ಅಂಚೆ ಕಚೇರಿ ಟೈಮ್ ಡೆಪಾಸಿಟ್ ಯೋಜನೆಯಲ್ಲಿ 2 ಲಕ್ಷ ರೂಪಾಯಿ ಹೂಡಿಕೆಗೆ ₹29,776 ಬಡ್ಡಿ ಪಡೆಯಿರಿ. ಈ ಯೋಜನೆಯಲ್ಲಿ ಯಾವುದೇ ರಿಸ್ಕ್ ಇಲ್ಲದೇ ಗ್ಯಾರಂಟಿ ಬಡ್ಡಿ ಪಡೆಯಬಹುದು.
ನವದೆಹಲಿ: ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಹಲವು ಸೇವೆಗಳನ್ನು ನೀಡುತ್ತಿರುತ್ತವೆ. ಹಣ ಜಮೆ, ಠೇವಣಿ, ಸಾಲ ಸೇರಿದಂತೆ ಹಲವು ಸೇವೆಗಳನ್ನು ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳು ನೀಡುತ್ತವೆ. ಅಂಚೆ ಕಚೇರಿಯು ಸಹ ಕೇವಲ ಪತ್ರ ಮತ್ತು ಸಾಮಗ್ರಿಗಳನ್ನು ರವಾನೆ ಮಾಡಲ್ಲ. ಈ ಕೆಲಸದೊಂದಿಗೆ ಹಣಕಾಸಿನ ಸೇವೆಗಳನ್ನು ಸಹ ಒದಗಿಸುತ್ತವೆ. ಇಂದು ಅಂಚೆ ಕಚೇರಿಗಳು ಬ್ಯಾಂಕ್ ರೀತಿಯಲ್ಲಿಯೇ ಕಾರ್ಯ ನಿರ್ವಹಿಸುತ್ತವೆ. ಸಾಮಾನ್ಯ ಜನರು ಅಂಚೆಕಚೇರಿಗಳಲ್ಲಿಯೇ ಹಣ ಹೂಡಿಕೆಗೆ ಮುಂದಾಗುತ್ತಿದ್ದಾರೆ. ಈ ಮೂಲಕ ಬ್ಯಾಂಕ್‌ಗಳಿಗೆ ಅಂಚೆಕಚೇರಿಗಳು ತೀವ್ರ ಸ್ಪರ್ಧೆಯನ್ನು ನೀಡುತ್ತಿವೆ.
ಅಂಚೆ ಕಚೇರಿಯ ಯಾವುದೇ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೂ ಅದು ಭದ್ರವಾಗಿರುತ್ತದೆ. ಇಂದು ನಾವು ಹೇಳುತ್ತಿರುವ ಅಂಚೆ ಕಚೇರಿಯ ಯೋಜನೆ ಗ್ರಾಹಕರಿಗೆ ಉತ್ತಮ ಹೂಡಿಕೆಯನ್ನು ನೀಡುತ್ತಿದೆ. ಯಾವುದೇ ರಿಸ್ಕ್ ಇಲ್ಲದೇ ನೀವು ಬಡ್ಡಿಯ ರೂಪದಲ್ಲಿ ಒಳ್ಳೆಯ ಹಣವನ್ನು ಪಡೆದುಕೊಳ್ಳಬಹುದಾಗಿದೆ.
1,000 ರೂ.ನಿಂದಲೂ ಹೂಡಿಕೆ ಆರಂಭಿಸಬಹುದು!
ಪೋಸ್ಟ್ ಆಫಿಸ್‌ನ ಟೈಮ್ ಡೆಪಾಸಿಟ್ (TD) ಸ್ಕೀಮ್ ಸಂಪೂರ್ಣವಾಗಿ ಬ್ಯಾಂಕ್ ರೀತಿಯಲ್ಲಿಯೇ ಇರುತ್ತದೆ. ಅಂಚೆ ಕಚೇರಿಯ ಈ ಯೋಜನೆಯಲ್ಲಿ ಕನಿಷ್ಠ 1 ಮತ್ತು ಗರಿಷ್ಠ 5 ವರ್ಷದವರೆಗೆ ಹೂಡಿಕೆ ಮಾಡಬಹುದು. ಕೇವಲ 1,000 ರೂ.ಗಳಿಂದ ಟೈಮ್ ಡೆಪಾಸಿಟ್ ಖಾತೆಯನ್ನು ಆರಂಭಿಸಬಹುದು. ಟೈಮ್ ಡೆಪಾಸಿಟ್ ಖಾತೆ ಮೇಲೆ ಗ್ರಾಹಕರಿಗೆ ಶೇ.6.9 ರಿಂದ ಶೇ.7.5ರವರೆಗೆ ಬಡ್ಡಿ ಸಿಗುತ್ತದೆ. ನೀವು 1 ವರ್ಷ, 2 ವರ್ಷ, 3 ವರ್ಷ ಅಥವಾ 5 ವರ್ಷಕ್ಕೆ ಟೈಮ್ ಡೆಪಾಸಿಟ್ ಖಾತೆಯನ್ನು ತೆರೆಯುವ ಆಯ್ಕೆಗಳನ್ನ ಅಂಚೆ ಕಚೇರಿ ನೀಡುತ್ತದೆ. ಇನ್ನೊಂದು ಪ್ರಮುಖ ವಿಷಯವೆಂದ್ರೆ ಹಣ ಹೂಡಿಕೆಗೆ ಯಾವುದೇ ಮಿತಿ ಇಲ್ಲ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಕೀಮ್: ಯಾವುದೇ ರಿಸ್ಕ್ ಇಲ್ಲದೇ 5 ಲಕ್ಷಕ್ಕೆ 15 ಲಕ್ಷ ಪಡೆಯುವ ಸೂಪರ್ ಅವಕಾಶ
2,00,000 ರೂಪಾಯಿಗೆ ಗ್ಯಾರಂಟಿ ಸಹಿತ 29,776 ರೂಪಾಯಿ ಬಡ್ಡಿ
ಅಂಚೆ ಕಚೇರಿ ಟೈಮ್ ಡೆಪಾಸಿಟ್ ಖಾತೆಯಲ್ಲಿ 2 ವರ್ಷದ ಹೂಡಿಕೆಗೆ ಶೇ.7ರಷ್ಟು ಬಡ್ಡಿಯನ್ನು ನೀಡುತ್ತದೆ. ಒಂದು ವೇಳೆ ಟಿಡಿ ಸ್ಕೀಮ್ ನಲ್ಲಿ 2 ವರ್ಷಕ್ಕೆ 2 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ ನಿಮಗೆ 29,776 ರೂಪಾಯಿ ಬಡ್ಡಿ ಸಿಗುತ್ತದೆ. ಎರಡು ವರ್ಷದ ನಂತರ ನಿಮ್ಮ ಒಟ್ಟು ಹಣ 2,29,776 ರೂಪಾಯಿ ಆಗುತ್ತದೆ. ಯಾವುದೇ ರಿಸ್ಕ್ ಇಲ್ಲದೇ ನಿಮಗೆ ಗ್ಯಾರಂಟಿಯಾಗಿ 29,776 ರೂಪಾಯಿ ಹೆಚ್ಚುವರಿ ಹಣ ಸಿಗುತ್ತದೆ. ಅಂಚೆ ಕಚೇರಿ ಟೈಮ್ ಡೆಪಾಸಿಟ್ ಖಾತೆಯನ್ನು ಸಿಂಗಲ್ ಅಥವಾ ಜಾಯಿಂಟ್ ರೂಪದಲ್ಲಿ ತೆರೆಯಬಹುದು. ಜಾಯಿಂಟ್ ಅಕೌಂಟ್‌ನಲ್ಲಿ ಗರಿಷ್ಠ 3 ಜನರ ಹೆಸರು ಸೇರಿಸಬಹುದು.
ಇದನ್ನೂ ಓದಿ: ವರ್ಷಕ್ಕೆ 755 ಕಟ್ಟಿದ್ರೆ ₹15 ಲಕ್ಷ ವಿಮೆ, ಆಸ್ಪತ್ರೆ ಬಿಲ್, ಶಿಕ್ಷಣದ ವೆಚ್ಚ ಫ್ರೀ! ಪೋಸ್ಟ್ ಆಫೀಸ್ ಸ್ಕೀಮ್ ಇಲ್ಲಿದೆ...
