Asianet Suvarna News Asianet Suvarna News

PM Jan Dhan Accounts: ಜನ್ ಧನ್ ಖಾತೆಗಳಲ್ಲಿ 1.5ಲಕ್ಷ ಕೋಟಿ ರೂ. ಠೇವಣಿ

*ವಿತ್ತ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ಈ ಮಾಹಿತಿ ಬಹಿರಂಗ
*ದೇಶದಲ್ಲಿ ಒಟ್ಟು 44.23 ಕೋಟಿ ಜನ್ ಧನ್ ಖಾತೆಗಳಿವೆ
*31.28ಕೋಟಿ  ಪಿಎಂಜೆಡಿವೈ ಫಲಾನುಭವಿಗಳಿಗೆ ರುಪೇ ಡೆಬಿಟ್ ಕಾರ್ಡ್ ವಿತರಣೆ

Deposits in PM Jan Dhan accounts cross Rs 1.5 lakh crore
Author
Bangalore, First Published Jan 9, 2022, 9:07 PM IST

Business Desk: ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ (PMJDY) 44.23ಕೋಟಿ ಖಾತೆಗಳಲ್ಲಿ(Accounts) 2021ರ ಡಿಸೆಂಬರ್ ತಿಂಗಳ ಅಂತ್ಯದ ವರೆಗೆ  1,50,939.36 ಕೋಟಿ ರೂ. ಬ್ಯಾಲೆನ್ಸ್ (Balance)ಇದೆ ಎಂಬ ಮಾಹಿತಿಯನ್ನು ವಿತ್ತ ಸಚಿವಾಲಯದ (finance ministry) ಇತ್ತೀಚಿನ ಅಂಕಿಅಂಶಗಳು ಬಹಿರಂಗಪಡಿಸಿವೆ.

ದೇಶದ ಆರ್ಥಿಕತೆಯಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ತೊಡಗುವಂತೆ ಮಾಡಲು ಪ್ರಾರಂಭಿಸಿದ ಪಿಎಂಜಿಡಿವೈ ಯೋಜನೆ ಕಳೆದ ವರ್ಷ ಆಗಸ್ಟ್ ಗೆ ಏಳು ವರ್ಷಗಳನ್ನು ಪೂರೈಸಿದೆ.  2014ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಯೋಜನೆಯನ್ನು ಘೋಷಣೆ ಮಾಡಿದ್ದರು. 

Budget 2022 Expectations: ಕೋವಿಡ್ ಸೋಂಕಿತರು, ಕುಟುಂಬಕ್ಕೆ ಈ ಬಾರಿ ಬಜೆಟ್ ನಲ್ಲಿ ತೆರಿಗೆ ವಿನಾಯ್ತಿ ಘೋಷಿಸುತ್ತಾರಾ?

ವಿತ್ತ ಸಚಿವಾಲಯದ ಅಂಕಿಅಂಶಗಳ (Data) ಪ್ರಕಾರ ಒಟ್ಟು 44.23 ಕೋಟಿ ಖಾತೆಗಳಲ್ಲಿ 34.9 ಕೋಟಿ ಖಾತೆಗಳು ಸಾರ್ವಜನಿಕ ವಲಯದ (Public Sector)ಬ್ಯಾಂಕುಗಳಲ್ಲಿವೆ. 8.05 ಕೋಟಿ ಖಾತೆಗಳು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ (Regional Rural Banks) ಹಾಗೂ ಉಳಿದ 1.28ಕೋಟಿ ಖಾತೆಗಳು ಖಾಸಗಿ ವಲಯದ ಬ್ಯಾಂಕುಗಳಲ್ಲಿವೆ (Private Sector Banks). 31.28ಕೋಟಿ  ಪಿಎಂಜೆಡಿವೈ ಫಲಾನುಭವಿಗಳಿಗೆ ರುಪೇ ಡೆಬಿಟ್ (RuPay Debit) ಕಾರ್ಡ್ ಗಳನ್ನು ವಿತರಿಸಲಾಗಿದೆ. ರುಪೇ ಡೆಬಿಟ್ ಕಾರ್ಡ್ ಹಾಗೂ ಅದರ ಬಳಕೆ ಇತ್ತೀಚಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಗ್ರಾಮೀಣ ಭಾಗದ ಜನರು ಕೂಡ ರುಪೇ ಡೆಬಿಟ್ ಕಾರ್ಡ್ ಮೂಲಕವೇ ಇತ್ತೀಚಿನ ದಿನಗಳಲ್ಲಿ ವ್ಯವಹಾರ ನಡೆಸುತ್ತಿರೋದು ಗಮನಾರ್ಹ. 

ವಿತ್ತ ಸಚಿವಾಲಯದ ಅಂಕಿಅಂಶಗಳ ಪ್ರಕಾರ 29.54 ಕೋಟಿ ಜನ್ ಧನ್ ಖಾತೆಗಳು ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳಲ್ಲಿರೋ ಬ್ಯಾಂಕ್ ಶಾಖೆಗಳಲ್ಲಿವೆ. ಇನ್ನು 2021 ಡಿಸೆಂಬರ್ 29ರ ತನಕದ ಅಂಕಿಅಂಶಗಳ ಪ್ರಕಾರ  ಸುಮಾರು 24.61ಕೋಟಿ ಜನ್ ಧನ್ ಖಾತೆ ಹೊಂದಿರೋರು ಮಹಿಳೆಯರು. 
ಜನ್ ಧನ್ ಯೋಜನೆ ಪ್ರಾರಂಭಗೊಂಡ ಮೊದಲ ವರ್ಷದಲ್ಲಿ 17.90 ಕೋಟಿ ಖಾತೆಗಳನ್ನು ತೆರೆಯಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಗಳ ಪ್ರಕಾರ ಜನ್ ಧನ್ ಸೇರಿದಂತೆ ಮೂಲ ಬ್ಯಾಂಕಿಂಗ್ ಉಳಿತಾಯ ಠೇವಣಿ (BSBD) ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ (Balance) ನಿರ್ವಹಣೆ ಮಾಡಬೇಕಾದ ಅಗತ್ಯವಿಲ್ಲ. ಜನ್ ಧನ್ ಖಾತೆದಾರರು ಹೇಗೆ ವಹಿವಾಟು ನಡೆಸುತ್ತಾರೆ ಎಂಬ ಆಧಾರದಲ್ಲಿ ಜನ್ ಧನ್ ಖಾತೆಯಲ್ಲಿನ ಬ್ಯಾಲೆನ್ಸ್ ದಿನದಿಂದ ದಿನಕ್ಕೆ ವ್ಯತ್ಯಾಸವಾಗಬಹುದು. ಒಂದು ನಿರ್ದಿಷ್ಟ ದಿನ ಖಾತೆಯ ಬ್ಯಾಲೆನ್ಸ್ ಶೂನ್ಯವಾಗೋ ಸಾಧ್ಯತೆಯೂ ಇರುತ್ತದೆ. 2021 ಡಿಸೆಂಬರ್  8ಕ್ಕೆ ಅನ್ವಯವಾಗುವಂತೆ ಶೂನ್ಯ ಬಾಲೆನ್ಸ್ ಖಾತೆಗಳ ಒಟ್ಟು ಸಂಖ್ಯೆ 3.65 ಕೋಟಿ. ಇದು ಒಟ್ಟು ಜನ್ ಧನ್ ಖಾತೆಗಳ ಶೇ.8.3ರಷ್ಟಿದೆ ಎಂಬ ಮಾಹಿತಿಯನ್ನು ಕಳೆದ ತಿಂಗಳು ಸರ್ಕಾರ ಸಂಸತ್ತಿಗೆ ನೀಡಿತ್ತು.

Mukesh Ambani: ಅಮೆರಿಕದಲ್ಲಿ ಅಂಬಾನಿ ಸಾಮ್ರಾಜ್ಯ, ಐಷಾರಾಮಿ ಹೋಟೆಲ್ ತೆಕ್ಕೆಗೆ!

OD ಸೌಲಭ್ಯ
ಜನ್ ಧನ್ ಖಾತೆಯಿಂದ ಓವರ್ ಡ್ರಾಫ್ಟ್ (OD) ಸೌಲಭ್ಯವನ್ನು ಕೂಡ ಪಡೆಯಬಹುದು. ನಿಮ್ಮ ಜನ್ ಧನ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ (zero balance)ಇದ್ದರೂ ನೀವು 10 ಸಾವಿರ ರೂ. ತನಕ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲು ಸರ್ಕಾರ ಈಗ ಅವಕಾಶ ಕಲ್ಪಿಸಿದೆ. ಈ ಹಿಂದೆ 5,000ರೂ. ತನಕ ಮಾತ್ರ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲು ಅವಕಾಶವಿತ್ತು.

ಈ ಖಾತೆ ಪ್ರಯೋಜನಗಳೇನು?
ಸರ್ಕಾರದ ವಿವಿಧ ಯೋಜನೆಗಳ ಧನಸಹಾಯವನ್ನು ನೇರವಾಗಿ ಫಲಾನುಭವಿಯ ಜನ್ ಧನ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಖಾತೆಗಳಿಗೆ ನೇರ ಲಾಭ ವರ್ಗಾವಣೆ (DBT),ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY),ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY,ಅಟಲ್ ಪಿಂಚಣಿ ಯೋಜನೆ (APY),ಕಿರು ಘಟಕ ಅಭಿವೃದ್ಧಿ ಹಾಗೂ ಮರುಹಣಕಾಸು ಏಜೆನ್ಸಿ ಬ್ಯಾಂಕ್ (MUDRA)ಯೋಜನೆಯ ಪ್ರಯೋಜನಗಳು ಸಿಗುತ್ತವೆ. 2018 ಆಗಸ್ಟ್ 28ರ ಬಳಿಕ  ತೆರೆದ ಜನ್ ಧನ್  ಖಾತೆಗಳಿಗೆ ಆಕಸ್ಮಿಕ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಈ ಖಾತೆ ಹೊಂದಿರೋರಿಗೆ 2ಲಕ್ಷ ರೂ. ತನಕ ಅಪಘಾತ ವಿಮೆ ಕವರೇಜ್ ನೀಡಲಾಗಿದೆ. ಖಾತೆದಾರ ಮೃತ್ಯುವಾದ್ರೆ 30ಸಾವಿರ ರೂ. ಜೀವ ವಿಮೆ ನೀಡಲಾಗುತ್ತದೆ. 

Follow Us:
Download App:
  • android
  • ios