ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಏರಿಕೆ..!

ಒಂದು ಲೀಟರ್‌ ಡೀಸೆಲ್ ಬೆಲೆ ಇದೇ ಮೊದಲ ಬಾರಿಗೆ 80 ರುಪಾಯಿ ಗಡಿ ದಾಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಗಮನಿಸಿದರೆ ಇನ್ನು ಕೆಲವೇ ದಿನಗಳಲ್ಲಿ ನೂರು ರುಪಾಯಿಗೆ ತಲುಪಿದರೂ ಅಚ್ಚರಿಯಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Diesel cross 80 rupees per 1 litre for the first time in Delhi

ನವದೆಹಲಿ(ಜೂ.26): ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯ ನಾಗಾಲೋಟಕ್ಕೆ ಸದ್ಯಕ್ಕೆ ಬ್ರೇಕ್‌ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಸತತ 20ನೇ ದಿನ ಶುಕ್ರವಾರ ತೈಲ ಬೆಲೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್‌ ಡೀಸೆಲ್‌ ಮೇಲೆ 14 ಪೈಸೆ ಜಾಸ್ತಿಯಾಗಿದೆ. 

ಪರಿಣಾಮ ಇದೇ ಮೊದಲ ಬಾರಿಗೆ ಡೀಸೆಲ್‌ 80 ರುಪಾಯಿ ಗಡಿದಾಟಿದೆ. ಇನ್ನು ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 16 ಪೈಸೆ ಜಾಸ್ತಿಯಾಗಿದೆ. ಕಳೆದ ಮೂರು ವಾರಗಳಲ್ಲಿ ಡೀಸೆಲ್‌ ಪ್ರತಿ ಲೀಟರ್‌ ಮೇಲೆ 10.63 ರುಪಾಯಿ, ಪೆಟ್ರೋಲ್‌ ಪ್ರತಿ ಲೀಟರ್‌ ಮೇಲೆ 8.66 ರುಪಾಯಿ ಹೆಚ್ಚಳವಾದಂತಾಗಿದೆ. ಡೆಲ್ಲಿಯಲ್ಲಿ ಶುಕ್ರವಾರ ಪೆಟ್ರೋಲ್ ಲೀಟರ್‌ಗೆ 79.92 ರುಪಾಯಿಗಳಾದರೆ, ಡೀಸೆಲ್ ದರ 80.19 ಆಗಿದೆ

ಪೆಟ್ರೋಲ್‌ಗಿಂತ ಈಗ ಡೀಸೆಲ್‌ ದುಬಾರಿ!

ಶುಕ್ರವಾರ ಬೆಂಗಳೂರಿನಲ್ಲಿ ಪ್ರತಿ ಲೀ.ಪೆಟ್ರೋಲ್‌ ಬೆಲೆ 82.35 ರುಪಾಯಿನಿಂದ 82.52 ರುಪಾಯಿಗೆ ಏರಿಕೆಯಾದರೆ, ಪ್ರತಿ ಲೀಟರ್‌ ಡೀಸೆಲ್‌ ಬೆಲೆ 75.96 ರುಪಾಯಿನಿಂದ 76.25 ರುಪಾಯಿಗೆ ಏರಿಕೆಯಾಗಿದೆ.

ಕೆಲವು ದಿನಗಳ ಹಿಂದಷ್ಟೇ ಕೊರೋನಾ ವೈರಸ್ ಮಹಾಮಾರಿಯನ್ನು ಅನ್‌ಲಾಕ್ ಮಾಡಿದಂತೆ ಮೋದಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಅನ್‌ಲಾಕ್ ಮಾಡಿದೆ ಎಂದು ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ದರು. 
 

Latest Videos
Follow Us:
Download App:
  • android
  • ios