ನವದೆಹಲಿ (ಅ. 07) ಸಾರ್ವಜನಿಕ ವಲಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ ಬಿಐ) ನೂತನ ಅಧ್ಯಕ್ಷರಾಗಿ ದಿನೇಶ್‌ ಕುಮಾರ್‌ ಖರಾ ಅವರನ್ನು  ನೇಮಕ ಮಾಡಲಾಗಿದೆ.

ಹಾಲಿ ಅಧ್ಯಕ್ಷ ರಜನೀಶ್‌ ಕುಮಾರ್‌ ಅವರ ಅಧಿಕಾರಾವಧಿ ಅಕ್ಟೋಬರ್‌ 7ರಂದು ಮುಕ್ತಾಯವಾಗಿದೆ.  ಹಾಗಾಗಿ  ಹೊಸ ಅಧ್ಯಕ್ಷರ ನೇಮಕವಾಗಿದೆ. 

1984ರಲ್ಲಿ ಎಸ್‌ಬಿಐ ಕುಟುಂಬ ಸೇರಿದ್ದ ಖರಾ, 2017ರಲ್ಲಿ 5 ಅಧೀನ ಬ್ಯಾಂಕ್‌ ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಗಳನ್ನು ಎಸ್‌ಬಿಐ ಜತೆ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರ ನಿಭಾಯಿಸಿದ್ದರು.  ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಎಸ್‌ಬಿಐ ನೆಟ್ ಬ್ಯಾಂಕಿಂಗ್ ನೋಂದಣಿ ಮಾಡಿಕೊಳ್ಳುವುದು ಹೇಗೆ?

2017ರಲ್ಲಿಯೇ ಅಧ್ಯಕ್ಷರ ಹುದ್ದೆಗೆ  ದಿನೇಶ್‌ ಕುಮಾರ್‌ ಖರಾ ಸ್ಪರ್ಧೆ ಮಾಡಿದ್ದರು.  ಖಾರಾ ಅವರನ್ನು 2016ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ 3 ವರ್ಷಗಳ ಅವಧಿಗೆ ನೇಮಿಸಲಾಗಿತ್ತು.
 
ದಿನೇಶ್‌ ಕುಮಾರ್‌ ಖರಾ ಅವರು ದೆಹಲಿ ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್‌ ಸ್ಟಡೀಸ್‌ ವಿಭಾಗದ ವಿದ್ಯಾರ್ಥಿ. ಇನ್ನು ಮುಂದೆ  ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್  ದಿನೇಶ್‌ ಕುಮಾರ್‌ ಖರಾ  ಅವರ ನೇತೃತ್ವದಲ್ಲಿ ಮನ್ನಡೆಯಲಿದೆ. 

ಕೊರೋನಾ ಆತಂಕದ ನಡುವೆ ಅರ್ಥವ್ಯವಸ್ಥೆ ಸಹ ದಾರಿ ತಪ್ಪುತ್ತಿದ್ದು  ಸವಾಲುಗಳನ್ನು ಎದುರಿಸಬೇಕಾಗಿದೆ.  ಷೇರು ಮಾರುಕಟ್ಟೆಯಲ್ಲಿಯೂ ಎಸ್‌ಬಿಐ ಅನೇಕ ಸವಾಲುಗಳನ್ನು ಎದುರಿಸುತ್ತಿದೆ.