Asianet Suvarna News Asianet Suvarna News

Decathlon Store ಬೆಂಗಳೂರಿನಲ್ಲಿ ಅತೀ ದೊಡ್ಡ ಡಿಕ್ಯಾತ್‌ಲಾನ್ ಸ್ಟೋರ್ ಆರಂಭ, ಮಾರ್ಕೆಟಿಂಗ್ ಸೇರಿ ಹಲವು ಉದ್ಯೋಗವಕಾಶ!

  • ಅತೀ ದೊಡ್ಡ ಸ್ಟೋರ್ ತೆರೆದ ಕ್ರೀಡಾ ಸಾಮಾಗ್ರಿಗಳ ಮಾರಾಟ ಮಳಿಗೆ ಡಿಕ್ಯಾತ್‌ಲಾನ್
  • ಬನ್ನೇರುಘಟ್ಟದಲ್ಲಿನ ನೂತನ ಮಳಿಗೆ ಹೊಸ ವರ್ಷದ ಶುಭದಿನ ಉದ್ಘಾಟನೆ
  • ಹಲವು ಮಳಿಗೆ ಕಾರ್ಯಾರಂಭ, ಹಲವು ಉದ್ಯೋಗವಕಾಶ, ಅರ್ಜಿ ಆಹ್ವಾನ
Decathlon Bannerghatta store relocated  provides one of most versatile job roles available in Retail Sector ckm
Author
Bengaluru, First Published Dec 31, 2021, 5:03 PM IST
  • Facebook
  • Twitter
  • Whatsapp

ಬೆಂಗಳೂರು(ಡಿ.31):  ವಿಶ್ವದ ಅತೀ ದೊಡ್ಡ ಕ್ರೀಡಾ ಸಾಮಾಗ್ರಿಗಳ ಮಾರಾಟ ಮಳಿಗೆ ಡಿಕ್ಯಾತ್‌ಲಾನ್(Decathlon) ಭಾರತದಲ್ಲಿ ತನ್ನ ಜಾಲ ವಿಸ್ತರಿಸುತ್ತಲೇ ಬಂದಿದೆ. ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಕೈಗೆಟುಕುವ ದರದಲ್ಲಿ ಕ್ರೀಡಾ ಸಾಮಾಗ್ರಿಗಳನ್ನು( sporting goods retailer) ಡಿಕ್ಯಾತ್‌ಲಾನ್ ಒದಗಿಸುತ್ತಿದೆ. ಕರ್ನಾಟಕದಲ್ಲಿ ಡಿಕ್ಯಾತ್‌ಲಾನ್ ಹೆಚ್ಚು ಜನಪ್ರಿಯವಾಗಿದೆ. ಇದೀಗ  ಡಿಕ್ಯಾತ್‌ಲಾನ್ ಬೆಂಗಳೂರಿನ(Bengaluru) ಬನ್ನೇರುಘಟ್ಟದಲ್ಲಿನ ಮಳಿಗೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದೆ. ಈ ಮಳಿಗೆ ಜನವರಿ 1, 2022ರಂದು ಉದ್ಘಾಟನೆಗೊಳ್ಳುತ್ತಿದೆ. ಅತೀ ದೊಡ್ಡ ಮಳಿಗೆಯ ಜೊತೆಗೆ ಈಗಾಗಲೇ ಹಲವು ಸಣ್ಣ ಮಳಿಗೆಗಳನ್ನು ಡಿಕ್ಯಾತ್‌ಲಾನ್ ತೆರೆದಿದೆ. ಇದರಿಂದ ಡಿಕ್ಯಾತ್‌ಲಾನ್ ಮಳಿಗೆಯಲ್ಲಿ ವಿಪುಲ ಉದ್ಯೋಗವಕಾಶ ಸೃಷ್ಟಿಯಾಗಿದೆ. ವಿವಿಧ ಹುದ್ದೆಗಳಿಗೆ ಅರ್ಜಿ  ಆಹ್ವಾನಿಸಲಾಗಿದೆ.

ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್(shopping experience) ಅನುಭವ ನೀಡಲು ಡಿಕ್ಯಾತ್‌ಲಾನ್ 10 ವರ್ಷಗಳ ಹಿಂದೆ ಬನ್ನೆರುಘಟ್ಟದಲ್ಲಿ ಆರಂಭಗೊಂಡ ಈ ಮಳಿಗೆಯನ್ನು ಹೊಸ ಕಟ್ಟಕ್ಕೆ ಸ್ಥಳಾಂತರಿಸಿದೆ. ಮತ್ತೊಂದು ವಿಶೇಷ ಅಂದರೆ ಈ ಮಳಿಗೆ ಭಾರತದಲ್ಲಿ(India) ಡಿಕ್ಯಾತ್‌ಲಾನ್ ತೆರೆದ 2ನೇ ಮಳಿಗೆಯಾಗಿದೆ. ಇದೀಗ ದೇಶದ ಬಹುತೇಕ ಎಲ್ಲಾ ನಗರ, ಪಟ್ಟಣಗಳಲ್ಲಿ ಡಿಕ್ಯಾತ್‌ಲಾನ್ ಕಾರ್ಯನಿರ್ವಹಿಸುತ್ತಿದೆ. ನೂತನ ಮಳಿಗೆ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿದೆ. ಹಳೇ ಮಳಿಗೆಯ ಎದುರಿಗಿರುವ ಕಟ್ಟಡಕ್ಕೆ ಹೊಸ ಮಳಿಗೆಯನ್ನು ಸ್ಥಳಾಂತರ ಮಾಡಲಾಗಿದೆ. ನೂತನ ಮಳಿಗೆ ಹೊಸ ವರ್ಷ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. 

ಒಟ್ಟು 5000 ಚದರ ಅಡಿ ವಿಸ್ತೀರ್ಣ ಹೊಂದಿರುವ ಎರಡು ಫ್ಲೋರ್ ಹೊಂದಿರುವ ನೂತನ ಮಳಿಗೆ ಗ್ರಾಹಕರಿಗೆ ಕ್ರೀಡಾ ಸಾಮಾಗ್ರಿಗಳ ಖರೀದಿ ಜೊತೆಗೆ ಕ್ರೀಡೆ ಅಡಲು ಸ್ಥಳವಕಾಶ ಕಲ್ಪಿಸಿದೆ. ಮೊದಲ ಮಹಡಿ 2,500 ಚದರ ಅಡಿ ಹೊಂದಿದೆ. ಇದರಲ್ಲಿ50+ ಕ್ರೀಡೆಗಳು ಮತ್ತು 5000+ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿದೆ. ಅತ್ಯುತ್ತಮವಾದ ಸ್ಥಳವಕಾಶ, ಕ್ರೀಡಾ ಸಾಮಾಗ್ರಿಗಳನ್ನು ಆಯ್ಕೆ ಮಾಡಲು ಪರಿಶೀಲಿಸಲು ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು 2500 ಚದರ ಮೀಟರ್‌ ಹೊಂದಿರುವ ಎರಡನೇ ಮಹಡಿಯಲ್ಲಿ ಫುಟ್ಬಾಲ್, ಸ್ಕೇಟಿಂಗ್, ಕ್ರಿಕೆಟ್, ಟೇಬಲ್ ಟೆನಿಸ್, ಫಿಟ್‌ನೆಸ್, ಜಿಮ್ ಸೇರಿದಂತೆ ಹಲವು ಕ್ರೀಡೆಗಳಿಗೆ ಒಳಾಂಗಣ ಆಟದ ಮೈದಾನವನ್ನಾಗಿ ರೂಪುಗೊಳಿಸಲಾಗಿದೆ. ಈ ಮೂಲಕ ಡಿಕ್ಯಾತ್‌ಲಾನ್ ಕೇವಲ ಕ್ರೀಡಾ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿಲ್ಲ. ಗ್ರಾಹಕರಿಗೆ ತಮ್ಮಿಷ್ಟ ಕ್ರೀಡೆ ಆಡಲು ಸ್ಥಳಾವಕಾಶ ಕಲ್ಪಿಸಲಿದೆ. 

ಬನ್ನೇರುಘಟ್ಟದಲ್ಲಿ ಅತೀದೊಡ್ಡ ಡಿಕ್ಯಾತ್‌ಲಾನ್ ಮಳಿಗೆ ಜೊತೆಗೆ ಈಗಾಗಲೇ ಕರ್ನಾಟಕದ ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಸಣ್ಣ ಮಳಿಗೆಗಳನ್ನು ತೆರೆದಿದೆ. ಇನ್ನು ಹೈದರಾಬಾದ್‌ನಲ್ಲೂ ಡಿಕ್ಯಾತ್‌ಲಾನ್ ಸಣ್ಣ ಮಳಿಗೆ ಕಾರ್ಯಾರಂಭಿಸಿದೆ. ಇದರ ಜೊತೆಗೆ ಫ್ಲಿಪ್‌ಕಾರ್ಟ್, ಮಿಂತ್ರಾ, ಉಡಾನ್ ಸೇರಿದಂತೆ ಹಲವು ಇ ಕಾಮರ್ಸ್ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್‌ಮೆಂಟ್, ಸೆಂಟ್ರಲ್ ಪೊಲೀಸ್ ಕ್ಯಾಂಟೀನ್ ಜೊತೆಗೂ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಡಿಕ್ಯಾತ್‌ಲಾನ್‌ನಲ್ಲಿ ಅತೀ ಹೆಚ್ಚಿನ ಉದ್ಯೋಗಗಳು ಸೃಷ್ಠಿಯಾಗಿದೆ.

ರಿಟೇಲ್ ಮಾರಾಟದಲ್ಲಿ ಡಿಕ್ಯಾತ್‌ಲಾನ್ ಈಗಾಗಲೇ ದೇಶದಲ್ಲಿ ವಿಪುಲ ಉದ್ಯೋಗ ಸೃಷ್ಟಿಸಿದೆ. ಇಷ್ಟೇ ಅಲ್ಲ ಹಲವರಿಗೆ ಉದ್ಯೋಗ ನೀಡಿದೆ. ಇದೀಗ ಮಾರ್ಕೆಟಿಂಗ್, ಸಪ್ಲೈ ಚೈನ್, ಮಾರಾಟ, ಹ್ಯೂಮನ್ ಮ್ಯಾನೇಜ್ಮೆಂಟ್ ಸೇರಿದಂತೆ ಡಿಕ್ಯಾತ್‌ಲಾನ್ ಹಲವು ವಿಭಾಗಗಳಲ್ಲಿ ಸೃಷ್ಟಿಯಾಗಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಅರ್ಹರಿಂದ ಅರ್ಜಿ ಅಹ್ವಾನಿಸಿದೆ. 

Follow Us:
Download App:
  • android
  • ios