದಲಾಗಿದ್ದು ಹೇಗೆ?
 

Latest Videos
Follow Us:
Download App:
  • android
  • ios