Asianet Suvarna News Asianet Suvarna News

ರಾಜ್ಯದ 10 ಜಿಲ್ಲೆಗಳಲ್ಲಿ 100 ರು. ಸಮೀಪ ಡೀಸೆಲ್‌ ದರ

  • ಪೆಟ್ರೋಲ್‌ ಬೆನ್ನಲ್ಲೇ ಇದೀಗ ಡೀಸೆಲ್‌ ದರ ಕೂಡ ರಾಜ್ಯದಲ್ಲಿ ಶತಕದ ಗಡಿಯತ್ತ ಬಂದು ನಿಂತಿದೆ. 
  • ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ಮುಂದುವರಿದರೆ ವಾರದೊಳಗೆ ಡೀಸೆಲ್‌ದರ 100ರ ಗಡಿ ದಾಟಲಿದೆ.
Diesel Reaches 100 rs per liter in 10 District snr
Author
Bengaluru, First Published Oct 9, 2021, 10:24 AM IST
  • Facebook
  • Twitter
  • Whatsapp

 ಬೆಂಗಳೂರು (ಅ.09):  ಪೆಟ್ರೋಲ್‌ (Petrol) ಬೆನ್ನಲ್ಲೇ ಇದೀಗ ಡೀಸೆಲ್‌ (Diesel) ದರ ಕೂಡ ರಾಜ್ಯದಲ್ಲಿ ಶತಕದ ಗಡಿಯತ್ತ ಬಂದು ನಿಂತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ತೈಲ ದರ ಏರಿಕೆ ಮುಂದುವರಿದರೆ ವಾರದೊಳಗೆ ಡೀಸೆಲ್‌ದರ 100ರ ಗಡಿ ದಾಟಲಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ (Shirsi) ಶುಕ್ರವಾರ ಒಂದು ಲೀಟರ್‌ ಡೀಸೆಲ್‌ ದರ 99.65 ರು. ತಲುಪಿದ್ದು, ಇದೇ ರಾಜ್ಯದ ಅತಿಹೆಚ್ಚಿನ ದರವಾಗಿದೆ.

ಉತ್ತರ ಕನ್ನಡ (Uttara kannada) ಸೇರಿ ರಾಜ್ಯದ 10 ಕಡೆ ಡೀಸೆಲ್‌ ದರ 99 ರು. ದಾಟಿದೆ, ಶತಕದತ್ತ ದಾಪುಗಾಲಿಡುತ್ತಿದೆ. ಬಳ್ಳಾರಿ​- 99.33 ರು., ವಿಜಯನಗರ (Vijayanagara)  99.06 ರು., ದಾವಣಗೆರೆ (Davanagere) 99.31 ರು., ಶಿವಮೊಗ್ಗ- 99.01 ರು., ಚಿಕ್ಕಮಗಳೂರು (Chikkamagaluru) 99.21 ರು. ಹಾಗೂ ಚಿತ್ರದುರ್ಗದಲ್ಲಿ ಒಂದು ಲೀಟರ್‌ ಡೀಸೆಲ್‌ ದರ 99.19 ರು. ತಲುಪಿದೆ.

100ರ ಗಡಿಯತ್ತ ಡೀಸೆಲ್ ದರ, ಚಿತ್ರದುರ್ಗದಲ್ಲಿ ಜನರ ಆಕ್ರೋಶ!

ಇನ್ನು ದಕ್ಷಿಣ ಕನ್ನಡದಲ್ಲಿ 96.96 ರು., ಉಡುಪಿ (Udupi) 97.25 ರು., ಕಲಬುರಗಿ 97.54 ರು., ರಾಯಚೂರು 97.28 ರು., ಚಿಕ್ಕಬಳ್ಳಾಪುರ-97.88, ಹುಬ್ಬಳ್ಳಿ 97.51 ರು., ಮೈಸೂರು 97.36 ರು., ಹಾಸನ  97.00 ರು., ತುಮಕೂರು 97.82 ರು. ಇದ್ದರೆ, ಕೊಪ್ಪಳದಲ್ಲಿ 98.76 ರು, ಯಾದಗಿರಿ  98.11 ರು., ಬಾಗಲಕೋಟೆ 98.30, ಬೀದರ್‌ 98.62 ರು., ಗದಗ 98.28 ಮತ್ತು ಹಾವೇರಿಯಲ್ಲಿ 98.22 ದರ ಇದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲೇ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಕಡಿಮೆ ಇದೆ.

ಹಲವು ರಾಜ್ಯಗಲ್ಲೂ ಏರಿಕೆ

 

: ತೈಲ ಕಂಪನಿಗಳು ಸತತ 2ನೇ ದಿನವಾದ ಶುಕ್ರವಾರ ಕೂಡಾ ಪೆಟ್ರೋಲ್‌ ಮತ್ತು ಡೀಸೆಲ್‌(Diesel) ಬೆಲೆಯನ್ನು ಲೀ.ಗೆ ಕ್ರಮವಾಗಿ 25 ಮತ್ತು 30 ಪೈಸೆಯಷ್ಟು ಹೆಚ್ಚಳ ಮಾಡಿವೆ. ಇದರೊಂದಿಗೆ ಪೆಟ್ರೋಲ್‌ ದರ ಮತ್ತೊಮ್ಮೆ ದೇಶಾದ್ಯಂತ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ. ಇನ್ನು ಡೀಸೆಲ್‌ ದರ ಹಲವು ರಾಜ್ಯಗಳಲ್ಲಿ 100 ರು.ನ ಗಡಿ ದಾಟಿದೆ.

ಶುಕ್ರವಾರದ ಏರಿಕೆ ಬಳಿಕ ಪೆಟ್ರೋಲ್‌(Petrol) ದರ ಬೆಂಗಳೂರಿನಲ್ಲಿ 105.44 ರು.,ಮುಂಬೈನಲ್ಲಿ 107.95 ರು., ಕೋಲ್ಕತಾದಲ್ಲಿ 102.47 ರು.,ದೆಹಲಿಯಲ್ಲಿ9Delhi) 101.89 ರು. ಮತ್ತು ಚೆನ್ನೈನಲ್ಲಿ(Chennai) 99.58 ರು.ಗೆ ತಲುಪಿದೆ.

ಇನ್ನು ಕಳೆದ 8 ದಿನದಲ್ಲಿ 6 ಬಾರಿ ಏರಿಕೆಯಾದ ಪರಿಣಾಮ ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ನಗರಗಳಲ್ಲಿ ಡೀಸೆಲ್‌(Diesel) ದರ 100 ರು. ಗಡಿ ದಾಟಿದೆ. ಶುಕ್ರವಾರದ ಏರಿಕೆ ಬಳಿಕ ಡೀಸೆಲ್‌ ದರ ಬೆಂಗಳೂರಿನಲ್ಲಿ 95.70 ರು., ಮುಂಬೈನಲ್ಲಿ 97.84 ರು., ಕೋಲ್ಕತಾದಲ್ಲಿ 93.27 ರು. ಚೆನ್ನೈನಲ್ಲಿ 94.74 ರು. ಮತ್ತು ದೆಹಲಿಯಲ್ಲಿ 90.17 ರು.ಗೆ ತಲುಪಿದೆ.

ಸದ್ಯ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್‌ ದರ 113.73 ರು ಮತ್ತು ಡೀಸೆಲ್‌ ದರ 103.09 ರು.ನಷ್ಟಿದೆ. ಇಲ್ಲಿ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಮತ್ತು ಪ್ರದೇಶವು ದೇಶದ ಗಡಿ ಭಾಗದಲ್ಲಿರುವ ಕಾರಣ ಸಾಗಣೆ ವೆಚ್ಚವೂ ಹೆಚ್ಚಾಗಿ ತೈಲ ಬೆಲೆ ಗಗನಕ್ಕೇರಿದೆ. ಕಳೆದ 3 ದಿನ ಏರಿಕೆ ಬಳಿಕ ಪೆಟ್ರೋಲ್‌ ದರದಲ್ಲಿ ಒಟ್ಟು 75 ಪೈಸೆ ಮತ್ತು 6 ಏರಿಕೆ ಮೂಲಕ ಡೀಸೆಲ್‌ ದರ 1.55 ರು.ನಷ್ಟುಹೆಚ್ಚಾಗಿದೆ

Follow Us:
Download App:
  • android
  • ios