ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಸೈಲೆಂಟ್ ಆಗಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರಾ? ಎಲ್ಲೆಡೆ ವೈರಲ್ ಆಗುತ್ತಿರುವ ವಿಡಿಯೋ ಯಾರದ್ದು? ಶ್ರೀಮಂತ ಉದ್ಯಮಿಗೆ ಇದೇನಾಗಿದೆ? ಹೊಟೆಲ್‌ನಲ್ಲಿ ಕೆಲಸ ಮಾಡೋ ಪರಿಸ್ಥಿತಿ ಬಂತಾ?

ಬಿಜಿಂಗ್ (ಜು.31) ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಇತ್ತೀಚೆಗಷ್ಟೆ ಟ್ರಿಲೇನಿಯರ್ ಆಗಿ ಬಡ್ತಿ ಹೊಂದಿದ್ದಾರೆ. ಸ್ಪೇಸ್ ಎಕ್ಸ್, ಟೆಸ್ಲಾ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳ ಮಾಲೀಕ ಎಲಾನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ. ಆದರೆ ಈ ಎಲಾನ್ ಮಸ್ಕ್ ಚೀನಾದ ಬಿಬಿಕ್ಯೂ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರಾ? ಈ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಈ ವಿಡಿಯೋ ನಕಲಿ ಅಲ್ಲ, ಅಸಲಿ. ಆದರೆ ಈ ವಿಡಿಯೋದಲ್ಲಿರುವುದು ಎಲಾನ್ ಮಸ್ಕ್ ಅಲ್ಲ, ಎಲಾನ್ ಮಸ್ಕ್ ರೀತಿಯ್ಲಲೇ ಹೋಲುವ ವ್ಯಕ್ತಿ ಇದೀಗ ಚೀನಾದಲ್ಲಿ ಭಾರಿ ಜನಪ್ರಿಯನಾಗಿದ್ದಾನೆ.

ಚೀನಾದ ಬಿಬಿಕ್ಯೂ ರೆಸ್ಟೋರೆಂಟ್ ಸಹ ಮಾಲೀಕ ಮಾ ಜಿಯಾನ್‌ಪಿಂಗ್ ವೈರಲ್ ವ್ಯಕ್ತಿ. ಎಲಾನ್ ಮಸ್ಕ್ ರೀತಿಯಲ್ಲೇ ಹೋಲುವ ಈ ಮಾ ಜಿಯಾನ್‌ಪಿಂಗ್ ತನ್ನ ಬಿಬಿಕ್ಯೂ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಾರೆ. ಮಾ ಜಿಯಾನ್‌ಪಿಂಗ್ ಸರ್ವ್ ಮಾಡುವಾಗ ಹಲವು ಫೋಟೋ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ. ಇನ್ನು ಶಾಪಿಂಗ್ ಮಾಲ್ ಸೇರಿದಂತೆ ಎಲ್ಲೋ ಹೋದರು ಮಾ ಜಿಯಾನ್‌ಪಿಂಗ್‌ನ ಮುತ್ತಿಕೊಳ್ಳುತ್ತಿದ್ದಾರೆ. ಹಲವು ಉದ್ಘಾಟನಾ ಕಾರ್ಯಕ್ರಮಗಳಿಗೆ ಮಾ ಜಿಯಾನ್‌ಪಿಂಗ್ ಅತಿಥಿಯಾಗಿ ತೆರಳುತ್ತಿದ್ದಾರೆ.

ಮಸ್ಕ್ ಹೋಲುವ ಮಾ ಜಿಯಾಂಗ್‌ಪಿಂಗ್

ಮಾ ಜಿಯಾನ್‌ಪಿಂಗ್ ಮುಖ, ಹೇರ್ ಸ್ಟೈಲ್, ಕಲರ್ ಬಹುತೇಕ ಎಲಾನ್ ಮಸ್ಕ್ ಹೋಲುತ್ತಿದೆ. ಜಿಯಾನ್‌ಪಿಂಗ್ ಸರ್ನೇಮ್ ಮಾ. ಚೀನಾದಲ್ಲಿ ಮಾ ಎಂದರೆ ಮಸ್ಕ್ ಎಂಬ ಪ್ರೊನೌನ್ಸ್ ಮಾಡಲಾಗುತ್ತದೆ. ಕಾರ್ಯಕ್ರಮಗಳಿಗೆ ತೆರಳುವಾಗ ಮಸ್ಕ ರೀತಿಯಲ್ಲಿ ಬ್ಲೇಜ್ ಧರಿಸಿ ತೆರಳುತ್ತಿದ್ದಾನೆ. ಮೊದಲ ನೋಟಕ್ಕೆ ಎಲಾನ್ ಮಸ್ಕ್ ಬಂದ ರೀತಿಯಲ್ಲಿ ಭಾಸವಾಗುತ್ತಿದೆ.

ಮಾ ಜಿಯಾಂಗ್‌ಪಿಂಗ್ ಮಾಲೀಕತ್ವದ ರೆಸ್ಟೋರೆಂಟ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿದ್ದಾರೆ. ಎಲ್ಲರೂ ಚೀನಾದ ಎಲಾನ್ ಮಸ್ಕ್ ಕೈಯಿಂದ ಆಹಾರ ಸವಿಯಲು ಬಯಸುತ್ತಿದ್ದಾರೆ. ಫೋಟೋ ಕ್ಲಿಕ್ಕಿಸಲು ಮುಗಿ ಬೀಳುತ್ತಿದ್ದಾರೆ. ಒಂದೆಡೆ ರೆಸ್ಟೋಂಟ್‌ನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಇತ್ತ ಮಾ ಜಿಯಾಂಗ್‌ಪಿಂಗ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

Scroll to load tweet…