Asianet Suvarna News Asianet Suvarna News

ನೇರ ತೆರಿಗೆ ಸಂಗ್ರಹದಲ್ಲಿ 50 ಸಾವಿರ ಕೋಟಿ ಖೋತಾ..!

ಮೂಲ ಬಜೆಟ್‌ ಅಂದಾಜಿನ ಪ್ರಕಾರ 2018-19ನೇ ಸಾಲಿನಲ್ಲಿ 11.5 ಲಕ್ಷ ಕೋಟಿ ರು. ನೇರ ತೆರಿಗೆ ಸಂಗ್ರಹವನ್ನು ಸರ್ಕಾರ ನಿರೀಕ್ಷೆ ಮಾಡಿತ್ತು. ಆದರೆ ಇದನ್ನು ಪರಿಷ್ಕರಣೆ ಮಾಡಿ 12 ಲಕ್ಷ ಕೋಟಿ ರು.ಗೆ ಹೆಚ್ಚಳ ಮಾಡಲಾಗಿತ್ತು. 

Direct tax collection may fall short of Rs 50 thousand crores in Financial Year 19 Report
Author
New Delhi, First Published Apr 10, 2019, 12:33 PM IST

ನವದೆಹಲಿ(ಏ.10): 2018-19ನೇ ಸಾಲಿನ ನೇರ ತೆರಿಗೆ ಸಂಗ್ರಹದಲ್ಲಿ 50 ಸಾವಿರ ಕೋಟಿ ರುಪಾಯಿನಷ್ಟು ಕೊರತೆ ಉಂಟಾಗಬಹುದು ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ.

ಮೂಲ ಬಜೆಟ್‌ ಅಂದಾಜಿನ ಪ್ರಕಾರ 2018-19ನೇ ಸಾಲಿನಲ್ಲಿ 11.5 ಲಕ್ಷ ಕೋಟಿ ರು. ನೇರ ತೆರಿಗೆ ಸಂಗ್ರಹವನ್ನು ಸರ್ಕಾರ ನಿರೀಕ್ಷೆ ಮಾಡಿತ್ತು. ಆದರೆ ಇದನ್ನು ಪರಿಷ್ಕರಣೆ ಮಾಡಿ 12 ಲಕ್ಷ ಕೋಟಿ ರುಪಾಯಿಗೆ ಹೆಚ್ಚಳ ಮಾಡಲಾಗಿತ್ತು. ಈಗಿನ ಅಂದಾಜಿನ ಪ್ರಕಾರ 11.5 ಲಕ್ಷ ಕೋಟಿ ರು. ಮಾತ್ರವೇ ಸಂಗ್ರಹವಾಗುವ ಸಾಧ್ಯತೆ ಇದೆ. ನಿರೀಕ್ಷಿತ ಆದಾಯದಲ್ಲಿ 50 ಸಾವಿರ ಕೋಟಿ ರು. ಖೋತಾ ಆಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಾರಿ 7.44 ಲಕ್ಷ ಕೋಟಿ ರು.ನಷ್ಟು ಜಿಎಸ್‌ಟಿ ಸಂಗ್ರಹವಾಗಬಹುದು ಎಂಬ ಅಂದಾಜನ್ನು ಸರ್ಕಾರ ಹೊಂದಿತ್ತು. ಅದನ್ನು ಈಗಾಗಲೇ 6.44 ಲಕ್ಷ ಕೋಟಿ ರು.ಗೆ ಇಳಿಸಿದೆ. ಈಗ ನೇರ ತೆರಿಗೆ ಸಂಗ್ರಹ ಕೂಡ ಕುಸಿದಿರುವುದರಿಂದ ವಿತ್ತೀಯ ಕೊರತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios