ಬೆಂಗಳೂರು(ಆ.13): ಭಾರತದಲ್ಲೀಗ ಬಹುತೇಕ ವ್ಯವಹಾರಗಳು, ಹಣ ವರ್ಗಾವಣೆ, ಬಿಲ್ ಪಾವತಿ, ಖರೀದಿ, ವಿತರಣೆ ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಕೊರೋನಾ ವೈರಸ್ ಬಳಿಕ ಮನೆಯಲ್ಲೇ ಕೂತು ಆನ್‌ಲೈನ್ ಮೂಲಕ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಡಿಮಾನಿಟೈಸೇಶನ್ ಬಳಿಕ ಹಣದ ವ್ಯವಹಾರಗಳು ನೆಟ್‌ಬ್ಯಾಕಿಂಗ್, UPI ಟ್ರಾನ್ಸ್‌ಕ್ಷಾನ್ ಮೂಲಕವೇ ನಡೆಯುತ್ತಿದೆ. ಹೀಗಾಗಿ ಹೆಚ್ಚಿನವರು ತಮ್ಮ ತಮ್ಮ ಬ್ಯಾಂಕ್ ಮೂಲಕ ನೆಟ್‌ಬ್ಯಾಕಿಂಗ್ ಸೇವೆ ಉಪಯೋಗಿಸುತ್ತಿದ್ದಾರೆ. ಹೀಗೆ SBI ಗ್ರಾಹಕರು ಇದುವರೆಗೆ ನೆಟ್‌ಬ್ಯಾಕಿಂಗ್ ನೋಂದಾವಣಿ ಮಾಡದ ಗ್ರಾಹಕರಿಗೆ ಸುಲಭ ವಿಧಾನದ ಮೂಲಕ ರಿಜಿಸ್ಟ್ರೇಶನ್ ಮಾಹಿತಿ ನೀಡಲಾಗಿದೆ.

SBI ಗ್ರಾಹಕರೇ ಗಮನಿಸಿ, ಜುಲೈ 1 ರಿಂದ ATM ಹಣ ಪಡೆಯುವ ನಿಯಮ ಬದಲು!.

ಕೊರೋನಾ ವೈರಸ್ ಕಾರಣ ಮನೆಯಿಂದ ಹೊರಬಂದ ವ್ಯವಹಾರ ನಡೆಸುವುದೇ ಅಸಾಧ್ಯವಾಗಿದೆ. ಇಷ್ಟೇ ಅಲ್ಲ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತೀ ದೊಡ್ಡ ಸವಾಲು. ಹೀಗಿರುವಾಗ ಬ್ಯಾಂಕ್ ಶಾಖೆಗೆ ತೆರಳಿ ಕ್ಯೂ ನಿಲ್ಲುವುದು, ಅರ್ಜಿ ಭರ್ತಿ ಮಾಡಿ, ಕೌಂಟರ್‌ಗೆ ತೆರಳಿ ಕೆಲಸ ಕಾರ್ಯ ಮುಗಿಸುವ ವೇಳೆ ನಾವು ಹಲವರ ಸಂಪರ್ಕಕ್ಕೆ ಬಂದಿರುತ್ತೇವೆ. ಹಲವು ವಸ್ತುಗಳನ್ನು ಕೈಯಿಂದ ಮುಟ್ಟಬೇಕಾದ ಅನಿವಾರ್ಯತೆಲ್ಲಿರುತ್ತೇವೆ. ಹೀಗಾಗಿ ನೆಟ್‌ಬ್ಯಾಕಿಂಗ್ ಮೂಲಕ ಮನೆಯಲ್ಲೇ ಕುಳಿತು ಸುಲಭವಾಗಿ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಗಿಸಬಹುಹುದು.

SBI ಬ್ಯಾಂಕ್ ಶಾಖೆಗಳ ಟೈಮಿಂಗ್ಸ್ ಬದಲಾವಣೆ

SBI ಗ್ರಾಹಕರಿಗೆ ಹಲವು ಆಯ್ಕೆಗಳನ್ನು ನೀಡುತ್ತಿದೆ. ಜಾಯಿಂಟ್ ಆಕೌಂಟ್ ಹೋಲ್ಡರ್ ಕೂಡ ನೆಟ್‌ಬ್ಯಾಂಕಿಂಗ್ ಸೇವೆ ಉಪಯೋಗಿಸಿಕೊಳ್ಳಬಹುದು. ನೆಟ್‌ಬ್ಯಾಂಕಿಂಗ್ ಮೂಲಕ, ಡಿಮ್ಯಾಟ್ ಆಕೌಂಟ್, ಟರ್ಮ್ ಡೆಪಾಸಿಟ್, ಫೋನ್ ನಂಬರ್ ಬದಲಾವಣೆ, ಶಿಕ್ಷಣ ಸಾಲ, ಗೃಹ ಸಾಲ, ತೆರಿಗೆ ಪಾವತಿ, ಬಿಲ್ ಪಾವತಿ ಸೇರಿದಂತೆ ಹಲವು ಸೇವೆಗಳನ್ನು SBI ತನ್ನ ನೆಟ್‌ಬ್ಯಾಂಕಿಂಗ್ ಗ್ರಾಹಕರಿಗೆ ನೀಡಿದೆ. ಇವೆಲ್ಲವೂ ಬ್ಯಾಂಕ್ ಶಾಖೆಗೆ ತೆರಳದೇ ಮನೆಯಲ್ಲೇ ಕುಳಿತು ನೆಟ್ ಬ್ಯಾಂಕಿಂಗ್ ಮೂಲಕ ಮಾಡಬಹುದು.

SBI ಖಾತೆ ಹೊಂದಿರುವ ಗ್ರಾಹಕರು, ಇದುವರೆಗೆ ನೆಟ್‌ಬ್ಯಾಂಕಿಂಗ್ ರಿಜಿಸ್ಟ್ರೇಶನ್ ಮಾಡದ ಗ್ರಾಹಕರು ಈ ಸುಲಭ ವಿಧಾನದ ಮೂಲಕ ನೋಂದಣಿ ಮಾಡಿಕೊಳ್ಳಬುಹುದು. SBI  ಗ್ರಾಹಕರು ತಮ್ಮ ಮೊಬೈಲ್ ನಂಬರ್‌ನ್ನು ಕಡ್ಡಾಯವಾಗಿ ಬ್ಯಾಂಕ್ ಖಾತೆ ಜೊತೆ ರಿಜಿಸ್ಟ್ರೇಶನ್ ಮಾಡಿಸಿರಬೇಕು(ಖಾತೆ ಆರಂಭಿಸುವಾಗ ಮೊಬೈಲ್ ನಂಬರ್ ದಾಖಲಿಸಿಕೊಂಡಿರುತ್ತಾರೆ, ಒಂದು ವೇಳೆ ಮಾಡಿಲ್ಲದಿದ್ದರೆ ಮತ್ತೊಮ್ಮೆ ಮೊಬೈಲ್ ನಂಬರ್ ನೀಡಬೇಕು)SBI ಬ್ಯಾಂಕ್ ಎಟಿಂ ಕಾರ್ಡ್ ಇರಬೇಕು. ಇಷ್ಟೇ ಅಲ್ಲ ಈ ಮೊದಲು ಆನ್‌ಲೈನ್ ಬ್ಯಾಂಕಿಂಗ್ ಸೇವೆಗೆ ಅರ್ಜಿ ಹಾಕಿರಬಾರದು.

ನೆಟ್‌ಬ್ಯಾಂಕಿಂಗ್ ರಿಜಿಸ್ಟ್ರೇಶನ್ ಮಾಡುವ ಸುಲಭ ವಿಧಾನ:

 • SBI ಬ್ಯಾಂಕ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು( onlinesbi.com)
 • ಅಧಿಕೃತ ವೆಬ್‌ಸೈಟ್‌ನಲ್ಲಿ ‘New User Registration)ನ್ಯೂ ಯೂಸರ್ ರಿಜಿಸ್ಟ್ರೇಶನ್) ಆಯ್ಕೆ ಕ್ಲಿಕ್ ಮಾಡಬೇಕು
 • ಅಕೌಂಟ್ ನಂಬರ್, ಶಾಖೆ ವಿವರ/ಬ್ರಾಂಚ್ ಕೋಡ್, ದೇಶ, ರಿಜಿಸ್ಟರ್ಡ್ ಮೊಬೈಲ್ ನಂಬರ್, CIF ನಂಬರ್ ನಮೂದಿಸಬೇಕು
 • ಎಲ್ಲಾ ವಿವರ ಭರ್ತಿ ಮಾಡಿದ ಬಳಿಕ ಸಬ್ಮಿಟ್(ಸಲ್ಲಿಕೆ) ಬಟನ್ ಒತ್ತಿ
 • ಸಲ್ಲಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕ್ ನಿಮ್ಮ ರಿಜಿಸ್ಟರ್ಡ್ ಮೊಬೈಲ್‌ ನಂಬರ್‌ಗೆ OTP(ಒನ್ ಟೈಮ್ ಪಾಸ್‌ವರ್ಡ್) ಕಳಹಿಸಲಿದೆ, ಈ OTPಯನ್ನು ನಮೂದಿಸಬೇಕು
 • ಆಕ್ಟಿವೇಶನ ಸರ್ವೀಸ್‌ಗಾಗಿ ATM ಕಾರ್ಡ್ ಆಯ್ಕೆಯನ್ನು ಕ್ಲಿಕ್ ಮಾಡಿ ಮುಂದುವರಿಸಿ
 • ಈ ವೇಳೆ ತಾತ್ಕಾಲಿಕ User name ಹಾಗೂ Pasword ಲಭ್ಯವಾಗಲಿದೆ(ಇದನ್ನು ಬರೆದಿಟ್ಟುಕೊಳ್ಳಿ)
 • ತಾತ್ಕಾಲಿಕ User name ಹಾಗೂ Pasword ಮೂಲಕ ನೆಟ್‌ಬ್ಯಾಂಕ್ ಲಾಗಿನ್ ಆಗಿ
 • ಬಳಿಕ ಶಾಶ್ವತ User name ಹಾಗೂ Pasword ಕ್ರಿಯೆಟ್ ಮಾಡಿಕೊಳ್ಳಬಹುದು
 • ಷರತ್ತು ಹಾಗೂ ನಿಯಮಗಳನ್ನು ಸ್ವೀಕರಿಸಿ ಮುಂದುವರಿಸಿ
 • ಹುಟ್ಟಿದ ದಿನಾಂಕ, ಹುಟ್ಟಿದ ಸ್ಥಳ, ಮೊಬೈಲ್ ನಂಬರ್ ನಮೂದಿಸಬೇಕು
 • ಅಕೌಂಟ್ ಸಮ್ಮರಿ ಕ್ಲಿಕ್ ಮಾಡಿದಾಗ ನಿಮ್ಮ ವೈಯುಕ್ತಿಕ ವಿವರ ಸೇರಿದಂತೆ ಇತರ ಮಾಹಿತಿಗಳು ಅಕೌಂಟ್ ಜೊತೆ ರಿಡಿಸ್ಟ್ರೇಶನ್ ಆಗಿರುವುದನ್ನು ಪರಿಶೀಲಿಸಿ ಹಾಗೂ ಖಚಿತಪಡಿಸಿ