Budget 2022 Expectations: ಕೋವಿಡ್ ಸೋಂಕಿತರು, ಕುಟುಂಬಕ್ಕೆ ಈ ಬಾರಿ ಬಜೆಟ್ ನಲ್ಲಿ ತೆರಿಗೆ ವಿನಾಯ್ತಿ ಘೋಷಿಸುತ್ತಾರಾ?

*ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಸಾಧ್ಯತೆ
*ಜನಸಾಮಾನ್ಯರಲ್ಲಿ ಗರಿಗೆದರಿದ ನಿರೀಕ್ಷೆಗಳು
*ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರೋ ಸಾಮಾನ್ಯ ಜನರಿಗೆ ಬಜೆಟ್ ನಲ್ಲಿ ವಿಶೇಷ ಒತ್ತು ನೀಡೋ ಸಾಧ್ಯತೆ

Budget 2022 Expectations How FM Nirmala Sitharaman could provide tax relief to Covid patients their families

Business Desk: 2022ನೇ ಸಾಲಿನ ಕೇಂದ್ರ ಬಜೆಟ್ ಗೆ (Central Budget) ಕ್ಷಣಗಣನೆ ಆರಂಭವಾಗಿದೆ. ದೇಶದಲ್ಲಿ ಕೊರೋನಾ (Corona)ಮಹಾಮಾರಿ ಹೆಚ್ಚಿನ ಆತಂಕ ಸೃಷ್ಟಿಸದಿದ್ರೆ ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman)ತಮ್ಮ 4ನೇ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸೋದು ಬಹುತೇಕ ಖಚಿತ. ಬಜೆಟ್ (Budget) ಎಂದ ತಕ್ಷಣ ಸಾಮಾನ್ಯ ಜನರಿಗೆ ಒಂದಷ್ಟು ನಿರೀಕ್ಷೆಗಳಿರೋದು ಸಹಜ. 

ಕಳೆದ ವರ್ಷ ಕೊರೋನಾ ಪೆಂಡಾಮಿಕ್ ಕಾರಣದಿಂದ ನಲುಗಿದ ಆರ್ಥಿಕತೆಗೆ (Economy)ಹೊಸ ಚೈತನ್ಯ ನೀಡಲು ಅನೇಕ ಉತ್ತೇಜಕಾರಿ ಪ್ಯಾಕೇಜ್ ಗಳನ್ನು (Packeges)ಸರ್ಕಾರ ಘೋಷಿಸಿತ್ತು. ಉದ್ಯಮ ಆವರ್ತಕ್ಕೆ ಸ್ಥಿರತೆ ತರಲು ಅನೇಕ ವಿತ್ತೀಯ ನೀತಿಗಳನ್ನು(Financial norms) ಈ ಪ್ಯಾಕೇಜ್ ಒಳಗೊಂಡಿತ್ತು. ಈ ನೀತಿಯ ಪ್ರಕಾರ ಸರ್ಕಾರ ಒಳ್ಳೆಯ ಸಮಯದಲ್ಲಿ ಅಂದ್ರೆ ಆರ್ಥಿಕ ಸ್ಥಿತಿಗತಿ ಉತ್ತಮವಿರೋ ಸಂದರ್ಭದಲ್ಲಿ ಖರ್ಚು ತಗ್ಗಿಸಿ ತೆರಿಗೆಗಳನ್ನು(Taxes) ಹೆಚ್ಚಿಸಬೇಕು. ಅದೇರೀತಿ ಆರ್ಥಿಕ ಸ್ಥಿತಿ ಹದಗೆಟ್ಟಿರೋ ಸಮಯದಲ್ಲಿ ಖರ್ಚು ಹೆಚ್ಚಿಸಿ ತೆರಿಗೆ ಹೊರೆ ಕಡಿಮೆಗೊಳಿಸಬೇಕು.
ಇಂಥ ನೀತಿಗಳು ಭಾರತದ ಆರ್ಥಿಕತೆಗೆ ಹಿಂಜರಿತದಿಂದ ಬಹುಬೇಗ ಚೇತರಿಸಿಕೊಳ್ಳಲು ನೆರವು ನೀಡಿದ್ದವು. 'ವಿಶಿಷ್ಟ ಆರ್ಥಿಕ ಚೇತರಿಕೆ V, W, Z, U ಹಾಗೂ L ಮಾದರಿಯಲ್ಲಿ ಘಟಿಸೋದು ಸಾಮಾನ್ಯ. ಭಾರತದಲ್ಲಿ ಕೋವಿಡ್ -19  ಚೇತರಿಕೆ   Kಮಾದರಿಯದ್ದಾಗಿದೆ. ಸಣ್ಣ ಉದ್ಯಮಗಳು (Small business) ಹಾಗೂ ಕೈಗಾರಿಕೆಗಳಿಗೆ (Industries) ಹೋಲಿಸಿದ್ರೆ ತಂತ್ರಜ್ಞಾನ (Technology) ಹಾಗೂ ಬೃಹತ್ ಬಂಡವಾಳ (Investment) ಸಂಸ್ಥೆಗಳು ಶೀಘ್ರವಾಗಿ ಚೇತರಿಕೆ ಕಂಡಿವೆ' ಎನ್ನುತ್ತಾರೆ ಟ್ಯಾಕ್ಸ್ ಮನ್ (Taxmann) ಡಿಜಿಎಂ (DGM) ನವೀನ್ ವಧ್ವ.

Tax Saving Tips: 10 ಲಕ್ಷ ಆದಾಯವಿದ್ದರೂ 1 ರೂ. ತೆರಿಗೆ ಪಾವತಿಸುವಂತಿಲ್ಲ, ಹೇಗೆ? ಇಲ್ಲಿದೆ ಮಾಹಿತಿ

ಸರ್ಕಾರದ ಉತ್ತೇಜನಕಾರಿ ಪ್ಯಾಕೇಜ್ ಗಳು ಆರ್ಥಿಕತೆ ಬಹುಬೇಗ ಚೇತರಿಕೆ ಕಾಣಲು ನೆರವು ನೀಡಿದರೂ ಹಣದುಬ್ಬರ (Inflation) ದರ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ (Fedaral Reserve bank)ಮಾದರಿಯಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ (Indian Reserve Bank) ಕೂಡ ನಿರೀಕ್ಷಿತ ಸಮಯಕ್ಕಿಂತಲೂ ಮುಂಚಿತವಾಗಿ ಬಡ್ಡಿದರ (Interest) ಏರಿಕೆ ಮಾಡೋ ಸಾಧ್ಯತೆಯಿದೆ. ಅಲ್ಲದೆ, ಮಾರ್ಕೆಟ್ ನಲ್ಲಿರೋ ಹಣದ ಸಾಂದ್ರತೆಯನ್ನು ತಗ್ಗಿಸೋ ಸಾಧ್ಯತೆಯಿದೆ. 
ಕೊರೋನಾ ಕಾರಣಕ್ಕೆ ಉದ್ಯೋಗ ನಷ್ಟ, ಆದಾಯದಲ್ಲಿ ಇಳಿಕೆ ಸೇರಿದಂತೆ ಹಲವು ಸಮಸ್ಯೆಗಳ ಸುಳಿಗೆ ಸಿಲುಕಿರೋ ಸಾಮಾನ್ಯ ಮನುಷ್ಯ ಅರ್ಥ ಸಚಿವರು ಘೋಷಿಸೋ ಪ್ಯಾಕೇಜ್ ಗಳ ಕಡೆಗೆ ಈ ಬಾರಿ ಹೆಚ್ಚಿನ ನಿರೀಕ್ಷೆಗಳನ್ನು ಹೊತ್ತು ಕುಳಿತಿರೋದು ಮಾತ್ರ ಸುಳ್ಳಲ್ಲ.

ಬಜೆಟ್ ನಲ್ಲಿ ಹೇಗೆ ತೆರಿಗೆ ವಿನಾಯ್ತಿ ನೀಡಬಹುದು?
-ಕೋವಿಡ್ -19  ಕಾರಣಕ್ಕೆ ಕಷ್ಟಕರ ಸನ್ನಿವೇಶಕ್ಕೆ ಸಿಲುಕಿರೋ ವ್ಯಕ್ತಿ ಹಾಗೂ  ಕುಟುಂಬಗಳಿಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಉದ್ಯೋಗದಾತ ಸಂಸ್ಥೆಗಳು, ಸ್ನೇಹಿತರು ಹಾಗೂ ಸಮಾಜಸೇವಕರು ಆರ್ಥಿಕ ನೆರವನ್ನು (Financial assistance) ಈಗಾಗಲೇ ನೀಡಿದ್ದಾರೆ. ಆದರೂ ದೇಶದ ಅದೆಷ್ಟೋ ಜನರಿಗೆ ಯಾವುದೇ ಆರ್ಥಿಕ ನೆರವು ಸಿಗುತ್ತಿಲ್ಲ. ಇಂಥವರು ಈಗಲೂ ಬದುಕಿಗಾಗಿ ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ. ಇಂಥವರಿಗೆ ಕೋವಿಡ್ ಚಿಕಿತ್ಸೆಗೆ ಅವರು ವ್ಯಯಿಸಿದ ಹಣದ ಮೇಲೆ ತೆರಿಗೆ ಕಡಿತ ನೀಡಬೇಕೆಂಬುದು ತೆರಿಗೆ ತಜ್ಞರ ಅಭಿಪ್ರಾಯವಾಗಿದೆ. ಇನ್ನು ಕೊರೋನಾ ಸೋಂಕಿತರಿಗೆ ನೆರವಿನ ರೂಪದಲ್ಲಿ ನೀಡಿದ ಹಣದ ಮೇಲೂ ತೆರಿಗೆ ವಿನಾಯ್ತಿ ನೀಡಬೇಕು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ. 
 -ತೆರಿಗೆದಾರರು ಕೋವಿಡ್ -19 ಚಿಕಿತ್ಸೆಗಾಗಿ ಉದ್ಯೋಗದಾತ ಸಂಸ್ಥೆಗಳು ಹಾಗೂ ಹಿತೈಷಿಗಳಿಂದ ಪಡೆದ ಆರ್ಥಿಕ ನೆರವಿಗೆ ಆದಾಯ ತೆರಿಗೆ ವಿನಾಯ್ತಿ ನೀಡಲಾಗುತ್ತದೆ ಎಂದು ಸರ್ಕಾರ 2021ರ ಜೂನ್ 25ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 
-ಇನ್ನು ಒಂದು ವೇಳೆ ತೆರಿಗೆದಾರ ಕೋವಿಡ್ ಕಾರಣದಿಂದ ಮೃತಪಟ್ಟರೆ ಆತನ ಕುಟುಂಬಕ್ಕೆ ಉದ್ಯೋಗದಾತ ಸಂಸ್ಥೆ ನೀಡೋ ಆರ್ಥಿಕ ನೆರವಿಗೆ ತೆರಿಗೆ ವಿನಾಯ್ತಿ ನೀಡಬೇಕು ಹಾಗೂ ಈ ವಿನಾಯ್ತಿಗೆ ಯಾವುದೇ ಮಿತಿ ಹೇರಬಾರದು. ಇನ್ನು ಇತರ ವ್ಯಕ್ತಿಗಳಿಂದ ಪಡೆಯೋ ಆರ್ಥಿಕ ನೆರವಿಗೆ ತೆರಿಗೆ ವಿನಾಯ್ತಿ ನೀಡಲು 10ಲಕ್ಷ ರೂ. ತನಕ ಮಿತಿ ವಿಧಿಸಬಹುದು ಎಂಬುದು ತಜ್ಞರ ಸಲಹೆ.

Income Tax Refund: 1.50 ಲಕ್ಷ ಕೋಟಿ ರೂ. ಆದಾಯ ತೆರಿಗೆ ಮರುಪಾವತಿ; ಐಟಿ ಮರುಪಾವತಿ ಸ್ಟೇಟಸ್ ಚೆಕ್ ಮಾಡೋದು ಹೇಗೆ?

-ತೆರಿಗೆ ವಿನಾಯ್ತಿ ನೀಡೋ ಬಗ್ಗೆ ಆದಾಯ ತೆರಿಗೆ ಕಾಯ್ದೆಗೆ (Income Tax Act) ಅಗತ್ಯ ಶಾಸನಬದ್ಧ ತಿದ್ದುಪಡಿಗಳನ್ನು(Amendments) ಮಾಡಲಾಗೋದು ಎಂಬ ಬಗ್ಗೆ ಕೂಡ ಸರ್ಕಾರ ಪ್ರಕಟಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ಅಗತ್ಯ ತಿದ್ದುಪಡಿಗಳನ್ನು ತರೋ ಸಾಧ್ಯತೆಯಿದೆ. 
-ಪ್ರಸ್ತುತ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80D (Section 80D) ಅಡಿಯಲ್ಲಿ ಸಮಗ್ರ ಆದಾಯದಲ್ಲಿ 50,000 ರೂ. ತನಕ ತೆರಿಗೆ ವಿನಾಯ್ತಿ ನೀಡಲು ಅವಕಾಶವಿದೆ. ಅದೂ ಒಂದು ವರ್ಷ ಮೇಲ್ಪಟ್ಟವರಿಗೆ ಮಾತ್ರ ಅನ್ವಯಿಸುತ್ತದೆ. ಅಲ್ಲದೆ, ಆರೋಗ್ಯ ವಿಮೆಯಲ್ಲಿ ಕವರ್ ಆಗದ ಮೊತ್ತಕ್ಕೆ ಮಾತ್ರ ಈ ವಿನಾಯ್ತಿ ಸಿಗುತ್ತದೆ. ಹೀಗಾಗಿ ಸೆಕ್ಷನ್ 80D ಅಡಿಯಲ್ಲಿ ನೀಡಿರೋ ಅವಕಾಶವನ್ನು ಇನ್ನಷ್ಟು ವಿಸ್ತರಿಸಬೇಕು. ವಯಸ್ಸಿನ ಮಿತಿಯಿಲ್ಲದೆ ಪ್ರತಿ ವ್ಯಕ್ತಿಗೂ ಇದರ ಪ್ರಯೋಜನ ಸಿಗುವಂತಾಗಬೇಕು. ಅಂದ್ರೆ ಕೋವಿಡ್ -19ಗೆ ತುತ್ತಾದ ವ್ಯಕ್ತಿ ಹಾಗೂ ಆತನ ಕುಟುಂಬ ಸದಸ್ಯರಿಗೆ ವೈದ್ಯಕೀಯ ವೆಚ್ಚಕ್ಕೆ ತಗುಲಿದ ಹಣದ ಮೇಲೆ ತೆರಿಗೆ ಕಡಿತ ಸಿಗಬೇಕು ಎಂಬುದು ತಜ್ಞರ ಅಭಿಪ್ರಾಯ.

Latest Videos
Follow Us:
Download App:
  • android
  • ios