Direct Tax Collection: ದಾಖಲೆಯ ನೇರ ತೆರಿಗೆ ಸಂಗ್ರಹ; ಮೆಟ್ರೋ ನಗರಗಳಲ್ಲಿ ಮುಂಬೈಗೆ ಪ್ರಥಮ, ಬೆಂಗಳೂರಿಗೆ ದ್ವಿತೀಯ ಸ್ಥಾನ
*2021-22ನೇ ಆರ್ಥಿಕ ಸಾಲಿನಲ್ಲಿ ಮುಂಬೈಯಲ್ಲಿ 4.48 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹ
*ಬೆಂಗಳೂರಿನಲ್ಲಿ1.69 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹ
*2021-2022ನೇ ಆರ್ಥಿಕ ಸಾಲಿನಲ್ಲಿ ನೇರ ತೆರಿಗೆಗಳ ಸಂಗ್ರಹದಲ್ಲಿ ಶೇ.49 ಹೆಚ್ಚಳ
ನವದೆಹಲಿ (ಏ.8): 2021-22ನೇ ಆರ್ಥಿಕ ಸಾಲಿನಲ್ಲಿ ಮುಂಬೈ ಅತೀಹೆಚ್ಚು ನೇರ ತೆರಿಗೆಗಳನ್ನು (Direct Taxes) ಸಂಗ್ರಹಿಸೋ ಮೂಲಕ ಮೆಟ್ರೋ (Metro) ನಗರಗಳಲ್ಲಿ (Cities) ಮೊದಲ ಸ್ಥಾನ ಗಳಿಸಿದೆ. ಮುಂಬೈನಲ್ಲಿ (Mumbai) 2021-22ನೇ ಆರ್ಥಿಕ ಸಾಲಿನಲ್ಲಿ 4.48 ಲಕ್ಷ ಕೋಟಿ ರೂ. ( 4.48 ಟ್ರಿಲಿಯನ್ ರೂ.) ತೆರಿಗೆ (Tax) ಸಂಗ್ರಹವಾಗಿದೆ. ಇನ್ನು ನೇರ ತೆರಿಗೆಗಳ ಸಂಗ್ರಹದಲ್ಲಿ ಬೆಂಗಳೂರು (Bengaluru) ದ್ವಿತೀಯ ಸ್ಥಾನದಲ್ಲಿದ್ದು, ಕಳೆದ ಸಾಲಿನಲ್ಲಿ 1.69 ಲಕ್ಷ ಕೋಟಿ ರೂ. (1.69 ಟ್ರಿಲಿಯನ್ ರೂ) ಸಂಗ್ರಹವಾಗಿದೆ.
ಮುಂಬೈ ಹಾಗೂ ಬೆಂಗಳೂರು ನೇರ ತೆರಿಗೆಗಳ ಸಂಗ್ರಹದಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಲ್ಲಿದ್ದರೆ, ದೆಹಲಿ (Delhi) ನಂತರದ ಸ್ಥಾನದಲ್ಲಿದೆ. ದೆಹಲಿಯಲ್ಲಿ 1.66 ಟ್ರಿಲಿಯನ್ ರೂ. ಸಂಗ್ರಹವಾಗಿದೆ. ಇನ್ನು ಚೆನ್ನೈನಲ್ಲಿ(Chennai) 0.9 ಟ್ರಿಲಿಯನ್ ರೂ. ನೇರ ತೆರಿಗೆ ಸಂಗ್ರಹವಾಗಿದ್ದರೆ, ಪುಣೆಯಲ್ಲಿ(Pune) 0.86 ಟ್ರಿಲಿಯನ್ ರೂ. ಸಂಗ್ರಹವಾಗಿದೆ. ಹೈದರಾಬಾದ್ ನಲ್ಲಿ(Hyderabad) 0.83 ಟ್ರಿಲಿಯನ್ ರೂ. ಸಂಗ್ರಹವಾಗಿದೆ. ಅಹ್ಮಮದಾಬಾದ್ ನಲ್ಲಿ(Ahmedabad) 0.7 ಟ್ರಿಲಿಯನ್ ರೂ. ಸಂಗ್ರಹವಾಗಿದೆ. ಚಂಡೀಘಢನಲ್ಲಿ 0.6 ಟ್ರಿಲಿಯನ್ ರೂ., ಕೋಲ್ಕತ್ತದಲ್ಲಿ 0.55 ಟ್ರಿಲಿಯನ್ ರೂ. ಹಾಗೂ ಕಾನ್ಪುರದಲ್ಲಿ 0.31 ಟ್ರಿಲಿಯನ್ ರೂ. ಸಂಗ್ರಹವಾಗಿದೆ.
ದೇಶದಲ್ಲಿ ಕೆಜಿಗೆ 300 ರೂಪಾಯಿ ದಾಟಿದ ನಿಂಬೆಹಣ್ಣು ಬೆಲೆ, ಕೈಗೆ ಸಿಗದ ತರಕಾರಿ, ಹೀಗೆ ಇದ್ರೆ ಕಷ್ಟ ಎಂದ ಆರ್ ಬಿಐ!
ನೇರ ತೆರಿಗೆ ಸಂಗ್ರಹದಲ್ಲಿ ಶೇ.49 ಹೆಚ್ಚಳ
2021-2022ನೇ ಆರ್ಥಿಕ ಸಾಲಿನಲ್ಲಿ ನೇರ ತೆರಿಗೆಗಳ ಸಂಗ್ರಹದಲ್ಲಿ ಶೇ.49 ಹೆಚ್ಚಳ ಕಂಡುಬಂದಿದ್ರೆ, ಪರೋಕ್ಷ ತೆರಿಗೆಗಳ ಸಂಗ್ರಹದಲ್ಲಿ ಶೇ.30ರಷ್ಟು ಏರಿಕೆ ಕಂಡುಬಂದಿದೆ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ತಿಳಿಸಿದ್ದಾರೆ. ಕಳೆದ ಆರ್ಥಿಕ ಸಾಲಿನಲ್ಲಿ 14.10 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದ್ದು, ಇದು ಬಜೆಟ್ ಅಂದಾಜು 3.02 ಲಕ್ಷ ಕೋಟಿ ರೂ.ಗಿಂತ ಅಧಿಕವಾಗಿದೆ ಎಂದು ಬಜಾಜ್ ಹೇಳಿದ್ದಾರೆ. ಇದು ಸಾರ್ವಕಾಲಿಕ ಗರಿಷ್ಠ ಸಂಗ್ರಹಣೆಯಾಗಿದ್ದು, ಐತಿಹಾಸಿಕ ದಾಖಲೆಯಾಗಿದೆ.
ಬದಲಾಗದ ಆದಾಯ ತೆರಿಗೆ ಸ್ಲ್ಯಾಬ್
ಕೇಂದ್ರದ ಬಜೆಟ್ (Union Budget 2022) ಮಂಡನೆಯಾಗಿದ್ದು, ಆದಾಯ ತೆರಿಗೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು. 2022ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿಗೆ ಸಂಬಂಧಿಸಿದ ಆದಾಯ ತೆರಿಗೆ ಸ್ಲ್ಯಾಬ್ ಹಾಗೂ ಆದಾಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.
RBI: ಬೆಂಗಳೂರು ಮೂಲದ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ
2022-23ನೇ ಸಾಲಿನಲ್ಲಿ ವೈಯಕ್ತಿಕ ಮೂಲ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸಬಹುದೆಂಬ ನಿರೀಕ್ಷೆಯಿತ್ತು. ಮೂಲ ತೆರಿಗೆ ವಿನಾಯ್ತಿ ಮಿತಿಯನ್ನು 2014 ರಲ್ಲಿ ಕೊನೆಯದಾಗಿ ಬದಲಾಯಿಸಲಾಗಿತ್ತು. ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮೂಲ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 2.5 ಲಕ್ಷಕ್ಕೆ ಏರಿಸಿದ್ದರು. ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ 60ರಿಂದ 80 ವರ್ಷದವರಿಗೆ 3 ಲಕ್ಷ ರೂಪಾಯಿ, 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರೂಪಾಯಿಯನ್ನು ತೆರಿಗೆ ವಿನಾಯಿತಿ ಮಿತಿಯಾಗಿ ನಿಗದಿಪಡಿಸಲಾಗಿತ್ತು. ಆದ್ರೆ 2014ರ ಬಳಿಕ ಮೂಲ ತೆರಿಗೆ ವಿನಾಯಿತಿ ಮಿತಿಯಲ್ಲಿ ಬದಲಾವಣೆ ಆಗಿಲ್ಲ.
ನೇರ ತೆರಿಗೆ ಅಂದ್ರೇನು?
ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ತೆರಿಗೆ ವಿಧಿಸಿದ ಸಂಸ್ಥೆಗೆ (ಸರ್ಕಾರಕ್ಕೆ) ನೇರವಾಗಿ ಪಾವತಿಸೋ ತೆರಿಗೆಯೇ ನೇರ ತೆರಿಗೆ. ಆದಾಯ ತೆರಿಗೆ, ಕಾರ್ಪೋರೇಟ್ ತೆರಿಗೆ, ನೈಜ್ಯ ಆಸ್ತಿ ತೆರಿಗೆ, ವೈಯಕ್ತಿಕ ಆಸ್ತಿ ಇವೆಲ್ಲವೂ ನೇರ ತೆರಿಗೆಗಳಾಗಿವೆ. ನೇರ ತೆರಿಗೆಯನ್ನು ಇನ್ನೊಬ್ಬ ವ್ಯಕ್ತಿ ಅಥವಾ ಸಂಸ್ಥೆಗೆ ವರ್ಗಾಯಿಸಲು ಸಾಧ್ಯವಿಲ್ಲ.