Asianet Suvarna News Asianet Suvarna News

ಡಿಜಿಟಲ್ ಟ್ರಾನ್ಸಾಕ್ಷನ್‌ನಿಂದ ದೀಪಾವಳಿಗೆ ನಗದು ಚಲಾವಣೆ ಇಳಿಕೆ, 20 ವರ್ಷದಲ್ಲಿ ಇದೇ ಮೊದಲು!

ಭಾರತದಲ್ಲಿ ಡಿಜಿಟಲ್ ಕ್ರಾಂತಿಯಿಂದ ಹೊಸ ಯುಗದನ ನಿರ್ಮಾಣವಾಗಿದೆ. ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಗದು ಚಲಾವಣೆಯಲ್ಲಿ ಭಾರಿ ಇಳಿಕೆಯಾಗಿತ್ತು. ಇದು ಕಳೆದ 20 ವರ್ಷಗಳಲ್ಲೇ ಮೊದಲು. ಈ ಬೆಳವಣಿಗೆ ಆರ್ಥಿಕ ಹಿಂಜರಿತ ಎಂದು ಕೆಲವರು ವಾದಿಸಿದ್ದಾರೆ. ಆದರೆ ಎಸ್‌ಬಿಐ ಇಕೋರ್ಯಾಪ್ ನೀಡಿದ ವರದಿಯಲ್ಲಿ ಅಸಲಿ ಸತ್ಯ ಬಹಿರಂಗವಾಗಿದೆ.

Digital transaction changed india payment system currency circulation declines diwali week for 1st time in 20 years  SBI  ckm
Author
First Published Nov 7, 2022, 7:12 PM IST

ನವದೆಹಲಿ(ನ.07):  ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಭಾರತದಲ್ಲಿ ತಂದ ಮಹತ್ತರ ಬದಲಾವಣೆಗಳಲ್ಲಿ ಡಿಜಿಟಲ್ ಕ್ರಾಂತಿ ಕೂಡ ಒಂದು. ಇದರ ಮುಂದುವರಿದ ಭಾಗವಾಗಿ 2016ರಲ್ಲಿ ಡಿಮಾನಿಟೈಸೇಶನ್ ಮಾಡುವ ಮೂಲಕ ನಗದು ಚಲಾವಣೆ ಮಾರ್ಗ ಬದಲು ಡಿಜಿಟಲ್ ಪೇಮೆಂಟ್‌ಗೆ ಒತ್ತು ನೀಡಿದರು. ಇದರ ಪರಿಣಾಮ ಇದೀಗ ಭಾರತದ ಡಿಜಿಟಲ್ ಪೇಮೆಂಟ್ ಮಾಡುವ ಅತೀ ದೊಡ್ಡ ರಾಷ್ಟ್ರಗಳಲ್ಲಿ ಒಂದಾಗಿದೆ. ಇಷ್ಟೇ ಅಲ್ಲ ಬರೋಬ್ಬರಿ 20 ವರ್ಷಗಳ ಬಳಿಕ ದೀಪಾವಳಿ ಹಬ್ಬದ ವಾರದಲ್ಲಿ ನಗದು ಚಲಾವಣೆ ಭಾರಿ ಇಳಿಕೆ ಕಂಡಿದೆ. ಅದೇ ಸಮಯದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಗಣನೀಯವಾಗಿ ಏರಿಕೆಯಾಗಿದೆ. ಜನರು ಇದೀಗ ಡಿಜಿಟಲ್ ಪೇಮೆಂಟ್ ಮೂಲಕ ಹಣ ಟ್ರಾನ್ಸಾಕ್ಷನ್, ಪಾವತಿ ಮಾಡುತ್ತಿದ್ದಾರೆ ಎಂದು ಎಸ್‌ಬಿಐ ಇಕೋರ್ಯಾಪ್ ಅಧ್ಯಯನ ವರದಿಯಲ್ಲಿ ಬಹಿರಂಗ ಪಡಿಸಿದೆ.

ಭಾರತದಲ್ಲಿ ಆಗಿರುವ ಡಿಜಿಟಲ್ ಕ್ರಾಂತಿಯಲ್ಲಿ ಇದೀಗ ಜನರ ಪಾವತಿ ವ್ಯವಸ್ಥೆ ಬದಲಾಗಿದೆ. ನಗದು ಆರ್ಥಿಕತೆಯನ್ನೇ ನಂಬಿಕೊಂಡಿದ್ದ ಭಾರತದಲ್ಲಿ ಇದೀಗ ಡಿಜಿಟಲ್ ಪೇಮೆಂಟ್ ಮೊದಲ ಸ್ಥಾನಕ್ಕೇರಿದೆ. ಇದೀಗ ಜನರು ಸ್ಮಾರ್ಟ್‌ಫೋನ್ ಪಾವತಿ ಆರ್ಥಿಕತೆಗೆ ಬದಲಾಗಿದೆ. ಇದರಿಂದ ಭಾರತದ ಆರ್ಥಿಕತೆಗೆ ಮತ್ತಷ್ಟು ವೇಗ ಸಿಗಲಿದೆ. ಕಾರಣ ನಗದು ಚಲಾವಣೆಯಲ್ಲಿ ಆಗುವ ಸೋರಿಕೆಯನ್ನು ತಡೆಗಟ್ಟುತ್ತದೆ. ವಿತ್ತೀಯ ಪ್ರಸರಣದಲ್ಲಿ ಧನಾತ್ಮತ ಪರಿಣಾ ಬೀರುತ್ತದೆ ಎಂದು ಎಸ್‌ಬಿಐ ಇಕೋರ್ಯಾಪ್ ಅಧ್ಯಯನ ವರದಿ ಹೇಳುತ್ತಿದೆ.

ಇಂದಿನಿಂದ ಡಿಜಿಟಲ್‌ ರುಪಾಯಿ ಯುಗ ಶುರು: ಪ್ರಾಯೋಗಿಕವಾಗಿ ಆರ್‌ಬಿಐನಿಂದ E- Rupi ಬಿಡುಗಡೆ

ಭಾರತದಲ್ಲಿ ನಗದು ಚಲಾವಣೆಯಿಂದ ಡಿಜಿಟಲ್ ಪೇಮೆಂಟ್ ವರ್ಗಾವಣೆ ಪ್ರಮುಖ ಘಟ್ಟವಾಗಿದೆ. ಯುಪಿಐ, ವ್ಯಾಲೆಟ್, ಪಿಪಿಐ, ಇಂಟರ್ ಆಪರೇಬಲ್ ಪಾವತಿಗಳಿಂದ ಸುಲಭವಾಗಿ ಹಣ ಟ್ರಾನ್ಸಾಕ್ಷನ್ ಮಾಡಬುಹುದು. ಇಂಟರ್‌ನೆಟ್ ಬ್ಯಾಕಿಂಗ್ ಮೂಲಕ ಮಾತ್ರ ಸೀಮಿತವಾಗಿದ್ದ ಈ ಟ್ರಾನ್ಸಾಕ್ಷನ್ ಇದೀಗ ಯಾರೂ ಬೇಕಾದರು ಸುಲಭವಾಗಿ ಯುಪಿಐ ಟ್ರಾನ್ಸಾಕ್ಷನ್ ಮಾಡಬಹುದಾಗಿದೆ. QR ಕೋಡ್, NFCಗಳಿಂದ ಭಾರತದಲ್ಲಿ ಡಿಜಿಟಲ್ ಪಾವತಿ ವೇಗ ಹೆಚ್ಚಾಯಿತು. ಹಲವು ಸಂಸ್ಥೆಗಳು, ಖಾಸಸಿ ಸಂಸ್ಥೆಗಳು ಈ ಪಾವತಿ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ವರದಿ ಹೇಳುತ್ತಿದೆ.

ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಅಂದ್ರೇನು? ಅವು ಹೇಗೆ ಕಾರ್ಯನಿರ್ವಹಿಸುತ್ತವೆ? ಇಲ್ಲಿದೆ ಮಾಹಿತಿ

NEFT ಟ್ರಾನ್ಸಾಕ್ಷನ್ ಶೇಕಡಾ 55 ಪ್ರತಿಶತದಷ್ಟು ಪಾಲು ಹೊಂದಿದೆ. ಹೆಚ್ಚಿನ ವಹಿವಾಟುಗಳನ್ನು ಇಂಟರ್ನೆಂಟ್ ಬ್ಯಾಂಕ್ ಮೂಲಕ ಮಾಡಲಾಗುತ್ತಿದೆ. ಇನ್ನು ಯುಪಿಐ, ವ್ಯಾಲೆಟ್ ಸೇರಿದಂತೆ ಸ್ಮಾರ್ಟ್‌ಫೋನ್ ಮೂಲಕ ಮಾಡುತ್ತಿರುವ ವಹಿವಾಟು ಕ್ರಮವಾಗಿ ಶೇಕಡಾ 16, 12.  ಪಾವತಿ ವ್ಯವಸ್ಥೆಗಳಲ್ಲಿ CIC ಯ ಪಾಲು FY16 ರಲ್ಲಿ ಶೇಕಡಾ 88 ರಿಂದ FY22 ರಲ್ಲಿ ಶೇಕಡಾ 20 ಕ್ಕೆ ಇಳಿದಿದೆ. ಅಂದರೆ ಸುಲಭವಾಗಿ ಹೇಳುವುದಾದರೆ ಶೇಕಡಾ 88ರಷ್ಟಿದ್ದ ನಗದು ಚಲಾವಣೆಗಳು ಶೇಕಡಾ 20ಕ್ಕೆ ಇಳಿದಿದೆ. ಈ ನಗದು ಚಲಾವಣೆ ಸ್ಥಾನದಲ್ಲಿ ಇದೀಗ ಡಿಜಿಟಲ್ ಟ್ರಾನ್ಸಾಕ್ಷನ್ ಆವರಿಸಿಕೊಂಡಿದೆ.  ಆರ್ಥಿಕ ವರ್ಷ 2016ರಲ್ಲಿ ಶೇಕಡಾ 11.26ರಷ್ಟಿದ್ದಿ ಡಿಜಿಟಲ್ ವಹಿವಾಟು ಇದೀಗ ಶೇಕಡಾ 804ಕ್ಕೆ ಏರಿಕೆಯಾಗಿದೆ. 2027ರ ವೇಳೆಗೆ ಈ ಪ್ರಮಾಣ ಶೇಕಡಾ 88ಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಎಸ್‌ಬಿಐ ಇಕೋರ್ಯಾಪ್ ವರದಿ ಹೇಳಿದೆ. 

Follow Us:
Download App:
  • android
  • ios