ಮುಂಬೈ(ಎ.03): ದೇಶದ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಬಂಗ್ಲೆಯೊಂದಕ್ಕೆ ಬರೋಬ್ಬರಿ 1,001 ಕೋಟಿ ರೂಪಾಯಿ ನೀಡಿ ಖರೀದಿಸಲಾಗಿದೆ. ಡಿ ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮನಿ ಈ ಬಹುಕೋಟಿ ಮಲಬಾರ್ ಹಿಲ್ ಬಂಗಲೆ ಖರೀದಿಸಿದ್ದಾರೆ. 

ಡಿ-ಮಾರ್ಟ್‌ ಒಡೆಯ ದಮಾನಿ ಸಂಪತ್ತು ಈಗಲೂ ಏರಿಕೆ!...

ದಕ್ಷಿಣ ಮುಂಬೈನಲ್ಲಿರುವ ಈ ಮಲಬಾರ್ ಹಿಲ್ ಬಂಗಲೆ, 1.5 ಎಕರೆ ಪ್ರದೇಶದಲ್ಲಿದೆ. ಒಟ್ಟು 60,000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, 2 ಅಂತಸ್ತು ಹೊಂದಿದೆ. ರಾಧಾಕಿಶನ್ ದಮನಿ ಹಾಹೂ ಸಹೋದರ ಗೋಪಾಲಕೃಷ್ಣ ದಮನಿ ಜೊತೆಯಾಗಿ ಈ ಬಂಗಲೆ ಖರೀದಿಸಿದ್ದಾರೆ. ಇದು ದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಡೆದ ಅತೀ ದುಬಾರಿ ವ್ಯವಹಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಬಂಗಲೆ ಮಾರುಕಟ್ಟೆ ಬೆಲೆ 724 ಕೋಟಿ ರೂಪಾಯಿ. ಇನ್ನು 30.03 ಕೋಟಿ ರೂಪಾಯಿಯನ್ನು ಕೇವಲ ಸ್ಟಾಂಪ್ ಡ್ಯೂಟಿಗೆ  ನೀಡಲಾಗಿದೆ. ಮಾರ್ಚ್ 21, 2021ಕ್ಕೆ ಈ ಬಂಗಲೆ ರಿಜಿಸ್ಟ್ರೇಶನ್ ಮಾಡಲಾಗಿದೆ. 

ದೇಶದ ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಡಿಮಾರ್ಟ್ ಸ್ಟೋರ್ ಜನಪ್ರಿಯವಾಗಿದೆ. ಕಡಿಮೆ ಬೆಲೆಗೆ ದಿನಸಿ, ಗೃಹಬಳಕೆ ಉಪಯೋಗಿ ವಸ್ತುಗಳು, ಟೆಕ್ಸ್‌ಟೈಲ್ ಸೇರಿದಂತೆ ಹಲವು ವಸ್ತುಗಳ ಮಾರಾಟ ಮಳಿಗೆಯಾಗಿರುವ ಡಿ ಮಾರ್ಟ್ ಪ್ರತಿ ದಿನ ಕೋಟಿ ಕೋಟಿ ವ್ಯವಹಾರ ನಡೆಸುತ್ತಿದೆ.